Homeಅಂಕಣಗಳುಕೃಷಿ ಕಾರ್ಮಿಕನ ಗೋಳು ದೊಡ್ಡದು

ಕೃಷಿ ಕಾರ್ಮಿಕನ ಗೋಳು ದೊಡ್ಡದು

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

ವ್ಯವಸಾಯ ಪ್ರಧಾನ ದೇಶ ಭಾರತ. ನೂರಕ್ಕೆ 60 ಜನ ಇಂದಿಗೂ ಗ್ರಾಮಗಳಲ್ಲೇ ವಾಸ ಮಾಡುತ್ತಿದ್ದಾರೆ. ಅವರು ತಾವು ಬೆಳೆದು ತಿಂದು ದೇಶದ ಎಲ್ಲ ಜನಕ್ಕೂ ಆಹಾರ ಪದಾರ್ಥಗಳನ್ನು ಒದಗಿಸುತ್ತಿದ್ದಾರೆ. ಇತ್ತೀಚೆಗೆ ಹೆಚ್ಚು ಭೂಮಿ ಇರುವವರು ದಿನಗೂಲಿ 500-600 ಕೊಟ್ಟು ವ್ಯವಸಾಯ ಮಾಡಿಸಲು ಆಗುತ್ತಿಲ್ಲ. ಅದರಿಂದ ಅವರು ತಮ್ಮ ಮನೆಗೆ ಬೇಕಾದಷ್ಟು ಆಹಾರ ಪದಾರ್ಥಗಳನ್ನು ಬೆಳೆದುಕೊಂಡು ಉಳಿದ ಭೂಮಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯ ಪೂರೈಕೆ ಕಷ್ಟವಾಗುತ್ತಿದೆ. ಒಂದು ಎರಡು ಎಕರೆ ಜಮೀನುಳ್ಳವರು ನೂರಕ್ಕೆ 60 ಜನ ಇದ್ದು, ಇವರು ಬೆಳೆಯುವ ಬೆಳೆ ಇವರ ಜೀವನ ನಿರ್ವಹಣೆಗೇ ಬೇಕಾಗುತ್ತದೆ. ಇವರ ಕೈಗೆ ಇನ್ನಷ್ಟು ಜಮೀನು ಒದಗಿಸಿದರೆ ಮಾತ್ರ ಈ ದೇಶದ ಜನರ ಆಹಾರ ಪೂರೈಕೆಯ ಕೆಲಸ ಸುಸೂತ್ರವಾಗಿ ನಡೆಯುತ್ತದೆ.
ಈ ಬಡ ರೈತರ ಕೈಗೆ ಇನ್ನಷ್ಟು ಜಮೀನು ಕೊಡ ಮಾಡಬೇಕಿದ್ದರೆ, ಈಗಿನ ಸೀಲಿಂಗ್ ಮಿತಿಯನ್ನು ಇಳಿಸಬೇಕು. ಆದಾಗಬೇಕಾದರೆ ಭೂಸುಧಾರಣೆ ಶಾಸನವನ್ನು ಪುನಃ ಪರಿಶೀಲಿಸಬೇಕು. ಸರ್ಕಾರ ಈ ಸುಧಾರಣೆಗೆ ಕೈ ಹಾಕದಿದ್ದರೆ. ನಮ್ಮ ಸರ್ಕಾರ ಇತರೆ ರಾಷ್ಟ್ರಗಳ ಹತ್ತಿರ ಭಿಕ್ಷಾಪಾತ್ರೆ ಹಿಡಿದುಕೊಂಡು ಹೀಗೆ ಅವರ ಬಾಗಿಲಲ್ಲಿ ನಿಲ್ಲಬೇಕಾಗುತ್ತದೆ. ವ್ಯವಸಾಯ ಪ್ರಧಾನವಾದ ಭಾರತ. ಆಹಾರ ಪದಾರ್ಥಗಳಿಗಾಗಿ ಬೇರೆ ದೇಶಗಳಿಗೆ ಜೋಳಿಗೆ ಹಿಡಿದು ಹೋಗುವುದು ಅಪಮಾನ. ಆದ್ದರಿಂದ ಭೂಮಿತಿ ಶಾಸನವನ್ನು ಪುನಃ ಪರಿಶೀಲಿಸುವುದು ಅತ್ಯಗತ್ಯ. ಸರ್ಕಾರ ಈ ಕೆಲಸವನ್ನು ಮಾಡದಿದ್ದರೆ ಇದಕ್ಕಾಗಿ ಬಡರೈತರು ತಮ್ಮ ಉಳಿವಿಗಾಗಿ ಹೋರಾಟ ಮಾಡುವುದು ಅನಿವಾರ್ಯ.
