Homeದಿಟನಾಗರಫ್ಯಾಕ್ಟ್‌ಚೆಕ್‌: ಗಾಲ್ವಾನ್‌ ಕಣಿವೆಯಲ್ಲಿ ಸಾವಿಗೀಡಾದ ಚೀನಾ ಸೈನಿಕರ ಸಮಾಧಿಯೆಂದು ಹಳೆಯ ಚಿತ್ರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳು

ಫ್ಯಾಕ್ಟ್‌ಚೆಕ್‌: ಗಾಲ್ವಾನ್‌ ಕಣಿವೆಯಲ್ಲಿ ಸಾವಿಗೀಡಾದ ಚೀನಾ ಸೈನಿಕರ ಸಮಾಧಿಯೆಂದು ಹಳೆಯ ಚಿತ್ರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳು

ಆಜ್‌ತಕ್‌, ಇಂಡಿಯಾ ಟುಡೆ, ಟೈಮ್ಸ್‌ನೌ ಹಾಗೂ ಎಬಪಿ ನ್ಯೂಸ್ ಸೇರಿದಂತೆ ಹಲವಾರು ಮಾಧ್ಯಮಗಳು ಹಳೆಯ ಚಿತ್ರಗಳನ್ನು ಇಟ್ಟು ಗಾಲ್ವನ್ ಸಂಘರ್ಷದಲ್ಲಿ ಭಾರತೀಯ ಸೈನಿಕರು ಕೊಂದ ಚೀನಾ ಸೈನಿಕ ಸಮಾಧಿ ಎಂದು 2011 ರ ಚಿತ್ರಗಳನ್ನು ಪ್ರಸಾರ ಮಾಡಿದೆ.

- Advertisement -
- Advertisement -

ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವಿನ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಮತ್ತೊಂದೆಡೆ ಚೀನಾದ ಕಡೆಯಿಂದ ಸಂಭವಿಸಿದ ಸಾವುನೋವುಗಳನ್ನು ಚೀನಾ ಸರ್ಕಾರವು ಬಹಿರಂಗ ಪಡಿಸಿರಲಿಲ್ಲ.

ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು ಭಾರತದ ಹಲವಾರು ಮಾಧ್ಯವಗಳು ತಪ್ಪಾದ ಮಾಹಿತಿಯನ್ನು ನೀಡಿತ್ತು. ಈ ಮಾಧ್ಯಮಗಳು ವದಂತಿಗಳನ್ನು ನಂಬಿ 100  ಚೀನಾ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿತ್ತು.

ಇದನ್ನೂ ಓದಿ: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಆದರೆ ಇದೀಗ ಆಗಸ್ಟ್ 31 ರಂದು, ಗಡಿ ಸಂಘರ್ಷದಲ್ಲಿ “40 ಚೀನಿ ಸೈನಿಕರು” ಕೊಲ್ಲಲ್ಪಟ್ಟರು ಎಂದು ಸಾಬೀತುಪಡಿಸುವ ‘ಎಕ್ಸ್‌ಕ್ಲೂಸಿವ್’ ಚಿತ್ರಗಳನ್ನು ಪಡೆದುಕೊಂಡಿದ್ದೇವೆ ಎಂದು ಹಿಂದಿ ವಾಹಿನಿ ಆಜ್‌ತಕ್ ಹೇಳಿಕೊಂಡಿದೆ.

