ಟ್ರಂಪ್‌ ಗುಜರಾತ್‌ ಭೇಟಿ ಹಿನ್ನೆಲೆ; ಗೋಡೆ ಆಯ್ತು, ಈಗ ಸ್ಲಂ ಎತ್ತಂಗಡಿಗೆ ಮುಂದಾದ ಅಧಿಕಾರಿಗಳು

ಫೆಬ್ರವರಿ 24 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ಮುಂಚಿತವಾಗಿ ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಮೊಟೆರಾ ಕ್ರೀಡಾಂಗಣದ ಬಳಿಯ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಸುಮಾರು 45 ಕುಟುಂಬಗಳಿಗೆ ಅಲ್ಲಿಂದ ತೆರವು ಮಾಡುವಂತೆ ನೋಟೀಸ್ ನೀಡಲಾಗಿದೆ.

ಅಹಮದಾಬಾದ್‌ನ ಕೊಳೆಗೇರಿ ನಿವಾಸಿಗಳು “ತಾವು ಒಂದು ದಶಕದಿಂದ ಇಲ್ಲಿ ವಾಸಿಸುತ್ತಿದ್ದೇವೆ ಆದರೆ ಡೊನಾಲ್ಡ್ ಟ್ರಂಪ್ ಭೇಟಿಯ ಸಿದ್ಧತೆಗಳ ಮಧ್ಯೆ ಇಲ್ಲಿಂದ ಹೊರಹೋಗುವಂತೆ ನೋಟಿಸ್ ನೀಡಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯಕ್ಕೆ ಅಮೆರಿಕ ಅಧ್ಯಕ್ಷ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಹಾದು ಹೋಗುವ ಮಾರ್ಗದ ಕೊಳೆಗೇರಿಯ ಉದ್ದಕ್ಕೂ ಸ್ಥಳೀಯ ಸಂಸ್ಥೆ 400 ಮೀಟರ್ ಗೋಡೆ ನಿರ್ಮಿಸಿ ಟೀಕೆಗೆ ಒಳಗಾಗಿತ್ತು. ಈಗ ನೋಟಿಸ್‌ ಸಹ ನೀಡಿ ಮತ್ತಷ್ಟು ವಿವಾದ ಸೃಷ್ಟಿಸಿದೆ.

ನೋಟಿಸ್‌ನಲ್ಲಿ “ನೀವು ಎಎಂಸಿಗೆ ಸೇರಿದ ಜಮೀನನ್ನು ಅತಿಕ್ರಮಣ ಮಾಡಿದ್ದೀರಿ. ಇನ್ನು ಏಳು ದಿನಗಳಲ್ಲಿ ನಿಮ್ಮ ಮನೆಯ ವಸ್ತುಗಳನ್ನು ತೆಗೆದುಕೊಂಡು ಇಲ್ಲಿಂದ ಬೇರೆ ಸ್ಥಳಕ್ಕೆ ಹೋಗಬೇಕು. ಇಲ್ಲದಿದ್ದಲ್ಲಿ ಇಲಾಖೆಯು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ನೀವು ಯಾವುದೇ ಪ್ರಾತಿನಿಧ್ಯವನ್ನು ನೀಡಬೇಕಾದರೆ, ಫೆಬ್ರವರಿ 19 ರಂದು ಮಧ್ಯಾಹ್ನ 3 ಗಂಟೆಯ ಒಳಗೆ ನೀಡಬೇಕೆಂದು” ಬರೆದಿದೆ ಎಂದು ಪಿಟಿಐ ವರದಿ ಮಾಡಿದೆ.

“ನಾವು ಒಂದು ದಶಕದಿಂದ ಇಲ್ಲಿ ವಾಸಿಸುತ್ತಿದ್ದೇವೆ. ಈ ಹಿಂದೆ ನಮಗೆ ಯಾವುದೇ ಉಚ್ಚಾಟನೆಯ ಸೂಚನೆ ನೀಡಿರಲಿಲ್ಲ. ಆದರೆ ಈಗ ಏಕೆ ಹೀಗೆ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ” ಎಂದು ಕೂಲಿ ಕಾರ್ಮಿಕ ದಿನೇಶ್ ‌ಎಂಬುವವರು ಪ್ರಶ್ನಿಸಿದ್ದಾರೆ.

“ನಿವಾಸಿಗಳನ್ನು ಬಲವಂತವಾಗಿ ಹೊರಹಾಕಿದರೆ ನಮಗೆ ಪರ್ಯಾಯ ಆಶ್ರಯವಿಲ್ಲ. ನಾವು ಖಾಲಿ ಮಾಡಲು ಸಿದ್ಧರಿದ್ದೇವೆ, ಆದರೆ ನಮಗೆ ಪರ್ಯಾಯ ಜಾಗ ಮತ್ತು ಮೂಲಸೌಕರ್ಯಗಳು ಬೇಕಾಗುತ್ತದೆ. ಇಲ್ಲವೆಂದರೆ ನಾವು ರಸ್ತೆಬದಿಯಲ್ಲಿ ವಾಸಿಸಬೇಕಾಗುತ್ತದೆ. ನಮ್ಮೊಂದಿಗೆ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಬದುಕಲು ನಮಗೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಡಲಿ ಎಂದು ಪ್ರಾರ್ಥಿಸುತ್ತೇವೆ” ಎಂದು ಕೊಳಗೇರಿ ನಿವಾಸಿಗಳು ಹೇಳಿದ್ದಾರೆ.

“ಕೊಳಗೇರಿಯಿಂದ ಅಲ್ಲಿನ ಸ್ಲಂ ಜನರನ್ನು ಹೊರಹಾಕುವ ನೋಟಿಸ್‌ಗೂ “ನಮಸ್ತೆ ಟ್ರಂಪ್” ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಕೊಳೆಗೇರಿ ನಿವಾಸಿಗಳಿಗೆ ಪಟ್ಟಣ ಯೋಜನಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನೋಟೀಸ್ ನೀಡಲಾಗಿದೆ. ಕೊಳಗೇರಿ ಇರುವ ಜಾಗ ಎಎಂಸಿಗೆ ಸೇರಿದೆ. ಜನವರಿಯಲ್ಲಿ ನಡೆಸಿದ ಸ್ಥಳ ಸಮೀಕ್ಷೆಯಂತೆ ಈ ನೋಟೀಸನ್ನು ನೀಡಲಾಗಿದೆ” ಎಂದು ಎಎಂಸಿಯ ಪಶ್ಚಿಮ ವಲಯದ ಉಪ ಅಧಿಕಾರಿ ಚೈತನ್ಯಾ ಶಾ ಹೇಳಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here