Homeಚಳವಳಿದೇಶದ ಗಮನ ಸೆಳೆಯಲು ಹೋದ ನಮ್ಮ ಗಮನ ಸೆಳೆದ ಒಂದು ಪ್ರತಿಭಟನೆ

ದೇಶದ ಗಮನ ಸೆಳೆಯಲು ಹೋದ ನಮ್ಮ ಗಮನ ಸೆಳೆದ ಒಂದು ಪ್ರತಿಭಟನೆ

- Advertisement -
- Advertisement -

ಸರೋವರ್ ಬೆಂಕಿಕೆರೆ |

ರೈತರ ಹೋರಾಟವು ಎಲ್ಲರ ಗಮನ ಸೆಳೆಯಿತು. ಅದಕ್ಕಾಗಿ ದೆಹಲಿಗೆ ಹೋಗಿದ್ದ ನಮಗೆ ಅದೇ ಜಂತರ್‌ಮಂತರ್‌ನಲ್ಲಿ ಇನ್ನೊಂದು ಹೋರಾಟವು ಗಮನ ಸೆಳೆಯಿತು. ಸರ್ಕಾರಗಳ ಕಣ್ಣು ಕಾಣಿಸದೇ ಇರಬಹುದು, ಅವರುಗಳ ಕಿವಿ ಕೇಳಿಸದೇ ಇರಬಹುದು. ಆದರೆ ಆಳದಲ್ಲಿ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡ ನಾಗರಿಕರು ಅವರ ಕಣ್ಣು, ಕಿವಿಗಳು ಊನವಾಗಿದ್ದರೂ, ಸಮಾಜವನ್ನು ಎಚ್ಚರಿಸುತ್ತಲೇ ಇರುತ್ತಾರೆ. ದೆಹಲಿಯ ರೈತ ಹೋರಾಟ ನಡೆದ ೨ ದಿನಗಳ ಬಳಿಕ ನಮಗೆ ಅಲ್ಲಿ ಕಂಡ ಸಂಗತಿಯಿದು. ಡಿ. 3ರಂದು ನೂರಾರು ಅಂಗವಿಕಲರು ಸಂಘಟಿತರಾಗಿ ಒಂದು ಪ್ರತಿಭಟನೆಯನ್ನು ನಡೆಸಿದರು. ಅವರಲ್ಲಿ ಅಂಧರೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿದ್ದರು.

ಹೆಣ್ಣುಮಕ್ಕಳು ಬಳಸುವ ನ್ಯಾಪ್ಕಿನ್ ಮೇಲೆ ಹೆಚ್ಚಿನ ಜಿಎಸ್‌ಟಿ ತೆರಿಗೆ ವಿಧಿಸಿ ದೇಶದಾದ್ಯಂತ ಪ್ರತಿರೋಧದ ಬಂದ ನಂತರದಲ್ಲಿ ಸ್ವಲ್ಪ ಮಟ್ಟಿಗೆ ತೆರಿಗೆ ಇಳಿಸಿದ್ದು ನಮಗೆ ಗೊತ್ತಿತ್ತು. ಆದರೆ ಅದೇ ಸರ್ಕಾರವು ಸಾವಿರಾರು ಕೋಟಿ ರೂಗಳನ್ನು ಕೊಳ್ಳೆ ಹೊಡೆದು ದೇಶ ಬಿಟ್ಟಂತ ದರೋಡೆಕೋರರು, ತೆರಿಗೆ ಪಾವತಿಸದೆ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ತಿಂದು ತೇಗುತ್ತಿರುವ ಬಂಡವಾಳಶಾಹಿಗಳಿಗೆ ಬೆನ್ನೆಲುಬಾಗಿ ನಿಂತಿರುವುದೂ ಗೊತ್ತಿತ್ತು. ಆದರೆ, ಈ ಪ್ರತಿಭಟನೆಯಿಂದ ನಮಗೆ ಇನ್ನೊಂದು ಸಂಗತಿಯೂ ಗೊತ್ತಾಯಿತು. ಮಾನ ಮರ್ಯಾದೆಯಿಲ್ಲದ, ಪಂಚೇಂದ್ರಿಯಗಳಿಲ್ಲದ ಕೇಂದ್ರ ಸರ್ಕಾರವು ಅಂಗವಿಕಲರು ಬಳಸುವ ಉಪಕರಣಗಳ ಮೇಲೆ ತೆರಿಗೆ ಹೆಚ್ಚಿಸಿ 25% ಜಿಎಸ್‌ಟಿಅನ್ನು ವಿಧಿಸಿದೆ! ಅದೇ ಕಾರಣಕ್ಕೆ ಅವರು ಅಲ್ಲಿ ಸೇರಿದ್ದರು.

