Homeಮುಖಪುಟಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

ಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

- Advertisement -
- Advertisement -

ವರದಿಗಾರ |

ಸಂಘಪರಿವಾರದ ಆಸ್ಥಾನ ಪುರೋಹಿತ ಪೇಜಾವರ ವಿಶ್ವೇಶತೀರ್ಥ ಸ್ವಾಮಿಯ ಅಸಲಿ ಅವತಾರ ಅನಾವರಣವಾಗಿದೆ. ಕಳೆದ ವಾರ ಮಂಗಳೂರಲ್ಲಿ ವಿಶ್ವಹಿಂದೂ ಪರಿಷತ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೇಗ ಆಗಬೇಕೆಂದು ಜನದ್ರೋಹ ಸಭೆಯೊಂದನ್ನು ನಡೆಸಿತ್ತಲ್ಲ, ಅಲ್ಲಿ ಪೇಜಾವರರ ದಿವ್ಯ ಸಾನಿಧ್ಯವಿತ್ತು. ರಾಮಮಂದಿರಕ್ಕಾಗಿ ಪೇಜಾವರ ಸ್ವಾಮಿ ಕ್ಯಾತೆ ತೆಗೆದು ಕೂಗಾಡಿದ ಪರಿ ಭಯೋತ್ಪಾದನೆಯ ಸ್ಯಾಂಪಲ್ಲಿನಂತಿತ್ತು. ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಪ್ರತಾಪ್‌ಸಿಂಹ, ಪ್ರಮೋದ್ ಮುತಾಲಿಕ್ ಮುಂತಾದ ಮೂರನೇ ದರ್ಜೆ ಹಿಂದೂತ್ವದ ಹಿಕಮತ್ತುದಾರರ ಗಂಟಲಲ್ಲಿ ಪೇಜಾವರ ಮಾತನಾಡಿದ್ದು ಕೇಳಿದ ಜನ ಬೆಚ್ಚಿಬಿದ್ದಿದ್ದಾರೆ. ಅಲ್ಲಿಗೆ ಈ ಅದ್ವೈತ ಸನ್ಯಾಸಿಯ ದೋಖಾ ದ್ವಂದ್ವ ಸಿದ್ಧಾಂತ ಮತ್ತೊಮ್ಮೆ ಜಗಜ್ಜಾಹೀರಾಗಿ ಹೋಗಿದೆ!

ಪರಧರ್ಮ ಸಹಿಷ್ಣು ಸಂತನ ಗೆಟಪ್ಪಿನಲ್ಲಿ ಓಡಾಡುವ ಈ ಪೊಲಿಟಿಕಲ್ ಸ್ವಾಮಿಯ ನಡೆ-ನುಡಿಯಲ್ಲಿ ಯಾವಾಗಲೂ ವಿರೋಧಾಭಾಸ-ವಿಪರ‍್ಯಾಸಗಳೇ, ಬ್ರಾಹ್ಮಣ್ಯದಡಿಯ ಅಸಮಾನತೆ-ಅಸ್ಪೃಶ್ಯತೆಗಳ ಅರ್ಥ ಮಾಡಿಸುತ್ತವೆ. ಹರಿಜನರ ಕೇರಿಗಳಿಗೆ ಹೋಗಿ ಪಾದ ತೊಳೆಸಿಕೊಳ್ಳುವ ಪೇಜಾವರರು ಮರಳಿ ಉಡುಪಿ ಮಠಕ್ಕೆ ಬರುವಾಗಲೇ ಜನಿವಾರ ಬದಲಿಸಿ ಶುದ್ಧೀಕರಣಗೊಳ್ಳುತ್ತಾರೆ. ಧರ್ಮೋನ್ಮಾದಿ ಕರಸೇವಕರು ಬಾಬರಿ ಮಸೀದಿ ಗುಮ್ಮಟ ಉರುಳಿಸುವಾಗ ಕಣ್ಣಾರೆ ಕಂಡು ಧನ್ಯತಾಭಾವದಿಂದ ಮಂದಹಾಸ ಬೀರುವ ಈ ಸ್ವಾಮಿ ತನ್ನ ಮಠದ ಆವರಣದಲ್ಲೇ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುವ ನಾಟಕವಾಡಬಲ್ಲರು.

