Homeಅಂತರಾಷ್ಟ್ರೀಯಲಸಿಕೆ ಖರೀದಿಗೆ ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಮುಂದಾದ ಭಾರತ: ಇಂಧನ ತೆರಿಗೆ ಎಲ್ಲಿಗೆ ಹೋಯಿತು?

ಲಸಿಕೆ ಖರೀದಿಗೆ ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಮುಂದಾದ ಭಾರತ: ಇಂಧನ ತೆರಿಗೆ ಎಲ್ಲಿಗೆ ಹೋಯಿತು?

ಉಚಿತ ಲಸಿಕೆ ನೀಡುವ ಕಾರಣಕ್ಕಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸಚಿವರ ಹೇಳಿಕೆ ನೀಡಿದ್ದರು.

- Advertisement -
- Advertisement -

ಸುಮಾರು 66.7 ಕೋಟಿ ಕೋವಿಡ್ -19 ಲಸಿಕೆಗಳನ್ನು ಖರೀದಿಸಲು ಏಷ್ಯಾದ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳಿಂದ ಭಾರತವು 2 ಬಿಲಿಯನ್ ಡಾಲರ್ ಸಾಲ ಪಡೆಯಲು ಅರ್ಜಿ ಸಲ್ಲಿಸಿದೆ.

ಬೀಜಿಂಗ್ ಮೂಲದ ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (AIIB) ಮತ್ತು ಮನಿಲಾದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಶೀಘ್ರದಲ್ಲೇ ಭಾರತದ ಸಾಲದ ವಿನಂತಿಯನ್ನು ಪರಿಷ್ಕರಿಸಲಿವೆ ಎನ್ನಲಾಗಿದೆ. ಈ ಹಣವನ್ನು 66.7 ಕೋಟಿ ಕೋವಿಡ್ -19 ಡೋಸ್‌ಗಳನ್ನು ಖರೀದಿಸಲು ಬಳಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ADB $1.5 ಶತಕೋಟಿ ಮತ್ತು AIIB ಸುಮಾರು $500 ಮಿಲಿಯನ್ ಸಾಲ ನೀಡುವ ನಿರೀಕ್ಷೆಯಿದೆ. ಭಾರತ ಸರ್ಕಾರವು ಈ ಯೋಜನೆಗಾಗಿ ಸುಮಾರು $58 ಮಿಲಿಯನ್ ಅನ್ನು ಹೂಡಿಕೆ ಮಾಡಲಿದೆ ಎನ್ನಲಾಗಿದೆ.

ಉಚಿತ ಲಸಿಕೆಗೆ ಬೆಲೆ ಏರಿಕೆ?

ಭಾರತ ಸರ್ಕಾರವು ಉಚಿತ ಲಸಿಕೆ ಮತ್ತು ಉಚಿತ ಪಡಿತರ ನೀಡುವ ಕಾರಣಕ್ಕಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ ಎಂದು ಹಲವು ಬಿಜೆಪಿ ಮುಖಂಡರು ಮತ್ತು ಕೇಂದ್ರ ಸಚಿವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದರು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅಸ್ಸಾಂನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ಇಂಧನ ಬೆಲೆಗಳಲ್ಲಿ ಹೆಚ್ಚಳವಾಗಿಲ್ಲ. ಆದರೆ ತೆರಿಗೆಗಳು ಹೆಚ್ಚಿವೆ. ಈ ತೆರಿಗೆಯ ಹಣವನ್ನು ಉಚಿತ ಕೋವಿಡ್ ಲಸಿಕೆ ನೀಡಲು ಸಹಾಯಧನವಾಗಿ ಬಳಸಲಾಗಿದೆ. ನೀವು ಉಚಿತ ಲಸಿಕೆ ಪಡೆದಿರಬೇಕು ಅಲ್ಲವೇ? ಅದಕ್ಕೆ ಹಣ ಎಲ್ಲಿಂದ ಬಂದಿದೆ?” ಎಂದು ಪ್ರಶ್ನಿಸಿದ್ದರು.

