Homeಮುಖಪುಟಬಜರಂಗದಳ ಟಾರ್ಗೆಟ್‌ ಮಾಡಿದ್ದ ನಾಲ್ವರು ಮುಸ್ಲಿಂ ಯುವಕರ ಬಂಧನ

ಬಜರಂಗದಳ ಟಾರ್ಗೆಟ್‌ ಮಾಡಿದ್ದ ನಾಲ್ವರು ಮುಸ್ಲಿಂ ಯುವಕರ ಬಂಧನ

ಬಿಜೆಪಿ ಸರ್ಕಾರ ಈ ಹಿಂದೆಯೇ ‘ಲವ್‌ ಜಿಹಾದ್‌’ ಇದೆ ಎಂಬುದನ್ನು ಅಲ್ಲಗಳೆದಿದೆ. ಸಂಘ ಪರಿವಾರ ಮಾತ್ರ ಮತ್ತೆ ಮತ್ತೆ ಲವ್‌ ಜಿಹಾದ್‌ ಇದೆ ಎಂದು ವಿವಾದ ಸೃಷ್ಟಿಸುತ್ತದೆ.

- Advertisement -
- Advertisement -

ನಾಲ್ವರು ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ‘ಗರ್ಭ ನೃತ್ಯ’ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಬಂಧಿಸಲಾಗಿದೆ. ಅಕ್ಟೋಬರ್‌ 10ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ‘ಲವ್‌ ಜಿಹಾದ್‌ ಪ್ರೋತ್ಸಾಹಿಸಲಾಗಿದೆ’, ಕೋವಿಡ್‌ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಬಜರಂಗದಳ ಆರೋಪಿಸಿದೆ.

ಬಂಧಿತ ನಾಲ್ವರಲ್ಲಿ ಇಬ್ಬರು ಕಾರ್ಯಕ್ರಮ ಆಯೋಜಿಸಿದ್ದ ಇಂದೋರ್‌ನ ಆಕ್ಸ್‌ಫರ್ಡ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಲವ್‌ ಜಿಹಾದ್ ಪ್ರಚೋದಿಸಲು ಹಾಗೂ ವಾಣೀಜ್ಯೀಕರಣದ ದೃಷ್ಟಿಯಿಂದ ಯುವತಿಯರನ್ನು ಒಂದೆಡೆ ಸೇರಿಸಲಾಗಿದೆ ಎಂದು ಬಜರಂಗ ದಳ ಆರೋಪಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ನಾಲ್ವರು ಬಂಧನವಾಗಿರುವುದು ಏತಕ್ಕೆ?

“ಬಜರಂಗದಳದ ಕಾರ್ಯಕರ್ತರು ಈ ವಿದ್ಯಾರ್ಥಿಗಳನ್ನು ಪೊಲೀಸರಿಗೆ ಒಪ್ಪಿಸಿದ ನಂತರ ಸಾರ್ವಜನಿಕ ತೊಂದರೆ ಉಂಟು ಮಾಡಿದ ಆರೋಪದ ಮೇಲೆ ಜೈಲಿಗೆ ದೂಡಲಾಗಿದೆ” ಎಂದು ವರದಿಯಾಗಿದೆ.

ಬಂಧಿತ ನಾಲ್ವರನ್ನು ಆಕ್ಸ್‌ಫರ್ಡ್ ಕಾಲೇಜಿನ ವಿದ್ಯಾರ್ಥಿಗಳಾದ ಅದ್ನಾನ್ ಶಾ, ಕದಿರ್ ಮನ್ಸೂರಿ ಮತ್ತು ಅವರ ಸ್ನೇಹಿತರಾದ ಉಮರ್ ಖಾಲಿದ್, ಸಯ್ಯದ್ ಸಕೀಬ್ ಎಂದು ಗುರುತಿಸಲಾಗಿದೆ.

ಗರ್ಭ ನೃತ್ಯ (ಸಾಂದರ್ಭಿಕ ಚಿತ್ರ)

ಪೊಲೀಸರು ಹೇಳುವುದು ಏನು?

ಪಶ್ಚಿಮ ಇಂದೋರ್‌ ಪೊಲೀಸ್ ವರಿಷ್ಠಾಧಿಕಾರಿ ಮಹೇಶಚಂದ್ರ ಜೈನ್‌ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿ, ಈ ನಾಲ್ವರು ವಿರುದ್ಧದ ಕ್ರಮ ‘ಅನ್ಯಾಯ’ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಕುಟುಂಬದವರು ಜಾಮೀನು ತೆಗೆದುಕೊಳ್ಳುವಲ್ಲಿ ವಿಫಲರಾದ್ದರಿಂದ ಅವರನ್ನು ಜೈಲಿಗೆ ತಳ್ಳಲಾಗಿದೆ. ಸುಮಾರು 5,000 ಜನರನ್ನು ಒಂದೆಡೆ ಸೇರಿಸಿ ಕೋವಿಡ್ ನಿಯಮಾವಳಿಗಳನ್ನು ಸಂಘಟಕರು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿರಿ: ಯುಎಪಿಎ ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳಿಗೆ ಜಾಮೀನು!

