Homeಕರೋನಾ ತಲ್ಲಣದೆಹಲಿಯ 17 ಜನರಿರುವ ಕುಟುಂಬ ಒಂದೇ ಮನೆಯಲ್ಲಿದ್ದು ಕೊರೊನಾವನ್ನು ಗೆದ್ದಿತು...!

ದೆಹಲಿಯ 17 ಜನರಿರುವ ಕುಟುಂಬ ಒಂದೇ ಮನೆಯಲ್ಲಿದ್ದು ಕೊರೊನಾವನ್ನು ಗೆದ್ದಿತು…!

ನಾವು ತುಂಬಾ ಜಾಗರೂಕರಾಗಿರುವುದರಿಂದ, ಕೊರೊನಾ ವೈರಸ್ ನಮಗೆ ಬರುವುದಿಲ್ಲ ಎಂದು ನಾವು ವಿಶ್ವಾಸದಿಂದ ಇದ್ದೆವು, ಆದರೆ ಒಂದೊಂದಾಗಿ, ಎಲ್ಲರಿಗೂ ಜ್ವರ ಪ್ರಾರಂಭವಾಯಿತು ಎಂದು ಮೀನಾ ದೇವಿ ಹೇಳುತ್ತಾರೆ.

- Advertisement -
- Advertisement -

ದೆಹಲಿಯ 17 ಜನರಿರುವ ಅವಿಭಜಿತ ಕುಟುಂಬವೊಂದು ಒಂದೇ ಮನೆಯಲ್ಲಿದ್ದು ಕೊರೊನಾ ಸೋಂಕಿನ ವಿರುದ್ದ ಗೆದ್ದಿದ್ದಾರೆ.

ಕುಟುಂಬದ 3  ತಿಂಗಳ ಮಗುವಿನಿಂದ ಹಿಡಿದು 90  ವರ್ಷದ ವರೆಗಿನ ಒಟ್ಟು 17 ಮಂದಿ ಸದಸ್ಯರಲ್ಲಿ ಹೆಚ್ಚನವರು ಕೊರೊನಾ ಪಾಸಿಟಿವ್ ಆಗಿದ್ದರೂ, ಯಾವುದೇ ಜೀವ ಹಾನಿಯಾಗದೇ ಕೊರೊನಾ ವಿರುದ್ದ ಗೆದ್ದಿದ್ದಾರೆ.

ಕುಟುಂಬದ ಜನರಲ್ಲಿ ಒಬ್ಬರು ಕೊರೊನಾ ಪಾಸಿಟಿವ್ ಆದಾಗ ಯಾರನ್ನಾದರೂ ಕಳೆದು ಕೊಳ್ಳುತ್ತೇವೆ ಎಂದು ನಮಗೆ ಖಚಿತವಾಗಿತ್ತು ಎಂದು ಕುಟುಂಬದ ಸದಸ್ಯರಾದ ಮುಕುಲ್ ಗಾರ್ಗ್ ಹೇಳುತ್ತಾರೆ.

ಮಾರ್ಚ್‌ನಲ್ಲಿ ಲಾಕ್‌ಡೌನ್ ಆದಾಗ ಕುಟುಂಬದ ಸದಸ್ಯರು ಎಚ್ಚರಿಕೆಯನ್ನು ಪಾಲಿಸಿದ್ದರೂ ಕುಟುಂಬದ 11 ಸದಸ್ಯರಲ್ಲಿ ಕೊರೊನಾ ಸೋಂಕು ಇರುವುದು ದೃಡಪಟ್ಟಿತು. ಅವರಲ್ಲಿ ಮುಕುಲ್ ಗಾರ್ಗ್‌ ಅವರ 90 ವರ್ಷದ ಹಾಸಿಗೆ ಹಿಡಿದ ಅಜ್ಜ; 87 ವರ್ಷದ ಅಜ್ಜಿ; ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ 62 ವರ್ಷದ ತಂದೆ ಹಾಗೂ 60 ವರ್ಷದ ಚಿಕ್ಕಪ್ಪ ಸೇರಿದ್ದರು.

“ನಾವು ತುಂಬಾ ಜಾಗರೂಕರಾಗಿರುವುದರಿಂದ, ಕೊರೊನಾ ವೈರಸ್ ನಮಗೆ ಬರುವುದಿಲ್ಲ ಎಂದು ವಿಶ್ವಾಸದಿಂದ ಇದ್ದೆವು, ಆದರೆ ಒಂದೊಂದಾಗಿ, ಎಲ್ಲರಿಗೂ ಜ್ವರ ಪ್ರಾರಂಭವಾಯಿತು.” ಎಂದು ಮುಕುಲ್ ಅವರ ತಾಯಿ ಮೀನಾ ದೇವಿ ಹೇಳುತ್ತಾರೆ.

ಜ್ವರವೂ ಹೊರಟು ಹೋಗುತ್ತದೆ ಎಂದು ಭಾವಸಿ ಅವರು ಪರೀಕ್ಷೆಗೆ ಹಿಂಜರಿದಿದ್ದರು, ಅಲ್ಲದೆ ಇದೆ ವೇಳೆ ಕೊರೊನಾ ಪಾಸಿಟಿವ್ ಎಂದ ತಿಳಿದು ಬಂದರೆ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗುತ್ತಾರೆ ಎಂದು ಅವರೆಲ್ಲರೂ ಹೆದರಿದ್ದರಿಂದ ಮನೆಯ ಒಳಗಡೆಯೆ ಸಾಂಸ್ಥಿಕ ಸಂಪರ್ಕತಡೆಯನ್ನು ಮಾಡಿದ್ದರು. ಕುಟುಂಬದ ಪ್ರತಿಯೊಬ್ಬರೂ ತಮ್ಮ ಕೋಣೆಗಳಲ್ಲಿ ತಮ್ಮ ಮಹಡಿಗಳಲ್ಲೇ ಪ್ರತ್ಯೇಕವಾಗಿರಲು ಪ್ರಾರಂಭಿಸಿದ್ದರು.

