Homeಮುಖಪುಟಪಾಕಿಸ್ತಾನದಲ್ಲಿ ವಿಕಿಪೀಡಿಯಾ ಬ್ಯಾನ್‌: ಸರ್ಕಾರ ಘೋಷಣೆ

ಪಾಕಿಸ್ತಾನದಲ್ಲಿ ವಿಕಿಪೀಡಿಯಾ ಬ್ಯಾನ್‌: ಸರ್ಕಾರ ಘೋಷಣೆ

- Advertisement -
- Advertisement -

ಧರ್ಮನಿಂದೆಯ ವಿಷಯವನ್ನು ನಿರ್ಬಂಧಿಸದ ಅಥವಾ ತೆರವು ಮಾಡದ ಕಾರಣಕ್ಕಾಗಿ ಪಾಕಿಸ್ತಾನ ಸರ್ಕಾರವು ಶನಿವಾರ ವಿಕಿಪೀಡಿಯಾವನ್ನು ನಿಷೇಧಿಸಿರುವುದಾಗಿ ಪಾಕಿಸ್ತಾನದ ಮಾಧ್ಯಮವಾದ ‘ಡಾನ್‌’ ವರದಿ ಮಾಡಿದೆ.

ನಿರ್ದೇಶನಗಳನ್ನು ಅನುಸರಿಸಲು ವಿಕಿಪೀಡಿಯಾಕ್ಕೆ 48 ಗಂಟೆಗಳ ಗಡುವು ನೀಡಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸರ್ಕಾರ ಹೇಳಿದೆ.

ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರದ ವಕ್ತಾರ ಮಲಾಹತ್ ಒಬೈದ್ ಅವರು ಡಾನ್‌ಗೆ ಪ್ರತಿಕ್ರಿಯಿಸಿದ್ದು, ಪ್ರಾಥಮಿಕ ಆದೇಶಗಳನ್ನು ಅನುಸರಿಸದ ಕಾರಣಕ್ಕಾಗಿ ವಿಕಿಪೀಡಿಯಾವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

“ನಿಯಂತ್ರಕ ಪ್ರಾಧಿಕಾರದಿಂದ ಗುರುತಿಸಲ್ಪಟ್ಟಿರುವ ತ್ಯಾಗದ ವಿಷಯವನ್ನು ವಿಕಿಪೀಡಿಯಾವು ತೆಗೆದುಹಾಕಿದ ನಂತರ ನಿರ್ಧಾರವನ್ನು ಪರಿಶೀಲಿಸಬಹುದು” ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್‌ಸೈಟ್ ನಡೆಸುತ್ತಿರುವ ವಿಕಿಪೀಡಿಯಾ ಫೌಂಡೇಶನ್, “ವಿಕಿಪೀಡಿಯಾದಲ್ಲಿ ಯಾವ ವಿಷಯವನ್ನು ಸೇರಿಸಲಾಗಿದೆ ಅಥವಾ ಆ ವಿಷಯವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದು ಶುಕ್ರವಾರ ಹೇಳಿದೆ.

ಪಾಕಿಸ್ತಾನದಲ್ಲಿ ವಿಕಿಪೀಡಿಯಾ ಜಾಲತಾಣವನ್ನು ಮರುಸ್ಥಾಪಿಸಬೇಕು ಎಂದು ಫೌಂಡೇಷನ್‌ ಸರ್ಕಾರಕ್ಕೆ ತಿಳಿಸಿದೆ.

“ಪಾಕಿಸ್ತಾನದಲ್ಲಿ, ಇಂಗ್ಲಿಷ್ ವಿಕಿಪೀಡಿಯಾವು ತಿಂಗಳಿಗೆ 50 ಮಿಲಿಯನ್ ಪೇಜ್‌ ವೀವ್ಸ್‌ ಪಡೆಯುತ್ತದೆ” ಎಂದು ವಿಕಿಪೀಡಿಯಾ ಫೌಂಡೇಶನ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

“ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಐದನೇ ಸ್ಥಾನದಲ್ಲಿರುವ ಪಾಕಿಸ್ತಾನದಲ್ಲಿ ವಿಕಿಪೀಡಿಯಾವನ್ನು ನಿರ್ಬಂಧಿಸಿದರೆ ಉಚಿತ ಜ್ಞಾನ ಭಂಡಾರವನ್ನೇ ನಿರಾಕರಿಸಿದಂತೆ. ಇದು ಮುಂದುವರಿದರೆ, ಪಾಕಿಸ್ತಾನದ ಜ್ಞಾನ, ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯುವುದನ್ನೇ ನಿರ್ಬಂಧಿಸಿದಂತೆ” ಎಂದಿದೆ.

“ಜ್ಞಾನವು ಮನುಷ್ಯನ ಹಕ್ಕಾಗಿದೆ. ವಿಕಿಪೀಡಿಯಾದಲ್ಲಿನ ಜ್ಞಾನದ ಕಾರಣಕ್ಕಾಗಿ ಪಾಕಿಸ್ತಾನ ಸರ್ಕಾರ ವಿಕಿಪೀಡಿಯಾ ಪ್ರವೇಶಕ್ಕೆ ಅನುಮತಿ ನೀಡುತ್ತದೆ ಎಂಬ ಭರವಸೆ ಇದೆ. ಇದರಿಂದಾಗಿ ಪಾಕಿಸ್ತಾನದ ಜನರು ಪ್ರಪಂಚದೊಂದಿಗೆ ಜ್ಞಾನವನ್ನು ಸ್ವೀಕರಿಸಲು ಮತ್ತು ಹಂಚಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಫೌಂಡೇಷನ್‌ ಅಭಿಪ್ರಾಯಪಟ್ಟಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...