Homeಎಕಾನಮಿಟಿವಿ ಚರ್ಚೆಯಲ್ಲಿ ಬಿಜೆಪಿಯ ಸಂಬಿತ್ ಪಾತ್ರನಿಗೆ ಮುಖಭಂಗ ಮಾಡಿದ ಗೌರವ್ ವಲ್ಲಭ್ ಯಾರು ಗೊತ್ತೆ?

ಟಿವಿ ಚರ್ಚೆಯಲ್ಲಿ ಬಿಜೆಪಿಯ ಸಂಬಿತ್ ಪಾತ್ರನಿಗೆ ಮುಖಭಂಗ ಮಾಡಿದ ಗೌರವ್ ವಲ್ಲಭ್ ಯಾರು ಗೊತ್ತೆ?

ಗೌರವ್ ವಲ್ಲಭ್ ಒಬ್ಬ 'ಚಿನ್ನದ ಪದಕ' ವಿಜೇತ ಕಾಂಗ್ರೆಸ್ ವಕ್ತಾರನಾಗಿದ್ದು ಟಿವಿ ಚರ್ಚೆಯಲ್ಲಿ ಅವರು ಸಂಬಿತ್ ಪಾತ್ರನಿಗೆ ಒಂದು ಟ್ರಿಲಿಯನ್ ಗೆ ಎಷ್ಟು ಸೊನ್ನೆಗಳನ್ನು ಬಳಸುತ್ತಾರೆ ಎಂದು ಕೇಳಿದ ಪ್ರಶ್ನೆ ಎಲ್ಲಾ ಕಡೆ ವೈರಲ್ ಆಗಿದೆ.

- Advertisement -
- Advertisement -

5 ಟ್ರಿಲಿಯನ್ ಮಿಲಿಯನ್‍ಗೆಷ್ಟು ಸೊನ್ನೆ?: ಸೊನ್ನೆ ಎದುರು ಬೆತ್ತಲಾದ ಮೋದಿ ಶಿಷ್ಯ!

ಅಂದು ಮೋದಿ ಸರಕಾರದ ನೂರು ದಿನಗಳ ಪರಾಮರ್ಶೆ ಕುರಿತು ರಾಷ್ಟ್ರೀಯ ಚಾನೆಲ್ ಎಬಿಪ ನ್ಯೂಸ್ ನಲ್ಲಿ ನಡೆದ ಚರ್ಚೆ…. ಕಾಂಗ್ರೆಸ್ಸಿನ ಅಷ್ಟೇನೂ ಫೇಮಸ್ ಅಲ್ಲದ ವಕ್ತಾರನೊಬ್ಬ ಬಿಜೆಪಿಯ ವಟ ವಟ ವಕ್ತಾರ ಸಂಬಿತ್ ಪಾತ್ರನಿಗೆ ಪಾಠ ಕಲಿಸಿದ ವಿಡಿಯೋ ನಿಮ್ಮ ಮುಂದಿದೆ. ವಿಡಿಯೋದ ಸಾರಂಶ ಕೆಳಗಿನಂತಿದೆ.

ಗೌರವ್ ವಲ್ಲಭ್: ಎಲ್ಲಾ ಕ್ಷೇತ್ರಗಳಲ್ಲಿಯೂ ಶೇ.30-40% ಮಾರಾಟ ಕಡಿಮೆಯಾಗಿದೆ.

ಸಂಬಿತ್ ಪಾತ್ರ: ಮೊದಲನೆಯದಾಗ 5 ಟ್ರಿಲಿಯನ್ ಎಕಾನಮಿಯ ನಂತರ ಮೋದಿಯವರು ಉತ್ತಮ ಸಾಧನೆ ಮಾಡಿದ್ದಾರೆ.

ಗೌರವ್ ವಲ್ಲಭ್: ಈ 5 ಟ್ರಿಲಿಯನ್ ಎಕಾನಮಿ ಎಲ್ಲಿದೆ ಸಂಬಿತ್ ಜೀ? ನಿಮಗೆ ನೆನಪಿದೆಯೇ, ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು.

ಸಂಬಿತ್ ಪಾತ್ರ: ಬರುತ್ತಾ ಇದೆ. ಈ ಪೂರ್ತಿ ಐದು ವರ್ಷದಲ್ಲಿ 2 ಟ್ರಿಲಿಯನ್ ಅನ್ನು ಜೋಡಿಸುತ್ತಿದ್ದೇವೆ. ನಿಮ್ಮೆಲ್ಲರ ಆರ್ಶಿವಾದದಿಂದ ಹಿಂದೂಸ್ತಾನದ ಹಿರಿಮೆಯಿಂದ ಜೋಡಿಸುತ್ತೇವೆ.

ಗೌರವ್ ವಲ್ಲಭ್: ಸಂಬಿತ್ ಬಯ್ಯಾ, 5 ಟ್ರಿಲಿಯನ್ ನಲ್ಲಿ ಎಷ್ಟು ಸೊನ್ನೆ ಬರುತ್ತವೆ ಹೇಳುತ್ತೀರಾ? ಈಗಲೇ ಹೇಳುತ್ತೀರಾ?

ಸಂಬಿತ್ ಪಾತ್ರ: ಹೇಳುತ್ತೇನೆ,

ಸಂಬೀತ್ ಪಾತ್ರಾ ಕಕ್ಕಾಬಿಕ್ಕಿ…..

‘ಒಂದ್ ನಿಮಿಷ, ಹೇಳುತೇನೆ’ ಎನ್ನುವ ಸಂಬೀತ್ ಮರುಕ್ಷಣ ಮೊದಲು ಈ ಪ್ರಶ್ನೆಯನ್ನು ರಾಹುಲ್ ಗಾಂಂಧಿಗೆ ಕೇಳಿ ನಂತರ ಬನ್ನಿ ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಗೌರವ್ ವಲ್ಲಭ್: ಎಬಿಪಿ ನ್ಯೂಸ್ ವೀಕ್ಷಕರು ಇವರ ಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ 5 ಟ್ರಿಲಿಯನ್, 5 ಟ್ರಿಲಿಯನ್ ಎಂದು ಬೊಗಳುವುದಲ್ಲ, 5 ಟ್ರಿಲಿಯನ್ ಗೆ ಎಷ್ಟು ಸೊನ್ನೆ ಇರುತ್ತವೆ ಎಂದು ನೀವು ಹೇಳಬೇಕು? ಇದು ನನ್ನ ಸವಾಲು ಎನ್ನುತ್ತಾರೆ.

ಕೊನೆಗೆ ಆ ಸಾಮಾನ್ಯ ಕಾಂಗ್ರೆಸ್ ಪ್ರತಿನಿಧಿಯೇ ಮಿಲಿಯನ್, ಬಿಲಿಯನ್ ಟ್ರಿಲಿಯಮಗಗ ಬಗ್ಗೆ ವಿವರಿಸಿ, ಯಾವುದರ ಮುಂದೆ ಎಷ್ಟು ಸೊನ್ನೆಗಳಿರುತ್ತವೆ ಎಂದು ವಿವರಿಸಿದ್ದಾನೆ….

ಈ ಚರ್ಚೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಂಬಿತ್ ಪಾತ್ರನಿಗೆ ಮಣ್ಣು ಮುಕ್ಕಿಸಿದ ಈ ಗೌರವ್ ವಲ್ಲಭ್ ಯಾರು ಎಂದು ಬಹಳಷ್ಟು ಜನ ಕೇಳುತ್ತಿದ್ದಾರೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಿಸಬೇಕು, ವಿರೋಧ ಪಕ್ಷಗಳು ಗೌರವ್ ಅವರನ್ನು ತಮ್ಮ ವಕ್ತಾರರನ್ನಾಗಿ ಮಾಡಬೇಕು ಎಂದು ಕೆಲವು ಜನರು ಫೇಸ್ ಬುಕ್ ನಲ್ಲಿ, ಟ್ವಿಟ್ಟರ್ ನಲ್ಲಿ ಬರೆಯುತ್ತಿದ್ದಾರೆ.

ರಾಜಸ್ಥಾನದ ಪಾಲಿ ನಗರದ ನಿವಾಸಿಯಾದ 42 ವರ್ಷದ ಗೌರವ್ ವಲ್ಲಭ್ ಅವರು ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾಗಲು ಅಥವಾ ವಿರೋಧ ಪಕ್ಷಗಳ ನಾಯಕರಾಗಲು ನಾನು ಬಯಸುವುದಿಲ್ಲ. ‘ನನಗೆ ಅಂತಹ ಕಲ್ಪನೆ ಇಲ್ಲ’ ಎಂದು ಬಹಳ ವಿನಯವಾಗಿ ಹೇಳಿದ್ದಾರೆ.

ಪಾಲಿಯಲ್ಲಿ ಶಾಲಾ ಶಿಕ್ಷಣದ ನಂತರ ಗೌರವ್ ಜೈಪುರದಿಂದ ಸಿಎ ಅಧ್ಯಯನ ಮಾಡಿದರು. ಗೌರವ್ ಅವರ ಪೋಷಕರು ಪಾಲಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಗೌರವ್ 2000-2003ರವರೆಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ ಪೂನಾದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇದರೊಂದಿಗೆ ಅವರು ಮಹರ್ಷಿ ದಯಾನಂದ್ ಸರಸ್ವತಿ ವಿಶ್ವವಿದ್ಯಾಲಯದ ಅಜ್ಮೀರ್‌ನಿಂದ ಎಂ.ಕಾಂನಲ್ಲಿ ‘ಚಿನ್ನದ ಪದಕ’ವನ್ನು ಗಳಿಸಿದ್ದಾರೆ.

‘ದಿ ಪ್ರಿಂಟ್’ ನೊಂದಿಗೆ ಮಾತನಾಡಿದ ಅವರು, ‘2017ರವರೆಗೆ ನಾನು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದೆ, ಆನಂತರ ಭಾರತಕ್ಕೆ ಮರಳಿದೆ. ನಮ್ಮ ದೇಶದಲ್ಲಿ ಮಾಬ್ ಲಿಂಚಿಂಗ್ (ಗುಂಪು ಹಲ್ಲೆ) ಹೆಸರಿನಲ್ಲಿ ಜನರನ್ನು ದ್ವೇಷಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಇದರ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ. ಆದ್ದರಿಂದ 2018 ರವರೆಗೆ ಪ್ಯಾನೆಲಿಸ್ಟ್ ಆಗಿ ಕೆಲಸ ಮಾಡಿದೆ’ ಎನ್ನುತ್ತಾರೆ.

ಅದರ ನಂತರ ನಾನು ರಾಹುಲ್ ಗಾಂಧಿ ಮತ್ತು ರಂದೀಪ್ ಸುರ್ಜೆವಾಲಾ ಅವರಿಗೆ ಪತ್ರ ಬರೆದು ರಾಷ್ಟ್ರೀಯ ವಕ್ತಾರ ಹುದ್ದೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದೆ. 2019 ರ ಜನವರಿಯಲ್ಲಿ ಅವರು ನನ್ನ ಮೇಲೆ ವಿಶ್ವಾಸದಿಂದ ಈ ಜವಾಬ್ದಾರಿಯನ್ನು ಒಪ್ಪಿಸಿದರು ಎಂದು ಹೇಳಿದ್ದಾರೆ.

ಬಿಜೆಪಿಯ ದೇವಸ್ಥಾನ ಮತ್ತು ಪೂಜಾ ರಾಜಕೀಯದ ಬಗ್ಗೆ ಮಾತನಾಡಿರುವ ಅವರು, ‘ನಾನು ದಿನಕ್ಕೆ ಮೂರು ಗಂಟೆಗಳ ಕಾಲ ಪೂಜಿಸುತ್ತೇನೆ. ನನಗಿಂತ ಹೆಚ್ಚು ಯಾರೂ ಅಯೋಧ್ಯ ದೇವಾಲಯಗಳಿಗೆ ಹೋಗಿಲ್ಲ. ಜೊತೆಗೆ ಗೌರವ್ ಅವರು 20 ದೇಶಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ

ಗೌರವ್ ಲೋಕಸಭಾ ಸಂಶೋಧನಾ ಫೆಲೋಶಿಪ್ ಅಡಿಯಲ್ಲಿ 2016 ರಲ್ಲಿ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ‘ನಾನು ಮೂರು ಪುಸ್ತಕಗಳನ್ನು ಬರೆದಿದ್ದೇನೆ. ನನ್ನ ಸಂಶೋಧನಾ ಪ್ರಬಂಧಗಳನ್ನು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ 20 ದೇಶಗಳಿಗೆ ಪ್ರಸ್ತುತಪಡಿಸಿದ್ದೇನೆ. ಮಾರ್ಚ್ 2019 ರಲ್ಲಿ, ಎಕ್ಸ್‌ಎಲ್‌ಆರ್‌ಐ ಜಮ್‌ಶೆಡ್‌ಪುರ ಕೂಡ 15 ವರ್ಷಗಳ ಸೇವೆಗಾಗಿ ನನ್ನನ್ನು ಗೌರವಿಸಿತು. ನಾನು 50 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಕಟಣೆಯುಳ್ಳ ಪತ್ರಿಕೆಗಳಿಗೆ ಬರೆದಿದ್ದೇನೆ’ ಎನ್ನುತ್ತಾರೆ.

‘ಟ್ವಿಟರ್‌ನಲ್ಲಿ ದೇಶಪ್ರೇಮವನ್ನು ತೋರಿಸುವುದಿಲ್ಲ’

ಗೌರವ್ ವಲ್ಲಭ್ ರಾಷ್ಟ್ರೀಯತೆಯನ್ನು ಪ್ರಶ್ನಿಸಿ, ‘ರಾಷ್ಟ್ರೀಯತೆಯ ವ್ಯಾಖ್ಯಾನ ಏನು ಎಂದು ನಾನು ಹಲವು ಬಾರಿ ಕೇಳಿದ್ದೇನೆ. ನನಗೆ, ನನ್ನ ಕೆಲಸವನ್ನು ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ಮಾಡುವುದು ರಾಷ್ಟ್ರೀಯತೆ. ನಾನು ಟ್ವಿಟರ್‌ನಲ್ಲಿ ದೇಶಪ್ರೇಮವನ್ನು ತೋರಿಸುವುದಿಲ್ಲ’ ಎಂದಿದ್ದಾರೆ.

ಕೇವಲ 1,945 ಫೇಸ್‌ಬುಕ್ ಲೈಕ್‌ಗಳು ಮತ್ತು 5000 ಟ್ವಿಟ್ಟರ್ ಫಾಲೋವರ್‌ಗಳನ್ನು ಹೊಂದಿರುವ ಗೌರವ್ ವಲ್ಲಭ್, “ನಾನು ಟ್ವಿಟರ್ ಜಗತ್ತಿನಲ್ಲಿ ಗೆಲ್ಲಲಿಲ್ಲ” ಎಂದು ಹೇಳುತ್ತಾರೆ. ಚರ್ಚೆಗಳಲ್ಲದೆ ನಾನು ಓದುತ್ತೇನೆ ಮತ್ತು ಬರೆಯುತ್ತೇನೆ. ಮುಂದಿನ ತಿಂಗಳು ಪುಸ್ತಕವೂ ಹೊರಬರುತ್ತಿದೆ.’ ಎಂದಿದ್ದಾರೆ.

ಗೌರವ್ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜಯವೀರ್ ಶೆರ್ಗಿಲ್, “ಅವರು ಗಣಿತ ಮತ್ತು ಅರ್ಥಶಾಸ್ತ್ರವನ್ನು ಸುಲಭ ಭಾಷೆಯಲ್ಲಿ ವಿವರಿಸುತ್ತಾರೆ, ಜೊತೆಗೆ ಅವರು ಪ್ರಚಾರದಿಂದ ದೂರವಿರುತ್ತಾರೆ” ಎಂದು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...