Homeಮುಖಪುಟಹೈಪರ್‌ ಸಾನಿಕ್‌ ತಂತ್ರಜ್ಞಾನದ ಡೆಮಾನ್‌‌ಸ್ಟ್ರೇಷರ್‌ ವೆಹಿಕಲ್ ಯಶಸ್ವಿ ಉಡಾವಣೆ ಮಾಡಿದ ಭಾರತ

ಹೈಪರ್‌ ಸಾನಿಕ್‌ ತಂತ್ರಜ್ಞಾನದ ಡೆಮಾನ್‌‌ಸ್ಟ್ರೇಷರ್‌ ವೆಹಿಕಲ್ ಯಶಸ್ವಿ ಉಡಾವಣೆ ಮಾಡಿದ ಭಾರತ

ಡೆಮಾನ್‌‌ಸ್ಟ್ರೇಷರ್‌ ವೆಹಿಕಲ್ ಅಥವಾ HSTDV ಶಬ್ದದ ವೇಗಕ್ಕಿಂತ ಐದು ಪಟ್ಟು ಅಥವಾ ಅದಕ್ಕಿಂತಾ ಹೆಚ್ಚಿನ ವೇಗದಲ್ಲಿ ಮತ್ತು ತುಂಬಾ ದೂರ ಹಾರಬಲ್ಲ ಕ್ಷಿಪಣಿ ಸಾಗಣೆಯ ವಾಹನವಾಗಿದೆ.

- Advertisement -
- Advertisement -

ಭಾರತದಲ್ಲೇ ನಿರ್ಮಿಸಿದ ಅತ್ಯಾಧುನಿಕ ಹೈಪರ್‌ ಸಾನಿಕ್ ತಂತ್ರಜ್ಞಾನದ ಡೆಮಾನ್‌ಸ್ಟ್ರೇಷರ್‌ ವೆಹಿಕಲ್(HSTDV) ಪರೀಕ್ಷಾರ್ಥ ಉಡಾವಣೆ ನಿನ್ನೆ ಯಶಸ್ವಿಯಾಗಿ ಒಡಿಶಾದ ಬಲಾಸೂರ್‌ನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ನಡೆಯಿತು.

ಈ ಮೂಲಕ ಭಾರತವು HSTDV ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಇದುವರೆಗೆ ರಷ್ಯಾ, ಚೀನಾ ಮತ್ತು ಅಮೇರಿಕಾ ಮಾತ್ರ ಇದನ್ನು ಹೊಂದಿತ್ತು. “ರಕ್ಷಣಾ ಕ್ಷೇತ್ರದಲ್ಲಿ ಇದೊಂದು ದೊಡ್ಡ ಮೈಲಿಗಲ್ಲು” ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ (DRDO) ಮುಖ್ಯಸ್ಥ ಡಾ. ಜಿ. ಸತೀಶ್ ರೆಡ್ಡಿ ಹೇಳಿದ್ದಾರೆ.

ಏನಿದು ಡೆಮಾನ್‌‌ಸ್ಟ್ರೇಷರ್‌ ವೆಹಿಕಲ್ ಅಥವಾ HSTDV?

ಹೈಪರ್​ ಸಾನಿಕ್ ಟೆಕ್ನಾಲಜಿ ಡೆಮಾನ್ಸ್​‌ಟ್ರೇಟರ್ ವೆಹಿಕಲ್ ಎಂಬುವುದು ಮಾನವರಹಿತ ಸ್ಕ್ರಾಮ್‌‌ಜೆಟ್ ಪ್ರಾತ್ಯಕ್ಷಿಕೆ ವಿಮಾನ.ಇದು ಶಬ್ದದ ವೇಗಕ್ಕಿಂತ ಐದು ಪಟ್ಟು ಅಥವಾ ಅದಕ್ಕಿಂತಾ ಹೆಚ್ಚಿನ ವೇಗದಲ್ಲಿ ಮತ್ತು ತುಂಬಾ ದೂರ ಹಾರಬಲ್ಲ ಕ್ಷಿಪಣಿ ಸಾಗಣೆಯ ವಾಹನವಾಗಿದೆ, ಒಂದು ಸೆಕೆಂಡ್‍ಗೆ 2 ಕಿ,ಮೀ. ಎತ್ತರ ನೆಗೆಯಬಲ್ಲ ಸಾಮರ್ಥ್ಯ ಹೊಂದಿದೆ. ಈ ತಂತ್ರಜ್ಞಾನವು ದೇಶದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ.

HSTDV

ಪ್ರಸ್ತುತ ಈ ಹೈಪರ್‌ಸಾನಿಕ್ ವೆಹಿಕಲ್ 20 ಸೆಕೆಂಡುಗಳ ಹಾರಾಟ ನಡೆಸುತ್ತದೆ. ಅಂತಿಮವಾಗಿ 20 ಮೈಲಿ ದೂರವನ್ನು ತಲುಪುವುದು DRDO ಗುರಿಯಾಗಿದೆ. ಉಡಾವಣಾ ವಾಹನಗಳನ್ನು ಮರುಬಳಕೆ ಮಾಡಲು ಸಾಧ್ಯ ಇರುವ ಹಾಗೆ ಅಭಿವೃದ್ದಿ ಪಡಿಸುವುದು DRDO ಯೋಜನೆಯಲ್ಲಿ ಸೇರಿದೆ.

