Homeಮುಖಪುಟಹಿಂದಿ ಕಲಿಯುವಂತೆ ಅಮಿತ್ ಶಾ ತಾಕೀತು: ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಸೋನಿಯಾ ಗರಂ

ಹಿಂದಿ ಕಲಿಯುವಂತೆ ಅಮಿತ್ ಶಾ ತಾಕೀತು: ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಸೋನಿಯಾ ಗರಂ

- Advertisement -
- Advertisement -

| ನಾನುಗೌರಿ ಡೆಸ್ಕ್ |

ನಿನ್ನೆಯಿಂದ ಆರಂಭವಾಗಿರುವ 17ನೇ ಲೋಕಸಭಾ ಅಧಿವೇಶನದಲ್ಲಿ ಸಂಸದರಿಗೆ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಅಚ್ಚರಿಗಳು ನಡೆದಿವೆ. ಮೊದಲನೆಯದಾಗಿ ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಹಲವು ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಚ್ಚರಿ ಉಂಟುಮಾಡಿದ್ದಾರೆ. ಹಾಗೆಯೇ ಅನಂತ್ ಕುಮಾರ್ ಹೆಗ್ಡೆ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದ್ದಾರೆ.

ಇನ್ನು ಕೇರಳ ಕಾಂಗ್ರೆಸ್ ನ ಸಂಸದ ಕೋಡಿಕುನ್ನಿಲ್ ಸುರೇಶ್‍ರವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಆತ ಹಿಂದಿಯಲ್ಲಿ ಸ್ವೀಕರಿಸಲು ಆರಂಭಿಸಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ಮೇಜು ಕುಟ್ಟಿ ಉತ್ತೇಜನ ನೀಡಿದ್ದಾರೆ. ಆಗ ಸಂಸದ ಕೋಡಿಕುನ್ನಿಲ್ ಸುರೇಶ್‍ರವರು ಖುಷಿಗೊಂಡಿದ್ದಾರೆ.

ಆದರೆ ಆ ಖುಷಿ ಬಹಳ ಹೊತ್ತು ಉಳಿಯಲಿಲ್ಲ. ಹೋಗಿ ಕೂತ ಕೂಡಲೇ ಸೋನಿಯಾ ಗಾಂಧಿಯವರು ಕರೆದು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಅಗತ್ಯವೇನಿತ್ತು? ಮಾತೃಭಾಷೆ ಮಲೆಯಾಳಂನಲ್ಲಿ ಯಾಕೆ ಸ್ವೀಕರಿಸಲಿಲ್ಲ ಎಂದು ಕೋಪದಿಂದ ಪ್ರಶ್ನಿಸಿದ್ದಾರೆ. ಆಗ ಸಂಸದ ಕೋಡಿಕುನ್ನಿಲ್ ಸುರೇಶ್‍ರವರ ಮುಖ ಬಾಡಿ ಹೋಗಿದೆ.

ಇನ್ನು ಅಸಾವುದ್ದೀನ್ ಓವೈಸಿಯವರು ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದಾಗ ಬಿಜೆಪಿಯ ಸಂಸದರು ಜೈ ಶ್ರೀರಾಮ್, ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಗದ್ದಲವೆಬ್ಬಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಓವೈಸಿ ಕೂಡ ಜೈ ಭೀಮ್, ಜೈ ಮಿಮ್, ತಕ್ಬೀರ್ ಅಲ್ಲಾಹು ಅಕ್ಬರ್, ಜೈ ಹಿಂದ್ ಎಂದು ಘೋಷಣೆ ಕೂಗಿದ್ದಾರೆ. ಇಷ್ಟರ ಮಟ್ಟಿಗೆ ಸಂಸತ್ತು ದ್ವೇಷದ ತಾಣವಾಗಿರುವುದು ಇದೇ ಮೊದಲು. ಈ ಮುಂಚೆ ಎಂದೂ ಈ ರೀತಿಯ ಘೋಷಣೆಗಳು ಕೇಳಿಬಂದಿರಲಿಲ್ಲ ಎಂಬುದನ್ನು ಗಮನಿಸಬೇಕು.

ಇದಾದ ನಂತರ ಅಮಿತ್ ಶಾ ರವರು ಕರ್ನಾಟಕದ 25ಜನ ಸಂಸದರಿಗೆ ಹಿಂದಿ ಕಲಿಯಲೇಬೇಕೆಂದು ಆದೇಶ ಮಾಡಿದ್ದಾರೆ. ಇವರೆಲ್ಲರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಅವರನ್ನು ಕೆರಳಿಸಿರಬೇಕು. ಈ ರೀತಿಯಾಗಿ ಇಡೀ ಸಂಸತ್ತು ಇಂದು ಹಲವು ವಿದ್ಯಾಮಾನಗಳಿಗೆ ಸಾಕ್ಷಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...