Homeಅಂಕಣಗಳುಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

ಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

- Advertisement -
ತಿಜಾಡ್ಯದ ವಿರುದ್ಧ ಬಹುಕಾಲದಿಂದಲೂ ಸಂತರು, ಸಮಾಜಸುಧಾರಕರು ಎಷ್ಟೇ ಮಾತನಾಡಿದ್ದರೂ ಅವರುಗಳ ಜಾತಿ ಮೂಲವನ್ನೇ ಎತ್ತಿ ಹಿಡಿದು ಅವರನ್ನು ಅವರವರ ಜಾತಿಗಳ ಐಕಾನುಗಳನ್ನಾಗಿಸಿದ ಹಿರಿಮೆ ನಮ್ಮದು. ಈ ಮನೋಧರ್ಮದ ಬಲಿಪಶುಗಳಾಗಿರುವವರು ಇಲ್ಲಿನ ಅಸ್ಪøಶ್ಯರು. ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಸಬಲರಾದರೂ ಇವರನ್ನು ಸಾಮಾಜಿಕವಾಗಿ ತಮ್ಮ ಸಮಾನರೆಂದು ಒಪ್ಪಿಕೊಳ್ಳುವುದಕ್ಕೆ ಮೇಲ್ಜಾತಿ ಮನಸ್ಥಿತಿಯವರು ಸಿದ್ಧರಿಲ್ಲ. ಈ ಮನಸ್ಥಿತಿ ಆಗಾಗ ತನ್ನ ವಿಕೃತ ರೂಪವನ್ನು ಪ್ರದರ್ಶಿಸಿ ಸಮಾಜವನ್ನೇ ಕದಡುತ್ತದೆ.
ಈ ಮಾತಿಗೊಂದು ತಾಜಾ ಉದಾಹರಣೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೂಲೆಯಲ್ಲಿರುವ ಗೋನಾಳ ಗ್ರಾಮ. ಕುರುಬ ಸಮುದಾಯದ ಸುಮಾರು 70, ಮಾದಿಗ ಸಮುದಾಯದ ಸುಮಾರು 50, ಲಿಂಗಾಯತ, ನಾಯಕ, ಮುಸ್ಲಿಂ ಸಮುದಾಯದ ತಲಾ 10 – 15 ಮನೆಗಳಿರುವ ಈ ಹಳ್ಳಿ. ಇಲ್ಲಿ ಆರ್ಥಿಕವಾಗಿ ಹೇಳಿಕೊಳ್ಳುವಂಥ ಅಂತರ ಕಂಡು ಬರುವುದಿಲ್ಲ. ಕುರುಬರಲ್ಲಿರುವಂತೆಯೇ ಮಾದಿಗರಲ್ಲಿಯೂ ಸ್ಥಿತಿವಂತರು, ಸಣ್ಣ ಭೂಹಿಡುವಳಿದಾರರು, ಭೂಹೀನರು ಇದ್ದಾರೆ. ಎಲ್ಲ ಮನೆಗಳಲ್ಲಿಯೂ ಬಸವಣ್ಣನವರ ಪಟಗಳು ರಾರಾಜಿಸುತ್ತವೆ. ಆದರೆ ದೇವರ ಸ್ಥಾದಲ್ಲಿರುವ ಬಸವೇಶ್ವರರ ಬೋಧನೆಗಳು ಸಾಮಾಜಿಕವಾಗಿ ನೆಲೆನಿಂತಿರುವ ಸಂಬಂಧಗಳನ್ನು ಬದಲಾಯಿಸುವಷ್ಟು ಶಕ್ತನಾಗಿಲ್ಲದಿರುವುದೊಂದು ದುರಂತ.
