Homeಮುಖಪುಟಅತ್ಯಾಚಾರ ತಡೆಯಲು ಹೆಣ್ಣುಮಕ್ಕಳಲ್ಲಿ ‘ಸಂಸ್ಕಾರ’ ತುಂಬಬೇಕು: ಬಿಜೆಪಿ ಶಾಸಕ ಸುರೇಂದ್ರ ಸಿಂಗ್

ಅತ್ಯಾಚಾರ ತಡೆಯಲು ಹೆಣ್ಣುಮಕ್ಕಳಲ್ಲಿ ‘ಸಂಸ್ಕಾರ’ ತುಂಬಬೇಕು: ಬಿಜೆಪಿ ಶಾಸಕ ಸುರೇಂದ್ರ ಸಿಂಗ್

ಹತ್ರಾಸ್ ರೀತಿಯ ಘಟನೆಗಳು ಶಾಸನದಿಂದ ಅಥವಾ ತಲ್ವಾರ್‌ಗಳಿಂದ ನಿಲ್ಲವುದಿಲ್ಲ ಬದಲಿಗೆ ಉತ್ತಮ ಸಂಸ್ಕಾರದಿಂದ ಮಾತ್ರ ಕೊನೆಯಾಗಲು ಸಾಧ್ಯ.

- Advertisement -
- Advertisement -

“ಸರ್ಕಾರ ಕತ್ತಿ ಹಿಡಿದು ನಿಂತರೂ ಅತ್ಯಾಚಾರದ ಘಟನೆಗಳನ್ನು ತಡೆಯಲು ಸಾಧ್ಯವಿಲ್ಲ. ಬದಲಿಗೆ ಪೋಷಕರು ಹೆಣ್ಣು ಮಕ್ಕಳಲ್ಲಿ ಸಂಸ್ಕಾರ ಮತ್ತು ಉತ್ತಮ ಮೌಲ್ಯಗಳನ್ನು ತುಂಬಬೇಕು” – ಇದು ಹತ್ರಾಸ್ ಅತ್ಯಾಚಾರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಕೊಟ್ಟ ಹೇಳಿಕೆ. ದೇಶಾದ್ಯಂತ ಕೋಟ್ಯಾಂತರ ಜನರು ಹತ್ರಾಸ್ ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದರೆ ಈ ಬಿಜೆಪಿ ಶಾಸಕ ಮಾತ್ರ ಹೆಣ್ಣುಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.

ಉತ್ತರ ಪ್ರದೇಶದ ಬಲಿಯಾ ಪ್ರಾಂತ್ಯದ ಬರಿಯಾ ಕ್ಷೇತ್ರವನ್ನು ಪ್ರತಿನಿಧಿಸುವ ಸುರೇಂದ್ರ ಸಿಂಗ್, “ಹತ್ರಾಸ್ ರೀತಿಯ ಘಟನೆಗಳು ಶಾಸನದಿಂದ ಅಥವಾ ತಲ್ವಾರ್‌ಗಳಿಂದ ನಿಲ್ಲವುದಿಲ್ಲ ಬದಲಿಗೆ ಉತ್ತಮ ಸಂಸ್ಕಾರದಿಂದ ಮಾತ್ರ ಕೊನೆಯಾಗಲು ಸಾಧ್ಯ. ಎಲ್ಲಾ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಉತ್ತರ ಸಂಸ್ಕಾರ ಮತ್ತು ಮೌಲ್ಯಗಳನ್ನು ತುಂಬಬೇಕು. ಸರ್ಕಾರ ಮತ್ತು ಉತ್ತಮ ಮೌಲ್ಯಗಳು ದೇಶವನ್ನು ಸುಂದರಗೊಳಿಸಲಿವೆ” ಎಂದು ಹೇಳಿದ್ದಾರೆ.

ನಾನು ಒಬ್ಬ ಶಿಕ್ಷಕನಾಗಿ ಹೇಳುತ್ತಿದ್ದೇನೆ. ಪ್ರಜೆಗಳಿಗೆ ರಕ್ಷಣೆ ನೀಡುವುದು ಹೇಗೆ ಸರ್ಕಾರದ ಜವಾಬ್ದಾರಿಯೋ ಹಾಗೆ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ತುಂಬುವುದು ಪೋಷಕರ ಜವಾಬ್ದಾರಿ. ಇವೆರೆಡರ ಸಹಯೋಗದಿಂದ ಮಾತ್ರ ಅತ್ಯಾಚಾರ ತಡೆಗಟ್ಟಲು ಸಾಧ್ಯ, ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಗ ಗಾಂಧಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, “ಅವರು ಏನೇ ಕೆಲಸ ಮಾಡಿದರೂ ಸಹ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ” ಎಂದು ಹೇಳಿದ್ದಾರೆ.

ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಂತೈಸಿದ್ದಾರೆ.. ಪ್ರಿಯಾಂಕಾ ಗಾಂಧಿ ಸಂತ್ರಸ್ತೆಯ ತಾಯಿಯನ್ನು ಅಪ್ಪಿಕೊಂಡಿರುವ ಮತ್ತು ತಂದೆಯೆದರು ರಾಹುಲ್ ಗಾಂಧಿ ತಲೆತಗ್ಗಿಸಿ ಕುಳಿತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


ಇದನ್ನೂ ಓದಿ : ಹತ್ರಾಸ್ ಸಂತ್ರಸ್ತೆ ತನ್ನ ಅಂತಿಮ ವಿಡಿಯೋದಲ್ಲಿ ಹೇಳಿದ್ದೇನು? ಪೋಸ್ಟ್‌ಮಾರ್ಟಂ ವರದಿ ಸುಳ್ಳೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರನ್ನು ಅವಮಾನಿಸಬಾರದು. ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಕಾರಣಕ್ಕೆ ಬಿಜೆಪಿ...