ಆಜ್‌ತಕ್ ನಿರೂಪಕ ರೋಹಿತ್ ಸರ್ದಾನಾ ಭಾವೋದ್ರಿಕ್ತವಾಗಿ ಮಾತನಾಡುತ್ತಾ, “ನಾವು ನಿಮಗೆ ಚೀನಾದ ಸೈನಿಕರ ಸಮಾಧಿಯ ಚಿತ್ರಗಳನ್ನು ತೋರಿಸುತ್ತಿದ್ದೇವೆ. ಗಾಲ್ವಾನ್ ಘರ್ಷಣೆಯಲ್ಲಿ ಕೊಲ್ಲಲ್ಪಟ್ಟ ಚೀನಾದ ಸೈನಿಕರ ಪುರಾವೆಗಳನ್ನು ದೇಶದ ಹಲವಾರು ಜನರು ಕೇಳಿದ್ದರು. ಪುರಾವೆ ನಿಮ್ಮ ಟೆಲಿವಿಷನ್ ಪರದೆಗಳಲ್ಲಿದೆ… ಭಾರತದೊಂದಿಗಿನ ಘರ್ಷಣೆಯಲ್ಲಿ 40 ಕ್ಕೂ ಹೆಚ್ಚು ಚೀನೀ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಚೀನಾದ ಸೈನಿಕರು ತಮ್ಮವರ ಗೋರಿಗಳಿಗೆ ಹೇಗೆ ಗೌರವ ನೀಡುತ್ತಿದ್ದಾರೆ ಎಂಬುದನ್ನು ನೀವು ವೀಕ್ಷಿಸಬಹುದು” ಎಂದು ಹೇಳಿದ್ದಾರೆ. ಇದರ ಆರ್ಕೈವ್ ಇಲ್ಲಿದೆ.

ಆಜ್‌ತಕ್ ಅವರ ಇಂಗ್ಲಿಷ್ ಪ್ರತಿರೂಪವಾದ ಇಂಡಿಯಾ ಟುಡೆ ಸಹ ಇದೇ ದೃಶ್ಯಗಳನ್ನು ಪ್ರಸಾರ ಮಾಡಿದೆ. “ಹೊಸ ಸಮಾಧಿಗಳು” ಎಂದು ಹೇಳಲಾದ ನಿರ್ದಿಷ್ಟ ಪ್ರದೇಶದಲ್ಲಿ ಎರಡು ಡಿಜಿಟಲ್ ಕೆಂಪು ಬಾಣದ ಚಿತ್ರಗಳಲ್ಲಿ ಒಂದೇ ಸಮಾಧಿಯ ಉಪಗ್ರಹ ಚಿತ್ರಗಳನ್ನು ತೋರಿಸಿ, ನಿರೂಪಕ ನಬಿಲಾ ಜಮಾಲ್, “ಗಾಲ್ವಾನ್ ಘರ್ಷಣೆಯಲ್ಲಿ ಮೃತಪಟ್ಟ ಚೀನಾ ಸೈನಿಕರನ್ನು ಕಾಂಗ್ಕ್ಸಿವಾ ಯುದ್ಧ ಸ್ಮಾರಕದಲ್ಲಿ ಸಮಾಧಿ ಮಾಡಿದರು. ಆ ಸಮಾಧಿಗಳಿಗೆ ಚೀನಿ ಸೈನಿಕರು ಭೇಟಿ ನೀಡುತ್ತಿದ್ದಾರೆ… ಗಾಲ್ವನ್ ಘರ್ಷಣೆಯಲ್ಲಿ ಚೀನಾದ ಬೃಹತ್ ಸಾವುನೋವುಗಳಿಗೆ ಪುರಾವೆ” ಎಂದು ಹೇಳಿದ್ದಾರೆ.

ಇಂಡಿಯಾ ಟುಡೆ ಭಾನುವಾರ, 30 ಆಗಸ್ಟ್ 2020 ರಂದು ಪೋಸ್ಟ್ ಮಾಡಿದ್ದು, ಇದೀಗ ಅದನ್ನು ಡಿಲೀಟ್ ಮಾಡಿದೆ.

ಟೈಮ್ಸ್‌ನೌ ಮತ್ತೊಂದೆಡೆ, “106 ಚೀನಿ ಸೈನಿಕರ ಸಮಾಧಿಯ ಫೋಟೋಗಳು – ಜೂನ್ 15 ರಂದು ಗಾಲ್ವಾನ್ ಘರ್ಷಣೆಯಲ್ಲಿ ಚೀನಾ ಸೈನ್ಯಕ್ಕೆ ಆದ ಸಾವುನೋವುಗಳ ವ್ಯಾಪ್ತಿಯನ್ನು ಬಹಿರಂಗಪಡಿಸುತ್ತವೆ” ಎಂದು ಹೇಳಿದೆ. ಚಾನೆಲ್‌ನ ಮತ್ತಷ್ಟು ಟ್ವೀಟ್‌ನಲ್ಲಿ “ಪ್ರಧಾನಿ ಮೋದಿ ಗಾಲ್ವಾನ್ ಸಂಘರ್ಷದ ಬಗ್ಗೆ ಸರಿಯಾಗಿಯೇ ಇದ್ದರು, ಚೀನಾ ಪರ ಲಾಬಿ ಮಾಡುವವರು ಭಾರತವನ್ನು ಅನುಮಾನಿಸಿದರು” ಎಂದು ಬರೆದಿದ್ದಾರೆ. ಇದರ ಆರ್ಕೈವ್ ಇಲ್ಲಿದೆ.

ಟೈಮ್ಸ್‌ನೌ ವರದಿಯ ಆಧಾರದ ಮೇಲೆ ಸ್ವರಾಜ್ಯ ವೆಬ್‌ಸೈಟ್ ಕೂಡಾ ಲೇಖನ ಬರೆದಿದೆ (ಆರ್ಕೈವ್‌). ನ್ಯೂಸ್ಎಕ್ಸ್ (ಆರ್ಕೈವ್) ಮತ್ತು ಎಬಿಪಿ ನ್ಯೂಸ್ (ಆರ್ಕೈವ್) ಇಂತಹ ಪ್ರದರ್ಶನಗಳನ್ನು ಪ್ರಸಾರ ಮಾಡಿದ್ದು, ಗಾಲ್ವಾನ್ ಘರ್ಷಣೆಯಲ್ಲಿ ಮೃತಪಟ್ಟ ಚೀನಾದ ಸೈನಿಕರ 30 ಕ್ಕೂ ಹೆಚ್ಚು ಸಮಾಧಿಗಳು ಪತ್ತೆಯಾಗಿವೆ ಎಂದಿದೆ.

ಫ್ಯಾಕ್ಟ್‌ಚೆಕ್

ಪ್ರಸ್ತುತ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಛಾಯಾಚಿತ್ರಗಳು ಚೀನಾದ ಕಾಂಗ್ಕ್ಸಿವಾ ಪಟ್ಟಣದ ಮಿಲಿಟರಿ ಸ್ಮಶಾನದಲ್ಲಿವೆ. ಇಲ್ಲಿ 1962 ರ ಭಾರತ-ಸೈನೋ ಯುದ್ಧದಲ್ಲಿ ಹುತಾತ್ಮರಾದ ಚೀನಿ ಸೈನಿಕರ ಸಮಾಧಿಗಳಿವೆ.

ಗಾಲ್ವಾನ್ ಘರ್ಷಣೆಯಲ್ಲಿ 40 ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಆಜ್‌ತಕ್ ಹೇಳಿಕೊಂಡರೆ, ಇಂಡಿಯಾ ಟುಡೆ ಸಾವಿನ ಸಂಖ್ಯೆಯ ಬಗ್ಗೆ ಮೌಖಿಕ ಹೇಳಿಕೆಯನ್ನು ನೀಡಿಲ್ಲವಾದರು, ಸ್ಮಶಾನದ ಚಿತ್ರಗಳನ್ನು ನೀಡಿ “ಭಾರಿ ಪ್ರಮಾಣದ ಅಪಘಾತದ ಪುರಾವೆ” ಎಂದು ಹೇಳಿದೆ.

