Homeರಾಜಕೀಯಮೇಲ್ಜಾತಿಗಳ `ಯಜಮಾನಿಕೆ’ ಮತ್ತು ಸಿದ್ರಾಮಯ್ಯನವರ ಸಣ್ಣಪುಟ್ಟ ಮಿಸ್ಟೇಕ್‍ಗಳು

ಮೇಲ್ಜಾತಿಗಳ `ಯಜಮಾನಿಕೆ’ ಮತ್ತು ಸಿದ್ರಾಮಯ್ಯನವರ ಸಣ್ಣಪುಟ್ಟ ಮಿಸ್ಟೇಕ್‍ಗಳು

- Advertisement -
- Advertisement -

ಕರ್ನಾಟಕದ ಮತದಾರ ಯಾರೂ ಗೆಲ್ಲದ ಮತ್ತು ಎಲ್ಲರೂ ಸೋತ ಸ್ಥಿತಿಯನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ರೂಪಿಸಿದ್ದಾನೆ. ಅದನ್ನು ಪ್ರಬುದ್ಧತೆ ಅನ್ನಬೇಕೋ? ಅಸಹಾಯಕತೆ ಅನ್ನಬೇಕೋ? ಮೂರ್ಖತನ ಅನ್ನಬೇಕೋ ಅರ್ಥವಾಗುತ್ತಿಲ್ಲ. ಎಲ್ಲವೂ ಸೇರಿದ ಕಲಸುಮೇಲೋಗರ. ಯಾವುದನ್ನು ಹೇಳಿದರೂ, ಅಂದುಕೊಂಡರೂ ಉಳಿದೆರಡು ಅದಕ್ಕೆ ಪೈಪೋಟಿ ನೀಡಲು ಮುಂದೆ ಬರುತ್ತವೆ. ಮೇಲ್ಜಾತಿಯ ಮನೋಧರ್ಮ ಮತ್ತು ಕೆಳಜಾತಿಯ ದೌರ್ಬಲ್ಯಗಳೆರಡೂ ಅನಾವರಣಗೊಂಡಿವೆ. ಕೆಳಜಾತಿಯ ನಾಯಕನೊಬ್ಬ ‘ಐದು ವರ್ಷ’ದ ಅವಧಿ ಪೂರೈಸಿದ್ದು ಸೋಕಾಲ್ಡ್ ಮೇಲ್ಜಾತಿಯ ಮನಸ್ಸುಗಳಿಗೆ ಇಷ್ಟವಾಗಲಿಲ್ಲ. ಅದು ಕೇವಲ ಇಷ್ಟಾನಿಷ್ಟದ ಪ್ರಶ್ನೆ ಮಾತ್ರ ಆಗಿ ಉಳಿಯಲಿಲ್ಲ. ‘ಸೋಲಿಸಲೇ ಬೇಕು’ ಎನ್ನುವ ಜಿದ್ದಾಜಿದ್ದಿನ ಕಣವಾಗಿ ಪರಿವರ್ತಿತವಾಯಿತು. ಚಾಮುಂಡೇಶ್ವರಿಯ ಫಲಿತಾಂಶ ಅದನ್ನು ಸ್ಪಷ್ಟವಾಗಿ ಬಿಚ್ಚಿಡುತ್ತದೆ.

