Homeಅಂತರಾಷ್ಟ್ರೀಯ'ಮಂದಗತಿಯಲ್ಲಿ ಸಾಗುತ್ತಿರುವ ಜಾಗತಿಕ ಆರ್ಥಿಕತೆ ಭಾರತದಲ್ಲಿ ಹೆಚ್ಚು ಪರಿಣಾಮ ಬೀರಲಿದೆ': IMF

‘ಮಂದಗತಿಯಲ್ಲಿ ಸಾಗುತ್ತಿರುವ ಜಾಗತಿಕ ಆರ್ಥಿಕತೆ ಭಾರತದಲ್ಲಿ ಹೆಚ್ಚು ಪರಿಣಾಮ ಬೀರಲಿದೆ’: IMF

- Advertisement -
- Advertisement -

ಜಾಗತಿಕ ಮಟ್ಟದಲ್ಲಿ ಕುಸಿಯುತ್ತಿರುವ ಆರ್ಥಿಕತೆಯಿಂದಾಗಿ ಅದರ ದುಷ್ಪರಿಣಾಮಗಳು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನೂತನ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಿದ್ದು, ಪ್ರಸ್ತುತ ವರ್ಷದಲ್ಲಿ ಶೇ. 90ರಷ್ಟು ಆರ್ಥಿಕತೆ ಕುಸಿತ ಕಂಡಿದೆ ಎಂದು ಕ್ರಿಸ್ಟಲಿನಾ ಜಾರ್ಜೀವಾ ತಿಳಿಸಿದ್ದಾರೆ. ದಶಕದಿಂದ ವ್ಯಾಪಾರ ಕುಸಿತದ ಪರಿಣಾಮ 2019-2020ರ ಆರ್ಥಿಕ ಬೆಳವಣಿಗೆ ಕನಿಷ್ಠ ದರಕ್ಕೆ ಕುಸಿದಿದೆ. ಅಮೆರಿಕ, ಜರ್ಮನಿಯಂಥ ರಾಷ್ಟ್ರಗಳಲ್ಲೂ ನಿರುದ್ಯೋಗ ಹೆಚ್ಚಿದೆ. ಭಾರತ ಮತ್ತು ಬ್ರೆಜಿಲ್ ನಂತಹ ರಾಷ್ಟ್ರಗಳು ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಾರ, ಉದ್ಯಮ ಮತ್ತು ಆರ್ಥಿಕತೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಅಪಾಯದ ಮುನ್ಸೂಚನೆ ನೀಡುತ್ತಿದೆ ಎಂದು ಕ್ರಿಸ್ಟಲಿನಾ ಹೇಳಿದ್ದಾರೆ.

ಇನ್ನು ಭಾರತದ ಆರ್ಥಿಕತೆ ನೆಲಕಚ್ಚಿದೆ. ಜೂನ್ ನಲ್ಲಿ ದೇಶೀಯ ಒಟ್ಟು ಉತ್ಪಾದನೆ (ಜಿಡಿಪಿ) ಬೆಳವಣಿಗೆ ಶೇ. 5ರಷ್ಟಕ್ಕೆ ಕುಸಿದಿದೆ. ಅಂದರೆ 6 ವರ್ಷಗಳಲ್ಲೇ ಕಡಿಮೆ. ಇದು ನೇರ ತ್ರೈಮಾಸಿಕದಲ್ಲಿ ಐದನೇ ಬಾರಿ ಆಗಿರುವ ಕುಸಿತ. ಮನೆ ವಸ್ತುಗಳ ಬೇಡಿಕೆ ಕಡಿಮೆಯಾಗಿರುವುದು, ಇತರೆ ಕ್ಷೇತ್ರಗಳಿಗೆ ಹಾನಿ ಉಂಟು ಮಾಡಿದ್ದು, ಇದು ಸಹ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ.

ಇನ್ನು ಭಾರತದ ಆರ್ಥಿಕ ವ್ಯವಸ್ಥೆ ಮತ್ತು ಜಿಡಿಪಿ 2019-2020ರಲ್ಲಿ ಶೇ. 7ರಿಂದ ಶೇ. 7.2ರಷ್ಟು ಹೆಚ್ಚಳವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ. ವಿಶ್ವ ಆರ್ಥಿಕತೆಯು 2019 ರಲ್ಲಿ ಶೇ. 3.2 ಮತ್ತು 2020 ರಲ್ಲಿ ಶೇ. 3.5 ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ. ವಿಶ್ವ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಐಎಂಎಫ್ ನವೀಕರಿಸಿರುವ ವಿವರಗಳನ್ನು ಅಕ್ಟೋಬರ್ 15 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಕ್ರಿಸ್ಟಲಿನಾ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...