Homeಮುಖಪುಟದೆಹಲಿಗೆ ಆಗಮಿಸಿದ ಪ್ರಧಾನಿಯ ಪ್ರಯಾಣಕ್ಕೆಂದೆ ವಿಶೇಷವಾಗಿ ತಯಾರಾದ ವಿಮಾನ!

ದೆಹಲಿಗೆ ಆಗಮಿಸಿದ ಪ್ರಧಾನಿಯ ಪ್ರಯಾಣಕ್ಕೆಂದೆ ವಿಶೇಷವಾಗಿ ತಯಾರಾದ ವಿಮಾನ!

ಈ ವಿಮಾನ, ಲಾರ್ಜ್ ಏರ್ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್ ಮೆಶರ್ಸ್ ಎಂಬ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ಸ್ವಯಂ ರಕ್ಷಣಾ ಸೂಟ್‌ಗಳನ್ನು ಒಳಗೊಂಡಿದೆ.

- Advertisement -
- Advertisement -

ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯಂತಹ ಗಣ್ಯವಕ್ತಿಗಳು ಪ್ರಯಾಣಿಸಲೆಂದೇ ವಿಶೇಷವಾಗಿ ತಯಾರಿಸಲಾಗಿರುವ B777(ಏರ್​ ಇಂಡಿಯಾ ಒನ್) ವಿಮಾನ ಇಂದು ಅಮೆರಿಕಾದಿಂದ ದೆಹಲಿಗೆ ಬಂದಿಳಿದಿದೆ.

ಏರ್‌ಕ್ರಾಪ್ಟ್‌ ಚಿಹ್ನೆ ಎಂದೇ ಗುರುತಿಸಿರುವ ಈ ಏರ್‌ ಇಂಡಿಯಾ ಒನ್ ವಿಮಾನ ಅಮೆರಿಕದ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ವಿಮಾನ ತಯಾರಕ ಕಂಪನಿ ಬೋಯಿಂಗ್​​ ಕಳೆದ ಆಗಸ್ಟ್​ನಲ್ಲೇ ಏರ್​ ಇಂಡಿಯಾಗೆ ವಿಮಾನವನ್ನ ಹಸ್ತಾಂತರಿಸಬೇಕಿತ್ತು.ಆದರೆ ತಾಂತ್ರಿಕ ಕಾರಣ, ಕೊರೊನಾ ಲಾಕ್‌ಡೌನ್ ಕಾರಣದಿಂದ ವಿಮಾನದ ಆಗಮನ ತಡವಾಗಿದೆ. ಗಣ್ಯವ್ಯಕ್ತಿಗಳು ಪ್ರಯಾಣಿಸಲು ವಿಶೇಷವಾಗಿ ನಿರ್ಮಿಸಲಾದ ಇಂಥದ್ದೇ ಮತ್ತೊಂದು ಬಿ 777 ವಿಮಾನವೂ ಮುಂದಿನ ದಿನಗಳಲ್ಲಿ ಭಾರತಕ್ಕೆ ಬರಲಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ 58 ದೇಶಗಳ ಭೇಟಿಗೆ 517 ಕೋಟಿ ವೆಚ್ಚ: ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ

ಪ್ರಸ್ತುತ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಗಳು  ಏರ್​ ಇಂಡಿಯಾದ ಬಿ747 ವಿಮಾನವನ್ನ ಪ್ರಯಾಣಕ್ಕಾಗಿ ಬಳಸುತ್ತಿದ್ದು, ಇದನ್ನ ಏರ್​ ಇಂಡಿಯಾ ಪೈಲಟ್​ಗಳೇ ಚಾಲನೆ ಮಾಡುತ್ತಾರೆ. ಆದರೆ ಹೊಸದಾಗಿ ಆಗಮಿಸಿರುವ ವಿಶೇಷ ವಿಮಾನವನ್ನ ಏರ್​ ಇಂಡಿಯಾ ಪೈಲಟ್​ಗಳ ಬದಲಾಗಿ ಭಾರತೀಯ ವಾಯುಸೇನೆಯ ಪೈಲಟ್​​ಗಳು ಚಾಲನೆ ಮಾಡಲಿದ್ದಾರೆ.

ಈ ವಿಮಾನ, ಲಾರ್ಜ್ ಏರ್ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್ ಮೆಶರ್ಸ್ ಎಂಬ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ಸ್ವಯಂ ರಕ್ಷಣಾ ಸೂಟ್‌ಗಳನ್ನು ಒಳಗೊಂಡಿದೆ. ಹೊಸ ವಿಮಾನವು ಇಂಧನ ತುಂಬಲು ನಡುವೆ ಎಲ್ಲೂ ಇಳಿಯದೆ 17 ಗಂಟೆಗಳ ಕಾಲ ನಿರಂತರವಾಗಿ ಹಾರಬಲ್ಲದು.

ಈ ಎರಡೂ ವಿಮಾನಗಳು ವಿವಿಐಪಿಗಳು ಸಂಚರಿಸುವ ಸುಸಜ್ಜಿತ ವಿಮಾನಗಳನ್ನಾಗಿಸಿ ಮಾರ್ಪಡಿಸುವ ಮುನ್ನ 2018 ರಲ್ಲಿ ಏರ್ ಇಂಡಿಯಾದ ವಾಣಿಜ್ಯ ವಿಭಾಗದಲ್ಲಿದ್ದವು. ಈ ಎರಡು ವಿಮಾನಗಳ ಬೆಲೆ ₹ 8600 ಕೋಟಿ.

ವಿಮಾನದಲ್ಲಿ ಅಳವಡಿಸಲಾಗಿರುವ ಸುಧಾರಿತ ಸಂವಹನ ವ್ಯವಸ್ಥೆಯಿಂದಾಗಿ, ಪ್ರಧಾನಿ ಅಥವಾ ರಾಷ್ಟ್ರಪತಿಗಳು ಹ್ಯಾಕ್ ಆಗುವ ಚಿಂತೆ ಇಲ್ಲದೆ ಸಿಬ್ಬಂದಿಯೊಂದಿಗೆ ವಿಡಿಯೋ ಅಥವಾ ಆಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: ಪವರ್ ಟಿವಿ ಪ್ರಕರಣ ಎತ್ತುವ ಪ್ರಶ್ನೆಗಳು ಯಾರ ಮನೆ ಬಾಗಿಲೆದುರು ನಿಲ್ಲುತ್ತವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಕಡಿಮೆ ಪ್ರಾತನಿಧ್ಯ ನೀಡಿದ ರಾಜಕೀಯ ಪಕ್ಷಗಳು

0
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ 2019ಕ್ಕೆ ಹೋಲಿಕೆ ಮಾಡಿದರೆ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಕಡಿಮೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ. ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಕೇವಲ ಓರ್ವ ಮುಸ್ಲಿಂ...