Homeಅಂತರಾಷ್ಟ್ರೀಯಭಾರತೀಯ ಭೂಪ್ರದೇಶವನ್ನು ಒಳಗೊಂಡ ನಕ್ಷೆ ಅಂಗೀಕರಿಸಿದ ನೇಪಾಳ

ಭಾರತೀಯ ಭೂಪ್ರದೇಶವನ್ನು ಒಳಗೊಂಡ ನಕ್ಷೆ ಅಂಗೀಕರಿಸಿದ ನೇಪಾಳ

- Advertisement -
- Advertisement -

ನೇಪಾಳದ ಹೊಸ ನಕ್ಷೆಯನ್ನು ಪ್ರತಿಬಿಂಬಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ದೇಶದ ಕೆಳಮನೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ. ಇದರಲ್ಲಿ ಭಾರತವು ತನ್ನದೆಂದು ಹೇಳಿಕೊಳ್ಳುವ ಎತ್ತರದ ಪರ್ವತಗಳು ಒಳಗೊಂಡಿದೆ.

ಮಸೂದೆಯನ್ನು ಅಂಗೀಕರಿಸುವಾಗ ದೇಶದ ಎಲ್ಲಾ 258 ಸಂಸದರು ಹಾಜರಿದ್ದು ಮತದಾನ ಮಾಡಿದರು. ಮತದಾನದ ಮೊದಲು ಹೌಸ್ ಆಫ್ ರೆಪ್ರೆಸೆಂಟೇಟಿವ್‌ನಲ್ಲಿ ನಡೆದ ನಾಲ್ಕು ಗಂಟೆಗಳ ಚರ್ಚೆಯಲ್ಲಿ, ಪ್ರಧಾನ ಮಂತ್ರಿ ಓಲಿಯನ್ನು ಹಲವಾರು ಸಂಸದರು ಭಾರತದಿಂದ ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಧುರಾ ನಿಯಂತ್ರಣವನ್ನು ಪುನಃ ಪಡೆದುಕೊಳ್ಳಲು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡರು.

ಕಳೆದ ತಿಂಗಳು ಹೊಸ ನಕ್ಷೆಯನ್ನು ಹೊರಡಿಸಲು ಮುಂದಾಗಿದ್ದ ಓಲಿ ಸರ್ಕಾರವು, “ಮಾತುಕತೆಯ ಮೂಲಕ ನೇಪಾಳವೂ ಭಾರತ ಆಕ್ರಮಿಸಿಕೊಂಡ ಭೂಮಿಯನ್ನು ಮರಳಿ ಪಡೆಯುತ್ತದೆ” ಎಂದು ಪದೇ ಪದೇ ಹೇಳಿಕೊಂಡಿದೆ. ಅಲ್ಲದೆ ಗಡಿರೇಖೆ ಕುರಿತು ಚರ್ಚಿಸಲು ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆ ಕರೆಯುವಂತೆ ನೇಪಾಳ ಈಗಾಗಲೇ ಭಾರತವನ್ನು ಕೇಳಿದೆ.

ನೇಪಾಳದ ಸಂಸತ್ತಿನಲ್ಲಿ ನಡೆದ ಈ ಅಂಗೀಕಾರಕ್ಕೆ ಭಾರತದಿಂದ ಇನ್ನೂ ಔಪಚಾರಿಕ ಪ್ರತಿಕ್ರಿಯೆ ನೀಡಿಲ್ಲ. ಆದರೆ “ಇಂತಹ ಕೃತಕ ವಿಸ್ತರಣೆಯನ್ನು ಭಾರತ ಸ್ವೀಕರಿಸುವುದಿಲ್ಲ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಕಳೆದ ತಿಂಗಳು ಹೇಳಿದ್ದರು.


ಓದಿ: ಗಡಿ ವಿವಾದ; ಭಾರತ ಅತಿಕ್ರಮಿಸಿರುವ ಪ್ರದೇಶವನ್ನು ಹಿಂತಿರುಗಿಸಬೇಕು: ನೇಪಾಳ ಪ್ರಧಾನಿ


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...