ಮಗ ಯತೀಂದ್ರ ಜೊತೆ ಸಿದ್ದು

ಹಾಲಿ ಮುಖ್ಯಮಂತ್ರಿ ಹಾಗೂ ಅಷ್ಟೇನು ದುರಾಡಳಿತ ನೀಡದ, ಸಣ್ಣಪುಟ್ಟ ಲೋಪಗಳ ನಡುವೆಯೂ ‘ಬಹುಜನ ಹಿತಾಯ’ ಕೆಲಸ ಮಾಡಿದ ನಾಯಕನನ್ನು ದಯನೀಯವಾಗಿ ಸೋಲಿಸಿದ ಮತ್ತು ‘ಸೋಲಿಸಲೇಬೇಕು’ ಎಂದು ಒಗ್ಗಟ್ಟಾಗಿ ನಿಂತು, ಅದಕ್ಕೆ ಪರಿಶ್ರಮ ವಹಿಸಿ ಆಗು ಮಾಡಿದ ಕರ್ನಾಟಕದ ಉಭಯ ಸಮುದಾಯಗಳ ‘ಯಜಮಾನಿಕೆ’ಯ ಸ್ವರೂಪ ಗೋಚರವಾಗುತ್ತದೆ. ಆದರೆ, ಅದಕ್ಕಿಂತ ವಿಚಿತ್ರ ಎಂದರೆ ಸೋಕಾಲ್ಡ್ ಕೆಳಜಾತಿ ಮತ್ತು ಮಧ್ಯಮ ವರ್ಗದ ಜನ ಅಪಾಯ ಅರಿಯದೇ ಶೋಷಕರ ಜೊತೆಗೇ ಹೋಗುವ ‘ದೌರ್ಬಲ್ಯ’. ವರುಣಾ ವಿಧಾನಸಭಾ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಯತ್ತ ಮುಖ ಮಾಡುವ ‘ಸ್ವಾರ್ಥ’ ಸಿದ್ದರಾಮಯ್ಯನವರ ತಲೆಗೆ ಹೇಗೆ? ಯಾಕೆ ಹೊಕ್ಕಿತೋ ಗೊತ್ತಿಲ್ಲ. ಅದು ಅವರನ್ನು ಮತ್ತು ಅವರ ಪಕ್ಷವನ್ನು ಸೋಲಿನ ಬಾಗಿಲಿಗೆ ತಂದು ನಿಲ್ಲಿಸಿದೆ. ಸಿದ್ದರಾಮಯ್ಯ ಸ್ವಲ್ಪ ಉದಾರವಾಗಿ ವರ್ತಿಸಿದ್ದರೆ ಇಂತಹ ಸ್ಥಿತಿ ಉದ್ಭವ ಆಗುವ ಸಾಧ್ಯತೆಗಳು ಕಡಿಮೆ ಆಗಿರುತ್ತಿದ್ದವು. ಭಾವನಾತ್ಮಕ ಮೇಲುಗೈ ಸಾಧಿಸುವುದಕ್ಕೆ ಸ್ವತಃ ಸಿದ್ದರಾಮಯ್ಯ ಅವಕಾಶ ಮಾಡಿಕೊಟ್ಟರು. ಅದಕ್ಕೆ ಸ್ವತಃ ಅವರೂ ಸೇರಿದಂತೆ ಕಾಂಗ್ರೆಸ್ ಅದಕ್ಕಿಂತ ಹೆಚ್ಚಾಗಿ ರಾಜ್ಯದ ಜನ ತುಂಬಾ ದುಬಾರಿ ಬೆಲೆ ತೆರ ಬೇಕಾಗಿದೆ. ರಾಜಕೀಯವೂ ಒಂದು ಆಟ.

ಇಲ್ಲಿ ಎಲ್ಲವೂ ನನ್ನದೇ ಆಗಬೇಕೆಂದರೆ ಆಗುವುದಿಲ್ಲ. ಕೆಲವೊಮ್ಮೆ ಬಿಟ್ಟು ಕೊಡುವ ದೊಡ್ಡ ಮನಸ್ಸೂ ಮಾಡಬೇಕಾಗುತ್ತದೆ. ಎಂದೂ ಇಲ್ಲದ ರಾಜಕೀಯಕ್ಕೆ ಮಗನನ್ನು ತರುವ ಆಸೆ, ಪುತ್ರ ವ್ಯಾಮೋಹ ಯಾಕೆ ಬೇಕಿತ್ತು? ಕಾಂಗ್ರೆಸ್‍ನ ಕುಟುಂಬ ರಾಜಕಾರಣವನ್ನು ಟೀಕೆ ಮಾಡುವ ಸ್ಥಿತಿಯನ್ನು ಯಾವ ರಾಜಕೀಯ ಪಕ್ಷವೂ, ನಾಯಕರೂ ಇಂದು ಉಳಿಸಿಕೊಂಡಿಲ್ಲ. ಸ್ವತಃ ಸಮಾಜವಾದಿ ಎಂದು ಭಾವಿಸಿರುವ ಸಿದ್ದರಾಮಯ್ಯ ಸೈದ್ಧಾಂತಿಕವಾಗಿ ಕುಟುಂಬ ರಾಜಕಾರಣ ವಿರೋಧಿ ನೆಲೆಯವರು. ಕುಟುಂಬ ರಾಜಕಾರಣದ ಕಾರಣಕ್ಕಾಗಿಯೇ ಅಪಾರ ಪ್ರಮಾಣದ ನಷ್ಟ ಅನುಭವಿಸಿದವರು. ಕೈ ಸುಟ್ಟುಕೊಂಡವರು. ‘ಬೆಂಕಿ’ಯ ಅನುಭವ ಪಾಠ ಕಲಿಸದಿದ್ದರೆ- ಕಲಿಯದಿದ್ದರೆ ಹೇಗೆ?

