ಪುರಾಣ ಮತ್ತು ವರ್ತಮಾನದ ಭೀಷ್ಮಂದಿರ ಹೋಲಿಕೆಗಳು !!!

| ಇಸ್ಮತ್ ಪಜೀರ್ |

ಭೀಷ್ಮ ಒಮ್ಮೆ ನಡೆದುಕೊಂಡು ಹೋಗುತ್ತಿರುವಾಗ ಆತನ ಊರುಗೋಲಿನಡಿಗೆ ಸಿಲುಕಿದ ಓತಿಕ್ಯಾತವೊಂದು ಅಪ್ಪಚ್ಚಿಯಾಗುತ್ತದೆ. ಹಾಗೆ ವಿಲವಿಲನೆ ಒದ್ದಾಡುತ್ತಿರುವ ಓತಿಕ್ಯಾತನ ಮೇಲೆ ಕಿಂಚಿತ್ತೂ ಕರುಣೆ ತೋರದೇ ಭೀಷ್ಮ ಅದನ್ನು ತನ್ನ ಊರಿಗೋಲಿನ ತುದಿಯಲ್ಲೇ ಎತ್ತಿ ಮುಳ್ಳಿನ ಗಿಡವೊಂದರ ಮೇಲೆ ಎಸೆಯುತ್ತಾನೆ. ಅಸಹಾಯಕ ಓತಿಕ್ಯಾತ ಭೀಷ್ಮ ನಿಗೆ ನೀನು ಶರಶಯ್ಯೆಯಲ್ಲೇ ಒದ್ದಾಡಿ ಪ್ರಾಣ ಬಿಡುವಂತಾಗಲಿ ಎಂದು ಶಾಪ ಹಾಕುತ್ತದೆ. ಓತಿಕ್ಯಾತನ ಶಾಪವೇ ಭೀಷ್ಮನಿಗೆ ಶರಶಯ್ಯೆಯ ಮರಣ ತಂದಿದೆ ಎಂಬುವುದೂ ಕನ್ನಡದ ಜನಪದರ ನಂಬುಗೆ.

ಮಹಾಭಾರತದ ಭೀಷ್ಮ ತನ್ನ ಶಿಷ್ಯಂದಿರ ಪಟ್ಟವನ್ನು ಖಾಯಂಗೊಳಿಸುವ ಕನಸ ಹೊತ್ತವನಾಗಿದ್ದರೆ…
ಬಿಜೆಪಿಯ ಭೀಷ್ಮ ಸ್ವತಃ ತಾನೇ ರಾಜನಾಗುವ ಕನಸು ಹೊತ್ತಿದ್ದವರು. ಮಹಾಭಾರತದ ಭೀಷ್ಮ ಹೇಗೆ ಕೊನೆಗೂ ತನ್ನ ಶಿಷ್ಯಂದಿರ ಪಟ್ಟ ಉಳಿಸಲು ಸಾಧ್ಯವಾಗಲಿಲ್ಲವೋ… ಹಾಗೆಯೇ ಬಿಜೆಪಿಯ ಭೀಷ್ಮನೂ ತನ್ನ ಕನಸನ್ನು ಸಾಕಾರಗೊಳಿಸಿ ಪಟ್ಟವೇರಲು ಸಾಧ್ಯವಾಗದಿದ್ದುದು ಪುರಾಣ ಮತ್ತು ವರ್ತಮಾನದ ಕ್ರೂರ ವ್ಯಂಗ್ಯವೇ ಸರಿ.

ಇದೀಗ‌ ಬಿಜೆಪಿಯ ಭೀಷ್ಮ ‌ಅಡ್ವಾಣಿಯದ್ದೂ‌ ಮಹಾಭಾರತದ ಭೀಷ್ಮನದ್ದೇ ಸ್ಥಿತಿ. ಇಂದು ಅಡ್ವಾಣಿ ಎಷ್ಟೇ‌‌ ಸುಭಗನಂತೆ ನಟಿಸಲಿ. ಅಡ್ವಾಣಿಗೆ ಅವರ ಪಾಪದ ಫಲ ದೊರೆಯುತ್ತಿದೆ ಎಂದಷ್ಟೇ ಇಂದಿನ‌ ಅವರ ದಯನೀಯ ಸ್ಥಿತಿಯನ್ನು ವಿಶ್ಲೇಷಿಸುವುದು ಹೆಚ್ಚು ಸೂಕ್ತ.

ಅಡ್ವಾಣಿ ತನ್ನ ರಾಜಕೀಯ ಏಳಿಗೆಗಾಗಿ ಮಾಡಿದ ಕೃತ್ಯಗಳು ಕಡಿಮೆ ಕ್ರೌರ್ಯಯದ್ದೇನಲ್ಲ. ಸ್ವತಃ ತಾನು ಕ್ರೌರ್ಯ ಮಾಡಿಸಿದ್ದಲ್ಲದೇ, ತನ್ನ ಶಿಷ್ಯಂದಿರಾದ ಕೌರವರು ಮಾಡಿದ ಕ್ರೌರ್ಯಕ್ಕೆ ಬೀಷ್ಮ ಮೌನಸಮ್ಮತಿ ನೀಡಿ ಒಳಗೊಳಗೇ ನಕ್ಕಂತೆ… ತನ್ನ ಶಿಷ್ಯಂದಿರಾದ ಮೋದಿ- ಶಾ ಜೋಡಿ ಗುಜರಾತಿನಲ್ಲಿ ಮಾಡಿದ ಅಮಾನವೀಯ ಬರ್ಬರ ಕೃತ್ಯಕ್ಕೆ ಇಂದು ತನ್ನ ರಾಜಕೀಯ ಬದುಕಿನ ಶರಶಯ್ಯೆಯಲ್ಲಿ ಮಲಗಿರುವ ಬಿಜೆಪಿಯ ಬೀಷ್ಮ ಪಿತಾಮಹ ಅಡ್ವಾಣಿ ಒಳಗೊಳಗೇ ನಗುತ್ತಾ ಮೌನ ಸಮ್ಮತಿ ನೀಡಿದ್ದು ಇತಿಹಾಸದ ಪುಟ ಸೇರುವಷ್ಟು ಹಳತಾಗಿಲ್ಲ.

ಮಹಾಭಾರತದ ಬೀಷ್ಮನಿಗೆ ಓತಿಕ್ಯಾತನ ಶಾಪವೆಂದು ಜನಪದರು ನಂಬಿದರೆ, ನಮ್ಮ ಕಾಲದ ರಾಜಕೀಯ ಬೀಷ್ಮನಿಗೆ ಎರಡೆರಡು ಶಾಪವಿದೆ. ಒಂದನೆಯದಾಗಿ ರಾಮ ಜನ್ಮ ಭೂಮಿಯ ಹೆಸರಲ್ಲಿ ದೇಶದ ಉದ್ದಗಲದ ಚರಂಡಿಗಳಲ್ಲಿ ಮಾನವ ರಕ್ತದ ಕೋಡಿ ಹರಿಸಿದ್ದರ ಶಾಪ. ಎರಡನೆಯದಾಗಿ ತನ್ನ ಶಿಷ್ಯಂದಿರ ಬರ್ಬರತೆಗೆ ಮೌನ ಸಮ್ಮತಿ ಸೂಚಿಸುತ್ತಾ, ಮಹಾಭಾರತದ ಭೀಷ್ಮ ಓತಿಕ್ಯಾತನ ಸಾವನ್ನು ಆನಂದಿಸಿದಂತೆ ಗುಜರಾತಿನ ಅಮಾಯಕ ಮುಸ್ಲಿಮರ ಸಾವನ್ನು ಆನಂದಿಸಿದುದರ ಶಾಪ.

ಮೊದಲನೆಯದಾಗಿ ನಮ್ಮ ತುಳನಾಡಿನ ಜನಪದರ ನಂಬಿಕೆಯಂತೆ ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕು…
ಎರಡನೆಯದಾಗಿ ನಮ್ಮ ಕನ್ನಡದ ಗಾದೆಯಂತೆ ಮಾಡಿದ್ದುಣ್ಣೋ ಮಹರಾಯ.

ಬಿಜೆಪಿಯ ಭೀಷ್ಮನ ಈ ಸ್ಥಿತಿಗೆ ಇದಕ್ಕಿಂತ ಬೇರೆ ಕಾರಣ ಬೇಕೇ….?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here