ಆದರೆ ಮುಕುಲ್ ಚಿಕ್ಕಮ್ಮ ಅನಿತಾ ಅವರಿಗೆ ಐದು ದಿನಗಳ ಜ್ವರದ ನಂತರ ಉಸಿರಾಡಲು ತೊಂದರೆಯಾಗಿದ್ದರಿಂದ ಅವರು ಕೊರೊನಾ ವೈರಸ್ ಪರೀಕ್ಷೆ ನಡೆಸಿದ್ದರು. ಫಲಿತಾಂಶವು ಕೊರೊನಾ ಪಾಸಿಟಿವ್ ಆಗಿತ್ತು. ನಂತರ ಅನಿತಾ ಸ್ಥಿತಿ ಹದಗೆಟ್ಟಾಗ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ವಿಶೇಷವೇನೆಂದರೆ ಕುಟುಂಬದ 90 ವರ್ಷದ ಶ್ಯಾಮ್ಲಾಲ್ ಅವರು ಕೊರೊನಾ ಪಾಸಿಟಿವ್ ಆಗಿದ್ದರೂ ಅವರಲ್ಲಿ ಯಾವುದೇ ರೋಗಲಕ್ಷಣಗಳು ಇರಲಿಲ್ಲ. ಅವರ 87 ವರ್ಷದ ಬೀನಾಗೆ ಜ್ವರ, ಕೆಮ್ಮು ಮತ್ತು ತಲೆನೋವು ಒಂದು ತಿಂಗಳು ಮುಂದುವರೆಯಿತು, ಆದರೆ ಅವರನ್ನು ಆಸ್ಪತ್ರೆಗೆ ದಾಖಸಿಸುವ ಹಾಗೆ ಪರಿಸ್ಥಿತಿ ಹದಗೆಡಲಿಲ್ಲ. 6 ವರ್ಷದೊಳಗಿನ ನಾಲ್ಕು ಮಕ್ಕಳಿಗೆ ಕೊರೊನಾ ಸೋಂಕಿರಲಿಲ್ಲ.

ಮುಕುಲ್ ಅವರ ತಾಯಿ ಮೀನಾಗೆ ಕೇವಲ ಜ್ವರ, ಕೆಮ್ಮು, ತಲೆನೋವು ಮತ್ತು ದೇಹದ ಭಾಗಗಳ ನೋವುಗಳು ಒಳಗೊಂಡತ್ತು, ಅದು ಸುಮಾರು ಎರಡು ವಾರಗಳ ಕಾಲ ಇತ್ತು ಎಂದು ತಿಳಿದುಬಂದಿದೆ.

ಮುಕುಲ್ ಅವರ ಚಿಕ್ಕಮ್ಮ ಅನಿತಾ ಅವರು ಆಸ್ಪತ್ರೆಯಲ್ಲಿ 10 ದಿನಗಳಿದ್ದು ಮನೆಗೆ ಮರಳಿದರು. ಅಲ್ಲಿ ಅವರು ಆಮ್ಲಜನಕ ಚಿಕಿತ್ಸೆಯನ್ನು ಪಡೆದಿದ್ದರು.

ಕುಟುಂಬವು ಮೊದಲಿಗೆ ಹೇಗೆ ಸೋಂಕಿಗೆ ಒಳಗಾಯಿತು ಎಂಬುದು ಇನ್ನೂ ನಿಗೂಡವಾಗಿದೆ. ದಿನಸಿ ವಸ್ತುಗಳನ್ನು ಖರೀದಿಸುವಾಗ ಮುಕುಲ್ ಅವರ ಚಿಕ್ಕಪ್ಪ ವೈರಸ್‌ಗೆ ತುತ್ತಾಗಿರಬಹುದು ಎಂದು ಅವರು ಊಹಿಸಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾದ ಸಮಯದಲ್ಲಿ, ಆ ಪ್ರದೇಶದಲ್ಲಿ ಬೇರೆ ಯಾವುದೇ ಪ್ರಕರಣಗಳು ಇರಲಿಲ್ಲ ಎನ್ನಲಾಗಿದೆ.

ಜೂನ್ ಆರಂಭದಲ್ಲಿ, ಮನೆಯ ಎಲ್ಲರೂ ಕೊರೊನಾ ನೆಗೆಟಿವ್ ಪರೀಕ್ಷಿಸಿದ ನಂತರ ಹಿಂದಿನಂತೆ ಮತ್ತೇ ಒಟ್ಟಿಗೆ ಕೂತು ಊಟ ಮಾಡುವಂತಾಯಿತು ಎಂದು ಕುಟುಂಬದ ಸದಸ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ.


ಓದಿ: ದೆಹಲಿಯಲ್ಲಿ 1 ಲಕ್ಷ ದಾಟಿದ ಕೊರೊನಾ ಪ್ರಕರಣಗಳು: ಭಯಪಡಬೇಡಿ ಎಂದ ಕೇಜ್ರಿವಾಲ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...