Homeಸಿನಿಮಾಕ್ರೀಡೆಸೂಪರ್ ಓವರ್ ವಿರುದ್ದ ತಿರುಗಿಬಿದ್ದ ಗಂಭೀರ್, ರೋಹಿತ್ ಮತ್ತು ಯುವರಾಜ್: ಏನಿದು ಸೂಪರ್ ಓವರ್?

ಸೂಪರ್ ಓವರ್ ವಿರುದ್ದ ತಿರುಗಿಬಿದ್ದ ಗಂಭೀರ್, ರೋಹಿತ್ ಮತ್ತು ಯುವರಾಜ್: ಏನಿದು ಸೂಪರ್ ಓವರ್?

- Advertisement -
- Advertisement -

ನಿನ್ನೆ ನಡೆದ 2019ರ ಐಸಿಸಿ ವಿಶ್ವಕಪ್ ಕ್ರಿಕೆಟ್‍ನ ಫೈನಲ್ ಪಂದ್ಯದಲ್ಲಿ ಸೂಪರ್ ಒವರ್‍ನಲ್ಲಿ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಜಯಿಸಿ ಚಾಂಪಿಯನ್ ಆಯಿತು. ಈ ಸೂಪರ್ ಓವರ್ ವಿರುದ್ಧ ಈಗ ಭಾರತದ ಆಟಗಾರರಾದ ಗೌತಮ್ ಗಂಭೀರ್, ರೋಹಿತ್ ಶರ್ಮಾ ಮತ್ತು ಯುವರಾಜ್ ಸಿಂಗ್ ಕಿಡಿಕಾರಿದ್ದು ಇದನ್ನು ಐಸಿಸಿ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 241 ರನ್ ಗಳಿಸಿತ್ತು. ನಂತರ ಬ್ಯಾಟ್ ಮಾಡಿದ ಇಂಗ್ಲೆಂಡ್ ಕೂಡ 241 ರನ್ ಗೆ ಆಲೌಟ್ ಆಯ್ತು. ಆಗ ಪಂದ್ಯ ಟೈ ಆದ ಕಾರಣ ಸೂಪರ್ ಒವರ್ ಆಡಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 6 ಬಾಲ್‍ಗಳಲ್ಲಿ 15 ರನ್ ಗಳಿಸಿದರೆ ಆನಂತರ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಕೂಡ 6 ಬಾಲ್‍ಗಳಲ್ಲಿ 15 ರನ್ ಗಳಿಸಿತು. ಆದರೂ ಸೂಪರ್ ಓವರ್ ನಿಯಮದ ಪ್ರಕಾರ ಇಂಗ್ಲೆಂಡ್ ಗೆದ್ದು ಬೀಗಿತು.

ಇದರ ಕುರಿತು ಅಪಸ್ವರಗಳು ಜೋರಾಗಿಯೇ ಕೇಳಿಬಂದಿವೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ “ಹೆಚ್ಚು ಬೌಂಡರಿ ಗಳಿಸಿದ್ದವರು ಗೆದ್ದರು ಎಂಬ ಐಸಿಸಿಯ ಹಾಸ್ಯಸ್ಪದ ನಿಯಮದಿಂದ 2019ರ ವಿಶ್ವಕಪ್ ಫೈನಲ್ ಹೀಗಾಗಿದೆ. ನನ್ನ ಪ್ರಕಾರ ಇಬ್ಬರು ಗೆದ್ದಿದ್ದು, ಇಬ್ಬರನ್ನು ವಿಜಯಿ ಎಂದು ಘೋಷಿಸಬೇಕು. ಉಗುರು ಕಚ್ಚುವಂಟೆ ರೋಮಾಂಚನ ಆಟವಾಡಿದ ಎರಡು ತಂಡಗಳನ್ನು ನಾನು ಅಭಿನಂದಿಸುತ್ತೇನೆ. ಇಬ್ಬರೂ ಗೆದ್ದಿದ್ದಾರೆ ಎಂದಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ರೋಹಿತ್ ಶರ್ಮಾ “ಕ್ರಿಕೆಟ್‍ನ ಕೆಲ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ” ಎಂದು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಇನ್ನು ಯುವರಾಜ್ ಸಿಂಗ್ “ಈ ನಿಯಮವನ್ನು ನಾನು ಖಂಡಿತ ಒಪ್ಪುವುದಿಲ್ಲ. ಆದರೆ ನಿಯಮ ಅಂದರೆ ನಿಯಮವೆ. ಹಾಗಾಗಿ ಕೊನೆಯದಾಗಿ ನಾನು ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡವನ್ನು ಅಭಿನಂದಿಸುತ್ತೇನೆ. ಆದರೆ ನನ್ನ ಹೃದಯ ಮಾತ್ರ ಕೊನೆಯವರೆಗೂ ದಿಟ್ಟವಾಗಿ ಹೋರಾಡಿದ ನ್ಯೂಜಿಲೆಂಡ್ ಪರವಾಗಿಯೇ ತುಡಿಯುತ್ತಿದೆ. ಗ್ರೇಟ್ ಗೇಮ್, ಎಪಿಕ್ ಫೈನಲ್” ಎಂದು ಟ್ವೀಟಿಸಿದ್ದಾರೆ.

ಸೂಪರ್ ಓವರ್ ನ ನಿಯಮಗಳೇನು?

ಯಾವುದೇ ಪಂದ್ಯದಲ್ಲಿ ಎರಡು ತಂಡಗಳ ರನ್ ಸಮನಾದರೆ ಅಂದರೆ ಟೈ ಆದರೆ ಅವರು ಎಷ್ಟೇ ವಿಕೆಟ್ ಕಳೆದುಕೊಂಡಿದ್ದರೂ ಸಹ ಅದನ್ನು ಪರಿಗಣಿಸದೇ, ಆಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಅನ್ನು ಪರಿಚಯಿಸಲಾಯಿತು.