ಈ ಹಿಂದೆ ಕೇಂದ್ರ ಪೆಟ್ರೋಲಿಯಂ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್‌ ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು. ಉಚಿತ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳು ಜಾರಿಯಲ್ಲಿರುವುದರಿಂದ ಇಂಧನಗಳ ಮೇಲಿನ ತೆರಿಗೆ ಹೆಚ್ಚು ಮಾಡಲಾಗಿದೆ. ಹಾಗಾಗಿ ಪೆಟ್ರೋಲ್ – ಡೀಸೆಲ್ ಬೆಲೆ ಇಳಿಸಲು ಸಾಧ್ಯವಿಲ್ಲ ಎಂದಿದ್ದರು. ಜುಲೈ 27 ರಂದು ಮಾತನಾಡಿ “2020-21ರ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್‌ನಿಂದಾಗಿ 3.4 ಲಕ್ಷ ಕೋಟಿ ರೂಗಳನ್ನು ಗಳಿಸಿದ್ದು, ಅದರ ಬಹುಪಾಲು ಹಣವನ್ನು ಉಚಿತ ಲಸಿಕೆ ಮತ್ತು ಕೋವಿಡ್ ಪರಿಹಾರ ಕಾರ್ಯಗಳಿಗಾಗಿ ಬಳಸಲಾಗಿದೆ” ಎಂದಿದ್ದರು.

ಲಸಿಕೆಗೆಂದೇ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿರುವಾಗ ಮತ್ತೆ ವಿದೇಶಿ ಬ್ಯಾಂಕುಗಳಿಂದ ಸಾಲ ಮಾಡುವ ಅಗತ್ಯವೇನಿದೆ? ಇಂಧನ ತೆರಿಗೆ ಎಲ್ಲಿಗೆ ಹೋಯಿತು? ವಿದೇಶಿ ಸಾಲ ಸಿಗುವುದಿದ್ದರೆ ಬೆಲೆ ಏಕೆ ಇಳಿಸಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.

ಇಂಧನ ತೆರಿಗೆ ಸಂಗ್ರಹ ಎಷ್ಟು?

2021 ರ ಈ ವರ್ಷದ ಎಪ್ರಿಲ್‌ನಿಂದ-ಜುಲೈವರೆಗಿನ ನಾಲ್ಕು ತಿಂಗಳಲ್ಲೇ ಸರ್ಕಾರ ಸಂಗ್ರಹಿಸಿದ ಅಬಕಾರಿ ಸುಂಕ 1 ಲಕ್ಷ ಕೋಟಿಗಿಂತ ಹೆಚ್ಚು! ಅದಕ್ಕೂ ಮುಂಚಿನ ವರ್ಷ 3.4 ಲಕ್ಷ ಕೋಟಿ ರೂ ಸಂಗ್ರಹಿಸಿದ್ದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಅಲ್ಲಿಗೆ ಒಂದು ವರ್ಷ ನಾಲ್ಕು ತಿಂಗಳಿನಲ್ಲಿಯೇ  4.4 ಲಕ್ಷ ಕೋಟಿ ರೂ ಗೂ ಹೆಚ್ಚು ಸಂಗ್ರಹವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ

ಕೇಂದ್ರ ಸರಕಾರ ವ್ಯಾಕ್ಸೀನಿಗಾಗಿ ಅಂತರಾಷ್ಟ್ರೀಯ ಬ್ಯಾಂಕುಗಳಾದ ಬೀಜಿಂಗ್‍ನ Asian Infrastructure Investment Bank (AIIB) ಹಾಗೂ Asian Development (ADB), ಫಿಲಿಪೈನ್ಸ್ ನಿಂದ Rs 15000 ಕೋಟಿ ಸಾಲ ತೆಗೆದುಕೊಳ್ಳುತ್ತಿದೆ, ಅದೂ ಕೋವಿಡ್ ವ್ಯಾಕ್ಸೀನಿಗಾಗಿ. ಈ ಸಾಲದಲ್ಲಿ ADB ಫಿಲಿಪೈನ್ಸ್ ಕೊಡುತ್ತಿರುವುದು Rs 11500 ಕೋಟಿಯಾದರೆ, ಬೀಜಿಂಗ್‍ನ AIIB ಯ ಪಾಲು Rs 3500 ಕೋಟಿ.

ಕಳೆದ ವರುಷ ಅದೇನೋ ಚೀನಾದಿಂದ ಆಮದು ಮಾಡಲ್ಲ, ಅವರೊಡನೆ ಯಾಪಾರ ಮಾಡಲ್ಲ, ಅವರ App ಗಳನ್ನು ಬಂದ್ ಮಾಡ್ತೀವಿ, ಚೀನಾದ ಪಟಾಕಿ, ರಾಕಿ ಇಲ್ಲ ಎಂದೆಲ್ಲಾ ಕೆಲವರು ಬೀದಿ-ಬೀದಿಗಳಲ್ಲಿ ಬೊಗಳಿದ್ದೇ ಬಂತು. 2020-2021 ರಲ್ಲಿ ಭಾರತ-ಚೀನಾದ ನಡುವಿನ ವ್ಯಾಪಾರ ಇತಿಹಾಸದಲ್ಲೇ ಗರಿಷ್ಟ ಮಟ್ಟದ್ದೆಂದು ಕೇಂದ್ರ ಸರಕಾರದ ವರದಿಗಳು ಹೇಳುತ್ತಿವೆ.

ವ್ಯಾಕೀನಿಗಾಗಿ ಸರಕಾರ ಸಾಲ ತೆಗೆದುಕೊಳ್ಳುತ್ತಿದೆಯಾದರೆ, ತೈಲ, ಗ್ಯಾಸ್‍ನ ಮೇಲಿನ ತೆರಿಗೆಯಿಂದ ಕಳೆದ ಒಂದೂವರೆ ವರುಷಗಳಲ್ಲಿ ಸಂಗ್ರಹಿಸಿದ Rs 6.5 ಲಕ್ಷ ಕೋಟಿ ಹಣ ಎಲ್ಲಿಗೋಯಿತು? ಪಿಎಮ್‍ ಕೇರ್ಸ್ ನ ಸಾವಿರಾರು ಕೋಟಿ ಯಾರ ಜೇಬಿಗಿಳಿಯಿತು? ಲೆಕ್ಕ ಕೊಡುವುದೇ ಕೇಂದ್ರ ಸರಕಾರ? ಎಂದು ಸಾಮಾಜಿಕ ಕಾರ್ಯಕರ್ತ ಅಲ್ಮೆಡಾ ಗ್ಲಾಡ್‌ಸನ್ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಬೆಲೆ ಏರಿಕೆ ನಿರಂತರವಾಗಿದೆ. ಅತ್ತ ವಿದೇಶಿ ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳಲಾಗುತ್ತಿದೆ. ಸಚಿವರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಇವೆಲ್ಲವೂ ಜನರನ್ನು ಗೊಂದಲಕ್ಕೆ ತಳ್ಳಿರುವುದಂತೂ ಸತ್ಯ.


ಇದನ್ನೂ ಓದಿ: ಉಚಿತ ಲಸಿಕೆ ನೀಡಿದ್ದೆ ಇಂಧನ ಬೆಲೆ ಏರಿಕೆಗೆ ಕಾರಣವೆಂದ ಕೇಂದ್ರ ಸಚಿವ: ವಾಸ್ತವವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. You bastards are anti nationals. You will never come up like this. Do something good to support the good work of the government which struggles to come out of the crisis

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...