Homeಮುಖಪುಟಬಿಜೆಪಿ ನಾಯಕನ ಮನೆ ಉರುಳಿಸಿದ ಯೋಗಿ ಆದಿತ್ಯನಾಥ್ ಸರ್ಕಾರ: ಕಾರಣವೇನು?

ಬಿಜೆಪಿ ನಾಯಕನ ಮನೆ ಉರುಳಿಸಿದ ಯೋಗಿ ಆದಿತ್ಯನಾಥ್ ಸರ್ಕಾರ: ಕಾರಣವೇನು?

- Advertisement -
- Advertisement -

ನೋಯ್ಡಾದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ, ಬಿಜೆಪಿ ನಾಯಕ ಎಂದು ಹೇಳಿಕೊಳ್ಳುವ ಶ್ರೀಕಾಂತ್ ತ್ಯಾಗಿ ಅವರ ಮನೆಯ ಒಂದು ಭಾಗವನ್ನು ಯೋಗಿ ಸರ್ಕಾರದ ಬುಲ್ಡೋಜರ್‌ಗಳು ಕೆಡವಿವೆ ಎಂದು ಎಎನ್‌ಐ ವರದಿ ಮಾಡಿದೆ.

ಗ್ರೀನ್‌ ಬೆಲ್ಟ್‌ಅನ್ನು ಅತಿಕ್ರಮಿಸಿದ ಆರೋಪದ ಮೇಲೆ ತ್ಯಾಗಿ ವಿರುದ್ಧ ನೋಯ್ಡಾ ಪ್ರಾಧಿಕಾರ ಮತ್ತು ಗೌತಮ್ ಬುದ್ಧ ನಗರ ಪೊಲೀಸರಿಗೆ 2019ರಲ್ಲಿ ಹೌಸಿಂಗ್ ಸೊಸೈಟಿಯ ನಿವಾಸಿಗಳು ದೂರು ನೀಡಿದ್ದರು.

ಅಕ್ಟೋಬರ್ 16, 2019ರಂದು, ನೋಯ್ಡಾ ಪ್ರಾಧಿಕಾರವು 15 ದಿನಗಳಲ್ಲಿ ಅತಿಕ್ರಮಣವನ್ನು ತೆರವು ಮಾಡುವಂತೆ ತ್ಯಾಗಿಗೆ ನೋಟಿಸ್ ನೀಡಿತ್ತು. ಆದಾಗ್ಯೂ ನೋಯ್ಡಾ ಪ್ರಾಧಿಕಾರವು ಕಳೆದ ವರ್ಷ ನೋಟಿಸ್ ಅನ್ನು ರದ್ದುಗೊಳಿಸಿದೆ ಎಂದು ತ್ಯಾಗಿ ಹೇಳಿಕೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸೋಮವಾರ ಬುಲ್ಡೋಜರ್‌ಗಳು ನೋಯ್ಡಾದ ಸೆಕ್ಟರ್ 93 ಬಿನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿರುವ ತ್ಯಾಗಿ ಅವರ ಮನೆಯ ಎರಡು ಗಾಜಿನ ಛಾವಣಿಗಳನ್ನು ಒಡೆದು ಹಾಕಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಬಹುಮಹಡಿ ವಸತಿ ಸಮುಚ್ಚಯದೊಳಗೆ ಮನೆ ಇರುವುದರಿಂದ ಬುಲ್ಡೋಜರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಧ್ವಂಸ ಮಾಡಲಾರದ ಕಾರಣ, ಅವರ ಮನೆಯ ಹಿಂದಿನ ಭಾಗದಲ್ಲಿನ ಮರದ ಫಲಕಗಳನ್ನು ಒಡೆಯಲು ಕಾರ್ಮಿಕರನ್ನು ಬಳಸಲಾಗಿದೆ.

“ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇಡೀ ಪ್ರಕರಣವನ್ನು ಗಂಭೀರವಾಗಿ ಗಮನಿಸಿದ್ದಾರೆ. ಆರೋಪಿಗಳು ಸ್ವೇಚ್ಛೆಯಿಂದ ಇರಲು ನಾವು ಬಿಡುವುದಿಲ್ಲ” ಎಂದು ಯುಪಿ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ. ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತ್ಯಾಗಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಯಾವುದೇ ಮಹಿಳೆಯ ಮೇಲೆ ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತ್ಯಾಗಿ ತಲೆಮರೆಸಿಕೊಂಡಿದ್ದಾನೆ.

ಮಹಿಳೆಯೊಬ್ಬರಿಗೆ ಅಶ್ಲೀಲವಾಗಿ ನಿಂದಿಸಿ ಹಲ್ಲೆ ನಡೆಸಿದ್ದ ಶ್ರೀಕಾಂತ್‌ ತ್ಯಾಗಿ ಅವರನ್ನು ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಶನಿವಾರ ಹೇಳಿದೆ. ಆದರೆ ಆರೋಪಿಯು ಪರಾರಿಯಾಗಿದ್ದು, ಆತನ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ಉತ್ತರ ಪ್ರದೇಶ ಡಿಜಿಪಿಗೆ ಪತ್ರ ಬರೆದು ಘಟನೆಯ ಬಗ್ಗೆ ನ್ಯಾಯಯುತ ಮತ್ತು ತ್ವರಿತ ತನಿಖೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದು, ದುಷ್ಕರ್ಮಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಅವನನ್ನು ಬಂಧಿಸುವಂತೆ ಕೋರಿದ್ದಾರೆ.

ಕಳೆದ ವಾರ ಮರಗಳನ್ನು ನೆಡುವುದನ್ನು ತಡೆಯಲು ಶ್ರೀಕಾಂತ್ ತ್ಯಾಗಿ ಪ್ರಯತ್ನಿಸಿದಾಗ ಮಹಿಳೆಯನ್ನು ನಿಂದಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ತ್ಯಾಗಿ ಮಹಿಳೆಯನ್ನು ತಳ್ಳುತ್ತಾನೆ. ಮತ್ತು ಆಕೆಯ ಪತಿಯನ್ನು ಅವಾಚ್ಯವಾಗಿ ನಿಂದಿಸುತ್ತಾನೆ.

ಇದನ್ನೂ ಓದಿರಿ: ಮಿತ್ರಪಕ್ಷ ಬಿಜೆಪಿ ಜೊತೆ ನಿತೀಶ್‌ ಮುನಿಸು: ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು

ಅಪಾರ್ಟ್‌ಮೆಂಟ್‌ನ ಕಾಮನ್ ಏರಿಯಾ ಜಾಗವನ್ನು ಶ್ರಿಕಾಂತ್ ತ್ಯಾಗಿ ಅತಿಕ್ರಮಣ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಈ ಕುರಿತು ಅಪಾರ್ಟ್‌ಮೆಂಟ್ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಶ್ರೀಕಾಂತ್ ತ್ಯಾಗಿ ಬಳಿ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಶ್ಲೀಲ ಶಬ್ದಗಳಿಂದ ಮಹಿಳೆಯನ್ನು ನಿಂದಿಸಿ ಹಲ್ಲೆ ನಡೆಸಿದ್ದನು.

ತ್ಯಾಗಿ ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮತ್ತು ಆಡಳಿತ ಪಕ್ಷದ ಯುವ ಕಿಸಾನ್ ಸಮಿತಿಯ ರಾಷ್ಟ್ರೀಯ ಸಹ-ಸಂಯೋಜಕ ಎಂದು ಗುರುತಿಸಿಕೊಂಡಿದ್ದಾನೆ. ಆದರೆ, ಬಿಜೆಪಿ ನೋಯ್ಡಾ ಮಹಾನಗರ ಮುಖ್ಯಸ್ಥ ಮನೋಜ್ ಗುಪ್ತಾ ಅವರು ತ್ಯಾಗಿ ಆಡಳಿತ ಪಕ್ಷದ ಸದಸ್ಯನಲ್ಲ ಎಂದು ಹೇಳಿಕೊಂಡಿದ್ದಾರೆ.

ಇದರ ನಡುವೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಏಳು ಜನರು ಗಲಾಟೆ ಮಾಡಿದ ನಂತರ ನೋಯ್ಡಾ ಎರಡನೇ ಹಂತದ ಪೊಲೀಸ್ ಠಾಣೆಯ ಉಸ್ತುವಾರಿ ಸುಜಿತ್ ಉಪಾಧ್ಯಾಯ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ ಎಂದು ನೋಯ್ಡಾ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ಹೇಳಿದ್ದಾರೆ. ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪೆಗಾಸಸ್ ಸ್ಪೈವೇರ್ ಬಳಸಿಕೋಂಡು ಆಶೀರವಾಣಿ ಮಾತಡುವ ಮಾಂತ್ರಿಕ ಮಂತೇಶ್ ಬಾಬು ಮತ್ತು ಪ್ರಸಾದ್ ಬಂಗಾರಿ ಮತ್ತು ನರಸಿಂಹ ಮೂರ್ತಿ ಇವರು ಹೆಣ್ಣು ಮಕ್ಕಳ ನ್ನು ನಿಂದಿಸುತ್ತಾರೆ ಹಾಗೆ ಅಶ್ಲೀಲ ವಾಗಿ ಮಾತಡುವುದು ತಡೆಯುವುದು ಹೇಗೆ ಮಾಂತ್ರಿಕ ತಂಡ ಬಂದ್ದು ಮೌಢ್ಯತೆ ಯನ್ನು ಜನರಿಗೆ ಮೀಸ್ ಗೈಡ್ ಮಾಡಿ ದುಡ್ಡು ಮಾಡಲೂ ಎಲ್ಲಾರಿಗೂ ಬುದ್ದಿ ಪರೀಕ್ಷೆ ಮಾಡುತ್ತಿನಿ ಅಂತಾ ದುಡ್ಡು ಮಾಡಲೂ ಶೋಷಣೆ ಮಾಡುವುದು ಭಯ ತರಿಸುವ ಆವ್ಯಾಕ್ತಾಮಾತು ಕಥೆ ಹಾಡುತ್ತಾ ಯಾರಿಗೂ ಪೆಗಾಸಸ್ ಸ್ಪೈವೇರ್ ಕಂಡುಹಿಡಿಯಕ್ಕೆ ಆಗಲ್ಲಾ ಅಂತಾ ಜನರನ್ನು ಅದರಲ್ಲೂ ದಲಿತ ಜನಾಂಗಕ್ಕೆ ಶೋಷಣೆ ಮಾಡುವುದು ಗುಲಾಮನಾಗೀ ADA Division C ಇಲ್ಲಾD ನಲ್ಲಿ ಕೆಲಸ ಮಾಡುತ್ತಾನೆ ಎಲ್ಲಾ ವ್ಯಭಿಚಾರ ಮಾಡುವ ಗ್ಯಾಂಗ್ ಮಾಂತ್ರಿಕ ರು ವರ್ಷ ದಿಂದ ಬಳಸುತ್ತಾರೆ ಚೀನದ ಟೇಕ್ನಾಲಾಜಿ 1986 ಸ್ಪೈವೇರ್ ಕಡಿಮೆ ಸಿಗ್ನಲ್ ಇತ್ತು ಇಗ ಹೇಚ್ಚು ಇದೆ ಸ್ಮಾರ್ಟ್ ಫೋನ್ ಇರುವುದರಿಂದ ಮತ್ತೆ ಹೋಸ ಪೆಗಾಸಸ್ ಸ್ಪೈವೇರ್ ಕರಿದಿ ಮಾಡಿದ್ದಾರೆ 2015 ರಿಂದ ಬಳಸುತ್ತಾರೆ ಮಾಂತ್ರಿಕ ಗ್ಯಾಂಗ್.

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...