ಆಹಾರ ಧಾನ್ಯಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರ ಮಾಡುವ ಹೊರದೇಶಗಳ ಕಂಪೆನಿಗಳು ಈಗ ಭಾರತಕ್ಕೆ ಲಗ್ಗೆ ಇಡುತ್ತಿವೆ. ವಾಲ್‍ಮಾರ್ಟ್, ಮೆಟ್ರೋ ಮುಂತಾದ ಬೃಹತ್ ಪ್ರಮಾಣದ ಮಳಿಗೆಗಳು ಭಾರತದ ಎಲ್ಲ ಪಟ್ಟಣಗಳಿಗೆ, ಜಿಲ್ಲಾ ಮುಖ್ಯಸ್ಥಳಗಳಿಗೆ ಬಂದಿವೆ. ಇದರ ಜೊತೆ ಜೊತೆಗೆ ಭಾರತೀಯ ಬಂಡವಾಳಗಾರರೂ ಬಿಗ್‍ಬಜಾರ್‍ನಂತಹ ಮಳಿಗೆ ಸಮುಚ್ಚಯಗಳನ್ನು ಅಲ್ಲಲ್ಲಿ ಸ್ಥಾಪಿಸಲು ತೊಡಗಿದ್ದಾರೆ. ಇವರೆಲ್ಲರ ದಾಳಿಯಿಂದಾಗಿ ಸಣ್ಣ-ಪುಟ್ಟ ಆಹಾರ ಧಾನ್ಯ ಪೂರೈಕೆಯ ಅಂಗಡಿಗಳು ಮಾಯವಾಗುತ್ತಿವೆ. ಇವೆಲ್ಲ ಸಣ್ಣ-ಪುಟ್ಟ ಅಂಗಡಿಗಳೂ ಈ ಬ್ರಹ್ಮರಾಕ್ಷಸನ ಹೊಟ್ಟೆಯೊಗಳಗೆ ಸೇರಿ ಹೋಗಿವೆ. ಜಿಲ್ಲರೆ ಅಂಗಡಿ ನಡೆಸುತ್ತಿದ್ದ ಸಹಸ್ರಾರು ಮಂದಿ ಈ ಪೈಪೋಟಿ ಎದುರಿಸಲಾಗದೆ ಬೀದಿಪಾಲಾಗಿದ್ದಾರೆ. ನಮ್ಮ ಸರ್ಕಾರಗಳೇ ಈ ಮಾರ್ಟ್‍ಗಳನ್ನು ಆಹ್ವಾನಿಸುತ್ತವೆ. ಅವರಿಗೆ ಬೇಕಾದಷ್ಟು ಭೂಮಿ, ಜಲ, ವಿದ್ಯುತ್ ಎಲ್ಲವನ್ನೂ ಒದಗಿಸುತ್ತವೆ.
ಭಾರತದ ರೈತರಲ್ಲೂ ಈಗ ಎರಡು ಬಣಗಳಾಗಿವೆ. ಮೊದಲನೆಯ ಬಣ ದೆಹಲಿಗೆ ಮುತ್ತಿಗೆ ಹಾಕಿ, ಬ್ಯಾಂಕ್ ಸಾಲಮನ್ನಾ ಮಾಡಿ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಬೆಳೆಗಳಿಗೆ ಸಬ್ಸಿಡಿ ಕೊಡಿ ಮುಂತಾದ ಬೇಡಿಕೆಗಳನ್ನು ಇಟ್ಟರೆ, ಶಿರ್ಡಿಯಲ್ಲಿ ಸಮಾವೇಶಗೊಂಡ ರೈತಸಂಘಟನೆಗಳು ಅದಕ್ಕೆ ವ್ಯತಿರಿಕ್ತವಾದ ಬೇಡಿಕೆಗಳನ್ನು ಇಟ್ಟವು. ಅವರೇನು ಹೇಳಿದರೆಂಬುದು ನೋಡಿದರೆ, ಕೆಲವು ರೈತರ ಪರವಾಗಿಯೇ ಇದ್ದಾವೆ ಎನಿಸಿದರೂ, ನಿಧಾನಕ್ಕೆ ಬೇರೆಯದೇ ಅಜೆಂಡಾ ಇರುವುದು ಅರಿವಾಗುತ್ತಾ ಹೋಗುತ್ತವೆ.
ಅವೆಂದರೆ ರೈತರಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಡಿ, ರೈತರನ್ನು ಸರ್ಕಾರದ ಬಂಧನದಿಂದ ಬಿಡುಗಡೆ ಮಾಡಿ ರೈತ ತುಂಬ ತೊಂದರೆಯಲ್ಲಿದ್ದಾಗ ಅವನ ಮೇಲೆ ಸಲ್ಲದ ಸುಧಾರಣೆಗಳನ್ನು ತಂದು ಹೇರಬೇಡಿ, ಸಾಲಮನ್ನಾ ಒಂದೇ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಆದ್ದರಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತದೆ. ಹೀಗೇ ಮುಂದುವರಿದರೆ ಸಾಲ ಮಾಡುವ ರೈತ ಸಾಲ ಮಾಡುವುದು ತನ್ನ ಹಕ್ಕು ಅದನ್ನು ತೀರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಲು ಎಡೆಮಾಡಿಕೊಡುತ್ತದೆ. ಅಲ್ಲದೆ ಸಾಲಮನ್ನಾದ ಲಾಭ ಬಹುಸಂಖ್ಯೆಯಲ್ಲಿರುವ ಒಂದು ಎರಡು ಎಕರೆ ಜಮೀನುಳ್ಳವರಿಗೆ ಖಂಡಿತ ಸಿಗುವುದಿಲ್ಲ. ಶ್ರೀಮಂತ ರೈತರಿಗೆ ಲಕ್ಷಗಟ್ಟಲೆ ಲಾಭ ಆಗುವುದಾದರೆ ಬಡ ರೈತನಿಗೆ ಸಾವಿರ, ಎರಡು ಸಾವಿರ ಕೂಡ ಸಿಗುವುದಿಲ್ಲ. ರೈತರ ರ್ಯಾಲಿಯ ಈ ಮಾತುಗಳನ್ನು ಒಪ್ಪಿಕೊಳ್ಳಬಹುದು. ಆದರೆ ಅಲ್ಲಿ ವ್ಯಕ್ತವಾದ ಇನ್ನು ಕೆಲವು ಸಲಹೆಗಳು ಬಡ ರೈತನ್ನು ಬೀದಿಪಾಲು ಮಾಡುವ ಸಂಚಿನಂತೆ ತೋರುತ್ತದೆ. ಹೆಚ್ಚಿನ ಸ್ವಾತಂತ್ರ್ಯವನ್ನು ರೈತರಿಗೆ ನೀಡಿ ಎಂದು ಸರ್ಕಾರಕ್ಕೆ ತಿಳಿಸುತ್ತಾ ಹೆಚ್ಚಿನ ಬಂಡವಾಳ, ವ್ಯವಸಾಯ ಕ್ಷೇತ್ರಕ್ಕೆ ಹರಿದು ಬರುವಂತಾಗಬೇಕು ಎಂಬ ಸಲಹೆಯನ್ನು ಮಾಡಲಾಗಿದೆ. ವ್ಯವಸಾಯ ಕ್ಷೇತ್ರದಿಂದ ರಾಷ್ಟ್ರದ ಬೊಕ್ಕಸಕ್ಕೆ ಶೇ.14ರಷ್ಟು ಮಾತ್ರ ಆದಾಯ ಬರುತ್ತದೆ. ಆದರೆ ಭಾರತದ ಒಟ್ಟು ಕಾರ್ಮಿಕರ ಸಂಖ್ಯೆಯ ಅರ್ಧದಷ್ಟು ಕಾರ್ಮಿಕರು ಗ್ರಾಮೀಣ ಭಾರತದಲ್ಲೇ ಕೆಲಸ ಮಾಡುವವರು.
ಆದರೆ ವ್ಯವಸಾಯ ಕ್ಷೇತ್ರದಿಂದ ಹೊರಗಿರುವ ಕಾರ್ಮಿಕ ಗ್ರಾಮೀಣ ಕಾರ್ಮಿಕನಿಗಿಂತ ಮೂರು ಪಟ್ಟು ಹೆಚ್ಚಿನ ವರಮಾನ ಪಡೆಯುತ್ತಾನೆ. ಗ್ರಾಮೀಣ ಕಾರ್ಮಿಕನಿಗೆ ಪಟ್ಟಣದ ಕಾರ್ಮಿಕರಿಗೆ ಸಿಗುವಷ್ಟು ಆದಾಯ ದೊರಕಬೇಕಾದರೆ ಕೆಲವು ಸುಧಾರಣೆಗಳನ್ನ ವ್ಯವಸಾಯ ಕ್ಷೇತ್ರದಲ್ಲಿ ತರಬೇಕಾಗುವುದು. ಈ ಸುಧಾರಣೆಗಳನ್ನು ಜಾರಿಗೊಳಿಸಲು ಸ್ವಲ್ಪ ಕಾಲಾವಕಾಶ ಬೇಕಾಗಿರುವುದರಿಂದ ಕೂಡಲೇ ಮಾಡಬೇಕಾದ ಕೆಲಸವೆಂದರೆ ವ್ಯವಸಾಯಗಾರನನ್ನು ಸರ್ಕಾರ ಬಂಧಮುಕ್ತನನ್ನಾಗಿ ಮಾಡಬೇಕು. ರೈತ ಬೆಳೆದ ಬೆಳೆಗೆ ತಾನೇ ಬೆಲೆ ನಿರ್ಧರಿಸುವಂತಾಗಬೇಕು. ತನಗೆ ಬೇಕಾದವರಿಗೆ ತನ್ನ ಜಮೀನನ್ನು ಮಾರಿಕೊಳ್ಳುವ ಮತ್ತು ಬೇರೆಯವರಿಗೆ ವರ್ಗಾಯಿಸುವ ಅಧಿಕಾರ ರೈತನಿಗೆ ಇರಬೇಕು. ಭೂಮಿ ಕಾಯ್ದೆಯನ್ನು ರದ್ದು ಮಾಡಬೇಕು. ವ್ಯವಸಾಯ ಮಾಡಲಾಗುತ್ತಿರುವ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಅವಕಾಶವಿರಬೇಕು. ಈ ವಿಚಾರದಲ್ಲಿ ಸರ್ಕಾರದ ನಿರ್ಬಂಧಗಳು ಹಾಗೂ ಭ್ರಷ್ಟಾಚಾರ ಇರಕೂಡದು. ಈ ಸುಧಾರಣೆಗಳಲ್ಲಿ ಬೆಳೆದ ಬೆಳೆಗಳಿಗೆ ಅನಿರ್ಬಂಧಿತ ರಫ್ತು ಅವಕಾಶ ಇರಬೇಕು. ಫಾರಂಗಳಲ್ಲಿ ವ್ಯವಸಾಯೋತ್ಪನ್ನಗಳನ್ನು ಬೆಳೆಯುವ ಕಂಪನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ಬಹಳ ಮುಂದಿವೆ. ಅವು ಫಾರಂಗಳ ಒಕ್ಕೂಟ ರಚಿಸಿ, ಅದರ ಆಡಳಿತವನ್ನು ನಡೆಸುವ ಕೌಶಲ್ಯವನ್ನು ಹೊಂದಿವೆ. ಆ ಮೂಲಕ ರೈತರಿಗೆ ಹೆಚ್ಚಿನ ಲಾಭ ದೊರಕಿಸಲೂ ಸಾಧ್ಯವಾಗುತ್ತದೆ. ಆದರೆ ಈ ಕಂಪೆನಿಗಳು ತಮ್ಮ ಮೇಲೆ ಸರ್ಕಾರ ಹೇರುವ ತೆರಿಗೆಗಳಿಂದ ಮುಕ್ತಿ ಪಡೆಯಬೇಕು ಮತ್ತು ಸರ್ಕಾರ ಇಂತಹ ಕಂಪೆನಿಗಳು ಅಸ್ತಿತ್ವಕ್ಕೆ ಬರಲು ನೆರವು ನೀಡಬೇಕು ಮತ್ತು ಬೆಳೆಯ ಮೇಲಿನ ತೆರಿಗೆಗಳನ್ನು ರದ್ದು ಮಾಡಬೇಕು. ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ರೈತರು ಬಡವರಾಗಿ ಉಳಿದಿಲ್ಲ. ಭಾರತದಲ್ಲೂ ಈ ಬಗೆಯ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯಪಡಲಾಗಿದೆ. ಶಿರಡಿಯಲ್ಲಿ ಸಮಾವೇಶಗೊಂಡ ಈ ರೈತರು ಶ್ರೀಮಂತ ವರ್ಗದವರು ಮತ್ತು ಬಂಡವಾಳ ಶಾಹಿಗಳ ಬಾಲಬಡುಕರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಪಟ್ಟಭದ್ರ ಹಿತಾಸಕ್ತಿಯನ್ನು ಕಾಯುವ ಈ ಬಾಲಬಡುಕ ರೈತಮುಖಂಡರು ಒಂದು ಎಕರೆ ಎರಡು ಎಕರೆ ಹೊಂದಿರುವ ¨ಡ ರೈತರ ಜಮೀನುಗಳನ್ನೆಲ್ಲ ಕೊಂಡುಕೊಳ್ಳಲು ಆ ಶ್ರೀಮಂತ ಕಂಪೆನಿಗಳನ್ನು ಬಳಸಿಕೊಳ್ಳಬಹುದು. ಆ ಮೂಲಕ ಕನ್ಸಾಲಿಡೇಷನ್ ಆಫ್ ಹೋಲ್ಡಿಂಗ್ಸ್‍ಗೆ ಕೈ ಹಾಕಬಹುದು. ಆ ಮೂಲಕ ಗ್ರಾಮೀಣ ಬಡರೈತರನ್ನು ಬೀದಿಪಾಲು ಮಾಡಬಹುದು. ಬಡ ರೈತರ ಕೈಯಲ್ಲಿ ಜಮೀನಿರುವುದನ್ನು ಶ್ರೀಮಂತ ಕಂಪೆನಿಗಳು ಸಹಿಸುವುದಿಲ್ಲ. ಅದಕ್ಕೆ ಕಾರಣವೇನೆಂದರೆ ಈ ಬಡರೈತರಿಂದ ಅವರಿಗೆ ಏನೂ ಪ್ರತಿಫಲ ಸಿಗುವುದಿಲ್ಲ. ಅಲ್ಲದೆ ಈ ಬಡ ರೈತರನ್ನು ಭೂರಹಿತರನ್ನಾಗಿ ಮಾಡಿದರೆ, ಅವರೆಲ್ಲರೂ ಶ್ರೀಮಂತ ರೈತರ ಜಮೀನುಗಳಲ್ಲಿ ದಿನಗೂಲಿಗಳಾಗಿ ಕೆಲಸಕ್ಕೆ ಸೇರಬಹುದು. ಅವರ ದುಡಿಮೆಯ ಲಾಭವನ್ನು ಶ್ರೀಮಂತ ರೈತರು ಹಾಗೂ ಬಂಡವಾಳ ಹೂಡುವ ಕಾರ್ಪೊರೇಟ್ ಕಂಪನಿಗಳು ಲಪಟಾಯಿಸಬಹುದು ಎಂಬುದು ಅವರ ಲೆಕ್ಕಾಚಾರ.
ನಮ್ಮ ಶ್ರೀಮಂತ ರೈತರು ತಿಳಿಯಬೇಕಿರುವುದೇನೆಂದರೆ ಭಾರತ ಅಮೆರಿಕಾ ಅಲ್ಲ. ಅಮೆರಿಕಾ ಒಂದು ಔದ್ಯೋಗಿಕ ದೇಶ. ಅಲ್ಲಿ ವ್ಯವಸಾಯ ಮಾಡುವವರ ಸಂಖ್ಯೆ ಬಹಳ ಕಡಿಮೆ. ವ್ಯವಸಾಯದಲ್ಲಿ ತೊಡಗುವ ಹಿಡಿ ಮಂದಿಗೆ ಸಾವಿರ ಸಾವಿರ ಎಕರೆ ಜಮೀನು ಇರುತ್ತದೆ. ಇವರಿಗೆ ವ್ಯವಸಾಯ ಕೂಲಿಗಳು ಸಿಗುವುದು ದುರ್ಲಭ. ಇದರಿಂದಾಗಿ ಅಲ್ಲಿಯ ರೈತರು ಉಳುವುದಕ್ಕೆ ಕಳೆಕೀಳುವುದಕ್ಕೆ, ಪೈರು ಕಟಾವು ಮಾಡುವುದಕ್ಕೆ, ಕಾಳು ಒಣಗಿಸುವುದಕ್ಕೆ ಹೀಗೆ ಎಲ್ಲಕ್ಕೂ ಯಂತ್ರಗಳನ್ನು ಅವಲಂಬಿಸಬೇಕು. ಅವಿಲ್ಲದೆ ವ್ಯವಸಾಯವೇ ಸಾಧ್ಯವಿಲ್ಲ.
