Homeಮುಖಪುಟಜಮ್ಮು ಕಾಶ್ಮೀರದಲ್ಲಿ 4 ಜಿ ಸೇವೆ ವಿಸ್ತರಣೆ ಇಲ್ಲ: ಗೃಹ ಸಚಿವಾಲಯ

ಜಮ್ಮು ಕಾಶ್ಮೀರದಲ್ಲಿ 4 ಜಿ ಸೇವೆ ವಿಸ್ತರಣೆ ಇಲ್ಲ: ಗೃಹ ಸಚಿವಾಲಯ

ಪರಿಸ್ಥಿತಿಯನ್ನು ಹೊಸದಾಗಿ ಪರಿಶೀಲಿಸಿದ ನಂತರ ನಿಷೇಧವನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಲೀನ್ ಕಬ್ರಾ ತಿಳಿಸಿದ್ದಾರೆ.

- Advertisement -
- Advertisement -

ಜಮ್ಮು ಕಾಶ್ಮೀರ ಆಡಳಿತವು ಗಂದರ್‌ಬಲ್ ಮತ್ತು ಉಧಂಪುರ್‌ ಎರಡು ಜಿಲ್ಲೆಗಳ ಹೊರಗೆ ಹೈಸ್ಪೀಡ್ ಮೊಬೈಲ್ ಇಂಟರ್ನೆಟ್ ಅಥವಾ 4 ಜಿ ಸೇವೆಗಳನ್ನು ವಿಸ್ತರಿಸಲು ನಿರಾಕರಿಸಿದೆ. ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಆಮಿಷವೊಡ್ಡಲು ಪ್ರಯತ್ನಿಸುತ್ತಿರುವ “ಭಯೋತ್ಪಾದಕ ಘಟಕಗಳ” ಬಗ್ಗೆ ಭದ್ರತಾ ಸಂಸ್ಥೆಗಳ ವರದಿ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಆಗಸ್ಟ್ 5 ರಂದು ಕೇಂದ್ರವು ಸಂವಿಧಾನದ 370 ನೇ ವಿಧಿಯನ್ನು ಹಿಂತೆಗೆದುಕೊಂಡು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಇದಾಗೀ ಕೆಲವೇ ಗಂಟೆಗಳಲ್ಲಿ ರಾಜ್ಯದಲ್ಲಿ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸಲಾಗಿತ್ತು.

ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಹೋರಾಟಗಾರ ಕೆ.ಎಲ್ ಅಶೋಕ್‌ರನ್ನು ನಿಂದಿಸಿದ ಕೊಪ್ಪ ಪೊಲೀಸರು: ಪೇದೆ, ಎಸ್‌ಐ ಅಮಾನತ್ತಿಗೆ ಆಗ್ರಹ.

4 ಜಿ ನೆಟ್‌ವರ್ಕ್‌ನ ಸಂಪೂರ್ಣ ನಿಷೇಧದ ಮಧ್ಯೆ ಈ ವರ್ಷ ಜನವರಿ 25 ರಂದು 2ಜಿ ಇಂಟರ್ನೆಟ್ ಸೇವೆಯನ್ನು ಪುನಃಸ್ಥಾಪಿಸಲಾಯಿತು. ಅದರ ಮುಂದುವರಿದ ಭಾಗವಾಗಿ ಆಗಸ್ಟ್‌ನಲ್ಲಿ ಸರ್ಕಾರವು ನಿರ್ಬಂಧಗಳನ್ನು  ಸರಾಗಗೊಳಿಸುವಿಕೆಯ ಭಾಗವಾಗಿ ಗಂದರ್‌ಬಲ್ ಮತ್ತು ಉಧಂಪುರ್ ಜಿಲ್ಲೆಗಳಲ್ಲಿ “ಪ್ರಯೋಗ ಆಧಾರದ ಮೇಲೆ” ಹೈಸ್ಪೀಡ್ ಮೊಬೈಲ್ ಡೇಟಾ ಸೇವೆಯನ್ನು ಪುನರಾರಂಭಿಸಿತು. ಈ ಜಿಲ್ಲೆಗಳಲ್ಲಿ 4 ಜಿ ಸೇವೆಗಳು ಸೆಪ್ಟೆಂಬರ್ 30 ರವರೆಗೆ ಮುಂದುವರಿಯಲಿವೆ.

ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಲೀನ್ ಕಬ್ರಾ ತಮ್ಮ ಆದೇಶದಲ್ಲಿ ’ಪರಿಸ್ಥಿತಿಯನ್ನು ಹೊಸದಾಗಿ ಪರಿಶೀಲಿಸಿದ ನಂತರ ನಿಷೇಧವನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಎರಡು ಜಿಲ್ಲೆಗಳಲ್ಲಿ 4ಜಿ ಇಂಟರ್ನೆಟ್ ಸೇವೆಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಯಾವುದೇ ವರದಿಗಳು ಬಂದಿಲ್ಲವಾದರೂ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ’ ಎಂದಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ಹೊಸ ಆಡಳಿತ ನಿಯಮ ಪ್ರಕಟಿಸಿದ ಗೃಹ ಸಚಿವಾಲಯ
PC:Reuters

ಭಯೋತ್ಪಾದಕ ಘಟಕ‌ಗಳ ಬಗ್ಗೆ ಕಾನೂನು ಜಾರಿ ಸಂಸ್ಥೆಗಳು ವಿಶ್ವಾಸಾರ್ಹ ಮಾಹಿತಿ ನೀಡಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಭಯೋತ್ಪಾದಕ ಸಂಘಟನೆಗಳು ಯುವಕರಲ್ಲಿ ಭಾವನೆಗಳನ್ನು ಪ್ರಚೋದಿಸಿ ಮೋಸದಿಂದ ಸಂಘಟನೆಗಳಿಗೆ ಸೇರುವಂತೆ ಮಾಡುತ್ತವೆ. ಹೀಗಾಗಿ 4ಜಿ ಇಂಟರ್‌ನೆಟ್ ದುರುಪಯೋಗವಾಗುವ ಸಂಭಾವ್ಯವನ್ನು ಸೂಚಿಸುತ್ತದೆ ಎಂದು ತಿಳಿಸಿದೆ.

ಮುಂದುವರೆದು, ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಭಯೋತ್ಪಾದಕರು ಒಳನುಸುಳುವ ಪ್ರಯತ್ನಗಳಿಗೆ ಸಹಾಯ ಮಾಡಲು ಹೈಸ್ಪೀಡ್ ಡೇಟಾ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಏಜೆನ್ಸಿಗಳು ಆತಂಕ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಸಂಸತ್ತಿನ ಮಾನ್ಸೂನ್ ಅಧಿವೇಶನ: ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ ಕೇಂದ್ರ !

ಸುಪ್ರೀಂ ಕೋರ್ಟ್ ಕೇಂದ್ರವನ್ನು ಹಿರಿಯ ಗೃಹ ಸಚಿವಾಲಯ ಮತ್ತು ಕೇಂದ್ರ ಪ್ರಾಂತ್ಯದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸುವಂತೆ ಕೇಳಿದ ಕೆಲವೇ ದಿನಗಳಲ್ಲಿ ‍ಆಗಸ್ಟ್ 16 ರಂದು ಗಂದರ್‌‌ಬಲ್ ಮತ್ತು ಉಧಂಪುರದಲ್ಲಿ 4 ಜಿ ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿವಿಧ ಸಂಸ್ಥೆಗಳಿಂದ ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಹಲವು ಪ್ರತಿಭಟನೆಗಳನ್ನು ಮೋದಿ ಸರ್ಕಾರ ಎದುರಿಸಬೇಕಾಯಿತು. ಈಗಲೂ 2 ಜಿಲ್ಲೆಗಳಲ್ಲಿ 4ಜಿ ಇಂಟರ್‌ನೆಟ್ ದುರುಪಯೋಗವಾಗಿಲ್ಲ ಎಂದರೂ ಹೈಸ್ಪೀಡ್ ಇಂಟರ್‌ನೆಟ್ ವಿಸ್ತರಣೆ ಮಾಡಲು ಸರ್ಕಾರ ಚಿಂತಿಸುತ್ತಿದೆ.


ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ರಿಯಾ ಜೊತೆ ಮಾಧ್ಯಮಗಳ ನಡೆ ಖಂಡನೀಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಗ್ಯದ ಆಧಾರದ ಮೇಲೆ ಮಧ್ಯಂತರ ಜಾಮೀನು ವಿಸ್ತರಿಸುವಂತೆ ಸುಪ್ರೀಂ ಮೆಟ್ಟಿಲೇರಿದ ಕೇಜ್ರಿವಾಲ್

0
ದೆಹಲಿ ಅಬಕಾರಿ ನೀತಿ ಪ್ರಕರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೂನ್ 2 ರಂದು ಜೈಲಿಗೆ ವಾಪಸಾಗಬೇಕಿದ್ದು, ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಕೆಲವು ವೈದ್ಯಕೀಯ...