Homeಸಾಹಿತ್ಯ-ಸಂಸ್ಕೃತಿಕವನಕವನ | ಬುದ್ಧನಾಗುವ ಆಸೆ

ಕವನ | ಬುದ್ಧನಾಗುವ ಆಸೆ

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ನನಗೂ
ಬುದ್ಧನಾಗುವ ಆಸೆ
ಆದರೆ
ಆಸೆಗಳು ಬಿಡುತಿಲ್ಲ

ಒಮ್ಮೊಮ್ಮೆ ಸರಿರಾತ್ರಿಯಲಿ
ಎದ್ದು ಬಿಡುವೆ,
ಭವ ಬಂಧನಗಳ
ಕಿತ್ತೆಸೆದು
ಹೊರಟು ಬಿಡೋಣವೆಂದು;
ಆದರೆ
ಪಕ್ಕದಲೆ ಮಲಗಿರುವ
ಮಡದಿ ಮಕ್ಕಳ ದಾಟಲಾರದೆ
ಮತ್ತೆ ಮಲಗಿಬಿಡುವೆ

ಕಂಡಕಂಡ
ಮರದ ಬುಡದಲಿ
ಗಂಟೆಗಟ್ಟಲೆ ಕೂತುಬಿಡುವೆ,
ಅಪ್ಪಿತಪ್ಪಿ ನನಗೂ
ಜ್ಞಾನೋದಯ
ಆದೀತೆಂಬ ಆಸೆಯಿಂದ;
ಏಕಾಂತವು ಪಿಚ್ಚೆನಿಸಿ
ಅಲ್ಲಿಂದಲೂ ಹೊರಟುಬಿಡುವೆ

ಕೊನೆಗೊಮ್ಮೆ ಅರಿವಾಯಿತು;
ಆಸೆಬಿದ್ದು ನಾನು ಬುದ್ದನಾಗಲಾರೆ,
ಯಾಕೆಂದರೆ
ಬುದ್ದ
`ಆಗುವ’ ಹಾದಿಯಲ್ಲ
`ಮಾಗುವ’ ಹಾದಿ!!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...