ಕುಟುಂಬ ಹೇಳುವುದೇನು?

ಅದ್ನಾನ್‌ ಅವರ ಚಿಕ್ಕಪ್ಪ ಸಾಜಿದ್‌ ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, ಭಾನುವಾರ ರಾತ್ರಿ 11.30ಕ್ಕೆ ಬಂಧನದ ವಿಷಯ ತಿಳಿಯಿತು. ಪೊಲೀಸರನ್ನು ಸಂಪರ್ಕಿಸಲು ತಡವಾಯಿತು ಎಂದಿದ್ದಾರೆ.

“ಅಕ್ಟೋಬರ್ 11, ಸೋಮವಾರ ಮುಂಜಾನೆ, ನಾಲ್ವರನ್ನು ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ನಮಗೆ ಭರವಸೆ ನೀಡಿದರು. ಆದರೆ ಅವರನ್ನು ಸಬ್‌‌ಡಿಜಿಸನ್‌ ಮ್ಯಾಜಿಸ್ಟ್ರೇಟ್‌‌ ಮುಂದೆ ಹಾಜರುಪಡಿಸಲಾಯಿತು. ಅವರು ಜಾಮೀನು ನೀಡುವ ಬದಲು, ನಮಗೆ ಗೊತ್ತಿಲ್ಲದೆ ಅವರನ್ನು ಜೈಲಿಗೆ ಕಳುಹಿಸಿದರು” ಎಂದು ಶಾ ಹೇಳಿದ್ದಾರೆ.

‘ಹಿಂದೂಗಳಲ್ಲದವರಿಗೆ ಗರ್ಭ ನೃತ್ಯಕ್ಕೆ ಪ್ರವೇಶವಿಲ್ಲ’: ವಿಎಚ್‌ಪಿ

ನವರಾತ್ರಿಯ ದುರ್ಗಾ ಪೂಜೆಯಲ್ಲಿ ನಡೆಯುವ ಗರ್ಭ ನೃತ್ಯದಲ್ಲಿ ಹಿಂದೂಗಳಲ್ಲದವರು ಪ್ರವೇಶಿಸುವಂತಿಲ್ಲ ಎಂಬ ಪೋಸ್ಟರ್‌ಗಳನ್ನು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮಧ್ಯಪ್ರದೇಶದ ರತ್ಲಮ್‌ ಜಿಲ್ಲೆಯ ಹಲವೆಡೆ ಅಂಟಿಸಿದೆ. 56 ಪಂದಲ್‌ಗಳಲ್ಲಿ “ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಗಿದೆ” ಎಂದು ಪೋಸ್ಟರ್‌ ಹಾಕಲಾಗಿದೆ ಎಂದು ವರದಿಯಾಗಿದೆ.

ವಿಎಚ್‌ಪಿಯ ಧರ್ಮ್ ಪ್ರಚಾರ ವಿಭಾಗ ರತ್ಲಾಮ್‌ನ ಜಿಲ್ಲಾ ಕಾರ್ಯದರ್ಶಿ ಚಂದನ್ ಶರ್ಮಾ, “ದುರ್ಗಾದೇವಿಯನ್ನು ಸ್ತುತಿಸಿ ನೃತ್ಯ ಮಾಡುವ ಗರ್ಭ ಪಂದಲ್‌ಗಳನ್ನು ಹಿಂದೂ ಅಲ್ಲದ ಯುವಕರು ಪ್ರವೇಶಿಸುವ ಮೂಲಕ ಆಕ್ಷೇಪಾರ್ಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ” ಎಂದು ಆರೋಪಿಸಿದ್ದಾರೆ.

“ಹಿಂದೂಯೇತರ ಯುವಕರ ಪ್ರವೇಶವು ಕಳೆದ ವರ್ಷ ಹಲವು ಸ್ಥಳಗಳಲ್ಲಿ ವಿವಾದಗಳಿಗೆ ಕಾರಣವಾಗಿತ್ತು. ಇಂತಹ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ, ಹಿಂದೂಯೇತರರಿಗೆ ಗರ್ಭ ಮತ್ತು ದುರ್ಗಾ ಪಂದಲ್‌ಗಳಿಗೆ ಪ್ರವೇಶಿಸದಂತೆ ತಿಳಿಸಲಾಗಿದೆ. ಇದರಿಂದ ಇಂತಹ ಘಟನೆಗಳನ್ನು ತಪ್ಪಿಸಬಹುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ಬಾಲ್ಯವಿವಾಹದಿಂದ ಜಾಗತಿಕವಾಗಿ ದಿನಕ್ಕೆ 60 ಕ್ಕೂ ಹೆಚ್ಚು ಬಾಲಕಿಯರ ಸಾವು: ವರದಿ

ಲವ್‌ ಜಿಹಾದ್ ಎಂಬುದು ಇಲ್ಲ: ಬಿಜೆಪಿ ಸರ್ಕಾರ

ಕಳೆದ ಫೆಬ್ರವರಿ 4 ರಂದು, ಮೋದಿ ಸರ್ಕಾರವು ಸಂಸತ್ತಿನಲ್ಲಿ ಲವ್‌ ಜಿಹಾದ್‌ ವಿಷಯದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಿಜೆಪಿ ಮುಖಂಡ ಮತ್ತು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ಅವರು ‘ಲವ್ ಜಿಹಾದ್ ’ಎಂಬ ಪದವನ್ನು ಈಗಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಅಲ್ಲದೇ ಇದುವರೆಗೂ ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಲೋಕಸಭೆಗೆ ಈ ಹಿಂದೆಯೇ ತಿಳಿಸಿದ್ದಾರೆ.

ಇದಲ್ಲದೆ, “ಸಂವಿಧಾನದ 25 ನೇ ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು ಧರ್ಮವನ್ನು ಪ್ರಚಾರ ಮಾಡಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಕೇರಳ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ಅಭಿಪ್ರಾಯವನ್ನು ಎತ್ತಿಹಿಡಿದಿವೆ.”

ಚುನಾವಣಾ ವಿಷಯ ಯಾವುದು: ಉತ್ತರ- ‘ಲವ್ ಜಿಹಾದ್!’

ಫೆಬ್ರವರಿ 2017 ರಲ್ಲಿ, ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಯೋಗಿ ಆದಿತ್ಯನಾಥ್, “ಕೈರಾನಾದಿಂದ ಹಿಂದೂಗಳು ವಲಸೆ ಹೋಗುತ್ತಿರುವುದು ಮತ್ತು ಲವ್ ಜಿಹಾದ್ ಮತದಾನದ ಮೇಲೆ ಪ್ರಾಬಲ್ಯ ಸಾಧಿಸುತ್ತದೆ” ಎಂದು ಹೇಳಿದ್ದರು.

ಸಿಎಎ ವಿರೋಧಿ ಪ್ರತಿಭಟನೆಯನ್ನು ಟೀಕಿಸುವುದು ಹೇಗೆ? ಉತ್ತರ – ‘ಲವ್ ಜಿಹಾದ್!’

2020ರ ಜನವರಿಯಲ್ಲಿ, ಸಿಎಎ ವಿರೋಧಿ ಪ್ರತಿಭಟನೆಗಳನ್ನು ಟೀಕಿಸುವಾಗ ಕೇರಳ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು ‘ಲವ್ ಜಿಹಾದ್’ ನ ಪದವನ್ನು ಎಳೆದುತಂದರು. “ಕಾಂಗ್ರೆಸ್, ಸಿಪಿಎಂ ಮತ್ತು ಜಿಹಾದಿ ಸಂಘಟನೆಗಳು ಇತರ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಕ್ರಿಶ್ಚಿಯನ್, ಹಿಂದೂ, ಬೌದ್ಧ ಸದಸ್ಯರಿಗೆ ಸಾಮಾಜಿಕ ನ್ಯಾಯ ಒದಗಿಸುವುದನ್ನು ವಿರೋಧಿಸುತ್ತಿವೆ. ಆದರೆ ಲವ್ ಜಿಹಾದ್ ಬೆಂಬಲಿಸುತ್ತಾರೆ” ಎಂದು ಅವರು ಹೇಳಿದ್ದರು.

ಮಗಳು ಕಾಣೆಯಾಗಿದ್ದಾಳೆ ಏನು ಹೇಳುವುದು? ಉತ್ತರ- ‘ಲವ್ ಜಿಹಾದ್!’

ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟುಹಾಕಿದ್ದಾರೆ ಎಂದು ಆರೋಪಿಸಿ 2019ರ ಅಕ್ಟೋಬರ್‌ನಲ್ಲಿ ಬಿಜೆಪಿ ಮುಖಂಡ ಸುರೇಂದ್ರ ನಾಥ್ ಸಿಂಗ್ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಏಕೆಂದರೆ ಆತ  ತನ್ನ ಮಗಳ ನಾಪತ್ತೆಯಾಗಿದ್ದನ್ನು ‘ಲವ್ ಜಿಹಾದ್’ ಗೆ ಲಿಂಕ್ ಮಾಡಿದ್ದರು. ಈ ಪ್ರಕರಣದಲ್ಲಿ ಭೋಪಾಲ್ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಆರಿಫ್ ಮಸೂದ್ ಪಾತ್ರವಿದೆ ಎಂದು ಹೇಳಿಕೊಂಡಿದ್ದರು. ಆದರೆ ವಿಚಾರಣೆ ನಡೆದಾಗ ಎಲ್ಲಾ ಸುಳ್ಳು ಎಂದು ಸಾಬೀತಾಯಿತು.

ಮುಸ್ಲಿಮರು ಹಸುಗಳನ್ನು ಸಾಕುತ್ತಾರೆಯೇ? ‘ಲವ್ ಜಿಹಾದ್!’

ಜುಲೈ 2019 ರಲ್ಲಿ ಬಿಜೆಪಿ ನಾಯಕ ರಂಜಿತ್ ಬಹದ್ದೂರ್ ಶ್ರೀವಾಸ್ತವ ವಿವಾದಾತ್ಮಕ ಹೇಳಿಕೆಯಲ್ಲಿ ಮುಸ್ಲಿಮರಿಗೆ ಸೇರಿದ ಹಸುಗಳನ್ನು ಯಾವುದೇ ಬೆಲೆ ತೆತ್ತಾದರೂ ಸರಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಮುಸ್ಲಿಮರು ಹಸುಗಳನ್ನು ಸಾಕುವುದು ಕೂಡ “ಲವ್ ಜಿಹಾದ್” ಎಂದು ಅವರು ಹೇಳಿದರು.

ಜ್ಞಾಪನೆ: ಲೋಕಸಭೆಯಲ್ಲಿ ಲವ್‌ ಜಿಹಾದ್‌ ಬಗ್ಗೆ ಮೋದಿ ಸರ್ಕಾರ ಏನು ಹೇಳಿದೆ
ಇಷ್ಟೆಲ್ಲಾ ಘಟನೆಗಳಾದ ಮೇಲೆ ಕೇರಳದ ಕಾಂಗ್ರೆಸ್ ಸಂಸದ ಬೆನ್ನಿ ಬೆಹಾನನ್ ಅವರು ಲೋಕಸಭೆಯಲ್ಲಿ ಮೋದಿ ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳು ಇಲ್ಲಿವೆ.

(ಎ) ಕೇರಳದಲ್ಲಿ ಲವ್ ಜಿಹಾದ್ ಪ್ರಕರಣವಿಲ್ಲ ಎಂದು ಕೇರಳ ಹೈಕೋರ್ಟ್‌ನ ವೀಕ್ಷಣೆಯ ಬಗ್ಗೆ ಸರ್ಕಾರಕ್ಕೆ ತಿಳಿದಿದೆಯೇ?

(ಬಿ) ಹಾಗಿದ್ದರೆ, ಅದರ ವಿವರಗಳೇನು? ಮತ್ತು

(ಸಿ) ಕಳೆದ ಎರಡು ವರ್ಷಗಳಲ್ಲಿ ಯಾವುದೇ ಕೇಂದ್ರ ಏಜೆನ್ಸಿಗಳು ಕೇರಳದಿಂದ ಲವ್ ಜಿಹಾದ್ ಪ್ರಕರಣವನ್ನು ವರದಿ ಮಾಡಿವೆಯೇ? ಹಾಗಿದ್ದಲ್ಲಿ, ಅದರ ವಿವರಗಳನ್ನು ನೀಡಿ.

ಈ ಪ್ರಶ್ನೆಗಳಿಗೆ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರ ಸಂಪೂರ್ಣ ಪ್ರತಿಕ್ರಿಯೆ ಇಲ್ಲಿದೆ.

ಸಂವಿಧಾನದ 25 ನೇ ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು ಧರ್ಮವನ್ನು ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಕೇರಳ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ಅಭಿಪ್ರಾಯವನ್ನು ಎತ್ತಿಹಿಡಿದಿವೆ.

‘ಲವ್ ಜಿಹಾದ್’ ಎಂಬ ಪದವನ್ನು ಈಗಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ.

ಇಷ್ಟೆಲ್ಲ ಆಗಿರುವಾಗ ಸಂಘ ಪರಿವಾರದವರು ಲವ್‌ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸುತ್ತಿರುವುದು ಯಾತಕ್ಕಾಗಿ? ಸರ್ಕಾರವೇ ಲವ್‌ ಜಿಹಾದ್‌ ಎಂಬುದನ್ನು ಅಲ್ಲಗಳೆದಿರುವಾಗ ಸಂಘಪರಿವಾರದವರು ಲವ್‌ ಜಿಹಾದ್‌ ಎಂದು ಮತ್ತೆ ಮತ್ತೆ ಆರೋಪಿಸುತ್ತಿರುವುದನ್ನು ಹೇಗೆ ನೋಡಬೇಕು ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್‌ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...