ಉಡುಪಿ ಮಾಧ್ವಮಠದಲ್ಲಿ ಪಂಕ್ತಿಭೇದವೇ ಇಲ್ಲವೆಂದು ಹಸಿ-ಹಸಿ ಸುಳ್ಳು ಹೇಳುವ ಪೇಜಾವರ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನಕ್ಕೆ ಪರ‍್ಯಾಯವಾಗಿ ಉಡೆಸ್ನಾನದ ಆವಿಷ್ಕಾರ ಮಾಡಿ ಅಮಾಯಕ ಅಬ್ರಾಹ್ಮಣರ ದಿಕ್ಕು ತಪ್ಪಿಸುತ್ತಾರೆ. ಇವತ್ತಿಗೂ ಪೇಜಾವರರು ಗೋ-ಗೂಂಡಾಗಳಿಗೆ, ಬಾಬರಿ ಮಸೀದಿ ಧ್ವಂಸಕರಿಗೆ ಸ್ಫೂರ್ತಿಯ ಚಿಲುಮೆ. ತನ್ನ ಧಾರ್ಮಿಕ ಕಾರ್ಯಾಚರಣೆಗೆ ಅನುಕೂಲ ಆಗುತ್ತದೆಂದಾಗ ಸಾಬರನ್ನು ಮಠಕ್ಕೆ ಕರೆದು ಇಫ್ತಾರ್ ಕೂಟ ಮಾಡುವ ಪೇಜಾವರರು ಶಾಸಕ ರಘುಪತಿ ಭಟ್ಟನಂಥವರು ಕಣ್ಣುಬಿಟ್ಟರೆ ಹೆದರಿ ಮರು ವರ್ಷ ಆ ಇಫ್ತಾರ್ ಪ್ರಹಸನ ಮಾಡುವುದೇ ಇಲ್ಲಾ! ಹಿಂದೂತ್ವದ ಸೈತಾನರು ಪಾಪದ ಸಾಬರ ಬೆತ್ತಲೆ ಮಾಡಿ ಬಡಿದು ಕೇಕೆ ಹಾಕಿದರೂ, ಕೊಂದು ಎಸೆದರೂ ಕಂಡೂ ಕಾಣದಂತಿರುತ್ತಾರೆ ಪೇಜಾವರ ಸ್ವಾಮಿ. ಹಾಗಂತ ಶಾಂತಿ, ಸಹಬಾಳ್ವೆ, ಸಹಿಷ್ಣುತೆ, ಸಂವಿಧಾನದ ಬಗ್ಗೆ ಉದ್ದುದ್ದ ವ್ಯಾಖ್ಯಾನ ಕೊಡಲು ಮಾತ್ರ ಮರೆಯುವುದಿಲ್ಲ……..

ಇಂಥ ಗುಣಧರ್ಮದ ಪೇಜಾವರ ಸ್ವಾಮೀಜಿ ಮೊನ್ನೆ ಮಂಗಳೂರಲ್ಲಿ ಕೇಸರಿ ಕೂಟದಲ್ಲಿ ಉದುರಿಸಿದ ಭೀಭತ್ಸ ಅಣಿ ಮುತ್ತುಗಳು ಅವರ ಜಾಯಮಾನಕ್ಕೆ ತಕ್ಕಂತೆಯೇ ಇದೆ. ಮಾತಿನುದ್ದಕ್ಕೂ ಪೇಜಾವರರ ಮೇಲೆ ಹಿಂದೂತ್ವದ ಭಯೋತ್ಪಾದಕನ ಆವಾಹನೆ ಆದಂತಿತ್ತು. ಹಿಂದೂತ್ವದ ಕಾಳಗದ ಕಾಲಾಳುಗಳಾದ ಅವಿಭಜಿತ ದಕ್ಷಿಣ ಕನ್ನಡದ ಅಬ್ರಾಹ್ಮಣರನ್ನು ಅನಾಹುತಕ್ಕೆ ಪ್ರಚೋದಿಸುವ ಓಘ ಪೇಜಾವರರ ಭಾಷಣಕ್ಕಿತ್ತು. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಮಾಮನ ಗೆಲ್ಲಿಸುವ ಮಸಲತ್ತಿನ ಮಾತುಗಾರಿಕೆ ಇದಾಗಿತ್ತೆಂಬುದು ಎಂಥ ಗಾಂಪನಿಗೂ ಅರ್ಥವಾಗುತ್ತದೆ!! ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೃವೀಕರಣಗೊಂಡಿರುವ ಹಿಂದೂತ್ವದ ಓಟ್‌ಬ್ಯಾಂಕ್ ಇನ್ನಾರು ತಿಂಗಳಲ್ಲಿ ಬರಲಿರುವ ಪಾರ್ಲಿಮೆಂಟ್ ಇಲೆಕ್ಷನ್ ತನಕ ಕಾಪಿಟ್ಟುಕೊಳ್ಳುವ ತಂತ್ರಗಾರಿಕೆ ಪೇಜಾವರ ಟೇಮಿನದಾಗಿತ್ತು.

