Homeರಾಜಕೀಯರಾಫೇಲ್ ಡೀಲ್ ಸ್ಫೋಟಕ ಸತ್ಯ: ಸುಪ್ರೀಂ ಕೋರ್ಟ್ಗೇ ಹಸೀ ಸುಳ್ಳು ಹೇಳಿದ ಮೋದಿ ಸರ್ಕಾರ

ರಾಫೇಲ್ ಡೀಲ್ ಸ್ಫೋಟಕ ಸತ್ಯ: ಸುಪ್ರೀಂ ಕೋರ್ಟ್ಗೇ ಹಸೀ ಸುಳ್ಳು ಹೇಳಿದ ಮೋದಿ ಸರ್ಕಾರ

- Advertisement -
- Advertisement -

ಬಹುಶಃ ಇದಕ್ಕಿಂತ ದೊಡ್ಡ ಹಗರಣ ಇತ್ತೀಚಿನ ದಿನಗಳಲ್ಲಿ ನಡೆದಿರಲಾರದು. ರಾಫೇಲ್ ಡೀಲ್ ವಿಚಾರದಲ್ಲಿ ಸತ್ಯವನ್ನು ಮುಚ್ಚಿ ಹಾಕಲು ಮೋದಿ ಸರ್ಕಾರ ಪ್ರಯತ್ನಿಸಿದಂತೆಲ್ಲಾ, ಹೊಸ ಹೊಸ ಹಗರಣಗಳನ್ನೇ ಮಾಡುತ್ತಿದೆ. ಅದರಲ್ಲಿ ಅತ್ಯಂತ ಹೊಸ ಹಗರಣ ಹಿಂದೆಂದಿಗಿಂತಲೂ ಆಘಾತಕಾರಿಯಾದುದು. ಮೋದಿ ಸರ್ಕಾರವು ಹಸೀ ಹಸೀ ಸುಳ್ಳನ್ನು ಸುಪ್ರಿಂಕೋರ್ಟಿಗೇ ಹೇಳಲಾಗಿದೆ.

ಹೌದು, ಇಂದು ರಾಫೇಲ್ ವಿಚಾರದಲ್ಲಿ ಸುಪ್ರೀಂಕೋರ್ಟು ತೀರ್ಪು ಹೊರಬಿದ್ದ ನಂತರ ಚುನಾವಣಾ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ನಾಯಕರು ಮತ್ತು ಗೋದಿ ಮೀಡಿಯಾಗೆ ಇದ್ದಕ್ಕಿದ್ದಂತೆ ಭಾರೀ ಹುಮ್ಮಸ್ಸು ಬಂದಿತು. ಆದರೆ ಜಡ್ಜ್ಮೆಂಟ್ ಪ್ರತಿ ಹೊರಬಿದ್ದು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಇನ್ನೊಂದು ಹಗರಣ ಹೊರಬಿದ್ದಿತು.

ಸುಪ್ರೀಂಕೋರ್ಟು ಹೇಳಿದ್ದು ಇಷ್ಟು. ಈ ವ್ಯವಹಾರದ ತಾಂತ್ರಿಕ ಅಂಶಗಳನ್ನು ನಿರ್ಧರಿಸುವುದು ನಮ್ಮ ಪರಿಣಿತಿಯ ವಿಚಾರ ಅಲ್ಲ; ಡಸಾಲ್ಟ್ & ರಿಲೆಯನ್ಸ್ ನಡುವೆ ಏನು ನಡೆದಿದೆ ಅದು ಎರಡು ಕಾರ್ಪೋರೇಟ್ ಕಂಪೆನಿಗಳ ನಡುವಿನ ವ್ಯವಹಾರ; ಇದರಲ್ಲಿ ಪ್ರತಿವಾದಿ (ನರೇಂದ್ರ ದಾಮೋದರದಾಸ್ ಮೋದಿ)ಯ ಪಾತ್ರದ ಬಗ್ಗೆ ಏನು ಹೇಳಲಾಗುತ್ತಿದೆ ಅದನ್ನು ಅವರು ನಿರಾಕರಿಸಿದ್ದಾರೆ. ಈ ವ್ಯವಹಾರವನ್ನು ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿಯೇ ಮಾಡಲಾಗಿದೆ. (ಈ ಕುರಿತು ತೀರ್ಪಿನ 21ನೇ ಪುಟದ 25ನೇ ಪಾಯಿಂಟ್‌ನಲ್ಲಿ ಹೇಳಲಾಗಿದೆ) ವ್ಯವಹಾರದ ದರಗಳ ಕುರಿತು ಕಂಟ್ರೋಲರ್ & ಆಡಿಟರ್ ಜನರಲ್ (ಸಿಎಜಿ) ಮುಂದೆ ಇಡಲಾಗಿದೆ ಮತ್ತು ಅದನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಪರಿಶೀಲಿಸಿದೆ. ಇವೆಲ್ಲಾ ಕಾರಣಗಳಿಂದ ಇದರಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ನ್ಯಾಯಾಲಯವು ಭಾವಿಸಿ ಈ ಪಿಟಿಷನ್‌ಅನ್ನು ವಜಾಗೊಳಿಸುತ್ತೇವೆ.

ಈ ಎಲ್ಲಾ ವ್ಯವಹಾರವು ಸೂಕ್ತ ಪ್ರಕ್ರಿಯೆಯನ್ನನುಸರಿಸಿಯೇ ನಡೆದಿದೆ ಎಂದು ಸುಪ್ರೀಂಕೋರ್ಟು ಭಾವಿಸಲು ಇದು ಮುಖ್ಯ ಕಾರಣಗಳಲ್ಲೊಂದಾಗಿದೆ.

(ತೀರ್ಪಿನ ಪ್ರತಿಯ ಈ ಭಾಗವನ್ನೂ ನೋಡಬಹುದು)

ಆದರೆ, ವಾಸ್ತವವೇನು?

ಕಾಕತಾಳೀಯವಾಗಿ, ಈ ತೀರ್ಪು ಬಂದ ದಿನವೇ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸಭೆ ಮಧ್ಯಾಹ್ನ 3 ಗಂಟೆಗೆ ನಡೆದಿದೆ. ಅದರ ಅಧ್ಯಕ್ಷರು ಡೆಪ್ಯುಟಿ ಸಿಎಜಿಯನ್ನು ‘ನಮ್ಮ ಮುಂದಿಟ್ಟಿದ್ದ ಆ ವರದಿ ಯಾವುದು?’ ಎಂದು ಕೇಳಿದ್ದಾರೆ. ಅಂತಹ ಯಾವ ವರದಿಯೂ ಇಲ್ಲವೆಂದು ಅವರು ಉತ್ತರಿಸಿದ್ದಾರೆ. ಅಂದರೆ, ಸಿಎಜಿಯ ಮುಂದಾಗಲೀ ಪಿಎಸಿಯ ಮುಂದಾಗಲೀ ಅಂತಹ ಯಾವ ಮಾಹಿತಿಯನ್ನೂ ಕೊಟ್ಟೇ ಇಲ್ಲ. ಅಷ್ಟೂ ಸಾಲದೆಂಬಂತೆ ಅವೆಲ್ಲವನ್ನೂ ಮಾಡಿಯಾಗಿದೆಯೆಂದು ಸುಪ್ರೀಂಕೋರ್ಟಿಗೇ ಸುಳ್ಳು ಹೇಳಲಾಗಿದೆ.

ಖುದ್ದು ಪಿಎಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನೂ ಪಕ್ಕದಲ್ಲೇ ಕೂರಿಸಿಕೊಂಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರು ಇಂದು ಪತ್ರಿಕಾಗೋಷ್ಠಿ ನಡೆಸಿ ಇದೆಲ್ಲವನ್ನೂ ವಿವರಿಸಿದ್ದಾರೆ. (ಪತ್ರಿಕಾಗೋಷ್ಠಿಯ ವಿಡಿಯೋ ಇದರೊಂದಿಗಿದೆ, ನೋಡಬಹುದು)

ಹಾಗೆಯೇ ಸುಪ್ರೀಂಕೋರ್ಟಿನ ಅತ್ಯಂತ ಘನತೆವೆತ್ತ ನ್ಯಾಯವಾದಿಗಳಲ್ಲೊಬ್ಬರಾದ ಪ್ರಶಾಂತ್ ಭೂಷಣ್ ಏನು ಹೇಳಿದ್ದಾರೆಂಬುದರ ಕುರಿತೂ ಸದ್ಯದಲ್ಲೇ ವಿವರಗಳನ್ನು ನಿಮ್ಮ ಮುಂದಿಡಲಾಗುವುದು. ಎಲ್ಲಾ ವಿವರಗಳೂ ಈ ಸುದ್ದಿಯೊಂದಿಗೆ ಅಪ್‌ಡೇಟ್ ಆಗುತ್ತಿರುತ್ತದೆ, ಸರ್ಕಾರವು ಮತ್ತು ಸುಪ್ರೀಂಕೋರ್ಟು ನಂತರ ಏನೇನು ಹೇಳುತ್ತದೆ ಎಂಬ ವಿವರಗಳು ಇದರ ಜೊತೆಗೆ ಇರುತ್ತವೆ. ಆಗಿಂದಾಗ್ಗೆ ಈ ಪುಟವನ್ನು ನೀವು ನೋಡುತ್ತಿರಬಹುದು.

ಅದೇನೇ ಇರಲಿ, ಸುಪ್ರೀಂಕೋರ್ಟಿನ ತೀರ್ಪು ಬಂದು ಕ್ಲೀನ್‌ಚಿಟ್ ಸಿಕ್ಕಿತು ಎಂದು ಎಲ್ಲರೂ ಭಾವಿಸುತ್ತಿರುವಾಗ, ಅದು ಕ್ಲೀನ್‌ಚಿಟ್ ಅಲ್ಲ; ಪಾರ್ಲಿಮೆಂಟ್ ಸಮಿತಿಗೇ ವರದಿ ಕೊಟ್ಟಿದ್ದೇವೆಂದು ಸುಪ್ರೀಂಕೋರ್ಟಿಗೇ ಸ್ವತಃ ಕೇಂದ್ರ ಸರ್ಕಾರವೇ ಸುಳ್ಳು ಹೇಳಿದ ಪ್ರಕರಣ ಎಂದು ಬಿಚ್ಚಿಕೊಳ್ಳುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.

ಈ ವಿಚಾರದಲ್ಲಿ ಹೊರಬರುವ, ಈ ವಾದಕ್ಕೆ ಪ್ರತಿಯಾಗಿ ಬರುವ ವಾದಗಳನ್ನೂ ನಿಮ್ಮ ಮುಂದಿಡುವ ಕೆಲಸವನ್ನು ಈ ಪುಟದಲ್ಲಿ ಮಾಡಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...