ತಾವು ಮೇಲ್‍ಸ್ತರದವರು ಎಂದು ಕೊಳ್ಳುವ ಕುರುಬ ಸಮುದಾಯದವರು, ತಮ್ಮ ಕಣ್ಣ ಮುಂದೆಯೇ ಅಸ್ಪøಶ್ಯರೆನಿಸಿಕೊಂಡವರು ಬೆಳೆಯುವುದನ್ನು ಸಹಿಸಲಾರದೇ ಹೋದರು. ಆ ಊರಿನ ಬಹುತೇಕರು ಕಂಪ್ಲಿ, ಹೊಸಪೇಟೆಗಳಂಥಾ ಊರುಗಳಲ್ಲಿ ಶಿಕ್ಷಣವನ್ನು ಪಡೆದಿದ್ದರೂ ಆ ಶಿಕ್ಷಣ ಕೇವಲ ಸರ್ಟಿಫಿಕೇಟುಗಳಿಗೆ ಸೀಮಿತವಾಗಿದೆ. ಮನೋಭಾವಗಳಂತೂ ಹಳೆಯ ಮಾದರಿಯವೇ ಆಗಿವೆ. ಕೆಳಜಾತಿಗಳ ಬಗೆಗಿನ ಅಸಹನೆಯ ಕಿಚ್ಚು ಮೇಲ್ಜಾತಿ ಎನಿಸಿಕೊಂಡವರನ್ನು ಒಳಗೊಳಗೇ ಸುಡುತ್ತಿರುವುದನ್ನು ಕಾಣಬಹುದು.
ಜೂನ್ 19ರಂದು ಆ ಹಳ್ಳಿಗೆ ಬೇಟಿ ನೀಡಿದ ಸತ್ಯಶೋಧನ ಸಮಿತಿಗೆ ತಿಳಿದು ಬಂದಂತೆ 2012ರಿಂದ ಎರಡೂ ಸಮುದಾಯಗಳ ನಡುವೆ ಆಗಾಗ ಆಡಳಿತ ಕೈಗೊಳ್ಳುವ ಶಾಂತಿ ಸಭೆಗಳಂಥಾ ಕಾರ್ಯಕ್ರಮಗಳು ತೇಪೆ ಹಚ್ಚುವುದನ್ನು ಬಿಟ್ಟರೆ ಮತ್ತೇನೂ ಸಾಧಿಸಲಿಲ್ಲ. ಇಂಥ ತಿಕ್ಕಾಟಗಳು ಒಂದು ಕದನವಾಗಿ ಪ್ರಕಟಗೊಂಡಿದ್ದು 2018ರ ಮೇ 25ರಂದು. ಬನ್ನೆಪ್ಪ ಮಾದಿಗ ಸಮುದಾಯದ ಹಣವಂತನಾಗಿದ್ದು, ಆತನೇ ಸಮುದಾಯದ ನಾಯಕ. ಗ್ರಾಮಪಂಚಾಯತಿಯ ಸದಸ್ಯನೂ ಆಗಿರುವ ಈತನ ಮಾತೇ ಆ ಸಮುದಾಯದ ಇತರರಿಗೆ ಅಂತಿಮ. ಅದೇರೀತಿ ಹೊಸಕೆರಪ್ಪ ಎಂಬುವವನು ಕುರುಬರ ನಾಯಕನಾಗಿದ್ದು, ಇವರಿಬ್ಬರ ನಡುವಿನ ಜಗಳಗಳೇ ಎರಡು ಸಮುದಾಯಗಳ ಜಗಳಗಳಾಗಿ ಮಾರ್ಪಡುತ್ತವೆ. ಅಲ್ಲಿನ ಜನಕ್ಕೆ ರಾಜಕೀಯವಾಗಿಯೂ ಸ್ಪಷ್ಟ ನಿಲುವುಗಳೇನಿಲ್ಲ. ತಮ್ಮ ನಾಯಕರು ಕಾಂಗ್ರೇಸ್ಸಾದರೆ ಅವರೂ ಕಾಂಗ್ರೇಸ್, ಬಿಜೆಪಿಯಾದರೆ ಬಿಜೆಪಿ.