ನಾಲ್ಕುವರೆ ವರ್ಷದಿಂದ ಸಂಘಪರಿವಾರದ ಬ್ರಾಹ್ಮಣ ರಿಂಗ್‌ಮಾಸ್ಟರ್‌ಗಳ ಪಾದುಕಾ ಪೂಜಾರಿ ಮೋದಿ ಪ್ರಧಾನಿಯಾಗಿದ್ದರೂ ಆತನಿಂದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲಿಕ್ಕೆ ಯಾಕಾಗಲಿಲ್ಲ ಎಂಬ ಮೂಲಭೂತ ಪ್ರಶ್ನೆ ಮರೆಮಾಚಿದ ಪೇಜಾವರರು ಏಕಾಏಕಿ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಆ ಮೂಲಕ ಇಲೆಕ್ಷನ್ ಪ್ರಚಾರ ಶುರುಮಾಡಿದ್ದಾರೆ. ಹಿಂದೂತ್ವಕ್ಕಾಗಿ ತನ್ನನ್ನು ಸಂಸದನಾಗಿಸಿದ ಜಿಲ್ಲೆಗೇ ಬೆಂಕಿ ಹಾಕ್ತೇನೆಂದು ಯಾವ ಮುಲಾಜೂ, ಮನುಷ್ಯತ್ವವೂ ಇಲ್ಲದೆ ಆರ್ಭಟಿಸುವ ನಳಿನ್‌ಕುಮಾರ್ ಕಟೀಲ್‌ನಂಥವರನ್ನು ಬಗಲಲ್ಲಿಟ್ಟುಕೊಂಡು ಪೇಜಾವರರು ಮಾಡಿದ ಭಾಷಣದ ನೀತಿ-ರೀತಿಗೆ ಕೂಗುಮಾರಿ ಖ್ಯಾತಿಯ ಚೈತ್ರಾ ಕುಂದಾಪುರ, ಸೂಲಿಬೆಲೆ ಚಕ್ರವರ್ತಿಯಂಥವರೇ ನಾಚಿ ತಲೆ ತಗ್ಗಿಸುವಂತಿತ್ತು!

ಪ್ರತಿದಿನ ಸಾವಿರ ಸುಳ್ಳು ಸಬೂಬು ಹೇಳುವ ಮೋದಿ 2019ರ ಚುನಾವಣೆಯಲ್ಲಿ ಬಚಾವಾಗದ ಪ್ರಪಾತಕ್ಕೆ ಹೋಗಿಬಿದ್ದಿದ್ದಾರೆಂಬುದು ಪೇಜಾವರರಂಥ ಹಿಂದೂ ಸಂತ ಸಂತಾನಕ್ಕೆ ಪಕ್ಕಾ ಆಗಿಹೋಗಿದೆ. ಮೋದಿಯಂಥ ಹುಂಬ ಶೋ ಮ್ಯಾನ್ ದೇಶದ ಚುಕ್ಕಾಣಿ ಹಿಡಿಯುವುದು ಸಂಘಪರಿವಾರಕ್ಕೆ ಅನಿವಾರ್ಯ ಅಗತ್ಯ. ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಬರುತ್ತಿದೆ ಎಂದು ಬಿಂಬಿಸಿದರೆ ಜನರ ಭಾವನೆ ಕೆರಳಿಸಬಹುದೆಂಬ ದೂ(ದು)ರಾಲೋಚನೆ ಕಾವಿ ಕೂಟದ್ದು. ಹಾಗಾಗಿಯೇ ಮಂಗಳೂರಲ್ಲಿ ಪೇಜಾವರರು ಮಾತುಮಾತಿಗೆ ಕಾಂಗ್ರೆಸ್ ರಾಮಮಂದಿರ ವಿರೋಧಿ ಎಂಬಂತೆ ಪ್ರವಚನ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ವಿಶೇಷ ಕಾನೂನು ಮಾಡಬೇಕೆಂದು ಹೇಳುವ ಪೇಜಾವರ ಮಾತಿನ ಅರ್ಥ ಸುಗ್ರೀವಾಜ್ಞೆ ಮೂಲಕ ಅಯೋಧ್ಯೆಯಲ್ಲಿ ರಾಮನಿಗೆ ಗುಡಿಕಟ್ಟಬೇಕೆನ್ನುವುದೇ ಆಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೆ ಕಾಂಗ್ರೆಸ್ ಸಹಕರಿಸಬೇಕೆಂದು ಎಚ್ಚರಿಕೆಯೂ ಪೇಜಾವರ ಸ್ವಾಮಿ ಕೊಟ್ಟಿದ್ದಾರೆ. ಕಾಂಗ್ರೆಸೇನಾದರೂ ರಾಮಮಂದಿರಕ್ಕೆ ಅಡ್ಡಗಾಲು ಹಾಕಿದರೆ ಮುಂಬರುವ ಚುನಾವಣೆಯಲ್ಲಿ ಆ ಪಾರ್ಟಿ ಮಣ್ಣು ಮುಕ್ಕುತ್ತದೆಯೆಂದು ಮೋದಿಯನ್ನು ಮೀರಿಸುವ ಸ್ಟೈಲಲ್ಲಿ ಪೇಜಾವರರು ಭಾಷಣ ಬಿಗಿದಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಮರು ರಾಮ ಮಂದಿರಕ್ಕೆ ಬೆಂಬಲಿಸಿ ಹಿಂದೂಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ. ಏನಿದರ ಅರ್ಥ? ಸಾಬರು ಅಯೋಧ್ಯೆಯಲ್ಲಿ ರಾಮ ಮಂದಿರ ಆಗದಿದ್ದರೆ ಗಂಡಾಂತರಕ್ಕೆ ಸಿಲುಕಲಿದ್ದಾರೆಂದಾ? ಹಿಂದೂತ್ವದ ದಾದಾಗಿರಿಗೆ ಶರಣಾಗದಿದ್ದರೆ ಉಳಿಗಾಲವಿಲ್ಲವೆಂದಾ? ಸಾತ್ವಿಕ ಸಂತ ತಾನೆಂದೂ ತೋರಿಸಿಕೊಳ್ಳಲು ತಿಣಕಾಡುವ ಪೇಜಾವರರ ಮಾತುಗಾರಿಕೆ ಯಾವ ಹಿಂದೂ ಭಯೋತ್ಪಾಕ ಕಾವಿ ಅಥವಾ ಖಾದಿ ಪುಂಡರ ಭಾಷಣಕ್ಕೆ ಕಮ್ಮಿಯಿದೆ?!

ಜನಾಗ್ರಹ ಸಭೆ ಚುನಾವಣಾ ರಾಜಕೀಯ ಅಲ್ಲ ಅನ್ನುತ್ತಲೇ ಬಿಜೆಪಿ ಪರ ಪರೋಕ್ಷವಾಗಿ ಬಹಿರಂಗ ಪ್ರಚಾರ ಪೇಜಾವರ ಸ್ವಾಮಿ ಮಾಡಿದ್ದಾರೆ. ಬಿಜೆಪಿ ರಾಮ ಮಂದಿರಕ್ಕೆ ಸಂಪೂರ್ಣ ಬೆಂಬಲ ಕೊಡಬೇಕೆಂದು ಹೇಳಿರುವುದೇ ವಿಕಟ ವ್ಯಂಗ್ಯ! ಲೋಕಸಭೆ ಸ್ಥಾನ ತ್ಯಜಿಸಲು ರಾಮ ಮಂದಿರಕ್ಕಾಗಿ ಬಿಜೆಪಿ ಸಂಸದರು ರೆಡಿಯಾಗಬೇಕೆಂದು ಹೇಳಿದ್ದಾರೆ. ಬರೀ ಆರು ತಿಂಗಳು ಬಾಕಿಯಿರುವಾಗ ಚೆಡ್ಡಿ ಎಂಪಿಗಳಿಗೆ ರಾಜೀನಾಮೆ ಕೊಡಿಯೆಂದು ಪೇಜಾವರರು ಹೇಳೋದು ಬಿಜೆಪಿಯನ್ನು ತಾರೀಫು ಮಾಡುವ ತಂತ್ರಗಾರಿಕೆಯಿಂದಷ್ಟೇ. ರಾಮನ ಹೆಸರಲ್ಲಿ ಪ್ರಧಾನಿಯಾದ ಮೋದಿ ನಾಲ್ಕುವರೆ ವರ್ಷದಿಂದ ಏಕೆ ರಾಮನಿಗೊಂದು ನೆಲೆಕೊಡುವ ಕೃತಜ್ಞತಾ ಭಾವದಿಂದ ಪ್ರಾಮಾಣಿಕ ಕೆಲಸ ಮಾಡಲಿಲ್ಲ ಎಂದು ಕೇಳುವ ಗಟ್ಸ್ ಪೇಜಾವರರೇಕೆ ತೋರಿಸುತ್ತಿಲ್ಲ?

ಹಿಂದೂತ್ವದ ದಿವಾಳಿಕೋರತನಕ್ಕೆ ಪೇಜಾವರರು ಸಂಕೇತವಾಗುತ್ತಿರುವುದು ದುರಂತ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಿದ ಆಸ್ಟ್ರೇಲಿಯಾ ಸರ್ಕಾರ

16 ವರ್ಷದೊಳಗಿನ ಎಲ್ಲರಿಗೂ ಸಾಮಾಜಿಕ ಮಾಧ್ಯಮ ಪ್ರವೇಶವನ್ನು ದೇಶಾದ್ಯಂತ ನಿಷೇಧಿಸಿದ ಮೊದಲ ದೇಶ ಆಸ್ಟ್ರೇಲಿಯಾ. ಈ ಕಾನೂನು ಬುಧವಾರ ಜಾರಿಗೆ ಬಂದಿದ್ದು, ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್, ಥ್ರೆಡ್ಸ್,...

ಎಸ್.ನಿಜಲಿಂಗಪ್ಪನವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಎಸ್. ನಿಜಲಿಂಗಪ್ಪನವರು ಒಬ್ಬ ದಕ್ಷ, ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 10ರಂದು, ಮಾಜಿ ಮುಖ್ಯಮಂತ್ರಿ ದಿ| ಎಸ್. ನಿಜಲಿಂಗಪ್ಪರವರ...

ನಕಲಿ ತುಪ್ಪ ವಿವಾದದ ಬಳಿಕ ಮತ್ತೊಂದು ಹಗರಣ; ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಹೆಸರಿನಲ್ಲಿ ‘ಪಾಲಿಯೆಸ್ಟರ್‌’ ದುಪಟ್ಟಾ ಪೂರೈಕೆ

ಲಡ್ಡು ಪ್ರಸಾದಕ್ಕೆ ನಕಲಿ ತುಪ್ಪ ಪೂರೈಕೆ ವಿವಾದದ ಬಳಿಕ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. 2015 ರಿಂದ 2025 ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ರೇಷ್ಮೆ ದುಪಟ್ಟಾಗಳ ಖರೀದಿಯಲ್ಲಿ...

‘ಶಾಶ್ವತ ವಿಪತ್ತು ನಿಧಿಯನ್ನು ಏಕೆ ರಚಿಸಿಲ್ಲ’: ಸಿಎಂ ಸಿದ್ದರಾಮಯ್ಯ ಅವರಿಗೆ ಆರ್. ಅಶೋಕ್ ಪ್ರಶ್ನೆ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಮತ್ತು ರೈತರಿಗೆ 'ದ್ರೋಹ' ಮಾಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಆರ್. ಅಶೋಕ ಮಂಗಳವಾರ ಆರೋಪಿಸಿದ್ದಾರೆ. ಉತ್ತರ ಕರ್ನಾಟಕವನ್ನು ಕಾಡುತ್ತಿರುವ...

ಆಂಧ್ರ ಪ್ರದೇಶ| ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಧ್ಯಾಪಕರ ಬಂಧನ; ಭುಗಿಲೆದ್ದ ಪ್ರತಿಭಟನೆ

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಇಡಿ ದಲಿತ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಣ್ ಕುಮಾರ್ ಮತ್ತು ಶೇಖರ್ ರೆಡ್ಡಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ...

ಝೀ ನ್ಯೂಸ್‌ನಿಂದ 18 ಕೋಟಿ ರೂ. ಪರಿಹಾರ ಕೇಳಿದ ಫೋಟೋಗ್ರಾಫರ್…ಕಾರಣ?

ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳ ಸಾಗಣೆಯನ್ನು ದಾಖಲಿಸಿರುವ ತನ್ನ ಅತ್ಯಮೂಲ್ಯ ವಿಡಿಯೋವನ್ನು ಅನುಮತಿಯಿಲ್ಲದೆ ಬಳಸಿಕೊಂಡಿದ್ದಕ್ಕೆ ಝೀ ನ್ಯೂಸ್‌ ಚಾನೆಲ್‌ ವಿರುದ್ದ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶಿತರಾದ ಚಲನಚಿತ್ರ ನಿರ್ಮಾಪಕ ಮತ್ತು ಛಾಯಾಗ್ರಾಹಕ ರೋನಿ ಸೇನ್ ಹಕ್ಕುಸ್ವಾಮ್ಯ...

ನ್ಯಾ. ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್‌ಗೆ ಚಪ್ಪಲಿಯಿಂದ ಹಲ್ಲೆ

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್ ಕಿಶೋರ್ ಅವರಿಗೆ ಮಂಗಳವಾರ (ಡಿಸೆಂಬರ್ 9) ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದ ಸಂಕೀರ್ಣದೊಳಗೆ ಅಪರಿಚಿತ ವ್ಯಕ್ತಿಗಳು...

ಚುನಾವಣಾ ಆಯುಕ್ತರ ನೇಮಕ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟಿದ್ದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ 

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಯನ್ನು ಶಿಫಾರಸು ಮಾಡುವ ಆಯ್ಕೆ...

ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು : ಸೋನಿಯಾ ಗಾಂಧಿಗೆ ದೆಹಲಿ ಕೋರ್ಟ್ ನೋಟಿಸ್

ಭಾರತದ ಪೌರತ್ವ ಪಡೆಯುವ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರು ಎನ್ನುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ದೆಹಲಿ ಪೊಲೀಸರಿಗೆ ದೆಹಲಿಯ ವಿಶೇಷ ನ್ಯಾಯಾಲಯ ಮಂಗಳವಾರ (ಡಿಸೆಂಬರ್...

‘ಕಾನೂನುಗಳು ನಾಗರಿಕರ ಅನುಕೂಲಕ್ಕಾಗಿ ಇರಬೇಕು, ಕಿರುಕುಳ ನೀಡಬಾರದು’: ಪ್ರಧಾನಿ ಮೋದಿ 

ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕರು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ‘ದೇಶದ ಯಾವುದೇ ವ್ಯಕ್ತಿ ಕಾನೂನು ಅಥವಾ ನಿಯಮಗಳಿಂದಾಗಿ ಕಿರುಕುಳ, ಅನಾನುಕೂಲತೆಯನ್ನು ಎದುರಿಸಬಾರದು. ಅಂತಹ...