ಇದನ್ನೂ ಓದಿ: ರಾಷ್ಟ್ರಪತಿ ಭವನದ ’ಮೊಘಲ್ ಉದ್ಯಾನ’ದ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿತೆ? ಫ್ಯಾಕ್ಟ್‌ಚೆಕ್‌‌

ಕಾರ್ಯಕ್ರಮದ ಪ್ರದರ್ಶನದ ಸಮಯದಲ್ಲಿ ಪ್ರಸಾರವಾದ ಇನ್ಫೋಗ್ರಾಫಿಕ್ ಸ್ಮಶಾನದಲ್ಲಿ 105 ಸಮಾಧಿಗಳಿವೆ ಎಂದು ಸೂಚಿಸಿದೆ. ಆದಾಗ್ಯೂ ಈ ಸಮಾಧಿಗಳಲ್ಲಿ ಕೆಲವು ಹೊಸ ಸಮಾಧಿಗಳನ್ನು ಬಿಟ್ಟು ಹೆಚ್ಚಿನವು 2019 ರ ಡಿಸೆಂಬರ್‌ನಿಂದಲೂ ಇದ್ದವುಗಳಾಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಕ್ಷಣಾ ತಜ್ಞರು ಸೂಚಿಸಿದ್ದರೆ.

ಇಂಡಿಯಾ ಟುಡೆ ಪ್ರಸಾರ ಮಾಡಿದ ಗೂಗಲ್ ಅರ್ಥ್ ಫೋಟೋ 2011 ರದ್ದು ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ. ಲೆಕ್ಕಾಚಾರದ ಪ್ರಕಾರ ಈ ಚಿತ್ರಣದಲ್ಲಿ 105 ಸಮಾಧಿಗಳಿವೆ (ಎಡಭಾಗದಲ್ಲಿ 43 ಮತ್ತು ಬಲಭಾಗದಲ್ಲಿ 62).

ವಿಪರ್ಯಾಸವೆಂದರೆ, ಆಗಸ್ಟ್ 29 ರಂದು ಪ್ರಕಟವಾದ ವರದಿಯಲ್ಲಿ ಇಂಡಿಯಾ ಟುಡೆ ಇದೇ ನಕ್ಷೆಯನ್ನು ಬಳಸಿದ್ದು, ಅದು 2011 ರಿಂದ ಬಂದಿದೆ ಎಂದು ಕೂಡ ಉಲ್ಲೇಖಿಸಿದೆ.

ಸ್ಮಶಾನದ ಎಡ ಮತ್ತು ಬಲ ಭಾಗಗಳಲ್ಲಿರುವ ಸಮಾಧಿಗಳ ಸಂಖ್ಯೆಗಳ ಬಗ್ಗೆ ಎರಡು ಫ್ಯಾಕ್ಟ್‌ಚೆಕ್‌ಗಳಾಗಿ ವಿಂಗಡಿಸಿದ್ದೇವೆ.

ಎಡಭಾಗದಲ್ಲಿರುವ ಸಮಾಧಿಗಳ ಸಂಖ್ಯೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸ್ಮಶಾನದ ಛಾಯಾಚಿತ್ರವು ಚೀನೀ ಸರ್ಚ್ ಎಂಜಿನ್ ’ಬೈದು’ವಿನಲ್ಲಿ ಕಂಡು ಬಂದಿದೆ. ಎಡಭಾಗದಲ್ಲಿನ 43 ಸಮಾಧಿಗಳು 2011 ರ ಹಿಂದಿನದು ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಕೊನೆಯ ಸಾಲಿನಲ್ಲಿ (ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ) ಕೇವಲ ಒಂದು ಸಮಾಧಿ ಮಾತ್ರ ಇದೆ.

