Homeಕರ್ನಾಟಕದೆಹಲಿಯ ಐತಿಹಾಸಿಕ ರೈತ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕದ ರೈತ ಮುಖಂಡರು ಹೇಳಿದ್ದೇನು?

ದೆಹಲಿಯ ಐತಿಹಾಸಿಕ ರೈತ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕದ ರೈತ ಮುಖಂಡರು ಹೇಳಿದ್ದೇನು?

'ಸರ್ಕಾರ ಪ್ರತಿಭಟನಾಕಾರರನ್ನು ಭಯೋತ್ಪಾದಕರು, ಖಾಲಿಸ್ತಾನಿಗಳು ಎಂದು ಅಪಪ್ರಚಾರ ಮಾಡುತ್ತಿದೆ. ಅಷ್ಟಕ್ಕೂ ಅವರು ಭಯೋತ್ಪಾದಕರಾದರೆ ಸರ್ಕಾರವೇಕೆ ಪ್ರತಿಭಟನಾಕಾರರನ್ನು ಎರೆಡೆರಡು ಬಾರಿ ಮಾತುಕತೆಗೆ ಕರೆದಿದೆ?'

- Advertisement -
- Advertisement -

ಸುಗ್ರೀವಾಜ್ಞೆಗಳ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳ ವಿರುದ್ಧ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ದೆಹಲಿ ಚಲೋ ಆಂದೋಲನ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಲಕ್ಷಾಂತರ ರೈತರು ದೆಹಲಿಯ ಐದು ಪ್ರಮುಖ ಗಡಿಗಳಲ್ಲಿ ಜಮಾಯಿಸಿದ್ದು ಇವರನ್ನು ಸೇರಲು ಇನ್ನಷ್ಟು ರೈತರು ಹಲವು ರಾಜ್ಯದಿಂದ ಹೊರಟಿದ್ದಾರೆ. ಪ್ರತಿಭಟನಾಕಾರರು ಸರ್ಕಾರ ಜಾರಿಗೆ ತಂದಿರುವ ಮೂರು ಕಾನೂನುಗಳನ್ನು ವಾಪಾಸು ಪಡೆಯಬೇಕು ಇಲ್ಲವಾದಲ್ಲಿ ಪ್ರತಿಭಟನೆಯಿಂದ ಕದಲುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ರಾಷ್ಟ್ರದ ರಾಜಧಾನಿ ದೆಹಲಿಗೆ ನಿಕಟದಲ್ಲಿರುವ ರಾಜ್ಯಗಳ ರೈತರಿಗೆ ಹೋಲಿಸಿದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರೈತರು ಭಾರಿ ಸಂಖ್ಯೆಯಲ್ಲಿ ಭಾಗಿಯಾಗಿಲ್ಲವಾದರೂ, ಈ ಐತಿಹಾಸಿಕ ಹೋರಾಟದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ ಮತ್ತು ಇನ್ನೂ ಸೇರಿಕೊಳ್ಳುತ್ತಿದ್ದಾರೆ. ಕರ್ನಾಟಕವೊಂದರಿಂದಲೇ 9 ಪ್ರಮುಖ ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಸಿಂಧೂ ಸ್ವಾಮಿ

ಕಳೆದ ಹಲವಾರು ವರ್ಷಗಳಿಂದ ರೈತ ಹೋರಾಟದ ಭಾಗವಾಗಿರುವ ತುಮಕೂರಿನ ಜ್ಞಾನ ಸಿಂಧೂ ಸ್ವಾಮಿ ಅವರು ಹೇಳುವಂತೆ, “ಇದೊಂದು ಐತಿಹಾಸಿಕ ಹೋರಾಟವಾಗಿದೆ. ನವೆಂಬರ್ 22ರಂದು ಕರ್ನಾಟಕದ ಹಲವು ಪ್ರಮುಖ ರೈತ ಸಂಘಟನೆಗಳ ಜೊತೆಗೂಡಿ, ನಾವೆಲ್ಲಾ ದೆಹಲಿಗೆ ಹೊರಟಿದ್ದೆವು. ನಮ್ಮ ಪ್ರಯಾಣದ ನಡುವೆ ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ಪ್ರತಿದಿನವು ನಮ್ಮ ತಂಡ ಪತ್ರಿಕಾಗೋಷ್ಠಿ, ಸಭೆಗಳನ್ನು ನಡೆಸಿದ್ದೇವೆ. ಜೊತೆಗೆ ಪ್ರತಿ ರಾಜ್ಯದಲ್ಲೂ ನಮಗೆ ಭಾರಿ ಜನಸ್ಪಂದನೆ ದೊರೆತಿದ್ದಲ್ಲದೆ, ಅಲ್ಲಿನ ರೈತರ ಜಾಥಾ ಕೂಡಾ ನಮ್ಮನ್ನು ಸೇರಿಕೊಂಡು ನಾವು ರಾಜಸ್ತಾನದವರೆಗೂ ಯಾವುದೇ ತೊಂದರೆಯಿಲ್ಲದೆ ತಲುಪಿದೆವು.

“ಆದರೆ ರಾಜಸ್ತಾನ-ಉತ್ತರ ಪ್ರದೇಶ ಗಡಿಯಲ್ಲಿ ನಮಗೆ ತೊಂದರೆಗಳಾಯಿತು. ಗಡಿಯಲ್ಲಿ ನಿಂತಿದ್ದ ಉತ್ತರ ಪ್ರದೇಶ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಮಧ್ಯಪ್ರದೇಶದಲ್ಲಿ ನಮ್ಮ ಜೊತೆ ಸೇರಿಕೊಂಡಿದ್ದ ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಬಂಧಿಸಿದ್ದರಲ್ಲದೆ, ನಮ್ಮನ್ನು ಮುಂದುವರೆಯಲು ತಡೆಯೊಡ್ಡಿದರು. ಇದರ ವಿರುದ್ದ ನವೆಂಬರ್ 25ರಿಂದ ನಾವು ಎರಡು ದಿನ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಿದೆವು. ಈ ಹೊತ್ತಿನಲ್ಲಿ ಯುಪಿ ಪೊಲೀಸರು ನಿರಂತವಾಗಿ ಎರಡು ದಿನ ನಮಗೆ ತೊಂದರೆಗಳನ್ನು ಕೊಟ್ಟಿದ್ದಾರೆ” ಎಂದು ಹೇಳಿದರು.

“ಈ ಪ್ರತಿಭಟನೆಯ ನಂತರ ಯುಪಿ ಪೊಲೀಸರು ನಮ್ಮನ್ನು ದೆಹಲಿಗೆ ಪ್ರಯಾಣಿಸಲು ಅನುಮತಿ ನೀಡಿದರಾದರೂ, ಅವರ ಎಸ್ಕಾರ್ಟ್ ಮುಖಾಂತರ ದೆಹಲಿಯ ಬರಾರಿ ನಿರಂಕರಿ ಮೈದಾನಕ್ಕೆ ಕರೆದುಕೊಂಡು ಬಂದರು. ಈ ಹೊತ್ತಿಗೆ ಟಿಕ್ರಿ ಗಡಿಯಿಂದ ರೈತರನ್ನು ಅಲ್ಲಿಗೆ ಕರೆತರಲಾಗಿತ್ತು. ಆದರೆ ರೈತರನ್ನು ಬಂಧಿಸಲು ಬೇಕಾಗಿಯೇ ಈ ಮೈದಾನವನ್ನು ಬಳಸಲು ದೆಹಲಿ ಸರ್ಕಾರವನ್ನು ಕೇಂದ್ರ ಸರ್ಕಾರ ಕೇಳಿತ್ತು ಎಂದು ನಮಗೆ ನಂತರವೇ ಅರಿವಾಗಿದ್ದು. ಪ್ರತಿಭಟನಾಕಾರರನ್ನು ಬೇರೆ ಬೇರೆ ಕಡೆಗೆ ಸೇರಿಸಿ ಅಲ್ಲಿ ಬಂಧಿಸಿಡುವ ಕುತಂತ್ರವನ್ನು ಕೇಂದ್ರ ಸರ್ಕಾರ ಹೂಡಿತ್ತು. ಇದು ತಿಳಿದ ನಂತರ ರೈತರು ಅಲ್ಲಿಗೆ ಬರಲು ನಿರಾಕರಿಸಿದರು. ಇದರ ನಂತರ ರೈತರು ನಿರಂಕರಿ ಕ್ರೀಡಾಂಗಣಕ್ಕೆ ಬರದೆ ಗಡಿಯಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದು, ದೆಹಲಿಯನ್ನು ಸಂಪರ್ಕಿಸುವ ಐದು ಗಡಿಯಲ್ಲಿ ಜಮಾಯಿಸಿರುವ ಕಾರಣಕ್ಕೆ ರಸ್ತೆಗಳು ಬಂದಾಗಿದೆ. ನಮ್ಮ ಹೋರಾಟದ ಗುರಿ ಒಂದೇ ಆಗಿದ್ದು, ಕೇಂದ್ರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನನ್ನು ವಾಪಾಸು ಪಡೆಯಬೇಕು ಎಂದಷ್ಟೇ” ಎಂದು ಜ್ಞಾನ ಸಿಂಧು ಸ್ವಾಮಿ ಹೇಳಿದರು.

ಟಿ.ಯಶವಂತ

ನವೆಂಬರ್ 21ರಂದು ಬೆಂಗಳೂರಿನಿಂದ ಹೊರಟು ಇಲ್ಲಿಯತನಕ ದೆಹಲಿ ರೈತ ಹೋರಾಟದಲ್ಲಿ ಪಾಲ್ಗೊಂಡಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಟಿ.ಯಶವಂತ ಅವರು ಹೇಳುವಂತೆ, “ರಾಜಸ್ತಾನದ ಗಡಿಯಲ್ಲಿ ಯುಪಿ ಪೊಲೀಸರು ನಮ್ಮನ್ನು ತಡೆದಾಗ ಕೆಲವು ಸಂಘ ಪರಿವಾರದ ಪುಂಡರು ಪ್ರಯಾಣಿಕರ ಸೋಗಿನಲ್ಲಿ ಬಂದು ಮಹಿಳಾ ಹೋರಾಟಗಾರರನ್ನು ಅಶ್ಲೀಲವಾಗಿ ನಿಂದನೆ ಮಾಡಿ ನಮ್ಮನ್ನು ಪ್ರಚೋದಿಸಲು ನೋಡಿದ್ದರು. ಅದೇ ಪ್ರಯತ್ನವನ್ನು ಮರುದಿನ ಬೆಳಿಗ್ಗೆ ಕೂಡಾ ಮುಂದುವರೆಸಿದ್ದರು. ಆದರೆ ಹೋರಾಟಗಾರರು ವಿಚಲಿತರಾಗದೆ ಶಾಂತವಾಗಿ ಇದ್ದುದರಿಂದ ಅವರ ಪ್ರಯತ್ನ ವಿಫಲವಾಯಿತು” ಎನ್ನುತ್ತಾರೆ.

“ದೆಹಲಿಯ ಐದು ಗಡಿಗಳು ಈಗಾಗಲೇ ಬಂದಾಗಿದೆ, ಜೊತೆಗೆ ಅಲ್ಲಿ ಇನ್ನೂ ಹೆಚ್ಚಿನ ರೈತರು ಬಂದು ಸೇರುತ್ತಿದ್ದಾರೆ. ಅಲ್ಲದೆ ಇಂದು ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ಇವತ್ತು ಕೂಡ ಹೆಚ್ಚಿನ ಜನರು ಬಂದು ಸೇರುತ್ತಿದ್ದಾರೆ. ಹೋರಾಟ ಇನ್ನೂ ತೀವ್ರಗೊಳ್ಳುತ್ತದೆ.

ಕೇಂದ್ರ ಸರ್ಕಾರ ರೈತ ಸಂಘಟನೆಗಳಲ್ಲಿ ಒಡಕು ತರಲು ಪ್ರಯತ್ನಿಸಿದರೂ ಅವುಗಳನ್ನು ರೈತರು ಹಿಮ್ಮೆಟ್ಟಿಸಿದ್ದಾರೆ. ಇಡೀ ಪ್ರತಿಭಟನೆ ರೈತ ವಿರೋಧಿ ಕಾನೂನುಗಳನ್ನು ವಾಪಾಸು ಪಡೆಯಬೇಕು ಎನ್ನುವುದರ ಬಗ್ಗೆ ಅಚಲವಾಗಿದೆ” ಎಂದರು.