HSTDV ಯ ಅಣಕು ಯೋಜನೆಯನ್ನು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾದಲ್ಲಿ ಪ್ರದರ್ಶಿಸಲಾಗಿತ್ತು. DRDO ಇದಕ್ಕೆ ಸಂಬಂಧಿಸಿದ ವೈಮಾನಿಕ ಚೌಕಟ್ಟಿನ ವಿನ್ಯಾಸವನ್ನು 2004 ರಲ್ಲಿಯೇ ಪೂರ್ಣಗೊಳಿಸಿತ್ತು.

ಇದನ್ನು ಓದಿ: ಲಡಾಖ್‌ನಿಂದ ಚೀನಾ ಸೈನ್ಯವನ್ನು ಯಾವಾಗ ಹೊರಗೆ ಹಾಕುತ್ತೀರಿ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

ಅಷ್ಟೇ ಅಲ್ಲದೆ 15-20 ಕಿ.ಮೀ. ಎತ್ತರದಲ್ಲಿ ಇದರ ಎಂಜಿನ್ ಪ್ರಾತ್ಯಕ್ಷಿಕೆ ಪ್ರದರ್ಶಿಸಲು ಬಯಸಿರುವುದಾಗಿ 2008 ರಲ್ಲಿ DRDO ತಿಳಿಸಿತ್ತು. ಸ್ಕ್ರಾಮ್‌ಜೆಟ್ ಎಂಜಿನ್ ಶಕ್ತಿಯೊಂದಿಗೆ ಹೈಪರ್‌ಸಾನಿಕ್ ವಾಹನ ಅಭಿವೃದ್ಧಿಪಡಿಸಲಾಗುತ್ತಿದೆ. ಈ ದ್ವಿ-ಬಳಕೆ ತಂತ್ರಜ್ಞಾನ ಬಹುಬಳಕೆಗೆ ಸಿಗಲಿದೆ ಎಂದು ಅದು ಹೇಳಿತ್ತು.

DRDO ತಂಡಕ್ಕೆ ಗಣ್ಯ ಶುಭಾಶಯ

ದೇಶದ ರಕ್ಷಣಾ ಕಾರ್ಯದಲ್ಲಿ ಮೈಲುಗಲ್ಲನ್ನು ಸ್ಥಾಪಿಸಿದ DRDO ತಂಡಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ಶುಭಾಶಯ ಹೇಳಿದ್ದಾರೆ.

ಪ್ರಧಾನಿ ಮೋದಿ ಈ ಬಗ್ಗೆ ಟ್ವೀಟ್ ಮಾಡಿ, “ಹೈಪರ್ಸಾನಿಕ್ ಟೆಸ್ಟ್ ಪ್ರಾತ್ಯಕ್ಷಿಕೆ ವಾಹನದ ಯಶಸ್ವಿ ಹಾರಾಟಕ್ಕಾಗಿ DRDO ಗೆ ಅಭಿನಂದನೆಗಳು. ನಮ್ಮ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸ್ಕ್ರ್ಯಾಮ್‌ಜೆಟ್ ಎಂಜಿನ್ ಹಾರಾಟವು ಶಬ್ದದ ವೇಗಕ್ಕಿಂತ 6 ಪಟ್ಟು ವೇಗವನ್ನು ಸಾಧಿಸಲು ಸಹಾಯ ಮಾಡುತ್ತದೆ. ಕೆಲವೇ ಕೆಲವು ದೇಶಗಳು ಇಂತಹ ಸಾಮರ್ಥ್ಯವನ್ನು ಹೊಂದಿವೆ” ಎಂದು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಪ್ರಧಾನ ಮಂತ್ರಿ ಅವರ ಆತ್ಮನಿರ್ಭರ ಭಾರತ ಯೋಜನೆ ಸಾಕಾರಗೊಳಿಸಲು ಇದೊಂದು ಮೈಲಿಗಲ್ಲಾಗಲಿದೆ. ಡಿಆರ್‌ಡಿಓ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲ ವಿಜ್ಞಾನಿಗಳಿಗೆ ಶುಭಾಶಯ ಹೇಳುತ್ತೇನೆ. ಭಾರತಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ” ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಸೈನ್ಯಾಧಿಕಾರಿಯು ಆಗಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್‌ ಸಿಂಗ್, ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮೋನ್‌ಸ್ಟ್ರೇಟರ್ ವೆಹಿಕಲ್‌ನ ಯಶಸ್ವಿ ಹಾರಾಟ ಪರೀಕ್ಷೆಗೆ DRDO ವನ್ನು ನಾನು ಅಭಿನಂದಿಸುತ್ತೇನೆ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ! ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವಾರು ಜನರು DRDO ಗೆ ಶುಭಾಶಯ ಕೋರಿದ್ದಾರೆ.


ಇದನ್ನೂ ಓದಿ: ಪ್ಯಾಂಗೊಂಗ್ ತ್ಸೊದಲ್ಲಿ ಹೆಲಿಪ್ಯಾಡ್ ಹಾಗೂ ಸೈನ್ಯವನ್ನು ಒಟ್ಟುಗೂಡಿಸುತ್ತಿರುವ ಚೀನಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಫಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್: 40 ಪ್ಯಾಲೆಸ್ತೀನಿಯರು ಸಾವು

0
ಇಸ್ರೇಲಿ ಪಡೆಗಳು ರಫಾದಲ್ಲಿ ವಿನ್ಯಾಸಗೊಳಿಸಲಾದ ಸುರಕ್ಷಿತ ವಲಯದಲ್ಲಿ ಸ್ಥಳಾಂತರಗೊಂಡ ಜನರು ವಾಸಿಸುವ ಟೆಂಟ್ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 40 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು...