Homeಅಂಕಣಗಳುಹಿಂಸೆಯನ್ನು ವಿರೋಧಿಸೋಣ, ಜೊತೆಗೆ.....

ಹಿಂಸೆಯನ್ನು ವಿರೋಧಿಸೋಣ, ಜೊತೆಗೆ…..

- Advertisement -
- Advertisement -

ಗೌರಿ ಲಂಕೇಶ್
ನವೆಂಬರ್ 23, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಹಿಂಸೆ. ಈ ಪದ ವಾಸ್ತವದಲ್ಲಿ ಪಡೆಯುವ ನಾನಾ ಸ್ವರೂಪಗಳ ಬಗ್ಗೆ ಇತ್ತೀಚೆಗೆ ನಾನಾ ಚರ್ಚೆಗಳು ನಡೆದಿವೆ. ನಮ್ಮದು ಅಹಿಂಸಾವಾದವನ್ನು ನಂಬಿರುವ ದೇಶ ಎಂದೇ ಹೇಳಿಕೊಂಡು ಬಂದಿರುವ ಭಾರತದಲ್ಲಿ ಇವತ್ತಿಗೂ ದುರ್ಬಲರ ಮೇಲೆ ದೌರ್ಜನ್ಯ ನಡೆಯಿತ್ತಲೇ ಇದೆ. ಅದನ್ನೆಲ್ಲ ನಮ್ಮ ಸಮಾಜದ ಹುಳುಕುಗಳು ಎಂದು ಹೇಳುತ್ತಾ ಸುಮ್ಮನಿದ್ದವರೆಲ್ಲ, ಯಾವಾಗ ಹಲವರು ಆ ಹುಳುಕುಗಳನ್ನು ನಿವಾರಿಸಲು ಹಿಂಸೆಯೆನಿಸುವ ಮಾರ್ಗಕ್ಕಿಳಿದರೋ, ಆಗ ಈ ಹಿಂಸಾತ್ಮಕ ಮಾರ್ಗಕ್ಕೆ ನಮ್ಮ ಸಮಾಜದಲ್ಲಿ ಜಾಗವಿಲ್ಲ ಎಂದು ಸಿಡಿದೆದ್ದಿದ್ದಾರೆ.
ಹೌದು, ಹಿಂದೆಯನ್ನು ಎಂದಿಗೂ ಸಹಿಸಕೂಡದು. ಆದರೆ ನಮ್ಮ ಕಣ್ಣುಮುಂದೆಯೇ ನಮ್ಮ ಸುತ್ತಲು ನಡೆಯುತ್ತಿರುವ ಹಿಂಸೆಯ ಬಗ್ಗೆ ಯಾಕೆ ಎಲ್ಲರಿಗೂ ಜಾಣ ಕುರುಡು? ಇವತ್ತು ಪ್ರತಿನಿತ್ಯದ ಹಿಂಸೆ ಉದ್ಭವಿಸುತ್ತಿರುವುದು ಆ ಯುವಕರು ಹಿಡಿದಿರುವ ಬಂದೂಕುಗಳಿಂದಲ್ಲ, ಬದಲಾಗಿ ಸಮಾಜದ ಪುರುಷ ಪ್ರಧಾನ ಆಲೋಚನೆ, ಊಳಿಗಮಾನ್ಯ ವ್ಯವಸ್ಥೆ, ಉಳ್ಳವರ ಪರವಾಗಿರುವ ರಾಜಕೀಯ, ಜಾಗತೀಕರಣದಿಂದಾಗುತ್ತಿರುವ ಅನ್ಯಾಯ…. ಇಂಥದೆಲ್ಲ ವಿಭಿನ್ನ ಬಗೆಯ ಹಿಂಸೆಯ ರೂಪಗಳಿಂದ. ಇದು ನಮ್ಮ ಭಾರತೀಯ ಸಮಾಜಕ್ಕೆ ಮಾತ್ರ ಅನ್ವಯಿಸುವುದಿಲ್ಲ, ಬದಲಾಗಿ ಮೇಲೆ ಹೇಳಿದ ಅಂಶಗಳು ಜಾಗತಿಕ ಮಟ್ಟದಲ್ಲೂ ಹಿಂಸೆಯನ್ನು ಹುಟ್ಟುಹಾಕುತ್ತಿದೆ.
ಇತ್ತೀಚೆಗೆ ಪ್ಯಾರಿಸ್ ನಗರದಲ್ಲಿ ಒಂದು ಪ್ರಯೋಗವನ್ನು ನಡೆಸಲಾಯಿತು. ಎಲ್ಲ ರೀತಿಯಲ್ಲೂ ಸಮಾನವಾದ ಅರ್ಹತೆಗಳನ್ನುಳ್ಳ ಎರಡು ಅರ್ಜಿಗಳನ್ನು-ಒಂದರಲ್ಲಿ ಕ್ರಿಶ್ಚಿಯನ್ ಹೆಸರನ್ನು ಹಾಗೂ ಪ್ರತಿಷ್ಠಿತ ಬಡಾವಣೆಯ ವಿಳಾಸವನ್ನು, ಮತ್ತೊಂದರಲ್ಲಿ ಮುಸ್ಲಿಂ ಹೆಸರನ್ನು ಹಾಗೂ ಬಡ-ಮಧ್ಯಮ ವರ್ಗದವರು ವಾಸಿಸುವ ಏರಿಯಾದ ವಿಳಾಸವನ್ನು ನಮೂದಿಸಿ-ಕೆಲಸಕ್ಕೆ ಅಹ್ವಾನಿಸಿದ್ದ ಕಚೇರಿಗಳಿಗೆ ಕಳುಹಿಸಲಾಗಿತ್ತು. ಸ್ವರ್ಗದಂತಹ ಪ್ಯಾರಿಸ್‍ನಲ್ಲೂ ನರಕಗಳಿರುತ್ತವೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕ್ರಿಶ್ಚಿಯನ್ ಹೆಸರಿನ, ಪ್ರತಿಷ್ಠಿತ ಬಡಾವಣೆಯ ಅರ್ಜಿಗೆ ಐದು ಅಹ್ವಾನಗಳು ಬಂದರೆ, ಮುಸ್ಲಿಂ ಹೆಸರಿನ ಬಡವರ್ಗಗಳ ಏರಿಯಾದ ಅರ್ಜಿಗೆ ಒಂದೇ ಒಂದು ಆಹ್ವಾನ ಬಂದಿತ್ತು.