ಕೆಲವು ತಿಂಗಳುಗಳ ಕೆಳಗೆ ಪರಿಶಿಷ್ಟರು ಅಂಬೇಡ್ಕರ್ ಹಾಗೂ ಜಗಜೀವನ್‍ರಾಮ್‍ರವರ ಚಿತ್ರಗಳನ್ನೊಳಗೊಂಡ ಫಲಕವೊಂದನ್ನು ಊರಿನ ಮಧ್ಯಭಾಗದ ರಸ್ತೆಯ ಪಕ್ಕದಲ್ಲಿ ಸ್ಥಾಪಿಸಿದರು. 5*5 ಅಳತೆಯ ಆ ಜಾಗ ಕುರುಬ ಸಮುದಾಯದ ಕುಟುಂಬವೊಂದಕ್ಕೆ ಸೇರಿದ್ದು. ಶಿಕ್ಷಣವಿಲ್ಲದಿದ್ದರೂ ಇತರರಿಗಿಂತಲೂ ಭಿನ್ನವಾಗಿ ಯೋಚಿಸುವ ಈ ಕುಟುಂಬದವರು ತಮ್ಮ ಜಾಗದಲ್ಲಿ ಆ ಫಲಕವನ್ನು ನೆಡಲು ಪರಿಶಿಷ್ಟರಿಗೆ ಅನುಮತಿಯನ್ನೂ ನೀಡಿದ್ದರು. ಆರ್ಥಿಕವಾಗಿ ತಮಗಿಂತಲೂ ಕಡಿಮೆ ಇಲ್ಲವೆಂದು ತೋರಿಸಿಕೊಳ್ಳುವ ಪರಿಶಿಷ್ಟರು ಈಗ ತಮ್ಮ ಸಾಮಾಜಿಕ ಅಸ್ತಿತ್ವವನ್ನು ಗಟ್ಟಿಯಾಗಿ ನೆಲೆಗೊಳಿಸಲು ಮಾಡಿದ ಈ ಹೊಸ ಪ್ರಯತ್ನ ಮೇಲ್ಜಾತಿ ಎಂದುಕೊಳ್ಳುವ ಕುರುಬರಿಂದ ಸಹಿಸಲಾಗಲಿಲ್ಲ. ಈ ಫಲಕ ತಮಗೆ ಸವಾಲಾಗಿದೆಯೆಂದು ಭಾವಿಸಿದ ಕುರುಬ ಸಮಾಜದ ಇತರರು ಫಲಕದ ಬಗ್ಗೆ ತಗಾದೆ ತೆಗೆದು ಒಂದು ರೀತಿಯ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿದ್ದ ಒಂದೇ ಒಂದು ಹೋಟಲಿನಲ್ಲಿ ಮತ್ತು ಬಸವಣ್ಣನವರ ದೇವಸ್ಥಾನದಲ್ಲಿ ಅಸ್ಪøಶ್ಯತೆಯ ಆಚರಣೆಯನ್ನು ಭಿನ್ನ ರೀತಿಯಲ್ಲಿ ಅವರ ಮೇಲೆ ಹೇರುವ ಪ್ರಯತ್ನ ನಡೆಯಿತು.
ಮೇ 24ರಂದು ಈ ಎರಡೂ ಸಮುದಾಯಗಳ ಇಬ್ಬರು ಊರ ಬದಿಯ ಕಾಲುದಾರಿಯಲ್ಲಿ ವಿರುದ್ಧ ದಿಕ್ಕುಗಳಿಂದ ನಡೆದು ಬಂದಿದ್ದು ಯಾರು ಯಾರಿಗೆ ದಾರಿ ಬಿಡಬೇಕೆಂಬ ಬಗ್ಗೆ ಸಣ್ಣ ಜಗಳ ನಡೆದಿದೆ. ಅಂದು ಸಂಜೆ ತನ್ನ ಸಮುದಾಯದವನ ಪರವಾಗಿ ಮೇಲ್ಜಾತಿಯವರನ್ನು ಪ್ರಶ್ನೆ ಮಾಡಿದ ಬನ್ನೆಪ್ಪನ ಮಾತುಗಳು ಮಾರನೆಯ ದಿನದ ಭಯಂಕರ ಆಗುಹೋಗುಗಳಿಗೆ ನೆಪವಾದವು. ಇಂತಹ ಸನ್ನಿವೇಶಗಳಲ್ಲಿ ಮೇಲ್ಜಾತಿ ಮನಸ್ಥಿತಿಗಳ ಸ್ಪಂದನೆ ಒಂದೇ ರೀತಿಯದ್ದು, ಅದು ತಮ್ಮ ಕಣ್‍ಕಿಚ್ಚಿಗೆ ಕಾರಣವಾದ ದಲಿತರ ಮೇಲೆ ದಾಳಿ ನಡೆಸುವುದು. ಮೇ 25ರಂದು ನಡೆದದ್ದು ಅದೇ. ಚುಂಡೂರು, ಕಾರಂಚೇಡು, ಕಂಬಾಲಪಲ್ಲಿಗಳಲ್ಲಿ ನಡೆದಿದ್ದೂ ಹೀಗೆಯೇ.
ಅಂದು ಯೋಜಿತ ರೀತಿಯಲ್ಲಿ ನಡೆದ ದಾಳಿಯನ್ನು ಎದುರಿಸಲಾಗದ ಮಾದಿಗ ಜನಾಂಗದವರು ತಿರುಗೇಟು ನೀಡಲು ಪ್ರಯತ್ನಿಸಿದರೂ, ಸಂಘಟಿತ ದಾಳಿಯನ್ನೆದುರಿಸಲಾರದೆ, ಬಹುತೇಕ ಜನ ದಾಳಿಯಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟು ಓಡಿದರು. ಈ ನಡುವೆ ಬನ್ನೆಪ್ಪನ ಮಗ ದೊಡ್ಡದೇವಣ್ಣ ದಾಳಿಕೋರರಿಂದ ಪಾರಾಗಲು ಒಂದು ಮನೆಗೆ ನುಗ್ಗಿದ. ಅವನನ್ನು ಹಿಂಬಾಲಿಸಿದ ಐದಾರು ಜನರ ಗುಂಪೊಂದು ಆ ಮನೆಯಲ್ಲಿಯೇ ಅವನನ್ನು  ಮನಸೋಇಚ್ಚೆ ಚಚ್ಚಿದರು. ಕೊನೆಗೆ ಸತ್ತನೆಂದೇ ಭಾವಿಸಿ ದೇಹವನ್ನು ಒಂದು ಛಾಪೆಯಲ್ಲಿ ಸುತ್ತಿಟ್ಟು ಜಾಗ ಖಾಲಿ ಮಾಡಿದರು. ಆದರೆ ಸುಮಾರು 4 ಘಂಟೆಗಳ ಕಾಲ ನೆತ್ತರ ಮಡುವಿನಲ್ಲಿ ಬಿದ್ದಿದ್ದ ಆ ಯುವಕ ಜಾÐನ ತಪ್ಪಿದ ಸ್ಥಿತಿಯಲ್ಲಿದ್ದ. ಸಂಜೆ ಅವನನ್ನು ಕಂಡವರು ಆ ಹೊತ್ತಿಗೆ ಹಳ್ಳಿಗೆ ಬಂದಿದ್ದ ಪೊಲೀಸರಿಗೆ ತಿಳಿಸಿದ್ದರಿಂದ ಅವರು ದೇವಣ್ಣನನ್ನು ಮೊದಲು ಬಳ್ಳಾರಿಗೆ, ನಂತರ ಬೆಂಗಳೂರಿಗೆ ಚಿಕಿತ್ಸೆಗಾಗಿ ಕಳುಹಿಸಿದರು. ತನ್ನ ಎರಡೂ ಕೈಗಳಿಗೆ ಆದ ತೀವ್ರವಾದ ಗಾಯಗಳು ತಲೆಯ ಮೇಲೆ ಬಿದ್ದಿರುವ ಪೆಟ್ಟು ಮತ್ತು ಮಾತನಾಡಲಾಗದಂತೆ ನಾಲಗೆಗೂ ಪೆಟ್ಟುಗಳಿಂದ ಆಘಾತಕ್ಕೊಳಗಾಗಿರುವ ದೇವಣ್ಣ ತನ್ನ ಮನೆಯಲ್ಲಿ ಈಗಲೂ ಅಸಹಾಯಕನಾಗಿ ಮಲಗಿದ್ದಾನೆ. ಆವನ ತಂದೆಯೂ ಸೇರಿದಂತೆ ಹತ್ತಿರದ ಬಂಧುಗಳು ಜೈಲು ಪಾಲಾಗಿದ್ದು, ಈತನಿಗೆ ಸರಿಯಾದ ಚಿಕಿತ್ಸೆಯೂ ದೊರಕದೆ, ಆತನ ಮುಂದಿನ ಸ್ಥಿತಿ ಏನಾಗುತ್ತದೋ ಹೇಳಲಾಗದು.
ಪೊಲೀಸರು ಯಥಾಪ್ರಕಾರ ಎರಡು ಕಡೆಯವರ ಮೇಲೂ ಕೇಸು ಜಡಿದು ಅವರಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಕೆಲವರು ಈಗ ಬಳ್ಳಾರಿಯ ಜೈಲಿನಲ್ಲಿದ್ದಾರೆ. ಹಳ್ಳಿಯಲ್ಲಿ ಕೇವಲ ಮುದುಕರು, ಹೆಂಗಸರು ಮತ್ತು ಮಕ್ಕಳು ಮಾತ್ರವಿದ್ದು ಕೃಷಿ ಚಟುವಟಿಕೆಗಳು ಭರದಿಂದ ಸಾಗಬೇಕಾದ ಈ ಕಾಲದಲ್ಲಿ ಗಂಡಸರು ಪೊಲೀಸರ ಭಯದಿಂದಾಗಿ ಊರಿನಿಂದ ದೂರವೇ ಉಳಿದಿದ್ದಾರೆ. ಹೆಚ್ಚಾಗಿ ಭಯ ಕಾಡುತ್ತಿರುವುದು ಮಾದಿಗ ಸಮುದಾಯದವರನ್ನು. ಇದರ ಪರಿಣಾಮವಾಗಿ ಈ ವರ್ಷದ ಬೆಳೆಹಾಳು.
ಮಾದಿಗ ಸುಮದಾಯದವರ ವಿರುದ್ಧ ಒಟ್ಟು ಸಮಾಜಕ್ಕೇ ಇರುವ ಪೂರ್ವಗ್ರಹ ಕಂಪ್ಲಿಯಲ್ಲಿನ ಪೊಲೀಸರ ಜತೆ ಮಾತನಾಡುವಾಗಲೂ ಕಂಡುಬಂತು. ಸಾಮಾಜಿಕ ವಾಸ್ತವಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲಾಗದ ಇಂಥ ಅಧಿಕಾರ ವರ್ಗದವರಿಂದ ನಿಜವಾದ ನ್ಯಾಯ ಸಿಗುವುದನ್ನು ನಿರೀಕ್ಷಿಸುವುದೂ ಕಷ್ಟ. ಸಮಾಜದ ವಿವಿಧ ಗುಂಪುಗಳ ನಡುವೆ ಏರ್ಪಟ್ಟಿರುವ ಕಂದಕವನ್ನು ಮುಚ್ಚುವ ಕೆಲಸ ಮಾಡಬೇಕಾದರೆ ಎಲ್ಲ ರೀತಿಯ ಸ್ವಾರ್ಥವನ್ನು, ಪೂರ್ವಗ್ರಹಗಳಿಂದ ದೂರವಿಟ್ಟು ಸಮಾಜದ ಸ್ವಾಸ್ಥ್ಯಯನ್ನು ಬಯಸುವ ಅದಕ್ಕಾಗಿ ಕಾಳಜಿ, ಬದ್ಧತೆಗಳಿಂದ ದುಡಿಯುವ ಮನಸ್ಸುಗಳು ಬೇಕು. ಆಗ ಮಾತ್ರ ದೇಶಕ್ಕಂಟಿದ ಜಾತಿಜಾಡ್ಯ ವಾಸಿಯಾಗಬಹುದು. ಇಂದಿನ ವ್ಯವಸ್ಥೆಯಲ್ಲಿ ಅದು ಸಾಧ್ಯವೇ ಎಂಬುದೇ ದೊಡ್ಡ ಪ್ರಶ್ನೆಯಾಗಿಯೇ ಕಾಡುತ್ತದೆ? ಇನ್ನೆಷ್ಟು ದಿನ ಹೀಗೆ…?
 – ನಗರಗೆರೆ ರಮೇಶ್ 
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...