Homeಮುಖಪುಟಕೃಷಿ ಮಸೂದೆ ವಿರೋಧಿಸುವ ರೈತರನ್ನು ಭಯೋತ್ಪಾದಕರು ಎಂದ ನಟಿ ಕಂಗನಾ!

ಕೃಷಿ ಮಸೂದೆ ವಿರೋಧಿಸುವ ರೈತರನ್ನು ಭಯೋತ್ಪಾದಕರು ಎಂದ ನಟಿ ಕಂಗನಾ!

"ರೈತರನ್ನು ಟೆರರಿಸ್ಟ್ ಎಂದ ಕಂಗನಾ ಹೊಟ್ಟೆಗೆ ತಿನ್ನೋದು ರೈತರು ಬೆಳೆದ ಅನ್ನ ಮತ್ತು ತರಕಾರಿಯನ್ನೇ!" ಎಂದು ಯುವ ಹೋರಾಟಗಾರ ಸರೋವರ್ ಬೆಂಕಿಕೆರೆ ವ್ಯಂಗ್ಯವಾಡಿದ್ದಾರೆ.

- Advertisement -
- Advertisement -

ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ವಿವಾದಕ್ಕೆ ಒಳಗಾಗಿದ್ದ ನಟಿ ಕಂಗನಾ ರಾಣಾವತ್ ಈಗ ಕೃಷಿ ಮಸೂದೆಗಳನ್ನು ವಿರೋಧಿಸುವ ರೈತರನ್ನು ಭಯೋತ್ಪಾದಕರು ಎಂದು ಕರೆಯುವ ಮೂಲಕ ಮತ್ತೆ ವಿವಾದಿತ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕೃಷಿ ಮಸೂದೆಗಳ ಬಗ್ಗೆ ಪ್ರಧಾನಿ ಮೋದಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನಟಿ ಕಂಗನಾ ರಾಣಾವತ್ ‘ಮಸೂದೆಗಳನ್ನು ಪ್ರತಿಭಟಿಸುವ ರೈತರನ್ನು ಭಯೋತ್ಪಾದಕರು’ ಎಂದಿದ್ದಾರೆ.

ಕಂಗನಾ ಮಾಡಿದ ಟ್ವೀಟ್‌ನಲ್ಲಿ, “ಪ್ರಧಾನಿ ಮೋದಿಜೀ, ನಿದ್ರಿಸುತ್ತಿರುವವರನ್ನು ಎಚ್ಚರಗೊಳಿಸಬಹುದು. ತಪ್ಪು ತಿಳವಳಿಕೆ ಇದ್ದರೇ ಅದನ್ನು ಪರಿಹರಿಸಬಹುದು. ಆದರೆ ನಿದ್ದೆ ಮಾಡುವಂತೆ ನಟಿಸುವವರ, ಅರ್ಥ ಮಾಡಿಕೊಳ್ಳದಂತೆ ನಟಿಸುವವರರಿಗೆ ನೀವು ತಿಳಿಸಲು ಪ್ರಯತ್ನಸಿದರೆ ಏನು ಪ್ರಯೋಜನ..? ಇವರು ಅದೇ ಭಯೋತ್ಪಾದಕರು. ಸಿಎಎಯಿಂದ ಯಾರು ಪೌರತ್ವ ಕಳೆದುಕೊಳ್ಳದಿದ್ದರೂ ರಕ್ತದ ಕೋಡಿ ಹರಿಸಿದವರು” ಎಂದಿದ್ದಾರೆ.

ಇದನ್ನೂ ಓದಿ: ಕೃಷಿ ಮಸೂದೆಗಳು ಹೇಳುವುದೇನು..?: ವಿರೋಧಕ್ಕೆ ಕಾರಣಗಳೇನು..?

