Homeಕರ್ನಾಟಕ'ಆಕ್ಟ್-1978' ಟ್ರೇಲರ್ ಮೂಲಕ ಕುತೂಹಲದ ಬಾಂಬಿಟ್ಟ ಮಂಸೋರೆ, ಯಜ್ಞಾ ಶೆಟ್ಟಿ!

‘ಆಕ್ಟ್-1978’ ಟ್ರೇಲರ್ ಮೂಲಕ ಕುತೂಹಲದ ಬಾಂಬಿಟ್ಟ ಮಂಸೋರೆ, ಯಜ್ಞಾ ಶೆಟ್ಟಿ!

ಸರ್ಕಾರಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಜನ ಸಾಮಾನ್ಯರು ಒಂದು ಸರ್ಕಾರಿ ಕಚೇರಿಯನ್ನು ಹೈಜಾಕ್ ಮಾಡೋ ದೃಶ್ಯಗಳೊಂದಿಗೆ, ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಎಂಬುದನ್ನು ಟ್ರೇಲರ್‌ ತೋರಿಸಿಕೊಟ್ಟಿದೆ.

- Advertisement -
- Advertisement -

ಪೋಸ್ಟರ್‌ಗಳು ಮತ್ತು ಥೀಮ್‌ ಸಾಂಗ್‌ ಮೂಲಕ ಜನರ ಮನ ಗೆದ್ದಿರುವ ಮಂಸೋರೆ ನಿರ್ದೇಶನದ ಬಹುನಿರೀಕ್ಷಿತ ಆಕ್ಟ್-1978 ಚಿತ್ರ, ಸದ್ಯ ಟ್ರೇಲರ್‌ ಮೂಲಕ ಧೂಳೆಬ್ಬಿಸುತ್ತಿದೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರ ದಕ್ಕಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾವಾಗುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಕೊರೊನಾ ಕಾರಣದಿಂದಾಗಿ ಮುಚ್ಚಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ರೀಒಪನ್‌ ಆಗಿವೆ. ಆದರೆ ಜನ ಚಿತ್ರಮಂದಿರಗಳೊಗೆ ಬರುತ್ತಿರುವುದು ತೀರಾ ಕಡಿಮೆ. ಈ ನಿಟ್ಟಿನಲ್ಲಿ ಚಿತ್ರತಂಡಗಳು ಹಳೆಯ ಚಿತ್ರಗಳನ್ನೇ  ರಿರಿಲೀಸ್​ ಮಾಡುತ್ತಿವೆ. ಆದರೆ ಆಕ್ಟ್-1978 ಚಿತ್ರತಂಡ ಮಾತ್ರ ಒಳ್ಳೆಯ ಸಿನಿಮಾ ಕೊಟ್ಟರೇ ಜನ ಚಿತ್ರಮಂದಿರಗಳಿಗೆ ಬಂದೇ ಬರುತ್ತಾರೆ ಎಂಬ ಭರವಸೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ.

ಪುನೀತ್ ರಾಜ್ ಕುಮಾರ್ ಅವರ ’ಪಿಆರ್‌ಕೆ ಆಡಿಯೋ’ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿರುವ ಟ್ರೇಲರ್‌, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಿರ್ದೇಶಕ ಮಂಸೋರೆ ಮೊದಲೇ ಹೇಳಿದಂತೆ ಇದೊಂದು ಮಹಿಳಾ ಕೇಂದ್ರಿತ ಚಿತ್ರವಾಗಿದ್ದು, ನಟಿ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ACT 1978
ಆಕ್ಟ್-1978 ಚಿತ್ರದಲ್ಲಿ ಯಜ್ಞಾ ಶೆಟ್ಟಿ