ಆದರೆ ಆಗಸ್ಟ್ 24 ರಂದು ಚೀನಾದ ಮಿಲಿಟರಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ ವೀಬೊದಲ್ಲಿ ಹಂಚಿಕೊಂಡಿತ್ತು. ಚೀನಾದ ವೀಡಿಯೊ ಹಂಚಿಕೆ ಪ್ಲಾಟ್‌ಫಾರ್ಮ್ ಬಿಲಿಬಿಲಿಯಲ್ಲಿಯೂ ಇದೇ ವೀಡಿಯೊವನ್ನು ವೀಕ್ಷಿಸಬಹುದು.

ಈ ವಿಡಿಯೋದಲ್ಲಿ ಎಡಭಾಗದಲ್ಲಿರುವ ಕೊನೆಯ ಸಾಲಿನಲ್ಲಿ ಎರಡು ಸಮಾಧಿಗಳಿವೆ (ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ). ಆದರೆ ಈ ಒಂದು ಹೊಸ ಸಮಾಧಿಯನ್ನು ಯಾವಾಗ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ, ಒಟ್ಟಿನಲ್ಲಿ ಅದನ್ನು 2011 ರ ನಂತರ ಮಾಡಲಾಗಿದೆ ಎನ್ನುವುದು ಸ್ಪಷ್ಟ. ಹೀಗೆ ಒಟ್ಟು ಸಮಾಧಿಗಳ ಸಂಖ್ಯೆಯನ್ನು 44 ಕ್ಕೆ ಏರುತ್ತದೆ.

ಬಲಭಾಗದಲ್ಲಿರುವ ಸಮಾಧಿಗಳ ಸಂಖ್ಯೆ

ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಸ್ಮಶಾನದ ಮತ್ತೊಂದು ಚಿತ್ರದಲ್ಲಿ ಬಲಭಾಗದಲ್ಲಿರುವ 63 ಸಮಾಧಿಗಳ ಸ್ಪಷ್ಟ ನೋಟವನ್ನು ನೀಡುತ್ತದೆ. ಎಡಭಾಗದಲ್ಲಿರುವ ಕೊನೆಯ ಸಾಲಿನಲ್ಲಿ ಎರಡು ಸಮಾಧಿಗಳಿವೆ (ಕೆಂಪು ವೃತ್ತದಲ್ಲಿ ಗುರುತಿಸಲಾಗಿದೆ) ಈ ಚಿತ್ರವು ತೀರಾ ಇತ್ತೀಚಿನದ್ದಾಗಿದೆ.

ಮೇಲಿನ ಚಿತ್ರವನ್ನು ನೀವು ಎಚ್ಚರಿಕೆಯಿಂದ ಗಮನಿಸಿದರೆ, ಬಲಭಾಗದಲ್ಲಿರುವ ಕೊನೆಯ ಸಾಲಿನಲ್ಲಿ ಐದು ಸಮಾಧಿಗಳಿವೆ (ಕೆಂಪು ಗೆರೆಯಲ್ಲಿ ಗುರುತಿಸಲಾಗಿದೆ). ಆದರೆ, ಚೀನೀ ಮಿಲಿಟರಿ ಅಪ್‌ಲೋಡ್ ಮಾಡಿದ ಇತ್ತೀಚಿನ ದೃಶ್ಯಗಳಲ್ಲಿ, ಈ ಸಾಲಿನಲ್ಲಿ ಹೊಸ ಸಮಾಧಿಯಿದೆ (ಕೆಳಗೆ ಹಸಿರು ಬಣ್ಣದಲ್ಲಿ ಗುರುತಿಸಲಾಗಿದೆ) ಕೊನೆಯ ಸಾಲಿನಲ್ಲಿರುವ ಒಟ್ಟು ಸಮಾಧಿಗಳ ಸಂಖ್ಯೆಯನ್ನು ಆರು ಮತ್ತು ಇದರಿಂದಾಗಿ ಬಲಭಾಗದಲ್ಲಿರುವ ಒಟ್ಟು ಸಮಾಧಿಗಳ ಸಂಖ್ಯೆಯನ್ನು 64.