ನರೇಂದ್ರ ಮೋದಿ ಸರ್ಕಾರ ಕೃಷಿಯನ್ನು ಕಾರ್ಪೊರೆಟೀಕರಣ ಮಾಡಲು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡಲು ಭಾರಿ ಆತುರಪಡುತ್ತಿದೆ. ಈ ಮಟ್ಟದ ಪ್ರತಿಭಟನೆಗಳನ್ನು ಅವರು ನಿರೀಕ್ಷೆ ಮಾಡಿರಲಿಲ್ಲ. ದೆಹಲಿ ಸುತ್ತ ಕೋಟ್ಯಾಂತರ ರೈತರು ನೆರೆದಿದ್ದರೂ ಕೇಂದ್ರ ಸರ್ಕಾರ ಇನ್ನೂ ಕೃಷಿ ಕಾನೂನನ್ನು ಸಮರ್ಥನೆ ಮಾಡುತ್ತಲೇ ಇದೆ. ಒಂದು ಕಡೆ ರೈತರನ್ನು ಮಾತುಕತೆಗೆ ಕರೆಯುತ್ತಾ ಇನ್ನೊಂದು ಕಡೆ ರೈತರನ್ನು ಅವರು ರೈತರೇ ಅಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆಕ್ಟೋಪಸ್‍ನ ಕಾಲುಗಳು ಬೇರೆಬೇರೆ ಕಡೆ ಹರಡಿ ಬೇರೆ ಬೇರೆ ರೀತಿಯಲ್ಲಿ ವರ್ತಿಸುತ್ತವಾದರೂ ಅವನ್ನು ಕೇವಲ ಒಂದೇ ಮೆದುಳು ಹೇಗೆ ನಿಯಂತ್ರಿಸುತ್ತದೆಯೋ ಹಾಗೆಯೇ ಕೇಂದ್ರ ಸರ್ಕಾರ ವರ್ತಿಸುತ್ತಿದೆ. ಇದರ ಮೆದುಳನ್ನು ಆರ್‌ಎಸ್‍ಎಸ್ ನಿರ್ವಹಿಸುತ್ತಾ ಇದೆ. ಒಟ್ಟಿನಲ್ಲಿ ಇವರು ರೈತರ ಈ ಹೋರಾಟವನ್ನು ಕುಖ್ಯಾತಿಗೊಳಿಸಲು ಹಾಗೂ ರೈತ ಸಂಘಟನೆಗಳ ನಡುವೆ ಒಡಕು ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರು ಅಪಪ್ರಚಾರ ಮಾಡಿದಂತೆ ಇಲ್ಲಿ ರೈತರಲ್ಲಿ ಆಕ್ರೋಶ ಹೆಚ್ಚುತ್ತಿದೆ” ಎನ್ನುತ್ತಾರೆ ಯಶವಂತ್.

“ಈ ಕರಾಳ ಕಾಯದೆಗಳನ್ನು ವಾಪಾಸು ಪಡೆಯುವವರೆಗೂ ಈ ಪ್ರತಿಭಟನೆ ಮುಂದುವರೆಯುತ್ತದೆ, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಯೇ ರೈತರು ದೆಹಲಿಗೆ ಬಂದಿದ್ದಾರೆ. ಪ್ರತಿಭಟನೆಯಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಮುಂಚೂಣಿಯಲ್ಲಿದ್ದಾರೆಂಬುದು ನಿಜವಾದರೂ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ರಾಜಸ್ತಾನದ ರೈತರು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಯಶವಂತ್ ತಿಳಿಸಿದರು.

ಶಿವಕುಮಾರ್ ಗುಳಘಟ್ಟ

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕರ್ನಾಟಕ ಜನಶಕ್ತಿ ಸಂಘಟನೆಯ ಶಿವಕುಮಾರ್ ಗುಳಘಟ್ಟ, “ಪ್ರತಿಭಟನೆಯಲ್ಲಿ ರೈತ ಮಹಿಳೆಯರ ಸಂಖ್ಯೆ ಕಡಿಮೆಯಿರುವುದನ್ನು ಬಿಟ್ಟರೆ ಉಳಿದಂತೆ ಪ್ರತಿಭಟನೆ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಸರ್ಕಾರ ಪ್ರತಿಭಟನಾಕಾರರನ್ನು ನಕ್ಸಲೈಟ್ ಹಾಗೂ ಖಾಲಿಸ್ತಾನಿಗಳು ಎಂದು ಅಪಪ್ರಚಾರ ಮಾಡುತ್ತಿದೆ. ಅವರ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೇಕಾಗಿಯೇ ಇಂತಹ ಪದಗಳನ್ನು ಬಳಸುತ್ತಿದ್ದಾರೆ. ಅಷ್ಟಕ್ಕೂ ಅವರು ಭಯೋತ್ಪಾದಕರಾದರೆ ಸರ್ಕಾರವೇಕೆ ಪ್ರತಿಭಟನಾಕಾರರನ್ನು ಎರೆಡೆರಡು ಬಾರಿ ಮಾತುಕತೆಗೆ ಕರೆದಿದೆ?” ಎಂದು ಪ್ರಶ್ನಿಸುತ್ತಾರೆ.

“ಮುಖ್ಯವಾಗಿ ಕೇಂದ್ರ ಸರ್ಕಾರ ಚಳವಳಿಯನ್ನು ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ರೈತರು ಈಗಾಗಲೇ ತಮ್ಮ ಆರು ತಿಂಗಳ ಆಹಾರವನ್ನು ತಮ್ಮೊಂದಿಗೆ ತಂದಿದ್ದು, ತಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡೇ ಬನ್ನಿ, ನಾವು ಕಾಯುತ್ತೇವೆ ಎಂದು ಸರ್ಕಾರದೊಂದಿಗೆ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಇದೊಂದು ಯಶಸ್ವಿ ಜನಚಳವಳಿಯಾಗಿದ್ದು, ಕಾನೂನನ್ನು ವಾಪಾಸು ಪಡೆಯದೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತರು ಗಟ್ಟಿಯಾಗಿದ್ದಾರೆ” ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ದೆಹಲಿ ಚಲೋ ನಂತರ ರೈತ ಮುಖಂಡರನ್ನು ಡಿಸೆಂಬರ್ 1 ಮತ್ತು 3 ರಂದು ಎರುಡು ಬಾರಿ ಮಾತುಕತೆಗೆ ಕರೆದಿತ್ತಾದರೂ ಅದು ಮುರಿದುಬಿದ್ದಿದೆ. ಹೊಸ ಕಾನೂನಿನ ಬಗ್ಗೆ ಚರ್ಚೆ ಮಾಡಲು ಸರ್ಕಾರ ಹಾಗೂ ರೈತರನ್ನೊಳಗೊಂಡ ಸಮಿತಿಯನ್ನು ರಚಿಸುವುದಾಗಿ ಹೇಳಿದೆಯಾದರೂ ರೈತರು ಅದನ್ನು ಒಪ್ಪದೆ, ರೈತ ವಿರೋಧಿ ಕಾನೂನನ್ನು ವಾಪಾಸು ಪಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹೋರಾಟ ಇನ್ನೂ ಮುಂದುವರೆಯಲಿದ್ದು ಸರ್ವಾಧಿಕಾರಿ ಧೋರಣೆಯ ಸರ್ಕಾರದ ಬುಡಕ್ಕೆ ರೈತನ ನೇಗಿಲು ಆಳವಾಗಿ ಹುದುಗಿದೆ. ಹೋರಾಟ ಮುಂದುವರೆದಿದೆ…


ಇದನ್ನೂ ಓದಿ: ದೆಹಲಿಯಲ್ಲಿ ರೈತರ ಗುಡುಗು: ಇಂದಿನ ಹೋರಾಟದ ಚಿತ್ರಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: BLO ಮನೆ-ಮನೆ ಭೇಟಿ ಗಡುವು ಆಗಸ್ಟ್‌ 17ರವರೆಗೆ ವಿಸ್ತರಣೆ!