ಭಾರತ ವ್ಯವಸಾಯ ಪ್ರಧಾನ ದೇಶ. ಜನಸಂಖ್ಯೆ ಅಧಿಕವಾಗಿರುವ ದೇಶ. ಅಷ್ಟೇ ಅಲ್ಲ ಭಾರತದ ಹಳ್ಳಿಗಳಲ್ಲಿ ಒಟ್ಟು ಜನಸಂಖ್ಯೆಯ ಶೇ.60ರಿಂದ 70 ಜನ ವಾಸಿಸುತ್ತಾರೆ. ಇವರಲ್ಲಿ ಒಂದು ಎರಡು ಎಕರೆ ಜಮೀನುಳ್ಳವರು ಹಾಗೂ ವ್ಯವಸಾಯ ಕಾರ್ಮಿಕರು ಗ್ರಾಮೀಣ ಜನಸಂಖ್ಯೆಯ ಶೇ.60 ಜನ ಇದ್ದಾರೆ. ಇಷ್ಟು ಅಪಾರ ಸಂಖ್ಯೆಯ ನಿರುದ್ಯೋಗಿ ರೈತಾಪಿಗಳಿಗೆ ಗ್ರಾಮಗಳಲ್ಲೆ ಕೆಲಸ ಒದಗಿಸುವುದು ಸಾಧ್ಯವಿಲ್ಲ. ಹಾಗೆಂದು ಅವರನ್ನೆಲ್ಲ ನಗರಗಳಿಗೆ ಅಟ್ಟಿದರೆ ಅಲ್ಲಿ ಅವರಿಗೆಲ್ಲ ಜೀವನ ನಿರ್ವಹಣೆಗೆ ಬೇಕಾದಷ್ಟು ವರಮಾನ ದೊರಕಿಸುವುದಾದರೂ ಹೇಗೆ?
ಹಳ್ಳಿಯಲ್ಲೇ ಉಳಿಯುವ ಸಂಕಲ್ಪ ಮಾಡುವ ಈ ನತದೃಷ್ಟರಿಗೆಲ್ಲಾ ಶ್ರೀಮಂತ ರೈತರು, ಅವರ ಬೆಂಬಲಕ್ಕೆ ನಿಂತ ಕಾರ್ಪೊರೇಟ್ ಕಂಪನಿಗಳು ಅವರ ಹೊಟ್ಟೆ ತುಂಬುವಷ್ಟು ವೇತನವನ್ನು ಕೊಟ್ಟು ಪೂರೈಸಬಲ್ಲವೇ? ಕನ್ಸಾಲಿಡೇಷನ್ ಆಫ್ ಹೋಲ್ಡಿಂಗ್ ಮಾಡಿದ ಮೇಲೆ ಅಮೆರಿಕಾದಂತೆ ಭಾರತದಲ್ಲಿಯೂ ವ್ಯವಸಾಯ ಮಾಡಲು ಎಲ್ಲಾ ಹಂತದಲ್ಲೂ ಯಂತ್ರಗಳನ್ನೇ ಬಳಸುವುದು ಅನಿವಾರ್ಯವಾಗುತ್ತದೆ. ಯಂತ್ರಗಳನ್ನು ಎಲ್ಲಾ ಹಂತದಲ್ಲೂ ಬಳಸಿದ ಮೇಲೆ ಗ್ರಾಮಗಳಲ್ಲಿರುವ ಈ ನಿರುದ್ಯೋಗಿಗಳಿಗÉಲ್ಲ ದುಡಿಯಲು ಅವಕಾಶ ಕೊಡುವುದು ಸಾಧ್ಯವಿಲ್ಲದ ಮಾತು.
ಒಟ್ಟಿನಲ್ಲಿ ಈ ಪಟ್ಟಭದ್ರ ಹಿತಾಸಕ್ತಿಗಳು ಅಂದುಕೊಂಡಂತೆ ವ್ಯವಸಾಯ ಕ್ಷೇತ್ರದಲ್ಲಿ ಈ ಕ್ರಾಂತಿಯಾದಲ್ಲಿ ಹಳ್ಳಿಗಳಲ್ಲಿ ಉಳ್ಳವರು ಮತ್ತು ಬಡವರ ಮಧ್ಯೆ ಒಂದು ವಿಪ್ಲವ ನಡೆಯಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...