Homeಮುಖಪುಟ"ಆನಂದ್‌ ಸಿಂಗ್‌ ಪ್ರಾಮಾಣಿಕ": ರಾಮುಲು ಬ್ಯಾಟಿಂಗ್

“ಆನಂದ್‌ ಸಿಂಗ್‌ ಪ್ರಾಮಾಣಿಕ”: ರಾಮುಲು ಬ್ಯಾಟಿಂಗ್

- Advertisement -
- Advertisement -

“ಪ್ರಾಮಾಣಿಕರಾದ ಆನಂದ್‌ ಸಿಂಗ್‌ ಅರಣ್ಯ ಸಚಿವರಾಗಿ ಮುಂದುವರೆಯುವುದರಲ್ಲಿ ಯಾವುದೆ ತಪ್ಪಿಲ್ಲ” ಎಂದು ಆರೋಗ್ಯ ಸಚಿವ ರಾಮುಲು ಹೇಳಿದ್ದಾರೆ.

“ಕಾಂಗ್ರೆಸ್ ರಾಜಕೀಯ ಉದ್ದೇಶಕ್ಕಾಗಿ ಆನಂದ್‌ ಸಿಂಗ್‌ ಮತ್ತು ಜನಾರ್ಧನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದೆ. ಕಾಂಗ್ರೆಸಿನ ಈ ಪಿತೂರಿಯಿಂದಾಗಿ ಬಳ್ಳಾರಿಗೆ ಕೆಟ್ಟ ಹೆಸರು ಬಂದಿದೆ” ಎಂದು ಆರೋಗ್ಯ ಸಚಿವ ರಾಮುಲು ಹೇಳಿದ್ದಾರೆ.

“ಕಾಂಗ್ರೆಸ್‌ ಪಿತೂರಿಯಿಂದ ಆನಂದ್‌ ಸಿಂಗ್‌ ಮೇಲೆ ಪ್ರಕರಣ ದಾಖಲಾಗಿತ್ತು. ಅದು ಕಾಂಗ್ರೆಸ್‌ ಸರ್ಕಾರವಿದ್ದಾಗ ರಾಜಕೀಯ ಪಿತೂರಿಯಿಂದ ದಾಖಲಾದ ಪ್ರಕರಣ” ಎಂದು ಸಚಿವ ರಾಮುಲ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿ ಹತ್ತು ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದರು. ಈ ಸಂಧರ್ಭದಲ್ಲಿ ಆನಂದ್‌ ಸಿಂಗ್‌ ಅವರಿಗೆ ಅರಣ್ಯ ಖಾತೆಯನ್ನು ನೀಡಲಾಗಿತ್ತು. ಆದರೆ ಆನಂದ್‌ ಸಿಂಗ್‌ ವಿರುದ್ಧ ಅರಣ್ಯ ಕಾಯ್ದೆ ಸೇರಿದಂತೆ ಹದಿನೈದು ಪ್ರಕರಣಗಳು ಬಾಕಿ ಇದೆ ಎಂಬ ಆರೋಪ ಕೇಳಿ ಬಂದಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಎಪಿ ನಾಯಕರಿಂದ ಪ್ರತಿಭಟನೆ; ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಬಿಗಿ ಭದ್ರತೆ

0
ಎಎಪಿಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಇಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀನ್ ದಯಾಳ್...