Homeಅಂತರಾಷ್ಟ್ರೀಯಚಿಲಿ: ಭುಗಿಲೆದ್ದ ಪ್ರತಿಭಟನೆ; ಪೊಲೀಸ್ ಪ್ರಧಾನ ಕಚೇರಿ ಸೇರಿದಂತೆ 2 ಚರ್ಚುಗಳಿಗೆ ಬೆಂಕಿ!

ಚಿಲಿ: ಭುಗಿಲೆದ್ದ ಪ್ರತಿಭಟನೆ; ಪೊಲೀಸ್ ಪ್ರಧಾನ ಕಚೇರಿ ಸೇರಿದಂತೆ 2 ಚರ್ಚುಗಳಿಗೆ ಬೆಂಕಿ!

- Advertisement -
- Advertisement -

ಚಿಲಿ ರಾಜಧಾನಿ ಸ್ಯಾಂಟಿಯಾಗೋದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಪ್ರತಿಭಟನಾಕಾರರು 19 ನೇ ಶತಮಾನದ ಹಳೆಯ ಚರ್ಚು ಸೇರಿದಂತೆ ಎರಡು ಚರ್ಚುಗಳನ್ನು ಸುಟ್ಟುಹಾಕಿದ್ದಾರೆ. ಭಾನುವಾರ ಶಾಂತಿಯುತವಾಗಿ ರ್‍ಯಾಲಿಗಳು ನಡೆದಿದ್ದು, ನಂತರ ಈ ಪ್ರತಿಭಟನೆ ಗಲಭೆಗೆ ತಿರುಗಿದೆ. ಕಳೆದ ವರ್ಷ ನಡೆದ ಪ್ರತಿಭಟನೆಯಲ್ಲಿ 30 ಜನರು ಮೃತಪಟ್ಟಿದ್ದು ಸಾವಿರಾರು ಜನರು ಗಾಯಗೊಂಡಿದ್ದರು. ಈಗ ಈ ಪ್ರತಿಭಟನೆಯ ವರ್ಷಾಚರಣೆಯಲ್ಲಿ ಮತ್ತೆ ಗಲಭೆ ಭುಗಿಲೆದ್ದಿದೆ.

2019 ರ ಪ್ರತಿಭಟನೆಯ ಪ್ರಮುಖ ಬೇಡಿಕೆಯಾದ ದೇಶದ ಸರ್ವಾಧಿಕಾರ-ಯುಗದ ಸಂವಿಧಾನವನ್ನು ರದ್ದುಗೊಳಿಸಬೇಕೆ ಎಂಬ ಜನಾಭಿಪ್ರಾಯ ಸಂಗ್ರಹಣೆಯಲ್ಲಿ “ಹೌದು” ಎಂದು ಮತ ಚಲಾಯಿಸುಂತೆ ಕರೆ ಕೊಡುವ ಘೋಷಣಾ ಪತ್ರವನ್ನು ಪ್ರತಿಭಟನಾಗಾರರು ಹಿಡಿದಿದ್ದರು. ಅಕ್ಟೋಬರ್ 25 ರ ರಂದು ಅಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ.

ಇದನ್ನೂ ಓದಿ: ಬೊಲಿವಿಯಾ ಚುನಾವಣೆ: ಅಮೆರಿಕಾ ಪ್ರೇರಿತ ದಂಗೆಯ ಹೊರತಾಗಿಯೂ ಎಡಪಕ್ಷಕ್ಕೆ ಭರ್ಜರಿ ಜಯ!

PC: AFP

ಪ್ರತಿಭಟನೆಗಳು ಆರಂಭದಲ್ಲಿ ಶಾಂತಿಯುತವಾಗಿದ್ದರೂ ನಂತರ ಹಿಂಸಾಚಾರ ಘಟನೆಗಳು ನಡೆದವು, ಸೂಪರ್‌ರ್ಮಾರ್ಕೆಟ್‌‌ಗಳನ್ನು ಲೂಟಿ ಮಾಡುವುದು ಸೇರಿದಂತೆ ರಾಜಧಾನಿಯಾದ್ಯಂತ ಪೊಲೀಸರೊಂದಿಗೆ ಘರ್ಷಣೆಗಳು ಸಂಭವಿಸಿದವು.

ಹಿಂಸಾಚಾರಗಳು ಭುಗಿಲೇಳುವ ಮೊದಲು ಮಾತನಾಡಿದ ಆಂತರಿಕ ವ್ಯವಹಾರಗಳ ಸಚಿವ ವಿಕ್ಟರ್ ಪೆರೆಜ್ ಮಾತನಾಡಿ, ಶಾಂತಿಯುತ ರ್‍ಯಾಲಿಗಳನ್ನು ಶ್ಲಾಘಿಸಿದ್ದರು. ಮುಂಬರುವ ಅಕ್ಟೋಬರ್ 25 ರ ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕೆಂದು ಅವರು ಚಿಲಿಯನ್ನರಿಗೆ ಕರೆ ನೀಡಿದ್ದರು.

