HomeಮುಖಪುಟNDA ಒಕ್ಕೂಟಕ್ಕೆ ಬೆಂಬಲ ಘೋಷಿಸಿದ ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್‌ಮೋಹನ್ ರೆಡ್ಡಿ

NDA ಒಕ್ಕೂಟಕ್ಕೆ ಬೆಂಬಲ ಘೋಷಿಸಿದ ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್‌ಮೋಹನ್ ರೆಡ್ಡಿ

- Advertisement -
- Advertisement -

ವೈಎಸ್ಆರ್ ಕಾಂಗ್ರೆಸ್ ಮುಖಂಡ ಮತ್ತು ಆಂಧ್ರ ಪ್ರದೇಶದ ಸಿಎಂ ಜಗನ್‌ಮೋಹನ್ ರೆಡ್ಡಿಯವರು ತಮ್ಮ ಪಕ್ಷ NDA ಒಕ್ಕೂಟಕ್ಕೆ ಬೆಂಬಲ ನೀಡುತ್ತದೆ ಎಂದು ಘೋಷಿಸಿದ್ದಾರೆ.

ದೆಹಲಿಯಲ್ಲಿನ ಸೇವೆ ಮತ್ತು ವರ್ಗಾವಣೆಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಂಡಿಸಲು ಹೊರಟಿರುವ ವಿವಾದಾತ್ಮಕ ಮಸೂದೆಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದರು ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಮಣಿಪುರದ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಪೂರ್ಣ ವಿವರ ನೀಡಬೇಕೆದು ಪಟ್ಟು ಹಿಡಿದು ಅವಿಶ್ವಾಸ ನಿರ್ಣಯ ಘೋಷಿಸಿರುವ ಹಿನ್ನೆಲೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮೋದಿ ಸರ್ಕಾರದ ಪರ ಮತ ಹಾಕಲು ನಿರ್ಧರಿಸಿದೆ.

ದೆಹಲಿ ಸುಗ್ರೀವಾಜ್ಞೆಗೆ ರಾಜ್ಯಸಭೆಯಲ್ಲಿ ಬಹುಮತ ದೊರೆಯದಂತೆ ನೋಡಿಕೊಳ್ಳಲು ಆಪ್ ತೀವ್ರ ಪ್ರಯತ್ನ ನಡೆಸಿತ್ತು. ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಲ್ಲದೇ INDIA ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಈ ಬೆನ್ನಲ್ಲೆ NDA ಒಕ್ಕೂಟವು ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಗಾಳ ಹಾಕಿ ಯಶಸ್ವಿಯಾಗಿದೆ. ರಾಜ್ಯಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಒಂಬತ್ತು ಸದಸ್ಯರಿದ್ದು, ಅವರ ಬೆಂಬಲವು ಮಸೂದೆ ಅಂಗೀಕಾರಕ್ಕೆ ನಿರ್ಣಾಯಕವಾಗಿತ್ತು. ಅದೀಗ ಮೋದಿ ಸರ್ಕಾರದ ಪರ ವಹಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವಿ ವಿಜಯಸಾಯಿ ರೆಡ್ಡಿ, “ನಾವು ಎರಡೂ ವಿಷಯಗಳಲ್ಲಿ ಅಂದರೆ ದೆಹಲಿ ಸಮಸ್ಯೆ ಮಾತ್ರವಲ್ಲದೆ ಮಣಿಪುರ ವಿಷಯದಲ್ಲೂ ಕೇಂದ್ರ ಸರ್ಕಾರದ ಪರವಾಗಿ ಮತ ಚಲಾಯಿಸುತ್ತೇವೆ” ಎಂದು ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

ರಾಜ್ಯಸಭೆಯಲ್ಲಿ ಎನ್‌ಡಿಎ ಪರವಾಗಿ 123 ಸದಸ್ಯರಿದ್ದರೆ ಇಂಡಿಯಾ ಒಕ್ಕೂಟದ ಪರವಾಗಿ 109 ಸದಸ್ಯರಿದ್ದಾರೆ ಎನ್ನಲಾಗಿದೆ. 09 ಸದಸ್ಯರನ್ನು ಒಳಗೊಂಡಿರುವ ಬಿಜು ಜನತಾದಳ ಪಕ್ಷವು ಇನ್ನೂ ತನ್ನ ನಿಲುವನ್ನು ವ್ಯಕ್ತಪಡಿಸಿಲ್ಲ.

ಆಶ್ಚರ್ಯಕರವಾಗಿ ಆಂಧ್ರಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮೂರು ಪ್ರಾದೇಶಿಕ ಪಕ್ಷಗಳು ಸಹ ಎನ್‌ಡಿಎ ಒಕ್ಕೂಟಕ್ಕೆ ಸೇರಲು ಪೈಪೋಟಿಯಲ್ಲಿ ನಿರತವಾಗಿವೆ. ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್, ಪ್ರತಿಪಕ್ಷ ಚಂದ್ರಬಾಬು ನಾಯ್ಡುರವರ ಟಿಡಿಪಿ ಮತ್ತು ಪವನ್ ಕಲ್ಯಾಣ್‌ರವರ ಜನಸೇನಾ ಸೇನಾ ಎನ್‌ಡಿಎ ಪರ ಒಲವು ಹೊಂದಿವೆ.

ಇದನ್ನೂ ಓದಿ; ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಮೈಕ್ರೋಫೋನ್‌ ಸ್ವಿಚ್ಡ್ ಆಫ್: ವಿಪಕ್ಷಗಳ ಸಭಾತ್ಯಾಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...