Homeಮುಖಪುಟಲಾಕಪ್ ಡೆತ್: ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಪ್ರಕರಣ ದಾಖಲು!

ಲಾಕಪ್ ಡೆತ್: ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಪ್ರಕರಣ ದಾಖಲು!

ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಈ ನಿರ್ದಿಷ್ಟ ಅವಧಿಯಲ್ಲಿ, ನ್ಯಾಯಾಂಗ ಬಂಧನದಲ್ಲಿ 1,584 ಮತ್ತು ಪೊಲೀಸ್ ಕಸ್ಟಡಿಯಲ್ಲಿ 113 ಪ್ರಕರಣಗಳು ಸೇರಿ, ಒಟ್ಟು 1,697 ಲಾಕಪ್ ಡೆತ್‌ಗಳು ಸಂಭವಿಸಿವೆ.

- Advertisement -
- Advertisement -

ಗೃಹ ಸಚಿವಾಲಯ (MHA) ಬಿಡುಗಡೆ ಮಾಡಿದ ದತ್ತಾಂಶಗಳ ಪ್ರಕಾರ, 2019 ಏಪ್ರಿಲ್ 1 ರಿಂದ 2020 ಮಾರ್ಚ್‌ವರೆಗೆ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲಾಕಪ್ ಡೆತ್‌ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ಶಿವಗಂಗ ಕ್ಷೇತ್ರದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ, “MHA ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಈ ನಿರ್ದಿಷ್ಟ ಅವಧಿಯಲ್ಲಿ, ನ್ಯಾಯಾಂಗ ಬಂಧನದಲ್ಲಿ 1,584 ಮತ್ತು ಪೊಲೀಸ್ ಕಸ್ಟಡಿಯಲ್ಲಿ 113 ಪ್ರಕರಣಗಳು ಸೇರಿ, ಒಟ್ಟು 1,697 ಲಾಕಪ್ ಡೆತ್‌ ಪ್ರಕರಣಗಳು ಸಂಭವಿಸಿವೆ. ಈ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ, ನ್ಯಾಯಾಂಗ ಬಂಧನದಲ್ಲಿ 400 ಸಾವುಗಳು ಮತ್ತು ಪೊಲೀಸ್ ಕಸ್ಟಡಿಯಲ್ಲಿ 3 ಪ್ರಕರಣಗಳು ವರದಿಯಾಗಿವೆ” ಎಂದು ಪ್ರತಿಕ್ರಿಯೆ ನೀಡಲಾಗಿದೆ.

ತಮಿಳುನಾಡಿನ ಸಾಥಾನ್‌ಕುಳಂನಲ್ಲಿ ಜೂನ್ ತಿಂಗಳಲ್ಲಿ ನಡೆದ ಲಾಕಪ್ ಡೆತ್ ಘಟನೆಯಿಂದ, ವ್ಯಾಪಕ ಪ್ರತಿಭಟನೆ ನಡಿದಿತ್ತು ಎಂದು ಹಫ್‌ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ

ಕೊರೊನಾ ವೈರಸ್ ಲಾಕ್ ಡೌನ್ ಜೂನ್ 19 ರಂದು ವಿಧಿಸಲಾಗಿದ್ದ ಕರ್ಫ್ಯೂ ಸಮಯದಲ್ಲಿ ತಮ್ಮ ಮೊಬೈಲ್ ಫೋನ್ ಅಂಗಡಿಯನ್ನು ತೆರೆದಿಟ್ಟಿದ್ದಕ್ಕಾಗಿ ಪಿ. ಜಯರಾಜ್ (59) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರನ್ನು ಬಂಧಿಸಲಾಗಿತ್ತು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ.

ತಂದೆ ಮತ್ತು ಮಗ ಅನೇಕ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಕಳೆದ ತಿಂಗಳು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿತ್ತು. ಸಿಬಿಐ ಮತ್ತು ಅಪರಾಧ ತನಿಖಾ ಇಲಾಖೆ (ಸಿಐಡಿ) ಎರಡೂ ಪ್ರಕರಣದಲ್ಲಿನ ವರದಿಗಳನ್ನು ಸಲ್ಲಿಸಿವೆ ಎಂದು ಎಎನ್‌ಐ ತಿಳಿಸಿದೆ. ಸೆಪ್ಟೆಂಬರ್ 22 ರಂದು ಮದ್ರಾಸ್ ಹೈಕೋರ್ಟ್ ಈ ವಿಷಯವನ್ನು ಕೈಗೆತ್ತಿಕೊಳ್ಳಲಿದೆ.

ಇದನ್ನೂ ಓದಿ: ಸ್ವತಃ ‘ಲಾಕಪ್’ ಅನುಭವದಿಂದ ಹೋರಾಟದವರೆಗೂ: ವಿಸಾರಣೈ ಕಥೆಗಾರ ಚಂದ್ರಕುಮಾರ್ ಸಂದರ್ಶನ

ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, ಲಾಕಪ್ ಡೆತ್‌ನಲ್ಲಿ ಮಧ್ಯಪ್ರದೇಶವು ಉತ್ತರಪ್ರದೇಶದ ನಂತರದ ಸ್ಥಾನದಲ್ಲಿದ್ದು, 143 ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ 14, ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಆ ಅವಧಿಯಲ್ಲಿ ನ್ಯಾಯಾಂಗ ಬಂಧನದಲ್ಲಿ ತಲಾ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.


ಇದನ್ನೂ ಓದಿ: ಪೊಲೀಸರ ರಕ್ತದಲ್ಲಿ ತೊಯ್ದ ‘ಉತ್ತಮ’ಪ್ರದೇಶ : ಶಿವಸೇನೆ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...