ತಮಿಳುನಾಡು ಲಾಕಪ್ ಡೆತ್: ಪೊಲೀಸರನ್ನು ವೈಭವೀಕರಿಸಿದ್ದಕ್ಕೆ ಬೇಸರವಿದೆಯೆಂದ ಸಿಂಗಂ ನಿರ್ದೇಶಕ ’ಹರಿ’

ಪೊಲೀಸರನ್ನು ವೈಭವೀಕರಿಸಿದ್ದಕ್ಕೆ ಬೇಸರವಿದೆ : ಸಿಂಗಂ ನಿರ್ದೇಶಕ ’ಹರಿ’

ಹಲವಾರು ಭಾಷೆಗಳಲ್ಲಿ ರಿಮೇಕ್ ಆಗಿರುವ ಜನಪ್ರಿಯ ಸಿನೆಮಾ ’ಸಿಂಗಂ’ ಇದರ ನಿರ್ದೇಶಕ ಹರಿ ಅವರು ಪೊಲೀಸರನ್ನು ವೈಭವೀಕರಿಸುವ ಚಿತ್ರಗಳನ್ನು ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಹರಿ ಇದುವರೆಗೆ ಪೊಲೀಸ್ ಕಥಾವಸ್ತುಗಳ ಮೇಲೆ ಐದು ಚಲನಚಿತ್ರಗಳನ್ನು ಮಾಡಿದ್ದು, ಈ ಪಾತ್ರಗಳೆಲ್ಲವೂ  ಎನ್ಕೌಂಟರ್‌ಗಳನ್ನು ಸಮರ್ಥಿಸುತ್ತಾ ಪೊಲೀಸ್ ಹಿಂಸಾಚಾರವನ್ನು ವೈಭವೀಕರಿಸುತ್ತವೆ.

ಜೂನ್ 28 ರ ದಿನಾಂಕ ಮತ್ತು ಅವರ ಸಹಿ ಇರುವ ತನ್ನ ಪತ್ರದಲ್ಲಿ, ತಮಿಳುನಾಡಿನ ಯಾವುದೇ ವ್ಯಕ್ತಿಯು ಸಾಥಂಕುಲಂನಲ್ಲಿ ನಡೆದ ಕ್ರೂರತೆಗೆ ಒಳಗಾಗಬಾರದು ಎಂದು ಬರೆದಿದ್ದಾರೆ.

“ಸಾಥಂಕುಲಂ ಘಟನೆ ತಮಿಳುನಾಡಿನಲ್ಲಿ ಬೇರೆಯವರಿಗೆ ಆಗಬಾರದು. ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಅದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅತ್ಯುಗ್ರ ಶಿಕ್ಷೆಯಾಗುವುದು. ಪೊಲೀಸ್ ಪಡೆಯಲ್ಲಿ ಕೆಲವರು ನಿಯಮ ಉಲ್ಲಂಘಿಸಿದ್ದು ಇಡೀ ಪಡೆಗೆ ಅಪಮಾನ ತಂದಿದೆ. ಪೊಲೀಸರನ್ನು ವೈಭವೀಕರಿಸುವ ಐದು ಚಲನಚಿತ್ರಗಳನ್ನು ಮಾಡಿದ್ದಕ್ಕಾಗಿ ನಾನು ಇಂದು ತುಂಬಾ ದುಃಖಿತನಾಗಿದ್ದೇನೆ” ಎಂದು ಅವರು ಬರೆದಿದ್ದಾರೆ.

ಜಯರಾಜ್ ಮತ್ತು ಬೆನಿಕ್ಸ್ ಎಂಬವರು ಪೊಲೀಸರ ವಶದಲ್ಲಿ ಸಾವಿಗೀಡಾದ ನಂತರ ಇವರಿಬ್ಬರನ್ನು ಪೊಲೀಸರು ಚಿತ್ರಹಿಂಸೆಗೊಳಪಡಿಸಿದ್ದಾರೆ, ಅದರಿಂದಾಗಿ ಅವರು ಸಾವಿಗೀಡಾದರು ಎಂಬ ಆರೋಪಗಳೆದ್ದು ತಮಿಳುನಾಡಿನಲ್ಲಿ ಭಾರಿ ಆಕ್ರೋಶದ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ ಹರಿ ಅವರ ಹೇಳಿಕೆ ಬಂದಿದೆ.

ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಹಿರಂಗವಾಗಿಲ್ಲ.

ಹರಿ ಇದುವರೆಗೆ ಪೊಲೀಸ್ ಕಥಾವಸ್ತುಗಳನ್ನಿಟ್ಟು ಐದು ಚಲನಚಿತ್ರಗಳನ್ನು ಮಾಡಿದ್ದಾರೆ. ಈ ಎಲ್ಲಾ ಪಾತ್ರಗಳು  ಎನ್ಕೌಂಟರ್ಗಳನ್ನು ಸಮರ್ಥಿಸುತ್ತದೆ ಮತ್ತು ಪೊಲೀಸ್ ಹಿಂಸಾಚಾರವನ್ನು ವೈಭವೀಕರಿಸುತ್ತದೆ.

ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಿಗೆ ಹಲವಾರು ಆಕ್ಷನ್ ಸನ್ನಿವೇಶಗಳನ್ನು ಹೊಂದಿದ್ದು, ಅಪರಾಧವನ್ನು ನಿಯಂತ್ರಣದಲ್ಲಿಡಲು ಹಿಂಸಾಚಾರದ ಅಗತ್ಯವನ್ನು ವೈಭವೀಕರಿಸುವ ಪಂಚ್ ಡೈಲಾಗ್‌ಗಳನ್ನು ಈ ಪಾತ್ರಗಳು ಹೇಳುತ್ತದೆ.

ಹರಿ ಅವರ ಸಿಂಗಂ ಸಿನಿಮಾ 2010 ರಲ್ಲಿ ಮೊದಲಿಗೆ ತಮಿಳಿನಲ್ಲಿ ಬಿಡುಗಡೆಯಾಗಿ, ನಂತರ ಕನ್ನಡ, ಹಿಂದಿ, ಬಂಗಾಳಿ ಮತ್ತು ಪಂಜಾಬಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ರಿಮೇಕ್ ಮಾಡಲಾಯಿತು. ಹಿಂದಿಯಲ್ಲಿ ನಟ ಅಜಯ್ ದೇವ್‌ಗನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.


ಓದಿ: ಅಮ್ಮ ಆರೋಗ್ಯವಾಗಿದ್ದಾರೆ; ಸುಳ್ಳು ಸುದ್ದಿ ಹಬ್ಬಿಸದಿರಿ: ಹಿನ್ನಲೆ ಗಾಯಕಿ ಎಸ್. ಜಾನಕಿ ಪುತ್ರ ಸ್ಪಷ್ಟನೆ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here