ಸೋಲುವುದಕ್ಕಿಂತ ಸೋಲಿನ ಭೀತಿ ಹೆಚ್ಚು ಅಪಾಯಕಾರಿ. ಚಾಮುಂಡೇಶ್ವರಿಯ ಅಪಾಯದ ಮುನ್ಸೂಚನೆಗೆ ಇದ್ದ ಕಾರಣ ತುಂಬಾ ಸ್ಪಷ್ಟ. ಮೇಲ್ಜಾತಿ- ಮೇಲ್ವರ್ಗಗಳು ಸೋಲಿಸಲು ಕಟಿಬದ್ಧವಾಗಿವೆ ಎಂಬುದರ ವಾಸನೆ ಬಂದಿತ್ತು. ಅದು ರಾಜ್ಯದಾದ್ಯಂತ ಇದ್ದ- ಇರಬಹುದಾದ ಅತೃಪ್ತಿಯ ಮೇಲೆ ಎಂದು ಅರ್ಥಮಾಡಿಕೊಳ್ಳದೇ ಇದ್ದರೆ ಹೇಗೆ? ಯಡಿಯೂರಪ್ಪ- ದೇವೇಗೌಡರು ತೋರಿದ ಧಾಷ್ಟ್ರ್ಯವನ್ನು ಸಿದ್ದರಾಮಯ್ಯ ಕೂಡ ತೋರಿಸಿದ್ದು ‘ಹುಂಬತನ’ ಎನ್ನದೇ ವಿಧಿಯಿಲ್ಲ. ಉಭಯ ನಾಯಕರಿಗೆ ಇದ್ದ ಜಾತಿಯ ಬಲ ಹಾಗೂ ಅದೇ ಪ್ರಮಾಣದಲ್ಲಿ ಇದ್ದ- ಇರುವ ಇಮೇಜ್ ಬಗ್ಗೆ ‘ಕ್ಯಾರೇ’ ಅನ್ನದ ಮನೋಭಾವ ಸಿದ್ದರಾಮಯ್ಯಗೆ ಇಲ್ಲ. ಮತ್ತು ಅದು ಬರುವುದೂ ಇಲ್ಲ.

ಎದುರಾಳಿಗೆ ಕೈಕಟ್ಟಲು ಅವಕಾಶ ಮಾಡಿಕೊಟ್ಟದ್ದು ಸಿದ್ದರಾಮಯ್ಯನವರ ಲೋಪ. ರಾಜಕೀಯ ಆಟದಲ್ಲಿ ಸಂದೇಶ- ಸೂಚನೆಗಳೇ ಪ್ರಾಬಲ್ಯ ಮೆರೆಯುತ್ತವೆ. ಅದು ನಲವತ್ತು ವರ್ಷ ರಾಜಕಾರಣ ಮಾಡಿದವರಿಗೆ ಅರ್ಥ ಆಗಿಲ್ಲ ಎಂದರೆ ಹೇಗೆ ನಂಬುವುದು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲವೇ ಮುಖ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಬಹುಜನರು ‘ಒಗ್ಗಟ್ಟು’ ಆಗಲು ಸಾಂಸ್ಕೃತಿಕ-ಸಾಮಾಜಿಕ ಕಾರಣಗಳಿಲ್ಲ. ಆದರೆ, ಪ್ರಬಲರಿಗೆ ಸಂಖ್ಯಾಬಲದ ಕೊರತೆ ಇದ್ದರೂ ‘ಪ್ರಾಬಲ್ಯ’ ತೋರಿಸುವುದಕ್ಕೆ ಹಿಂದೆ ಬೀಳುವುದಿಲ್ಲ. ಬೇಟೆಯಾಡುವ ಹುಲಿ ತಾನು ದುರ್ಬಲನಾದರೂ ಹಾಗೆ ಭಾವಿಸುವುದಿಲ್ಲ. ಅದು ಭೀತಿ ಉಂಟು ಮಾಡುವ ಮೂಲಕವೇ ಮೇಲುಗೈ ಸಾಧಿಸಲು ಬಯಸುತ್ತದೆ. ಮೇಲ್ಜಾತಿ-ಮೇಲ್ವರ್ಗಗಳ ತಂತ್ರ ಕೂಡ. ಹುಲಿ ಕಳೆಗುಂದಿದೆ ಎಂದು ಗೊತ್ತಾದರೆ ಜಿಂಕೆಗಳು ಸವಾರಿ ಮಾಡುತ್ತವೆ ಎಂಬ ಮನೋಭಾವವೇ ಆಕ್ರಮಣಾತ್ಮಕ ಧೋರಣೆಗೆ ಕಾರಣವಾಗುತ್ತದೆ. ಹುಲಿಗಳು ಒಂದಾಗುವುದು ದಾಳಿ ಮಾಡುವುದಕ್ಕಾದರೆ, ಜಿಂಕೆಗಳು ಒಂದಾಗುವುದು ರಕ್ಷಣೆಗಾಗಿ. ಜಿಂಕೆಗಳು ಒಂದಾಗಿಯೂ ಹುಲಿಯ ಮೇಲೆ ‘ಸವಾರಿ’ ಮಾಡಲು ಆಗುವುದಿಲ್ಲ. ಹುಲಿ-ಜಿಂಕೆಯ ನೈಸರ್ಗಿಕ ಆಟ- ಜೀವನ್ಮರಣದ ಹೋರಾಟ ಸಿದ್ದರಾಮಯ್ಯನವರಿಗೆ ಗೊತ್ತಿರದ ಸಂಗತಿಯೇನಲ್ಲ. ಪ್ರಬಲ ಸಮುದಾಯಗಳ ಧ್ರುವೀಕರಣದ ‘ಭಯ’ವೂ ದುರ್ಬಲರನ್ನು ಒಗ್ಗಟ್ಟಾಗಿಸಲು ಅವಕಾಶ ಕಲ್ಪಿಸುತ್ತದೆ. ಅದು ಪೊಲರೈಸೇಷನ್‍ನ ವೇಗವನ್ನು ತೀವ್ರಗೊಳಿಸುತ್ತದೆ. ಒಕ್ಕಲಿಗರು ಜನತಾದಳದ ಜೊತೆಗೆ, ಲಿಂಗಾಯತರು ಬಿಜೆಪಿಯ ಜೊತೆಗೆ ಎಂಬ ಭಾವನಾತ್ಮಕ ಸಂಗತಿ ಎಲ್ಲರಿಗೂ ಗೊತ್ತಿದ್ದ ತೆರೆದಿಟ್ಟ ಸತ್ಯವಾಗಿತ್ತು. ಕರ್ನಾಟಕದ ರಾಜಕಾರಣದ ಬಗ್ಗೆ ಗೊತ್ತಿರುವವರಿಗೆ ಇದು ಹೊಸ ಸಂಗತಿಯೇನಲ್ಲ. ‘ಜಾತಿ ಜನಗಣತಿ’ಯ ಅಸ್ತ್ರ ಬಳಸಿದರೆ ಲಿಂಗಾಯತ-ಒಕ್ಕಲಿಗರೇತರರು ಒಂದಾಗುವ ಅವಕಾಶ ಸಾಧ್ಯವಾಗುತ್ತಿತ್ತು.

ಕರ್ನಾಟಕದಲ್ಲಿ ಲಿಂಗಾಯತರು ಇದ್ದಾರೆ ಎಂದು ಭಾವಿಸಿದ್ದೇ ಸರಿಯಾಗಿರಲಿಲ್ಲ. ಬಸವಪ್ರಣೀತ ಲಿಂಗಾಯತ ನಗಣ್ಯವೆನಿಸುವಷ್ಟು ಅಲ್ಪಸಂಖ್ಯಾತ. ಇರುವವರೆಲ್ಲ ಸೈದ್ಧಾಂತಿಕವಾಗಿ- ಭಾವನಾತ್ಮಕವಾಗಿ ವೀರಶೈವರು. ಬಸವಣ್ಣ ಅವರಿಗೆ ಒಂದ ಸಾಂಸ್ಕೃತಿಕ ‘ಐಕಾನ್’. ಅದೂ 50-60ರ ದಶಕದಲ್ಲಿ ಐಡೆಂಟಿಟಿ ಕ್ರೈಸಿಸ್‍ನಿಂದ ಹೊರಬರುವುದಕ್ಕಾಗಿ ಹುಟ್ಟಿದ ಸಂಕೇತ. ಹನ್ನೆರಡನೇ ಶತಮಾನದ ಬಸವಣ್ಣನನ್ನು 2008ರ ವೇಳೆಗಾಗಲೇ ಕೈಬಿಟ್ಟು ‘ದೂರ’ ನಡೆದುಬಿಟ್ಟಿದ್ದರು. ದೀನ-ದುರ್ಬಲರ ಪರವಾಗಿ ಮಾತನಾಡುವ ಬಸವ ‘ಪ್ರಾಬಲ್ಯ’ ಮೆರೆಯುವುದಕ್ಕೆ ಅಗತ್ಯ ಎಂದು ಅನ್ನಿಸಿರಲಿಲ್ಲ. ಅದೇ ಕಾರಣಕ್ಕಾಗಿಯೇ ಬಸವಣ್ಣ ಮೇಲಿನ ಪ್ರೀತಿಗಿಂತ ‘ಜಾತಿ’ಯ ಪ್ರೇಮ ಹೆಚ್ಚಾಗಿ ಅದು ಬಿಜೆಪಿ ಪರವಾದ ನಿಲುವು ಆಗಿ ಪರಿವರ್ತನೆಗೊಂಡಿತ್ತು.