ಇದರರ್ಥ ಸ್ಮಶಾನದಲ್ಲಿ 108 ಸಮಾಧಿಗಳಿವೆ. ಆಗಸ್ಟ್ 24 ರಂದು ಚೀನಾದ ಮಿಲಿಟರಿ ಅಪ್‌ಲೋಡ್ ಮಾಡಿದ ವೀಡಿಯೊ ಕೂಡಾ ಯುದ್ಧ ಸ್ಮಾರಕದಲ್ಲಿ 108 ಸಮಾಧಿಗಳಿವೆ ಎಂದು ತೋರಿಸುತ್ತದೆ.

[ಚಿತ್ರದಲ್ಲಿ ಇರುವ ಅಕ್ಷರಗಳನ್ನು ಓದಲು Google ಡಾಕ್ಸ್‌ನಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡಿ ಅಥವಾ ಗೂಗಲ್ ಅನುವಾದ ಮಾಡಿ.]

ಏಪ್ರಿಲ್ 2020 ರಲ್ಲಿ ಚೀನಾದ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಒಂದು ದಾಖಲೆಯು ಕಾಂಗ್ಕ್ಸಿವಾ ಯುದ್ಧ ಸ್ಮಾರಕದಲ್ಲಿ ಸಮಾಧಿ ಮಾಡಲಾದ ಒಟ್ಟು ಹುತಾತ್ಮರ ಸಂಖ್ಯೆಯನ್ನು 108 ಎಂದು ಇದೆ.

ಆದರೆ ಗಾಲ್ವಾನ್‌ನಲ್ಲಿ ಭಾರತ-ಚೀನಾದ ಸೈನಿಕರ ನಡುವೆ ಸಂಘರ್ಷ ನಡೆದಿದ್ದು ಮೇ-ಜೂನ್‌ನಲ್ಲಿ ಆಗಿದೆ. ಹೀಗಾಗಿ ಆಜ್‌ತಕ್ ಮತ್ತು ಇಂಡಿಯಾ ಟುಡೆ ಪ್ರಸಾರ ಮಾಡಿದ ಚಿತ್ರಣವು ಈ ಘರ್ಷಣೆಗಳಲ್ಲಿ ಹುತಾತ್ಮರಾದ ಚೀನಾದ ಸೈನಿಕರ ಸಮಾಧಿಗಳನ್ನು ಪ್ರತಿನಿಧಿಸಲು ಸಾಧ್ಯವಿಲ್ಲ.

ವಾಸ್ತವವಾಗಿ, ಇಂಡಿಯಾ ಟುಡೆ ಪ್ರಸಾರ ಮಾಡಿದ ಮತ್ತೊಂದು ಚಿತ್ರವು 2019 ರ ಡಿಸೆಂಬರ್‌ಗಿಂತ ಹಿಂದಿನದು. ಈ ಚಿತ್ರವನ್ನು quora.com ರೀತಿಯ ಪ್ರಶ್ನೋತ್ತರ ವೆಬ್‌ಸೈಟ್ ಆದ ಚೀನಾದ zhihu.com ನಲ್ಲಿ ಅಪ್ಲೋಡ್ ಮಾಡಲಾಗಿತ್ತು.

zhihu.com ಮತ್ತು ಇಂಡಿಯಾ ಟುಡೆ ವರದಿ ಮಾಡಿರುವ ಚಿತ್ರ

ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಚಿತ್ರಗಳಲ್ಲಿ ಒಂದು ಇತ್ತೀಚಿನದ್ದಾಗಿರಬಹುದು ಎಂಬುದು ಗಮನಾರ್ಹವಾದರೂ ಈ ಸಮಾಧಿಯ ಹಿಂದಿನ ಅಂಶಗಳನ್ನು ದೃಡೀಕರಿಸಲು ಸಾಧ್ಯವಾಗಲಿಲ್ಲ.