ಸಂಸತ್ತಿನಲ್ಲಿ ಅಂಗೀಕಾರವಾದ ಕೃಷಿ ಸುಗ್ರಿವಾಜ್ಞೆಗಳ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇವು ರೈತವಿರೋಧಿ ಕಾಯ್ದೆಗಳಾಗಿದ್ದು ಕಾರ್ಪೋರೇಟ್ ಕಂಪನಿಗಳ ಪರವಾಗಿವೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ರೈತರು ಮತ್ತು ವಿಮರ್ಶಕರ ಪ್ರಕಾರ ಈ ಮಸೂದೆಗಳು ಆಹಾರ ಭದ್ರತೆಯನ್ನು ಹಾಳುಮಾಡುತ್ತವೆ. ಈ ಹಿಂದೆ ಇದ್ದ ಕನಿಷ್ಟ ಬೆಂಬಲ ಬೆಲೆಯನ್ನು ನಾಶಗೊಳಿಸಿ, ವ್ಯಾಪಾರಿಗಳಿಗೆ ಲಾಭವನ್ನು ನೀಡುತ್ತವೆಯೇ ಹೊರತು ರೈತರಿಗಲ್ಲ ಎನ್ನುತ್ತಾರೆ. ಜೊತೆಗೆ ಬೆಲೆ ನಿಗದಿಗಾಗಿ ಯಾವುದೇ ಕಾರ್ಯವಿಧಾನವಿಲ್ಲ ಎಂದು ಆಕ್ಷೇಪಿಸಿದ್ದಾರೆ.

ದೇಶದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಓರ್ವ ರೈತ ಮೃತಪಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಂಗನಾರ ಹೇಳಿಕೆ ರೈತರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿವೆ.

ಇದನ್ನೂ ಓದಿ: ಕೃಷಿ ಮಸೂದೆಗಳು ರೈತರನ್ನು ಬಲಶಾಲಿಗಳನ್ನಾಗಿಸಲಿವೆ: ಪ್ರಧಾನಿ ಮೋದಿ

“ಮುಷ್ಕರ ನಿರತ ಪಂಜಾಬ್ ನ ರೈತರನ್ನ ಟೆರರಿಸ್ಟ್ ಎಂದು ಕರೆದ ಬಿಜೆಪಿಯ ಅಘೋಷಿತ ಪ್ರವಕ್ತಾ ಪದ್ಮಶ್ರಿ ಕಂಗನಾ ರಾಣಾವತ್ ಅವರಿಗೆ ವೈ ಪ್ಲಸ್ (Y+) ಭದ್ರತೆ ನೀಡಿದರ ಬಗ್ಗೆ ಭಕ್ತರ ಅಭಿಪ್ರಾಯ ಏನು” ಎಂದು ಕವಿ ಚಿದಂಬರ ನರೇಂದ್ರ ಪ್ರಶ್ನಿಸಿದ್ದಾರೆ.

“ರೈತರನ್ನು ಟೆರರಿಸ್ಟ್ ಎಂದ ಕಂಗನಾ ಹೊಟ್ಟೆಗೆ ತಿನ್ನೋದು ರೈತರು ಬೆಳೆದ ಅನ್ನ ಮತ್ತು ತರಕಾರಿಯನ್ನೇ!” ಎಂದು ಯುವ ಹೋರಾಟಗಾರ ಸರೋವರ್ ಬೆಂಕಿಕೆರೆ ವ್ಯಂಗ್ಯವಾಡಿದ್ದಾರೆ.


ಇದನ್ನೂ ಓದಿ: ರೈತ, ದಲಿತ, ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುತ್ತಿರುವ ಸರ್ಕಾರ: ಜನತಾ ಅಧಿವೇಶನದಲ್ಲಿ ಡಾ. ಪ್ರಕಾಶ್ ಕಮ್ಮರಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಲ್ಕತ್ತಾ: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ

0
ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಭಾರತದಲ್ಲಿ ನಾಪತ್ತೆಯಾದ ಎಂಟು ದಿನಗಳ ನಂತರ ಕೋಲ್ಕತ್ತಾ ಪೊಲೀಸರು ಅವರ ತುಂಡರಿಸಿದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಕೋಲ್ಕತ್ತಾ ಪೊಲೀಸರು ಹತ್ಯೆಯು ಪೂರ್ವ ನಿಯೋಜಿತ ಎಂದು ಹೇಳಿಕೊಂಡಿದ್ದಾರೆ. ಅನಾರ್...