HomeಎಕಾನಮಿExplainer: ಈ ಜಿಡಿಪಿ (GDP) ಅಂದರೆ ಏನಪಾ? - ಬೈ ಡೇಟಾಮ್ಯಾಟಿಕ್ಸ್

Explainer: ಈ ಜಿಡಿಪಿ (GDP) ಅಂದರೆ ಏನಪಾ? – ಬೈ ಡೇಟಾಮ್ಯಾಟಿಕ್ಸ್

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

- Advertisement -
- Advertisement -

ಜಿಡಿಪಿ ಅಥವಾ ನಿವ್ವಳ ಆಂತರಿಕ ಉತ್ನನ್ನ ಹಿಂಗಂದರ ಒಂದು ದೇಶದ ಜನಾ ತಮ್ಮ ಎಲ್ಲಾ ಚಟುವಟಿಕೆಗಳಿಂದ ಒಂದು ವರ್ಷದಾಗ ಸೃಷ್ಟಿಸಬಹುದಾದ ಒಟ್ಟು ಸಂಪತ್ತು. ಇದು ಸರಕು ಅಥವಾ ಸೇವೆಯ ರೂಪದಾಗ ಇರಬಹುದು.

ನೀವು ಏನರ ನೌಕರಿ ಮಾಡ್ತೀರಿ, ಅಥವಾ ವ್ಯಾಪಾರ ಮಾಡತೀರಿ ಅದರಿಂದ ನಿಮಗ ಎಷ್ಟು ದುಡ್ಡು ಅಥವಾ ಅದರ ಮೌಲ್ಯದ ಪರ್ಯಾಯ ವಸ್ತು ಅಥವಾ ಸೇವೆ ಸಿಗತದೋ ಅದು ನಿಮ್ಮ ಪಾಲಿನ ಜಿಡಿಪಿ. ಇಂಥದನ್ನೇ ಎಲ್ಲಾರೂ ಕೂಡಿ ಮಾಡಿದಾಗ ಸಿಗೋ ಲೆಕ್ಕಾ ಅಂದರ ಈ ದೇಶದ ಜಿಡಿಪಿ.


ಇದನ್ನೂ ಓದಿ: 1 ನೇ ಆರ್ಥಿಕ ತ್ರೈಮಾಸಿಕ ಜಿಡಿಪಿ 23.9% ಇಳಿಕೆ; ಐತಿಹಾಸಿಕ ಇಳಿಕೆ ಕಂಡ ಭಾರತ


ಇನ್ನ ಕೆಲವು ವಿಷಯ ಜಿಡಿಪಿಯೊಳಗ ಬರಂಗಿಲ್ಲಾ. ನಿಮ್ಮ ದಾಡಿ ನೀವ ಮಾಡಿಕೊಳ್ಳೋದು ಅನ್ರೀ, ನಿಮ್ಮ ತಾಯಿ, ಹೆಂಡತಿ, ಮಗಳು, ಅಕ್ಕಾ, ತಂಗಿ, ವೈನಿ, ಅಥವಾ ಮತ್ಯಾರರೆ ನಿಮ್ಮ ಅಡಿಗಿ ಮನಿಯೊಳಗ ನಿಮ್ಮ ಮತ್ತು ತಮ್ಮ ಊಟಕ್ಕ ಅಡಿಗೀ ಮಾಡತಾರಲ್ಲಾ, ಅದುನೂ ಬರೋದಿಲ್ಲ. ನಮ್ಮ ದೇಶದೊಳಗ ಕೋಟ್ಯಾಂತರ ಹೆಣ್ಣು ಮಕ್ಕಳು ಸಾಯೋ ತನಕಾ ತಮ್ಮ ತಮ್ಮ ಮನಿಯೊಳಗ, ಕೈ ಸುಟಗೋತ ದುಡದು ಹಾಕತಾರಲ್ಲಾ ಅದರ ಮೌಲ್ಯ ಸರಕಾರದ ಜಿಡಿಪಿ ಲೆಕ್ಕದೊಳಗ ಬರಂಗಿಲ್ಲಾ. ಗಂಡು ಮಕ್ಕಳ ಮನಸಿನ್ಯಾಗಂತೂ ಅದು ಬರೋದೇ ಇಲ್ಲಾ ಬಿಡ್ರಿ. ಅದು ಬ್ಯಾರೆ ಮಾತು.