ಇಂಥಾ ಅಸಮಾನತೆಯೂ ಒಂದು ಬಗೆಯ ಹಿಂಸೆ. ಈ ಹಿಂಸೆಯನ್ನು ಅದೆಷ್ಟು ದಿನ ತಾನೆ ಅಹಿಂಸೆಯ ನೆಪದಿಂದ ಸಹಿಸಿಕೊಳ್ಳಲು ಸಾಧ್ಯ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದಾಗ ಪ್ಯಾರಿಸ್‍ನ ಬಿಸಿರಕ್ತದ ಹುಡುಗರು ಗಲಭೆಗಿಳಿದಿದ್ದಾರೆ. ಆ ಗಲಭೆಗಳನ್ನು ವಿರೋಧಿಸುವುದು ಎಷ್ಟು ಜರೂರೋ, ಆ ಗಲಭೆಗೆ ಕಾರಣವಾದ ನಮ್ಮ ಸಮಾಜದ ಅಂತರ್ಗತ ಹಿಂಸೆಗಳನ್ನು ಹೋಗಲಾಡಿಸಬೇಕಾದ್ದೂ ನಮ್ಮೆಲ್ಲರ ಮೇಲಿರುವ ಹೊಣೆ. ಇಲ್ಲವಾದಲ್ಲಿ ಹಿಂಸೆಯನ್ನು ವಿರೋಧಿಸುವ ಹಕ್ಕನ್ನೇ ನಾವೆಲ್ಲ ಕಳೆದುಕೊಂಡುಬಿಡುತ್ತೇವೆ.
ಅದಕ್ಕೆ ಮೊದಲೇ ಹೇಳಿದ್ದು. ‘ಹಿಂಸೆ’ ಎಂದ ಕೂಡಲೇ “ಸಹಿಸಕೂಡದು” ಎಂದು ಅರಚುವ ಬದಲಾಗಿ ಆ ಹಿಂಸೆಯ ಮೂಲ ಎಲ್ಲಿದೆ ಎಂದು ವಿಶ್ಲೇಷಿಸುವ ಅಗತ್ಯ ಇವತ್ತಿನ ತುರ್ತು ಎಂದು. ಏಕೆಂದರೆ ಪ್ಯಾರಿಸ್‍ಗೆ ಬೆಂಕಿ ಹಚ್ಚಿರುವವರು ಹಿಂಸಾವಾದಿಗಳೂ ಅಲ್ಲ, ಭಯೋತ್ಪಾದಕರೂ ಅಲ್ಲ, ಬದಲಾಗಿ ಅದು ಅಲ್ಲಿನ ವ್ಯವಸ್ಥೆಯಲ್ಲೇ ಅಡಗಿರುವ ಹಿಂಸೆಗೆ ಬಲಿಯಾದವರ ಪ್ರತಿಕ್ರಿಯೆ ಅಷ್ಟೇ. ಇಂತಹ ಪ್ರತಿಕ್ರಿಯೆಯನ್ನು ನಿಷೇಧಾಜ್ಞೆಯಿಂದಾಗಲಿ, ಸ್ಪೆಷಲ್ ಸ್ಕ್ವಾಡ್‍ಗಳಿಂದಾಗಲಿ, ಗೋಲಿಬಾರ್‍ನಿಂದಾಗಲಿ ತಡೆಯಲಾಗುವುದಿಲ್ಲ.
ಇದೆಲ್ಲ ನಾವು ಕೈಕಟ್ಟಿ ಕೂತಿರುವಷ್ಟು ಕಾಲ ನಡೆಯುತ್ತಲೇ ಇರುತ್ತೆ. ಜನರಿಗೆ ಅನ್ಯಾಯದ ಬಗ್ಗೆ ಅರಿವು ಮೂಡಿದ ನಂತರವೂ ಅವರು ಕೈಕಟ್ಟಿ ಕೂತಿರಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ. ಹಾಗೊಮ್ಮೆ ಅವರು ಪ್ಯಾರಿಸ್ ಯುವಕರಂತೆ ಕಾರ್ಯೋನ್ಮುಖರಾದರೆ ಅವರಿಗೆ ಆಗ ಅಹಿಂಸೆಯ ಪಾಠ ಬೋಧಿಸಲಾಗುವುದಿಲ್ಲ. ಆದ್ದರಿಂದಲೇ ಹಿಂಸೆಯ ವಿವಿಧ ವ್ಯಾಖ್ಯಾನಗಳಿಗಿಂತ ಅದರ ಬೇರು ಎಲ್ಲಿದೆ ಎಂದು ಹುಡುಕಬೇಕಿದೆ. ಈ ಪ್ರಶ್ನೆಯನ್ನು ಗಾಂಧೀಜಿಯವರೂ ನಿರಾಕರಿಸಿರಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...