ಯುಪಿಎ ಆಡಳಿತದ ಸಂದರ್ಭದಿಂದ ಶುರುವಾದ ಜಾಬ್‌ಲೆಸ್ ಗ್ರೋಥ್‌ನಿಂದ ಜಾಬ್ ಲಾಸ್‌ಗ್ರೋಥ್‌ನತ್ತ ಭಾರತವು ಮುಖ ಮಾಡಿದೆ. ಈ ನಕಾರಾತ್ಮಕ ಬೆಳವಣಿಗೆಗೆ ಬಿಜೆಪಿ ಆಡಳಿತವೇ ಕಾರಣವೆಂಬುದು ನಮಗೆ ಗೊತ್ತಿತ್ತು. ನಿರುದ್ಯೋಗದ ವಿರುದ್ಧದ ಆಂದೋಲನದಲ್ಲಿ ತೊಡಗಿದ್ದ ನಮಗೆ ಅದರ ಒಳಹೊರಗುಗಳ ಅರಿವಿದೆ. ಆದರೆ ಈ ಅವಧಿಯಲ್ಲಿ ಎರಡು ವಿಶೇಷ ಸಮುದಾಯಗಳ ಕುರಿತು ನಮಗೆ ದೆಹಲಿಯಲ್ಲಿ ಅರಿವಿಗೆ ಬಂದಿತು. ನಿರುದ್ಯೋಗದ ಸಮಸ್ಯೆಯು ಓದಿಕೊಂಡಿರುವ ಸುಶಿಕ್ಷಿತ ಸಮುದಾಯದ ಜೊತೆಗೆ, ಹಳ್ಳಿಯಲ್ಲೇ ಉಳಿಯಬಯಸುವ ಯುವಜನರದ್ದೂ ಆಗಿರುವುದು ಎಲ್ಲರಿಗೂ ತಿಳಿದಿದೆ; ಉದ್ಯೋಗ ಹುಡುಕಿಕೊಳ್ಳಲು ಸಾಧ್ಯವಾಗದೇ ಸೆಕ್ಸ್‌ವರ್ಕ್ ಮತ್ತು ಭಿಕ್ಷಾಟನೆಗಿಳಿದಿರುವ ಹಿಜ್ರಾ ಸಮುದಾಯದ ಕಥೆ ಏನಾಗಿರಬಹುದು? ಹಾಗೆಯೇ ವಿಕಲಚೇತನರದ್ದು?

ಎಲ್ಲರಿಗೂ ಖುಷಿಯಿಂದ ಆಚರಣೆ ಮಾಡಲು ಒಂದು ದಿನವಿರುವಂತೆ (ಡಿ.3ರಂದು) ಯಾವುದೋ ಒಂದು ಕಾರ್ಯಕ್ರಮದಲ್ಲಿ ಅಂಗವಿಕಲರ ದಿನವನ್ನು ಸಂತಸದಿಂದ ಆಚರಣೆ ಮಾಡಬೇಕಿದ್ದವರು ಅಂದು ಪ್ರತಿಭಟನೆಗೆ ಧುಮುಕಿದ್ದರು. ದೆಹಲಿಯಲ್ಲಿ ಸಂಘಟಿತರಾಗಿದ್ದ ಅವರು ನೋವುಗಳನ್ನು ಅದುಮಿಟ್ಟುಕೊಂಡು ರೋಷಾವೇಶದಿಂದ ಕುದಿಯುತ್ತಿದ್ದರು. ನಮಗೆ ನಿಮ್ಮ ಕರುಣೆ ಬೇಡ, ಸ್ವಾವಲಂಬಿಯಾಗಿ ಘನತೆಯಿಂದ ನಾವು ಜೀವಿಸಲು ನಮ್ಮ ಕೈಗೆ ಉದ್ಯೋಗ ಕೊಡಿ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿ ಎಂದು ತಮ್ಮ ಹಕ್ಕುಗಳನ್ನು ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದರು. ಅಲ್ಲದೆ ಅಂಗವಿಕಲರ ಉಪಕರಣಗಳ ಮೇಲೆ ಹೆಚ್ಚಿಸಿರುವ ಜಿಎಸ್‌ಟಿ ತೆರಿಗೆಯನ್ನು ಕಡಿಮೆ ಮಾಡಿ ಎನ್ನುವುದು ಅವರ ಹಕ್ಕೊತ್ತಾಯವಾಗಿತ್ತು. ದೇಶದ ದೊಡ್ಡ ಸುದ್ದಿಯಾಗಬೇಕಿದ್ದ ಈ ಹೋರಾಟವು ದುರದೃಷ್ಟವಶಾತ್ ಬಿಜೆಪಿಯ ಕೈಗೊಂಬೆಯಾಗಿರುವ ಮಾಧ್ಯಮಗಳು ಜನರ ಜೀವನಕ್ಕೆ ಸಂಬಂಧವೇ ಇಲ್ಲದ ಯಾರ ಹೊಟ್ಟೆಯನ್ನು ತುಂಬಿಸದ ರಾಮಮಂದಿರ, ಕೋಮು ದ್ವೇಷದಂತಹ ವಿಚಾರಗಳು ಮತ್ತು ಸೆಲಬ್ರಿಟಿಗಳ ಮದುವೆಯಿಂದ ಹಿಡಿದು ಬಸುರಿ ಬಾಣಂತನದವರೆಗಿನ ಸುದ್ದಿಗಳಲ್ಲಿ ಮುಳುಗಿವೆ. ಕರ್ನಾಟಕದಿಂದ ದೆಹಲಿಯವರೆಗೆ ಇದೇ ಕಥೆ. ಒಂದು ಸಮಧಾನದ ವಿಚಾರವೆಂದರೆ, ನೋವುಣ್ಣುತ್ತಿರುವ ಸಮುದಾಯಗಳು ಸುಮ್ಮನೇ ಕೂತಿಲ್ಲ; ಬೀದಿಗಿಳಿಯುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....