ನಂ ಭಾರತದ ಈ ವರ್ಷದ ಜಿಡಿಪಿ ಸುಮಾರು 2.6 ಲಕ್ಷ ಕೋಟಿ ಡಾಲರ್ ಅಂದರ ಸುಮಾರು 182 ಲಕ್ಷ ಕೋಟಿ. ಇದು 2011-12 ವರ್ಷವನ್ನು ಅಳತೆಗೋಲಾಗಿ ತೆಗೆದುಕೊಂಡಾಗ ಸಿಗುವ ಲೆಕ್ಕ. ಮುಂಚೆ ಇದು 1981 ಇತ್ತು, 91 ಆತು, 2004 ನಾಲ್ಕು ಆತು. ಮೋಷಾ ಸರಕಾರ ಬಂದ ಮ್ಯಾಲೆ ಇದು 2011 ಆತು. ಲೆಕ್ಕದ ವರ್ಷ ಬದಲಾದಂಗೆಲ್ಲಾ ಜಿಡಿಪಿಯ ಮೌಲ್ಯ ಬದಲಾಗತದ, ಅದು ಮತ್ತ ಯೂನಿವರ್ಸಿಟಿ ಬೃಹಸ್ಪತಿಗಳ ತಲಿ ಕೆಡಿಸೋ ಲೆಕ್ಕ. ನಮ್ಮಂತಹ ಹುಲುಮಾನವರಿಗಲ್ಲ. ಅದನ್ನ ಬಿಡ್ರಿ.

ಹಂಗಾರ ಬ್ಯಾರೆ ದೇಶಗಳ ಜಿಡಿಪಿ ಎಷ್ಟದಪಾ? ಇದು ಯಾಕ ಬೇಕಂದ್ರ, ನಿಮ್ಮ ಹುಡುಗಾ ರನ್ನಿಂಗ್ ರೇಸ್ ನ್ಯಾಗ ಎಷ್ಟನೇ ಬಂದಾನ್ರೀ ಅಂದ್ರ ಸೆಕೆಂಡ್ ಬಂದಾನ ಅಂತ ನೀವು ಹೆಮ್ಮೆಯಿಂದ ಹೇಳಿದ್ರಿ ಅಂತ ತಿಳಕೋಳ್ರಿ. ಆ ರೇಸಿನ್ಯಾಗ ಎಷ್ಟು ಜನಾ ಇದ್ದರು ಅಂದರು ಅಂತ ತಿರಗಿ ಕೇಳಿದರ ಇಬ್ಬರ ರನ್ನರ್ಸ ಇದ್ದರು ಅಂತ ನಾಚಿಕೊಂಡು ಹೇಳೋ ಪರಿಸ್ಥಿತಿ ನಿಮಗ ಬರಬಾರದಲ್ಲಾ, ಅದಕ್ಕ.

ನೋಡ್ರಿ, ಈ ಸಮಸ್ತ ಭೂಮಂಡಲದಾಗ ಸುಮಾರು 220 ದೇಶ ಅಥವಾ ಸ್ವಯಂ ಆಡಳಿತ ಪ್ರದೇಶಾ ಅದಾವು. ಅದರಾಗ ಸುಮಾರು 200 ದೇಶದ ಜಿಡಿಪಿ ಲೆಕ್ಕಾ ಸಿಕ್ಕದ.
ಅದರ ಪ್ರಕಾರ ಅತಿ ಹೆಚ್ಚಿನವು ಹಿಂಗವ.

ಅಮೇರಿಕಾ 1357 ಲಕ್ಷ ಕೋಟಿ
ಚೈನಾ 857 ಲಕ್ಷ ಕೋಟಿ
ಜಪಾನ್ 350 ಲಕ್ಷ ಕೋಟಿ
ಜರ್ಮನಿ 257 ಲಕ್ಷ ಕೋಟಿ
ಭಾರತ 182 ಲಕ್ಷ ಕೋಟಿ
ಇನ್ನು ನಮ್ಮ ನೆರೆ ಹೊರೆಯವರ ಲೆಕ್ಕ ಎಷ್ಟು? ಬೆಳಿಗ್ಗೆ ಎದ್ದಾಗಿಂದಲೂ ಮಲಗೋ ತನಕಾ ನಾವು ಎಲ್ಲದಕ್ಕೂ ಹೋಲಿಸಿಕೊಳ್ಳುವ ನಮ್ಮ ನೆರೆಯವರು ಈ ರೇಸಿನ್ಯಾಗ ಎಲ್ಲಿದ್ದಾರ ಅಂದರ-
ಬಾಂಗ್ಲಾ – 17 ಲಕ್ಷ ಕೋಟಿ
ಪಾಕಿಸ್ತಾನ 21 ಲಕ್ಷ ಕೋಟಿ
ಇನ್ನು ಲಭ್ಯ ಅಂಕಿ ಅಂಶಗಳ ಪ್ರಕಾರ ಅತ್ಯಂತ ಕಡಿಮೆ ಜಿಡಿಪಿ ಇರುವ ದೇಶಗಳು ಅಂದರ-
ಬುರುಂಡಿ 25,000 ಕೋಟಿ
ರುವಾಂಡಾ 63,000 ಕೋಟಿ