PC: Getty

“ಹಿಂಸಾಚಾರ ನಡೆಸುವವರು ಚಿಲಿಯ ಸಮಸ್ಯೆಗಳನ್ನು ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಪರಿಹರಿಸುವುದನ್ನು ಬಯಸುವುದಿಲ್ಲ” ಎಂದು ಪೆರೆಜ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದು, ಭಾನುವಾರ ನಡೆಯುವ ಜನಾಭಿಪ್ರಾಯ ಸಂಗ್ರಹಣಾ ಸಮಯದಲ್ಲಿ ಕಾನೂನು ಉಲ್ಲಂಘಿಸಿದರೆ ಶಿಕ್ಷೆ ವಿಧಿಸುವುದಾಗಿ ಹೇಳಿದರು.

ಇದನ್ನೂ ಓದಿ: ಸೋಶಿಯಲಿಸಂ-ಕಮ್ಯುನಿಸಂ ವಿರುದ್ಧದ ಹೋರಾಟದಲ್ಲಿ ಭಾರತ-ಅಮೇರಿಕಾ ಒಂದಾಗಬೇಕು: Jr. ಟ್ರಂಪ್

ಮುಂಜಾನೆ ಉದ್ರಿಕ್ತ ಜನರ ಗುಂಪು ಕಮ್ಯುನಿಸ್ಟ್ ಪಕ್ಷದ ಮೇಯರ್‌ಗೆ ಬೆದರಿಕೆ ಹಾಕಿದ್ದರು. ನಂತರ ಮುಖವಾಡ ಧರಿಸಿದ ವ್ಯಕ್ತಿಗಳು ಪೊಲೀಸ್ ಪ್ರಧಾನ ಕಚೇರಿ ಮತ್ತು ಚರ್ಚ್‌ಗೆ ಬೆಂಕಿ ಹಚ್ಚಿದರು. ಈ ಅಶಾಂತಿಯಿಂದಾಗಿ 15 ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಕಳೆದ ವರ್ಷ ಅಕ್ಟೋಬರ್ 18 ರಿಂದ ಪ್ರಾರಂಭವಾದ ಪ್ರತಿಭಟನೆಗಳು ಡಿಸೆಂಬರ್ ಮಧ್ಯಭಾಗದವರೆಗೆ ಚಿಲಿ ದೇಶಾದ್ಯಂತ ಪಿಂಚಣಿ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ತರಲು ಒತ್ತಾಯಿಸುತ್ತಿದ್ದವು. ಅಂದು ನಡೆದಿದ್ದ ಗಲಭೆ ಮತ್ತು ಲೂಟಿಯಿಂದಾಗಿ ದೇಶದ ವ್ಯವಹಾರಗಳು ಮತ್ತು ಮೂಲಸೌಕರ್ಯಗಳಿಗೆ ಶತಕೋಟಿ ಡಾಲರ್ ನಷ್ಟ ಉಂಟಾಗಿತ್ತು.

ಸ್ಯಾಂಟಿಯಾಗೊದಲ್ಲಿ ನಡೆದ ಭಾನುವಾರದ ರ್‍ಯಾಲಿಯಲ್ಲಿ ಸಂಜೆ 6 ರ ಹೊತ್ತಿಗೆ ಸುಮಾರು 25 ಸಾವಿರ ಜನರು ಸೇರಿದ್ದರು ಎಂದು ಪೊಲೀಸರು ಅಂದಾಜಿಸಿದ್ದಾರೆ. ಇದು 2019 ರ ಪ್ರತಿಭಟನೆಗಿಂತ ಚಿಕ್ಕ ಪ್ರತಿಭಟನೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ಚುನಾವಣೆ: ಪ್ರಧಾನಿ ಜಸಿಂಡಾ ಅರ್ಡೆರ್ನ್‌ರ ಲೇಬರ್ ಪಕ್ಷಕ್ಕೆ ಭರ್ಜರಿ ಜಯ!

ಕಳೆದ ಕೆಲವು ದಿನಗಳಿಂದ ಸಣ್ಣಪುಟ್ಟ ಪ್ರತಿಭಟನೆಗಳು ಸೇರಿದಂತೆ ಹಲವು ಹಿಂಸಾಚಾರಗಳು ಚಿಲಿಯಲ್ಲಿ ಪ್ರಾರಂಭವಾಗಿದೆ. 60 ಲಕ್ಷ ಜನಸಂಖ್ಯೆಯಿರುವ ರಾಜಧಾನಿಯು ಕೊರೊನಾದಿಂದ ತಿಂಗಳುಗಳ ಕಾಲ ಲಾಕ್‌ಡೌನ್ ಆಗಿತ್ತು. ಭಾನುವಾರದ ಪ್ರತಿಭಟನೆಯಲ್ಲಿ ಹೆಚ್ಚಿನ ಪ್ರತಿಭಟನಾಕಾರರು ಮುಖವಾಡಗಳನ್ನು ಧರಿಸಿದ್ದರು ಎಂದು ಟೆಲಿಗ್ರಾಫ್ ಬರೆದಿದೆ.

ಇದನ್ನೂ ಓದಿ: ಪೋಲೆಂಡ್: 2ನೇ ಮಹಾಯುದ್ಧದ ಅತಿದೊಡ್ಡ ಬಾಂಬ್ ಸ್ಫೋಟ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...