ಮೇಲ್ಜಾತಿಯವರಿಗೆ ಮಾತ್ರ. ಸ್ವಜನ ಪಕ್ಷಪಾತ ಮಾಡುವ- ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುವ ‘ಅಧಿಕಾರ’ ಮತ್ತು ‘ಹಕ್ಕು’ ಆಯಾಚಿತವಾಗಿ ದೊರೆತಿದೆ. ಅದನ್ನೇ ಸಿದ್ದರಾಮಯ್ಯ ಕೂಡ ಮಾಡಿದರೆ ಪಾಪಾ ಮೇಲ್ಜಾತಿಗಳು ಹೇಗೆ ತಾನೆ ಸಹಿಸಿಕೊಂಡಾವು? ಮೇಲ್ಜಾತಿಯ ಜನ ಜಾತಿಯ ಜನ ಒಂದೆಡೆ ಸೇರಿದರೆ ‘ಸಾಂಸ್ಕೃತಿಕ’ ಕಾರಣಕ್ಕಾಗಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಅದೇ ‘ಕೆಳಜಾತಿ’ (ಪ್ರಬಲರಲ್ಲದ ಸಮುದಾಯ)ಯ ಜನ ಸೇರಿದರೆ ಅದು ‘ಜಾತೀಯತೆ’ ಆಗುತ್ತದೆ. ಶಬ್ದಗಳು ರೂಲ್ ಮಾಡುತ್ತವೆ. ಹೌದು. ಅಲ್ಲಮ ಹೇಳಿದಂತೆ ಭಾಷೆಯೆಂಬುದು ‘ಪ್ರಾಣ ಘಾತಕ’. ಭಾವನೆಗಳಿಗಿಂತ ಭಾಷೆಗೇ ಹೆಚ್ಚು ಮಹತ್ವ.

ಸಿದ್ಧರಾಮಯ್ಯ ಎಡವಿದರು. ಕರ್ನಾಟಕದ ಬಹುಜನರು ‘ಆತಂಕ’ಕ್ಕೆ ಒಳಗಾಗಿದ್ದಾರೆ. ಇರುವಾಗ ‘ವಸ್ತು’ವಿನ ಮಹತ್ವ ಗೊತ್ತಾಗುವುದಿಲ್ಲ. ಅರಸು ಜೊತೆ ಹೋಲಿಕೆ ಮಾಡಬಾರದು ಎಂದು ಎಷ್ಟೇ ಹಠ ಹಿಡಿದರೂ ಮಾಡದೇ ಇರಲು ಸಾಧ್ಯವಾಗುತ್ತಿಲ್ಲ. ಹಿಂದೆ ಅರಸು ಇದ್ದಾಗಲೂ ಹೀಗೆಯೇ ಆಗಿತ್ತು. ಈಗ ಸಿದ್ದರಾಮಯ್ಯ ಅವರಿಗೆ ಕೂಡ ಅದೇ ಆಗಿದೆ. ನಮಗೆ ಅದು ಇತಿಹಾಸ-ಚರಿತ್ರೆಯ ಪುಟ. ಆದರೆ, ಸ್ವತಃ ಅರಸು ರಾಜಕಾರಣ ಮತ್ತು ಅದಕ್ಕಾಗಿ ದೊರೆತ ಪ್ರತಿಫಲ ಸಿದ್ಧರಾಮಯ್ಯನವರಿಗೆ ವರ್ತಮಾನದ ಅನುಭವ ಆಗಿತ್ತು. ಸಿದ್ದರಾಮಯ್ಯನವರ ವಿರುದ್ಧದ ಅಲೆ ಸುಪ್ತವಾಗಿ, ಜೀವಂತವಾಗಿ ಉಳಿಯುವಂತೆ ಮಾಡುವಲ್ಲಿ ಪ್ರಬಲ ಸಮುದಾಯಗಳು ಯಶ ಕಂಡಿವೆ ಎಂಬುದೇ ಸದ್ಯದ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...