Homeಮುಖಪುಟಹಲವು ರಾಮಾಯಣಗಳಲ್ಲಿ, ಯಾವುದು ಮೂಲ ರಾಮಾಯಣ?

ಹಲವು ರಾಮಾಯಣಗಳಲ್ಲಿ, ಯಾವುದು ಮೂಲ ರಾಮಾಯಣ?

- Advertisement -
- Advertisement -

ಕನ್ನಡದ ಪ್ರಸಿದ್ಧ ಕವಿಯಾದ ಕುಮಾರವ್ಯಾಸನು ‘ತಿಣುಕಿದನು ಫಣಿರಾಯ ರಾಮಾಯಣದ ಕತೆಗಳ ಭಾರದಲಿ’ ಎಂಬ ಮಾತನ್ನು ಹೇಳುತ್ತಾನೆ. ಅವನಿಗೆ ಕನ್ನಡ ನಾಡೂ ಸೇರಿದಂತೆ ಭಾರತದ ಹಲವು ಕಡೆಗಳಲ್ಲಿ ಪ್ರಚಲಿತದಲ್ಲಿದ್ದ ಹಲವು ರಾಮಾಯಣಗಳ ಬಗ್ಗೆ ತಿಳಿದಿತ್ತು. 10 ನೇ ಶತಮಾನದ ಕೊನೆಯಲ್ಲಿ ರಚಿತವಾದ ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’, 16 ನೇ ಶತಮಾನದ ತೊರವೆ ನರಹರಿಯ ‘ತೊರವೆ ರಾಮಾಯಣ’, 12-18ನೇ ಶತಮಾನಗಳಲ್ಲಿ ರಚಿತವಾದ ಯಕ್ಷಗಾನ ರಾಮಾಯಣಗಳು, ಮುದ್ದಣನ ರಾಮಾಶ್ವಮೇಧ, ಅದ್ಭುತ ರಾಮಾಯಣ – ಕೆಲವು ಉದಾಹರಣೆಗಳಷ್ಟೆ.

ದೇಶದಾದ್ಯಂತ ಹಲವು ಜನಪದ ರಾಮಾಯಣಗಳಿವೆ. ಈ ಜನಪದ ರಾಮಾಯಣಗಳು ರಾಮ ಕೇಂದ್ರಿತವಾಗಿರದೆ, ಬಹುಮಟ್ಟಿಗೆ ಸೀತಾ ಕೇಂದ್ರಿತವಾಗಿವೆ. ಚಿತ್ರ ಪಟ ರಾಮಾಯಣದಲ್ಲಿ ಸೀತೆಯು ಲಂಕೆಯಿಂದ ಹಿಂದೆ ಬಂದ ಆನಂತರ ರಾವಣ ಚಿತ್ರ ಬರೆಯುವ ಮಾರ್ಮಿಕ ಘಟನೆಯ ವಿವರ ಬರುತ್ತದೆ. ಈ ನಡುವೆ ಹಲವಾರು ರಾಮಾಯಣಗಳು ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದು ಆನಂತರ ಕಾಣೆಯಾಗಿವೆ. ರಾಮಾಯಣದ ವಸ್ತುವು ಬರ್ಮಾ, ಲಾವೋಸ್‌, ಫಿಲಿಪೈನ್ಸ್‌, ನೇಪಾಲ, ಜಪಾನ್‌, ಮಂಗೋಲಿಯಾ ಇಂಡೊನೇಷಿಯಾ, ಮಲೇಷಿಯಾ, ಕಾಂಬೋಡಿಯಾ, ಶ್ರೀಲಂಕಾ ದೇಶಗಳ ಸಂಸ್ಕೃತಿಗಳನ್ನು ಆಳವಾಗಿ ಪ್ರವೇಶಿಸಿ ಮರು ಹುಟ್ಟು ಪಡೆಯುತ್ತಿವೆ.

ಇದನ್ನೂ ಓದಿ: ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ!- ಎಚ್. ಡಿ. ಕುಮಾರಸ್ವಾಮಿ ಆಕ್ರೋಶ

ಈ ಎಲ್ಲಾ ರಾಮಾಯಣಗಳಿಗೆ ಮೂಲ ಆದಿಕವಿ ವಾಲ್ಮೀಕಿಯ ರಾಮಾಯಣ ಎಂದು ಹೇಳಲಾಗಿದೆ. ವಾಲ್ಮೀಕಿಗೆ ರಾಮ ಕತೆಯನ್ನು ನಾರದ ಹೇಳಿದನೆಂಬ ನಂಬಿಕೆಯೂ ಇದೆ. ಈ ನಾರದ ಬ್ರಹ್ಮನ ಮಗನಾಗಿದ್ದು ಭಾರತೀಯ ಮಹಾಕಾವ್ಯ ಮತ್ತು ಪುರಾಣಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಒಂದು ಪಾತ್ರವೇ ಹೊರತು ಐತಿಹಾಸಿಕ ವ್ಯಕ್ತಿಯಲ್ಲ. ಹೀಗಾಗಿ ಈ ಕಥನವನ್ನು ಪುರಾಣ-ಕಾವ್ಯಗಳ ಭಾಗವಾಗಿ ನೋಡಬೇಕೇ ವಿನಾ ವಾಸ್ತವ ಸತ್ಯವೆಂದು ಅಲ್ಲ.

ವಾಲ್ಮೀಕಿಯ ಕುರಿತಾದ ನಂಬಿಕೆಗಲೂ ಕಾಲಾಂತರದಲ್ಲಿ ಹಲವು ರೂಪಗಳನ್ನು ಧರಿಸಿವೆ. ಮಹಾಕಾವ್ಯದ ಭವ್ಯತೆ ದಿವ್ಯತೆಗಳನ್ನು ಹೆಚ್ಚು ಮಾಡಲು ಇಂಥ ಕತೆಗಳು ಸೇರಿಕೊಳ್ಳುತ್ತವೆ.

ಭಾರತದ ವಿವಿಧ ಭಾಷೆಗಳಲ್ಲಿ ಕಂಡು ಬರುವ ಜನಪದ ರಾಮಾಯಣಗಳ ವಸ್ತು ವಾಲ್ಮೀಕಿ ರಾಮಾಯಣಕ್ಕಿಂತ ತುಂಬ ಬೇರೆಯಾಗಿವೆ. ಎಷ್ಟೋ ರಾಮಾಯಣಗಳಲ್ಲಿ ಸೀತೆಯನ್ನು ಲಕ್ಷ್ಮಣ ಗೆದ್ದು ರಾಮನಿಗೆ ಅರ್ಪಿಸುವುದಿದೆ. ವಾಲ್ಮೀಕಿ ಇಂಥ ಹಲವು ರಾಮಾಯಣಗಳನ್ನು ಕೇಳಿ ಕೊನೆಗೆ ತನ್ನದೇ ಆದ ಒಂದು ರಾಮಾಯಣ ನಿರ್ಮಿಸಿರುವ ಸಾಧ್ಯತೆಯೇ ಹೆಚ್ಚು. ಏನಿದ್ದರೂ ಇದು ಕೋಳಿ ಮತ್ತು ಮೊಟ್ಟೆಯ ಕತೆ. ಯಾವುದರಿಂದ ಯಾವುದು ಹುಟ್ಟಿತು, ಯಾವುದು ಮೂಲ ಎಂದು ಹೇಳುವುದು ಅಸಾಧ್ಯ.

ಈಚಿನ ರಾಜಕೀಯದ ಭಾಗವಾಗಿ ‘ಸಂಸ್ಕೃತದ ರಾಮಾಯಣಕ್ಕೆ ಪ್ರತಿರೋಧವಾಗಿ ದೇಶಭಾಷೆಯಲ್ಲಿ ರಾಮಾಯಣವನ್ನು ಮರುಸೃಷ್ಟಿಸುತ್ತಿದ್ದಾರೆಂಬ’ ಆರೋಪವನ್ನು ಹಲವರು ಮಾಡುತ್ತಾ, ಮೂಲಕ್ಕೆ ನಿಷ್ಟರಾಗಿರಬೇಕೆಂಬ ಮಾತನ್ನು ಹೇಳುತ್ತಿದ್ದಾರೆ. ಇದನ್ನು ಒಪ್ಪಿಕೊಂಡರೆ, ಸಂಸ್ಕೃತದಲ್ಲೂ ಹಲವು ರಾಮಾಯಣಗಳಿರುವುದಕ್ಕೆ ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾಗುತ್ತದೆ. ಭಾಸನ ‘ಪ್ರತಿಮಾನಾಟಕ’, ಮತ್ತು ‘ಅಭಿಷೇಕ’ ನಾಟಕಗಳು ಇದಕ್ಕೊಂದು ಉತ್ತಮ ಉದಾಹರಣೆ.

ಇದನ್ನೂ ಓದಿ: ‘#ಕನ್ನಡದಲ್ಲಿUPSC’ ಟ್ವಿಟರ್‌ನಲ್ಲಿ ಟ್ರೆಂಡ್‌; ಅಭಿಯಾನ ಬೆಂಬಲಿಸಲು ಕನ್ನಡಿಗರ ಕರೆ

ಆಧ್ಯಾತ್ಮ ನಾಮಾಯಣ, ವಶಿಷ್ಟ ರಾಮಾಯಣ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ಅದ್ಭುತ ರಾಮಾಯಣ, ಉತ್ತರ ರಾಮಚರಿತ – ಹೀಗೆ ಹಲವು ರಾಮಾಯಣಗಳ ಪರಂರೆ ಸಂಸ್ಕೃತಕ್ಕೇ ಇದೆ. ಅದೇ ರೀತಿಯಲ್ಲಿ ಭಾರತೀಯ ಭಾಷೆಗಳು ಕಂಬನ್‌ ರಾಮಾಯಣ, ತುಲಸೀ ರಾಮಾಯಣ ಮೊದಲಾದುವುಗಳನ್ನು ಸೃಷ್ಟಿಸಿಕೊಂಡಿವೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಬಂದ ಮಹತ್ಕೃತಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’. 20 ನೇ ಶತಮಾನಕ್ಕೆ ರಾಮಾಯಣ ಮುಖಾ ಮುಖಿಯಾದಾಗ ಹುಟ್ಟಿಕೊಂಡ ಮಹಾಕಾವ್ಯವದು.

ಈ ಬಹುಪಠ್ಯಗಳು ಮೂಲತಃ ಭಾರತದ ವೈವಿಧ್ಯತೆಗಳಿಗೊಂದು ರೂಪಕ. ವ್ಯಾಸರು ಬರೆದ ಮಹಾಭಾರತದ ಸಾವಿರಾರು ಪಠ್ಯಗಳನ್ನು ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ವಿಷ್ಣು ಎಸ್. ಸೂಕ್ತಂಕರ್ ಸಂಗ್ರಹಿಸಿ, ಅದರಿಂದ ಒಂದು ಪಠ್ಯವನ್ನು ಪರಿಷ್ಕರಿಸಿ ಪೂನಾದಿಂದ ಪ್ರಕಟಿಸಿದರು. ಹಾಗೆ ಪ್ರಕಟಿಸುವಾಗ ಅವರು ಬರೆದ ಬಹಳ ಮಹತ್ವದ ವಾಕ್ಯವೊಂದು ಇಂತಿದೆ- “ವ್ಯಾಸರು ಬರೆದ ಮೂಲ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಸಾಧ್ಯವಿಲ್ಲದ ಕೆಲಸ. ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ ಅಷ್ಟೆ”. ಈ ಮಾತು ರಾಮಾಯಣಕ್ಕೂ ಅನ್ವಯವಾಗುತ್ತದೆ.

ಗಮನಿಸಬೇಕಾದ ವಿಷಯವೆಂದರೆ, ನಮ್ಮ ದೇಶದಲ್ಲಿ ವಿವಿಧ ಸಮುದಾಯಗಳು ಕಾವ್ಯವನ್ನು ತಮಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಳ್ಳುತ್ತವೆ ಅಥವಾ ಹೇಳಿಕೊಳ್ಳುತ್ತವೆ ಎಂಬುದನ್ನು ನಾವೀಗ ಮರೆತುಬಿಟ್ಟಿರುವುದು. ತನ್ನ ಕಾಲದ, ಸಮುದಾಯದ, ಪ್ರದೇಶದ ಮತ್ತು ನಿರೂಪಕನ ಅಗತ್ಯಗಳಿಗೆ ಅನುಗುಣವಾಗಿ ಕಾವ್ಯಗಳನ್ನು ಮತ್ತೆ ಮತ್ತೆ ಬರೆಯಲಾಗುತ್ತದೆ. ಆಕಾಶದಲ್ಲಿರುವ ನಕ್ಷತ್ರಗಳ ಹಾಗೆ. ಅವುಗಳನ್ನು ನಾವು ಎಣಿಸಲಾರೆವು, ಅವುಗಳಿಗೆ ವ್ಯಾಕರಣವನ್ನೂ ಬರೆಯಲಾರೆವು, ಆದರೆ ಅವು ಆಗಸದ ಒಟ್ಟಂದವನ್ನು ಹೆಚ್ಚಿಸಿವೆ.

ಕುವೆಂಪು ಮತ್ತು ಅವರು ಬರೆದ ರಾಮಾಯಣದ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಗಳು ಮತ್ತು ಆರೋಪಗಳು ರಾಜಕೀಯ ಪ್ರೇರಿತವಾದುವು. ಅವುಗಳನ್ನು ರಾಜಕೀಯವಾಗಿಯೇ ಎದುರಿಸಬೇಕು ಅಷ್ಟೆ.

ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...