ಫ್ಯಾಕ್ಟ್‌‌ಚೆಕ್‌ ಬಗ್ಗೆ ಒಟ್ಟಾರೆಯಾಗಿ ಹೇಳುವುದಾದರೆ, ಗಾಲ್ವಾನ್ ಘರ್ಷಣೆಯಲ್ಲಿ ಚೀನಾದ ಸಾವುನೋವುಗಳ ಬಗ್ಗೆ ವರದಿ ಮಾಡಲು ಇಂಡಿಯಾ ಟುಡೆ 2011 ರ ಉಪಗ್ರಹ ಚಿತ್ರವನ್ನು ಬಳಸಿದೆ. ಇಂಡಿಯಾ ಟುಡೆ, ಆಜ್‌ತಕ್ ಮತ್ತು ಟೈಮ್ಸ್ ನೌ ಪ್ರಸಾರ ಮಾಡಿದ ಚಿತ್ರಗಳು ಕಾಂಗ್ಕ್ಸಿವಾದಲ್ಲಿನ ಸ್ಮಾರಕವನ್ನು ತೋರಿಸುತ್ತವೆಯಾದರೂ, ಇವುಗಳಲ್ಲಿ 1962 ರಲ್ಲಿ ಭಾರತದೊಂದಿಗಿನ ಯುದ್ಧದಲ್ಲಿ ಮರಣ ಹೊಂದಿದ ಚೀನೀ ಸೈನಿಕರ ಸಮಾಧಿಗಳಿವೆ.

ಇದನ್ನೂ ಓದಿ: ಅಯೋಧ್ಯೆಯ ಮಸೀದಿ ಜಾಗದಲ್ಲಿ ಬಾಬ್ರಿ ಆಸ್ಪತ್ರೆ ಸ್ಥಾಪನೆ? ಈ ಸುದ್ದಿ ನಿಜವೆ?; ಫ್ಯಾಕ್ಟ್‌ಚೆಕ್

2011 ರ ನಂತರ ಸ್ಥಳದಲ್ಲಿ ಕನಿಷ್ಠ ಮೂರು ಹೊಸ ಸಮಾಧಿಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ. ಇತ್ತೀಚೆಗೆ ನಿರ್ಮಿಸಿದಂತೆ ಕಂಡುಬರುವ ಸಮಾಧಿಯ ಮತ್ತೊಂದು ಚಿತ್ರ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಆದರೆ ಇದರ ಬಗ್ಗೆ ಖಚಿತವಾದ ಮಾಹಿತಿ ಇಲ್ಲ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ವೈರಲ್ ಆಗಿದೆ

ಗಾಲ್ವಾನ್ ಘರ್ಷಣೆಯಲ್ಲಿ ಚೀನಾದ ಹುತಾತ್ಮರ ಸಮಾಧಿಗಳು ಎಂದು ಪತ್ರಕರ್ತ ಸುಶಾಂತ್ ಬಿ ಸಿನ್ಹಾ ಕಾಂಗ್ಕ್ಸಿವಾ ಯುದ್ಧ ಸ್ಮಾರಕದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ, “ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಕೈಯಲ್ಲಿ ಕೊಲ್ಲಲ್ಪಟ್ಟ ಚೀನಾ ಸೈನಿಕರ ಸಮಾಧಿಗಳು ಇವು. ಜೂನ್‌ನಲ್ಲಿ ಭಾರತೀಯ ಸೇನೆಯೊಂದಿಗೆ ನಡೆದ ಮಾತಿನ ಚಕಮಕಿಯಲ್ಲಿ ಅವರು ಕೊಲ್ಲಲ್ಪಟ್ಟರು ಎಂದು ಚೀನಿ ಭಾಷೆಯಲ್ಲಿ ಬರೆದಿರುವುದು ಹೇಳುತ್ತದೆ.
ಅಂದಹಾಗೆ, ಸಾಕ್ಷ್ಯವನ್ನು ಕೇಳುವವವರು‌ ಇದರ ಬಗ್ಗೆ ನಾಚಿಕೆಪಡುತ್ತದೆ ಎಂದು ನಿರೀಕ್ಷಿಸಬೇಡಿ. ಅವರ ಕಾರ್ಯಸೂಚಿ ಮುಂದುವರಿಯುತ್ತದೆ. ಅವರ ಚರ್ಮ ತುಂಬಾ ದಪ್ಪವಾಗಿದೆ.” ಎಂದು ಬರೆದಿದ್ದಾರೆ. ಇದರ ಆರ್ಕೈವ್ ಇಲ್ಲಿದೆ.

ಭಾರತ-ಚೀನಾ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಚೀನೀ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೊಸದಾಗಿ ಪ್ರಾರಂಭಿಸಲಾದ ವೆಬ್‌ಸೈಟ್ ಕ್ರೆಟ್ಲಿ ವರದಿ ಪ್ರಕಟಿಸಿದೆ. ಇದನ್ನು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮತ್ತು ಪಕ್ಷದ ಬೆಂಬಲಿಗ ಸಂಜಯ್ ದೀಕ್ಷಿತ್ ಹಂಚಿಕೊಂಡಿದ್ದಾರೆ. ಗಾಲ್ವಾನ್ ಸಂಘರ್ಷದಲ್ಲಿ 100 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಭಿನ್ನಮತೀಯ ಯಾಂಗ್ ಜಿಯಾನ್ಲಿ ಹೇಳಿದ್ದ ಸುಳ್ಳು ಹೇಳಿಕೆಯನ್ನು ಕ್ರೇಟ್ಲಿ ಈ ಹಿಂದೆ ಪ್ರಚಾರ ಮಾಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಗಾಲ್ವಾನ್-ಚೈನೀಸ್ ಅಫಘಾತಗಳ ಸಮಾಧಿಗಳ ಚಿತ್ರ ಹೊರಬಿದ್ದಿದೆ. 35-106 ರಷ್ಟು ಚೀನಾದ ಸೈನಿಕರನ್ನು #galwanvalleyclash ಸಮಯದಲ್ಲಿ ಭಾರತೀಯ ಸೇನೆಯ ಸೈನಿಕರು ಕೊಂದರು. ಇದು ಚೀನಾ ಮತ್ತು ಕಾಂಗ್ರೆಸ್ ಗೆ ದೊಡ್ಡ ಹೊಡೆತ” ಎಂದು ಬರೆದಿದ್ದಾರೆ.

ಇಂತಹ ನೂರಾರು ಟ್ವೀಟ್‌ಗಳು, ರೀಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುತ್ತಿವೆಯಾದರೂ ಹೆಚ್ಚಿನವು ಹಳೆಯ ಚಿತ್ರಗಳೇ ಆಗಿದೆ.

ಕೃಪೆ: ದಿ ವೈರ್‌‌ (ಅಲ್ಟ್‌‌ ನ್ಯೂಸ್‌ ಮೂಲಕ)


ಇದನ್ನೂ ಓದಿ: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್‌ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಚಲೋ’ ಮೆರವಣಿಗೆಗೆ 100 ದಿನ; ಶಂಭು-ಖಾನೌರಿ ಗಡಿ ಬಿಂದುಗಳಲ್ಲಿ ಜಮಾಯಿಸಿದ ಸಾವಿರಾರು ಅನ್ನದಾತರು

0
ಬೆಳೆಗಳಿಗೆ ಎಂಎಸ್‌ಪಿ ಕಾನೂನು ಖಾತರಿಯೂ ಸೇರಿದಂತೆ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ನಡೆಯುತ್ತಿರುವ ಪ್ರತಿಭಟನೆಯು 100 ದಿನಗಳನ್ನು ಪೂರ್ಣಗೊಳಿಸುತ್ತಿದ್ದು, ಶಂಭು ಮತ್ತು ಖನೌರಿ ಗಡಿ ಬಿಂದುಗಳಲ್ಲಿ...