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು,...

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲ್ಲ: ತಮಿಳುನಾಡು ಸಿಎಂ ವಿಜಯ್

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ....

ಬೆಂಗಳೂರಿನ ಜಕ್ಕೂರಿನಲ್ಲಿ 22-23 ವರ್ಷದ ಇಬ್ಬರು ನೇಪಾಳಿ ಯುವತಿಯರ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜಕ್ಕೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನೇಪಾಳ...

NEET Paper Leak: ಒಂದೇ ಒಂದು CCTV ಇರಲಿಲ್ಲ, ಚೆಕಿಂಗ್ ಇರಲಿಲ್ಲ! ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ? CBI ವರದಿ ಇಲ್ಲಿದೆ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA)...

ಉತ್ತರಾಖಂಡ : ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ SIR ನೋಟಿಸ್

ಉತ್ತರಾಖಂಡದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ತಲುಪಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ),...

SIR: ಗಣತಿ ನಮೂನೆ ವಾಪಸ್‌ಗೆ ನಾಳೆಯೇ ಅಂತಿಮ ಗಡುವು, 1.10 ಕೋಟಿ ಮತದಾರರ ಹೆಸರು ಡಿಲೀಟ್‌!

ರಾಜ್ಯಾದ್ಯಂತ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ನಾಳೆ (ಆಗಸ್ಟ್ 8) ಕೊನೆಯ ದಿನವಾಗಿದೆ. ಈ ನಡುವೆ...

ಕರ್ನಾಟಕ ಎಸ್ಐಆರ್: ಬೆಂಗಳೂರಿನ ಅರ್ಧದಷ್ಟು ಮತದಾರರು ‘ಹೊರಕ್ಕೆ’: ರಾಜ್ಯದಲ್ಲಿ 1.11 ಕೋಟಿ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ

ಕರ್ನಾಟಕದಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಕೈಗೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ರಾಜ್ಯದ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಭೀತಿಯನ್ನು ಹುಟ್ಟುಹಾಕಿದೆ. ಪ್ರಜಾಪ್ರಭುತ್ವ...

ಎರಡು ನ್ಯೂಸ್ ಚಾನೆಲ್‌ಗಳಿಗೆ ಉದಯನಿಧಿ ಲೀಗಲ್ ನೋಟಿಸ್ : ಸಾರ್ವಜನಿಕ ಕ್ಷಮೆಯಾಚನೆ, 100 ಕೋಟಿ ಪರಿಹಾರಕ್ಕೆ ಆಗ್ರಹ-ವರದಿ

ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಇತ್ತೀಚಿನ ಹೇಳಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾನನಷ್ಟ ಆರೋಪ ಮಾಡಿ ಎರಡು ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ...

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ: ಅಭಿಜೀತ್ ದೀಪ್ಕೆಗೆ ‘ರಾಷ್ಟ್ರೀಯ ಸಂಚಾಲಕ’

ದೇಶಾದ್ಯಂತ ವಿದ್ಯಾರ್ಥಿ ಮತ್ತು ಯುವಜನರ ಬೃಹತ್ ಹೋರಾಟದ ಮೂಲಕ ಗಮನಸೆಳೆದಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಅಧಿಕೃತವಾಗಿ ತನ್ನ ಮೊದಲ 14 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (National Working Committee) ಪ್ರಕಟಿಸಿದೆ....

ಕ್ಷೇತ್ರ ಪುನರ್ ವಿಂಗಡಣೆಗೆ ಡಿಎಂಕೆ ವಿರೋಧ: ‘ಮೃದು ಧೋರಣೆ’ ವದಂತಿಗೆ ಉದಯನಿಧಿ ಸ್ಟಾಲಿನ್ ಬ್ರೇಕ್

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಚಯಿಸಲು ಮುಂದಾಗಿರುವುದು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಕಸರತ್ತಿಗೆ ಕಾರಣವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಡಿಎಂಕೆ (DMK) ತನ್ನ ಕಠಿಣ ನಿಲುವನ್ನು ಮೃದುಗೊಳಿಸಿದೆ ಎಂಬ...