Homeದಿಟನಾಗರಫ್ಯಾಕ್ಟ್‌ಚೆಕ್: ತನಿಷ್ಕ್ ಜಾಹೀರಾತಿನ ವಿರುದ್ಧ ದೆಹಲಿಯ ಜಾಮಾ ಮಸೀದಿ ಫತ್ವಾ ಹೊರಡಿಸಿದೆಯೇ?

ಫ್ಯಾಕ್ಟ್‌ಚೆಕ್: ತನಿಷ್ಕ್ ಜಾಹೀರಾತಿನ ವಿರುದ್ಧ ದೆಹಲಿಯ ಜಾಮಾ ಮಸೀದಿ ಫತ್ವಾ ಹೊರಡಿಸಿದೆಯೇ?

ಜಾಮಾ ಮಸೀದಿಯು ತನಿಷ್ಕ್ ವಿರುದ್ಧ ಫತ್ವಾ ಹೊರಡಿಸಿದೆ. ಯಾಕೆಂದರೆ ಮುಸ್ಲಿಮರಲ್ಲಿ ಈ 'ಸೀಮಂತ' ಸಂಪ್ರದಾಯ ಇಲ್ಲ. ತನಿಷ್ಕ್, ಸದ್ದಿಲ್ಲದೇ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಜೊತೆಗೆ ಮುಸ್ಲಿಂ ಧರ್ಮವನ್ನೂ ಹಾಳುಮಾಡುತ್ತಿದೆ ಎಂದು ಫೆಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

- Advertisement -
- Advertisement -

ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿದ್ದ ತನಿಷ್ಕ್ ಜಾಹಿರಾತನ್ನು ಅದರ ನಿರ್ಮಾಣದ ಆಭರಣ ಕಂಪನಿಯು ಹಿಂತೆಗೆದುಕೊಂಡಿತ್ತು. ಇದಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ದೆಹಲಿಯ ಜಾಮಾ ಮಸೀದಿಯ ಮುಖ್ಯಸ್ಥ ಶಾಹಿ ಇಮಾಮ್ ಅಹ್ಮದ್ ಬುಖಾರಿ ಈ ಜಾಹಿರಾತಿನ ವಿರುದ್ಧ ಫತ್ವಾ ಹೊರಡಿಸಲಿದ್ದಾರೆ ಎಂದು ಕೆಲವರು ಪೋಸ್ಟ್‌ಗಳನ್ನು‌ ಹಮಚಿಕೊಂಡಿದ್ದಾರೆ.

ರಾಹುಲ್ ಶರ್ಮಾ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, “ಜಾಮಾ ಮಸೀದಿಯು ತನಿಷ್ಕ್ ವಿರುದ್ಧ ಫತ್ವಾ ಹೊರಡಿಸಿದೆ. ಯಾಕೆಂದರೆ ಈ ಜಾಹಿರಾತಿನಲ್ಲಿ ಹಿಂದೂ ಸಂಪ್ರದಾಯದ ‘ಸೀಮಂತ’ ಮಾಡುವ ಪದ್ದತಿಯನ್ನು ತೋರಿಸಲಾಗಿದೆ. ಆದರೆ ಮುಸ್ಲಿಮರಲ್ಲಿ ಈ ಸಂಪ್ರದಾಯ ಇಲ್ಲ. ತನಿಷ್ಕ್, ಸದ್ದಿಲ್ಲದೇ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಜೊತೆಗೆ ಮುಸ್ಲಿಂ ಧರ್ಮವನ್ನೂ ಹಾಳುಮಾಡುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಹರಡುವ ಸುಳ್ಳು ಸುದ್ದಿ, ವಿಡಿಯೋ ಹಂಚಿಕೊಳ್ಳಲಾಗುತ್ತಿದೆ!

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: TMC ಕಾರ್ಯಕರ್ತರಿಂದ BJP ಸದಸ್ಯನ ಕೊಲೆ ಎಂಬ ಈ ಚಿತ್ರ 2018ರದ್ದು!

ಈ ಫೊಸ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೊಡಬಹುದು.

ಸಂಗೀತ ವಾರಿಯರ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, “ತನಿಷ್ಕ್ ಜಾಹೀರಾತನ್ನು ಹೊಗಳಿದ್ದ SICKulars/Libtards/Commies ಈಗ ಫೆವಿಕಾಲ್ ಹಾಕಿಕೊಂಡಿದ್ದಾರೆ. ತನಿಷ್ಕ್ ಜಾಹಿರಾತಿನ ವಿರುದ್ಧ ಜಾಮಾ ಮಸೀದಿ ಫತ್ವಾ ಹೊರಡಿಸಿದ್ದು, ಈಗ ಇವರ ಪರಿಸ್ಥಿತಿ, ಮನೆಗೂ ಸಲ್ಲುವುದಿಲ್ಲ; ಸ್ಮಶಾನಕ್ಕೂ ಸಲ್ಲುವುದಿಲ್ಲ ಎಂಬಂತಾಗಿದೆ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಯುವತಿಯ ಅಪಹರಣದ ವೀಡಿಯೋ ವೈರಲ್; ಇದು ಉತ್ತರಪ್ರದೇಶದ್ದೇ?

ಹೀಗೆ ನೂರಾರು ಜನರು ಇದೇ ಹೇಳಿಕೆಯೊಂದಿಗೆ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್:

ಇತ್ತೀಚಿನ ಯಾವುದೇ ಸುದ್ದಿ ವರದಿಗಳಲ್ಲಿ ಇದರ ಮಾಹಿತಿಯ ಯಾವುದೇ ಉಲ್ಲೇಖಗಳಿಲ್ಲ. ಅದಾಗ್ಯೂ, ದಿ ಕ್ವಿಂಟ್ ಜೊತೆ ಮಾತನಾಡಿದ ದೆಹಲಿಯ ಜಾಮಾ ಮಸೀದಿಯ ವೈಸ್ ಶಾಹಿ ಇಮಾಮ್ ಸೈಯದ್ ಶಬನ್ ಬುಖಾರಿ, ತನೀಶ್ಕ್ ಜಾಹೀರಾತಿನ ವಿರುದ್ಧ ಯಾವುದೇ ಫತ್ವಾ ನೀಡಿಲ್ಲ, ಇದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಹಾಗಾಗಿ, ದೆಹಲಿಯ ಜಾಮಾ ಮಸೀದಿ ತನಿಷ್ಕ್ ಜಾಹೀರಾತಿನ ವಿರುದ್ಧ ಫತ್ವಾ ನೀಡಲಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: 13 ವರ್ಷದ ಬಾಲಕಿಯನ್ನು ಮುಸ್ಲಿಂ ವ್ಯಕ್ತಿ ಅತ್ಯಾಚಾರ ಮಾಡಿ ಸುಟ್ಟಿದ್ದು ಸುಳ್ಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...