ಎರಡು ತಂಡಗಳಿಗೆ ಆಡಲು ಒಂದು ಓವರ್ (6 ಬಾಲ್) ಸಿಗುತ್ತದೆ. ಬಾಲ್ ಮಾಡಲು ಒಬ್ಬ ಬೌಲರ್‍ಗೆ ಅವಕಾಶವಿರುತ್ತದೆ.
ತಂಡದ ಹನ್ನೊಂದು ಜನರಲ್ಲಿ ಯಾರಾದರೂ ಮೂವರು ಬ್ಯಾಟ್ಸ್‍ಮನ್‍ಗಳಿಗೆ ಅವಕಾಶವಿರುತ್ತದೆ. 6 ಬಾಲ್‍ಗಳಿಗಿಂತ ಮೊದಲೇ ಇಬ್ಬರು ಬ್ಯಾಟ್ಸ್‍ಮನ್‍ಗಳು ಔಟಾದರೆ ಆ ತಂಡದ ಇನ್ನಿಂಗ್ಸ್ ಅಲ್ಲಿಗೆ ಮುಕ್ತಾಯವಾಗುತ್ತದೆ.

ಪಂದ್ಯದ ಕೊನೆಯ ಓವರ್‍ನಲ್ಲಿ ಯಾವ ಫೀಲ್ಡಿಂಗ್ ನಿರ್ಬಂಧವಿರುತ್ತದೆಯೇ ಸೂಪರ್ ಓವರ್‍ಗೂ ಅದೇ ಅನ್ವಯವಾಗುತ್ತದೆ.

ಪ್ರತಿ ಪಂದ್ಯದಂತೆ ಒಂದು ಡಿಆರ್‍ಎಸ್ ರಿವ್ಯೂ ತೆಗೆದುಕೊಳ್ಳಲು ಅವಕಾಶವಿರುತ್ತದೆ. ರಿವ್ಯೂ ಯಶಸ್ವಿಯಾಗದರೆ ಮುಂದುವರೆಯುತ್ತದೆ ಮತ್ತು ವಿಫಲವಾದರೆ ಮುಕ್ತಾಯವಾಗುತ್ತದೆ.

ಪಂದ್ಯದಲ್ಲಿ ಎರಡನೇಯದಾಗಿ ಬ್ಯಾಟಿಂಗ್ ಮಾಡಿದ ತಂಡ ಮೊದಲು ಬ್ಯಾಟ್ ಮಾಡುತ್ತದೆ. ಉಳಿದ ನಂತರ ಚೇಸಿಂಗ್ ಮಾಡಬೇಕು. ಯಾವ ತಂಡ ಹೆಚ್ಚು ರನ್ ಗಳಿಸಿರುತ್ತದೆಯೇ ಆ ತಂಡವನ್ನು ವಿಜಯೀ ಎಂದು ಪರಿಗಣಿಸಲಾಗುತ್ತದೆ.

ಒಂದು ವೇಳೆ ಸೂಪರ್ ಓವರ್‍ನಲ್ಲಿಯೂ ಎರಡೂ ತಂಡಗಳು ಸಮಾನ ರನ್ ಗಳಿಸಿದರೆ (ಟೈ ಆದರೆ) ಆಗ ಪಂದ್ಯದಲ್ಲಿ ಯಾವ ತಂಡ ಹೆಚ್ಚು ಬೌಂಡರಿಗಳನ್ನು ಗಳಿಸುತ್ತದೆಯೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಮೊನ್ನೆಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿಯೂ ಹೀಗೆಯೇ ಆಯಿತು. ಸೂಪರ್ ಓವರ್‍ನಲ್ಲಿ ಇಂಗ್ಲೆಂಡ್ 15 ರನ್ ಗಳಿಸಿದರೆ, ನ್ಯೂಜಿಲೆಂಡ್ ಕೂಡ ಅಷ್ಟೇ ರನ್ ಗಳಿಸಿತು. ಆದರೆ ಬೌಂಡರಿಗಳ ಲೆಕ್ಕ ತೆಗೆದುಕೊಂಡರೆ ಇಂಗ್ಲೆಂಡ್ ಒಟ್ಟು 26(ಮುಖ್ಯ ಪಂದ್ಯದಲ್ಲಿ 24, ಸೂಪರ್ ಓವರ್‍ನಲ್ಲಿ 2) ಬೌಂಡರಿಗಳನ್ನು ಬಾರಿಸಿದರೆ ನ್ಯೂಜಿಲೆಂಡ್ 17 (ಮುಖ್ಯ ಪಂದ್ಯದಲ್ಲಿ 16, ಸೂಪರ್ ಓವರ್‍ನಲ್ಲಿ 1) ಮಾತ್ರ ಗಳಿಸಿತ್ತು. ಹಾಗಾಗಿ ಇಂಗ್ಲೆಂಡ್ ವಿಜಯಿಯಾಯಿತು.

ಒಂದು ವೇಳೆ ಆಗಲೂ ಎರಡು ತಂಡಗಳು ಸಮಾನ ಬೌಂಡರಿಗಳನ್ನು ಗಳಿಸಿದರೆ ಸೂಪರ್ ಓವರ್ ಅನ್ನು ಹೊರತುಪಡಿಸಿ ಮುಖ್ಯ ಪಂದ್ಯದಲ್ಲಿ ಯಾರು ಹೆಚ್ಚು ಬೌಂಡರಿಗಳನ್ನು ಗಳಿಸಿರುತ್ತಾರೋ (ಸೂಪರ್ ಓವರ್ ಹೊರತುಪಡಿಸಿ) ಅದನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...