Homeಮುಖಪುಟದೇವಾಲಯದ ಹಿಂದೆ ಮಹಿಳೆಯ ಮೃತದೇಹ ಪತ್ತೆ; ಅರ್ಚಕನೇ ಕೊಲೆಗಾರ!

ದೇವಾಲಯದ ಹಿಂದೆ ಮಹಿಳೆಯ ಮೃತದೇಹ ಪತ್ತೆ; ಅರ್ಚಕನೇ ಕೊಲೆಗಾರ!

- Advertisement -
- Advertisement -

ಹೈದರಾಬಾದ್‌: ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ದೇವಾಲಯದ ಹಿಂದಿನ ಪೊದೆಯಲ್ಲಿ ಪತ್ತೆಯಾದ ಬಳಿಕ, ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ. ಮಹಿಳೆ ಆಗಾಗ್ಗೆ ಭೇಟಿ ನೀಡುತ್ತಿದ್ದ ದೇವಾಲಯವೊಂದರ ಅರ್ಚಕನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

57 ವರ್ಷದ ಉಮಾದೇವಿ ಕೊಲೆಯಾದವರು. ಏಪ್ರಿಲ್ 18ರಂದು ಸಂಜೆ 6.30ಕ್ಕೆ ಎಂದಿನಂತೆ ಮಲ್ಕಾಜ್‌ಗಿರಿಯ ವಿಷ್ಣುಪುರ ಕಾಲೋನಿಯಲ್ಲಿರುವ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಹೋಗಿದ್ದರು. ಆದರೆ ವಾಪಸ್‌ ಮನೆಗೆ ಬಂದಿರಲಿಲ್ಲ. ನಂತರ ಉಮಾದೇವಿಯವರ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿತ್ತು. ನಾಪತ್ತೆಯಾಗಿರುವ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿಯೂ ಪೋಸ್ಟ್‌ ಮಾಡಲಾಗಿತ್ತು. ತದನಂತರ ದೇವಸ್ಥಾನದ ಹಿಂಭಾಗದಲ್ಲಿನ ಪೊದೆಯಲ್ಲಿ ಶವ ಪತ್ತೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆರೋಪಿಯನ್ನು 42 ವರ್ಷದ ಅನುಮುಲ ಮುರಳಿ ಕೃಷ್ಣ ಎಂದು ಗುರುತಿಸಲಾಗಿದ್ದು, ಚಿನ್ನಾಭರಣಗಳನ್ನು ಕದ್ದು ಮಾರಾಟ ಮಾಡುವ ಉದ್ದೇಶದಿಂದ ಮಹಿಳೆಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಚರಹೆಯಲ್ಲಿ “ಕಡು ಹಸಿರು ಸೀರೆ, ಕೈಗೆ ಮೂರು ಚಿನ್ನದ ಬಳೆಗಳು ಮತ್ತು ಸಣ್ಣ ಕಿವಿಯೋಲೆಗಳನ್ನು ಮಹಿಳೆ ಧರಿಸಿದ್ದಾರೆ” ತಿಳಿಸಲಾಗಿತ್ತು.

ಅರ್ಚಕನಿಂದ ಚಿನ್ನ ಖರೀದಿಸಿದ ಜೋಶಿ ನಂದ ಕಿಶೋರ್ ಎಂಬ ಆಭರಣ ವ್ಯಾಪಾರಿಯನ್ನೂ ಗುರುತಿಸಿ ಬಂಧಿಸಲಾಗಿದೆ. ಮುರಳಿ ಕೃಷ್ಣನಿಂದ ಪಡೆದ ಎರಡು ಚಿನ್ನದ ಬಳೆಗಳು, 1 ಲಕ್ಷ ರೂಪಾಯಿ ನಗದು, ಉಳಿದ ಬಳೆಗಳಿಂದ ತಯಾರಿಸಿದ 35 ಚಿನ್ನಾಭರಣಗಳನ್ನು ವ್ಯಾಪಾರಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ನಿಯಮಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು ಹಾಗೂ ಚಿನ್ನದ ಆಭರಣಗಳನ್ನು ಧರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಚಕನಿಗೆ ಹಣಕಾಸಿನ ಸಮಸ್ಯೆ ಇದ್ದ ಕಾರಣ ಈ ಆಭರಣಗಳನ್ನು ಕದಿಯಲು ಯೋಜಿಸಿದ. ಮುರಳಿಕೃಷ್ಣ ಮಹಿಳೆಯ ತಲೆಗೆ ಕಬ್ಬಿಣದ ರಾಡ್‌ನಿಂದ ಪದೇ ಪದೇ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

“ಇದಲ್ಲದೆ ಮಹಿಳೆ ಸಾವನ್ನಪ್ಪಿದ್ದ ಬಳಿಕ ಆಕೆಯ ದೇಹವನ್ನು ಪ್ಲಾಸ್ಟಿಕ್ ಡ್ರಮ್‌ನಲ್ಲಿ ತುರುಕಿ, ಅದನ್ನು ಮುಚ್ಚಳದಿಂದ ಮುಚ್ಚಿದನು. ದೇವಾಲಯದಲ್ಲಿ ತಂದು ಇರಿಸಿದ್ದ ನೀರಿನಿಂದ ನೆಲವನ್ನು ಸ್ವಚ್ಛಗೊಳಿಸಿದ್ದಾನೆ. ನಂತರ ಮುರಳಿ, ಮಹಿಳೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿ ಮಾರಾಟ ಮಾಡಿದ್ದಾನೆ. ಆತ ಟ್ರಾಲಿಯಲ್ಲಿ ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯುವ ಮೂಲಕ ಶವವನ್ನು ವಿಲೇವಾರಿ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಮಹಿಳೆಗಾಗಿ ಹುಡುಕಾಟ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿರಿ: ಉತ್ತರ ಪ್ರದೇಶ: ಒಂದೇ ಕುಟುಂಬದ ಐವರ ಕೊಲೆ

“ಎರಡು ದಿನಗಳ ನಂತರ ದೇಹವು ಕೆಟ್ಟ ವಾಸನೆ ಬರಲಾರಂಭಿಸಿತು. ಆರೋಪಿಯು ಡ್ರಮ್ ಅನ್ನು ಮತ್ತೆ ದೇವಸ್ಥಾನದತ್ತ ತಂದು, ಹಿಂದಿನ ಪೊದೆಗಳಲ್ಲಿ ಬಿಸಾಡಿದನು” ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಖಾಲಿ ಇದ್ದ ಡ್ರಮ್ ಅನ್ನು ಮತ್ತೆ ದೇವಸ್ಥಾನದೊಳಗೆ ತಂದು ಶುಚಿಗೊಳಿಸಿ ಮೊದಲಿನ ಜಾಗದಲ್ಲಿ ಇರಿಸಿದ್ದನು ಎನ್ನಲಾಗಿದೆ. ದುರ್ವಾಸನೆ ಬರುತ್ತಿದ್ದರಿಂದ ಮತ್ತೆ ದೇವಸ್ಥಾನದ ಒಳಭಾಗವನ್ನು ಸ್ವಚ್ಛಗೊಳಿಸಿ ಅಗರಬತ್ತಿ ಹಚ್ಚಿದ್ದಾನೆ ಎಂದು ಪೊಲೀಸ್ ಪತ್ರಿಕಾ ಹೇಳಿಕೆ ತಿಳಿಸಿದೆ.

ಎರಡು ಕಬ್ಬಿಣದ ಸರಳುಗಳು, ಒಂದು ಪ್ಲಾಸ್ಟಿಕ್ ಡ್ರಮ್ ಮತ್ತು ದೇವಾಲಯದ ನೆಲಕ್ಕೆ ಅಂಟಿದ ರಕ್ತದ ಕಲೆಗಳ ಗುರುತುಗಳನ್ನು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಸಲ್ಲಿಸಿದ್ದಾರೆ.

ಏಪ್ರಿಲ್ 18 ರಂದು ಉಮಾದೇವಿ ಹಿಂತಿರುಗದ ಕಾರಣ, ಆಕೆಯ ಕುಟುಂಬವು ದೇವಸ್ಥಾನದ ಅರ್ಚಕರನ್ನು ವಿಚಾರಿಸಿದಾಗ ಅವರು ಸ್ಥಳಕ್ಕೆ ಭೇಟಿ ನೀಡಿರುವುದನ್ನು ಖಚಿತಪಡಿಸಿದ್ದರು. ಆದರೆ, ಸಿಸಿಟಿವಿ ಫೂಟೇಜ್ ನಲ್ಲಿ ಮಹಿಳೆ ದೇವಸ್ಥಾನದಿಂದ ವಾಪಸಾಗಿರುವುದು ಕಂಡುಬಂದಿರಲಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...