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

ಅವರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಏನಪಾ ಅಂದರ ನಾವು ಜಿಡಿಪಿ ಪಟ್ಟಿಯ ಮೇಲಿನ ದೇಶಗಳಿಗೆ ಹತ್ತಿರ ಇಲ್ಲ. ಕೆಳಗಿನವರಿಗೆ ಹತ್ತಿರ ಇದ್ದೇವೆ. ಅದಕ್ಕೇ ಭೂಗೋಳದ ದಕ್ಷಿಣದ ದೇಶಗಳ ಭ್ರಾತ್ವತ್ವದ ಮಾತು, ಬ್ರಿಕ್ಸ ದೇಶಗಳ ಹೊಂದಾಣಿಕೆಯ ಮಾತುಗಳು ಆಗಾಗ ಕೇಳಿ ಬರತಿರತಾವು.
ಇದನ್ನ ನಾವು ಮರೆಯಬಾರದು.

ನಾವು ಏಣಿಯ ಎಷ್ಟನೇ ಮೆಟ್ಟಿಲ ಮೇಲೆ ಇದ್ದೇವಿ ಅನ್ನುವುದು ಗೊತ್ತಾಗದಿದ್ದರ ಎಷ್ಟು ಬೇಗ, ಎಷ್ಟು ಎತ್ತರಕ್ಕೆ ಏರಬೇಕು ಎನ್ನುವುದು ನಮಗೆ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ನಾವು ನಿಂತಲ್ಲೇ ನಿಂತು ಮೇಲಿನವರನ್ನು ನೋಡಿ ಹೊಟ್ಟಿ ಕಿಚ್ಚು ಪಡಬಹುದು, ಅಥವಾ ಕೆಳಗಿನವರನ್ನು ನೋಡಿ ಅಪಹಾಸ್ಯ ಮಾಡಬಹುದು. ನಮ್ಮ ಮನಿಯೊಳಗ ಕನ್ನಡಿ ಇರದಿದ್ದರ, ಬೇರೆಯವರ ಮುಖದ ಮೇಲಿನ ಕಲೆಯ ಬಗ್ಗೆ ಮಾತಾಡಬಾರದು.

ಈ ಸಲಾ ಈ ವಿಷಯದ ಕಡೆ ನಮ್ಮ ಸಂಕೀರ್ತನೆ ಯಾಕ ಹೊರಳಿತಪಾ ಅಂದರ ಅದಕ್ಕೊಂದು ಛಂದನೆ ಕಾರಣ ಅದ.

ನಮ್ಮ ಮೋಹನ ಭಾಗವತ ಅವರು `ಜಿಡಿಪಿ’ ಭಾರತೀಯ ಮೂಲದ ಕಲ್ಪನೆ ಅಲ್ಲಾ ಅಂತ ಹೇಳ್ಯಾರ. ಅಷ್ಟ ಅಲ್ಲದ `ಲಿಂಚಿಂಗ್’ ಅನ್ನೋದು ಸಹ ನಮ್ಮ ಸಂಸ್ಕೃತಿಯ ಮೂಲದ್ದಲ್ಲಾ ಅಂತಂದಾರ.
ಅಮಿತ ಷಾ ಅವರು `ಮಾನವ ಹಕ್ಕುಗಳು` ಅನ್ನೋದು ನಮ್ಮ ಭಾರತೀಯ ಸಂಸ್ಕೃತಿಯ ಕಲ್ಪನೆ ಅಲ್ಲಾ ಅಂತ ಅಪ್ಪಣೆ ಕೊಟ್ಟಾರ.

ಅಂದರ ಈ ಮೂರು ವಿಷಯಗಳ ಬಗ್ಗೆ ತಿಳಕೊಳ್ಳೋದು, ಮಾತಾಡೋದು ನಿಷಿದ್ಧ ಅಂತ ಆತಲ್ಲಾ.
ಅದಕ್ಕಂತನ, ಈ ವಾರದ ಡೇಟಾ ಖೋಲಿಯೊಳಗ ನಮ್ಮ ಪ್ರವೇಶ. ಈ ನಿಷೇಧಿತ ವಸ್ತುವಿನ ಹುಡುಕಾಟಕ್ಕ.


ಇದನ್ನೂ ಓದಿ: ಅಸಂಘಟಿತ ವಲಯದ ಆರ್ಥಿಕತೆ ನಾಶ; ಜಿಡಿಪಿ ಶೇ.-23.9ಕ್ಕೆ ಕುಸಿತ: ಕೇಂದ್ರ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...