ಟ್ರೇಲರ್‌ನಲ್ಲಿ ಕಾಣಿಸಿಕೊಂಡಂತೆ ತುಂಬ ಗರ್ಭಿಣಿಯಾಗಿರುವ ಯಜ್ಞಾ ಶೆಟ್ಟಿ, ಹೊಟ್ಟೆಗೆ ಬಾಂಬ್‌ ಕಟ್ಟಿಕೊಂಡು ಸರ್ಕಾರಿ ಕಚೇರಿಗೆ ನುಗ್ಗುವ ದೃಶ್ಯ ರೋಚಕವಾಗಿದೆ. ಸರ್ಕಾರಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಜನ ಸಾಮಾನ್ಯರು ಒಂದು ಸರ್ಕಾರಿ ಕಚೇರಿಯನ್ನು ಹೈಜಾಕ್ ಮಾಡೋ ದೃಶ್ಯಗಳೊಂದಿಗೆ, ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಎಂಬುದನ್ನು ಟ್ರೇಲರ್‌ ತೋರಿಸಿಕೊಟ್ಟಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

ಇದನ್ನೂ ಓದಿ: ಸಾಮಾಜಿಕ ಹೋರಾಟದಲ್ಲಿ ಮಹಿಳೆಯ ಪಾತ್ರ ಬಿಂಬಿಸುವ ಚಿತ್ರ ‘ಆಕ್ಟ್- 1978’

ಚಿತ್ರದ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾಹಿತಿ ಹಂಚಿಕೊಂಡಿದ್ದ ನಿರ್ದೇಶಕ ಮಂಸೋರೆ, ’ಆಕ್ಟ್-1978 ಸಿನಿಮಾ ಸಾಮಾಜಿಕ ಜವಾಬ್ದಾರಿ ಹೊಂದಿರುವ ಮತ್ತು ಮಹಿಳಾ ಕೇಂದ್ರಿತ ಚಲನಚಿತ್ರ. ಸಾಮಾಜಿಕ ಹೋರಾಟಗಳಲ್ಲಿ ಮಹಿಳೆಯ ಪಾತ್ರವನ್ನು ಬಿಂಬಿಸುವ ಚಿತ್ರ ಇದು’ ಎಂದಿದ್ದರು.

ಟ್ರೇಲರ್ ನೋಡಿ.

ಈ ಹಿಂದೆ ರಾಷ್ಟ ಪ್ರಶಸ್ತಿ ಪುರಸ್ಕೃತ ಹರಿವು ಮತ್ತು ನಾತಿಚರಾಮಿ ಅಂತಹ ಚಿತ್ರಗಳನ್ನು ನಿರ್ದೇಶಿಸಿ ಕನ್ನಡಕ್ಕೆ ತಾವೊಬ್ಬ ಭರವಸೆಯ ನಿರ್ದೇಶಕ ಎಂದು ಸಾಬೀತು ಮಾಡಿರುವ ನಿರ್ದೇಶಕ ಮಂಸೋರೆ ಅವರ ಮತ್ತೊಂದು ಬಹು ನಿರೀಕ್ಷಿತ ಮಹಿಳಾ ಕೇಂದ್ರಿತ ಚಿತ್ರ ಆಕ್ಟ್- 1978.

ಮಂಸೋರೆ ನಿರ್ದೇಶನದ ಆಕ್ಟ್-‌ 1978 ಚಿತ್ರಕ್ಕೆ, ಬೆಲ್ ಬಾಟಂ ಖ್ಯಾತಿಯ ಟಿ.ಕೆ.ದಯಾನಂದ್ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ದೇವರಾಜ್ .ಆರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯಜ್ಞಾ ಶೆಟ್ಟಿ, ಬಿ.ಸುರೇಶ್‌, ಶ್ರುತಿ, ಪ್ರಮೋದ್‌ ಶೆಟ್ಟಿ, ಅಚ್ಯುತ್‌ ಕುಮಾರ್‌, ದತ್ತಣ್ಣ, ಸಂಚಾರಿ ವಿಜಯ್‌, ಶೋಭರಾಜ್‌, ಅವಿನಾಶ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಶೃತಿ ಹರಿಹರನ್: ಕನ್ನಡಕ್ಕೆ ದಾಖಲೆಯ 11 ರಾಷ್ಟ್ರಪ್ರಶಸ್ತಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ....

0
ನಾಗಾಂವ್‌ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು...