HomeUncategorizedಪ.ರಂಜಿತ್ ಬೆಂಬಲಕ್ಕೆ ನಿಂತ 300ಕ್ಕೂ ಹೆಚ್ಚು ಕಲಾವಿದರು. ಆನ್ ಲೈನ್ ಪಿಟಿಷನ್ ಆರಂಭ

ಪ.ರಂಜಿತ್ ಬೆಂಬಲಕ್ಕೆ ನಿಂತ 300ಕ್ಕೂ ಹೆಚ್ಚು ಕಲಾವಿದರು. ಆನ್ ಲೈನ್ ಪಿಟಿಷನ್ ಆರಂಭ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಪ.ರಂಜಿತ್ ಮೇಲಿನ ಮೇಲ್ಜಾತಿ ಮನಸ್ಸಿನ ದಾಳಿ ಮತ್ತು ಬೆದರಿಕೆಗಳನ್ನು ವಿರೋಧಿಸಿ, ಆನ್ ಲೈನ್ ಪಿಟಿಷನ್ ಆರಂಭಿಸಿ 300ಕ್ಕೂ ಹೆಚ್ಚು ಕಲಾವಿದರು ಖ್ಯಾತ ಜನಪ್ರಿಯ ತಮಿಳು ಚಿತ್ರನಿರ್ದೇಶಕ ಪ.ರಂಜಿತ್ ದೃಢವಾಗಿ ಬೆಂಬಲಕ್ಕೆ ನಿಂತಿದ್ದಾರೆ.

ಅಪರೂಪದ ಚಿತ್ರನಿರ್ದೇಶಕ ಪಾ.ರಂಜಿತ್‍ನ ಇತ್ತೀಚಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದರು. ಇದಕ್ಕೆ ಬಾಲಾ ಎನ್ನುವವವರು ಪೋಲಿಸ್ ಸ್ಟೇಶನ್‍ನಲ್ಲಿ “ರಂಜಿತ್ ಅವರು ಮಾಡುತ್ತಿರುವ ಸಿನಿಮಾ, ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯ ವೈಷಮ್ಯವನ್ನು ಬೆಳೆಸುತ್ತದೆ” ಎನ್ನುವ ಕಾರಣ ಕೊಟ್ಟು ದೂರನ್ನೂ ದಾಖಲಿಸಿದ್ದರು.

ಈ ವಿಷಯದ ಕುರಿತು ಅರ್ಥಪೂರ್ಣ ಮತ್ತು ರಚನಾತ್ಮಕ ಚರ್ಚೆ ಸಂವಾದ ಮಾಡಲು ಸಾಧ್ಯವಿದೆ ಎಂದು collective Coalition for Artist’s Right to Speech ನ ಹೇಳಿಕೆಯಲ್ಲಿ ತಿಳಿಸಿರುವ ಕಲಾವಿದರು, ಆದರೆ ದುರಾದೃಷ್ಟವಶಾತ್ ಇದಕ್ಕೆ ವಿರುದ್ಧವಾಗಿ ಪ.ರಂಜಿತ್ ಅಭಿಪ್ರಾಯದ ಮೇಲೆ ದಾಳಿ ನಡೆಯುತ್ತಿದೆ. ಅಷ್ಟೇ ಅಲ್ಲದೇ ಕೆಲವು ಜಾತಿವಾದಿ ಮನಸ್ಥಿತಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಪ.ರಂಜಿತ್ ವಿರುದ್ಧ ಮಾತಾಡಿ ಅವರ ಮೊಬೈಲ್ ನಂಬರ್ ಅನ್ನು ಹಂಚುವ ಮೂಲಕ ಜೀವ ಬೆದರಿಕೆ ಹಾಕಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಲಾವಿದರ ಒಕ್ಕೂಟ ಆರೋಪ ಮಾಡಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಿಂತನೆಯ ಬಗ್ಗೆ ನಂಬಿಕೆ ಇರುವುದರಿಂದ, ಸಂಬಂಧಪಟ್ಟ ಕಲಾವಿದನಿಗೆ ಅವರ ವಾಕ್ ಸ್ವಾತಂತ್ರ್ಯದ ಹಕ್ಕು ಅಪಾಯದಲ್ಲಿದ್ದಾಗ ಅವರೊಂದಿಗೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ನಾವು ನಂಬುತ್ತೇವೆ” ಎಂದು ಹೇಳಿಕೆ ತಿಳಿಸಿದೆ.

ರಂಜಿತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ತಡೆಯುವ ಸಲುವಾಗಿ ಈ ಗುಂಪು ಆನ್‍ಲೈನ್ ಅರ್ಜಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ತಿಳಿಸಿದೆ. ಅರ್ಜಿಯಲ್ಲಿ ಮಂಗಳವಾರ ರಾತ್ರಿಯ ವೇಳೆಗೆ 6,300 ಕ್ಕೂ ಹೆಚ್ಚು ಸಹಿಗಳಿವೆ. ನೀವೂ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...