Homeಚಳವಳಿಅಮೃತಭೂಮಿಯಲ್ಲಿ ಬಿತ್ತಿದ ಬೀಜಗಳು  ನಾಡೆಲ್ಲಾ ಪಸರಿಸಲಿ....

ಅಮೃತಭೂಮಿಯಲ್ಲಿ ಬಿತ್ತಿದ ಬೀಜಗಳು  ನಾಡೆಲ್ಲಾ ಪಸರಿಸಲಿ….

- Advertisement -
ರೈತ ಚಳವಳಿಯ ಪುನಶ್ಚೇತನ ಆಗಬೇಕೆಂದರೆ ಯುವಜನರು ದೊಡ್ಡ ಪ್ರಮಾಣದಲ್ಲಿ ಸಂಘಟನೆಯೊಳಕ್ಕೂ ಬರಬೇಕು; ರೈತ ಚಳವಳಿಯೊಳಕ್ಕೂ ಬರಬೇಕು. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ನಡೆಸಿದ ಆತ್ಮಾವಲೋಕನವು ಹೀಗಿತ್ತು. ರೈತ ಚಳವಳಿಗೆ ಬಂದ ಹೊಸಬರಿಗೆ ರೈತ ಸಂಘದ ಮೂಲ ಸಿದ್ಧಾಂತಗಳನ್ನು ಹೇಳಿಕೊಡುವ ಕೆಲಸ ನಡೆಯಲಿಲ್ಲ. ಹಾಗಾಗಿಯೇ ಎಂಬತ್ತರ ದಶಕದ ತಲೆಮಾರಿಗಿದ್ದ ಸೈದ್ಧಾಂತಿಕ ಸ್ಪಷ್ಟತೆ ನಂತರದ ದಶಕಗಳಲ್ಲಿ ಬಂದ ತಲೆಮಾರುಗಳಲ್ಲಿ ಕಾಣಲಿಲ್ಲ. ವಿಚಾರದ ಮೇಲೆ ಕಟ್ಟುವ ಹೊಸ ತಲೆಮಾರಿನ ರೈತ ಚಳವಳಿ ಕೇವಲ ಸಂಘರ್ಷದ ಜೊತೆಗೆ ರಚನಾತ್ಮಕ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳಬೇಕೆಂಬುದು ಈ ಹೊತ್ತಿನ ತುರ್ತಾಗಿದೆ.
ಆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿ “ಹೊಸ ತಲೆಮಾರಿನ ರೈತ ಚಳವಳಿ ಕಟ್ಟಲು” ಎಂಬ ಮೂರು ದಿನಗಳ ಯುವ ರೈತರ ಅಧ್ಯಯನ ಶಿಬಿರ ನಡೆಸಲಾಯಿತು. ಕೃಷಿಗೆ ಅಂಟಿಕೊಂಡಿರುವ ರೋಗಗಳಿಗೆ ಪರಿಹಾರದ ಹುಡುಕಾಟ ಶಿಬಿರದಲ್ಲಿ ನಡೆದಿತ್ತು. ಭಾಗವಹಿಸಿದ್ದ ಸಕ್ರಿಯ ರೈತ ಯುವ ಕಾರ್ಯಕರ್ತರಲ್ಲಿ ಕೃಷಿಯನ್ನು ಪುನರ್ ಸ್ಥಾಪಿಸಲೇಬೇಕೆಂಬ ಹೊಸ ಕನಸು ಎದ್ದು ಕಾಣುತ್ತಿತ್ತು. ಇದಾಗಬೇಕಾದರೆ ಇಂದಿನ ಯುವ ಸಮೂಹ ವೈಚಾರಿಕ ಸ್ಪಷ್ಟತೆಯೊಂದಿಗೆ ಚಳವಳಿ ರೂಪಿಸಿದಲ್ಲಿ ಮಾತ್ರ ಸಾಧ್ಯ ಎಂಬ ಎಚ್ಚರದೊಂದಿಗೆ ಈ ಮೂರೂ ದಿನಗಳು ಕಳೆದವು.
ಪ್ರೊ.ನಂಜುಂಡಸ್ವಾಮಿ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ, ಸಸಿನೆಡುವುದರ ಮುಖಾಂತರ ಶಿಬಿರಕ್ಕೆ ಅಧಿಕೃತವಾಗಿ ಕೆ.ಟಿ.ಗಂಗಾದರ್‍ರವರು ಚಾಲನೆ ನೀಡಿದರು. ಚುಕ್ಕಿ ನಂಜುಂಡಸ್ವಾಮಿರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಶಿಬಿರದ ಹಿಂದಿನ ಉದ್ದೇಶ ಮತ್ತು ಅಗತ್ಯತೆಯ ಕುರಿತು ಆಶಯ ನುಡಿಯನ್ನು ತಿಳಿಸಿದರು.
ಹಿರಿಯರಾದ ಕೆಸಿ ಬಸವರಾಜು, ಬಡಗಲಪುರ ನಾಗೇಂದ್ರ, ಚಾಮರಸ ಮಾಲೀ ಪಾಟೀಲ್ ರೈತ ಚಳವಳಿಯ ಇತಿಹಾಸದ ಕುರಿತು ಮಾತನಾಡಿದರು. ಅನಂತರ ಆಹಾರ ತಜ್ಞರಾದ  ಕೆ.ಸಿ ರಘುರವರು ಮಾತನಾಡಿ ಪ್ರಸ್ತುತ ಸರ್ಕಾರದ ನೀತಿಗಳು ದೇಶದ ಆರ್ಥಿಕ ನೀತಿಯನ್ನು ದಿವಾಳಿಯೆಡೆಗೆ ಕೊಂಡೊಯ್ಯುತ್ತಿವೆ. ಆದ್ದರಿಂದ ರೈತರು ವಲಯಾದಾರಿತ ಮತ್ತು ಪಾರಂಪರಿಕ ಕೃಷಿಯನ್ನು ಅನುಸರಿಸಿ, ಆಹಾರ ಸಾರ್ವಭೌಮತ್ವವನ್ನು ಹೇಗೆ ಹೊಂದಬಹುದೆಂದು ವಿವರಿಸಿದರು.
ಕೃಷಿಯಲ್ಲಿ ಮಹಿಳೆಯರು ಎನ್ನುವ ವಿಷಯದ ಕುರಿತು ಮಾತನಾಡುತ್ತಾ ಸಾಮಾಜಿಕ ಹೋರಾಟಗಾರ್ತಿ ಕವಿತ ಕುರಗಂಟಿ ಭಾರತದಲ್ಲಿ ಕೃಷಿ ಎಂದ ಕೂಡಲೆ ಮಹಿಳೆಯರು ಕೊಡುಗೆ ಪರಿಗಣನೆಗೆ ಬರುವುದೇ ಇಲ್ಲ. ರೈತನೆಂದರೆ ಪುರುಷ ಎಂಬ ಮನಸ್ಥಿತಿ ಬಹುತೇಕರದ್ದು ಭಾರತದ ಮಹಿಳೆ ಕೃಷಿಕರ ಬಗ್ಗೆಯೂ ಚರ್ಚೆಗಳು ನಡೆಯುವುದು ಅಗತ್ಯ ಮತ್ತು ಭಾರತ ಕೃಷಿ ನಿಂತಿರುವುದು ಮಹಿಳಾ ಕೃಷಿಕರ ಕೊಡುಗೆಯಿಂದ ಇನ್ನಾದರೂ ನಾವು ರೈತ ಮಹಿಳೆಯರ ಪಾತ್ರವನ್ನು  ಗುರುತಿಸಿ ಅವರಿಗೆ ಸಮಾನ ಹಕ್ಕುಗಳು ಹಾಗೂ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ರಾಸಾಯನಿಕ ಕೃಷಿ ಸೃಷ್ಟಿಸಿರುವ ದುರಂತಗಳು ಕೃಷಿ ಕ್ಷೇತ್ರಕ್ಕಿರುವ ಸವಾಲುಗಳು ಮತ್ತು ಅವುಗಳನ್ನು ಹಿಮ್ಮೆಟ್ಟಿಸಿ ನಾವು ಹೇಗೆ ಕೃಷಿಯಲ್ಲಿ ಪರ್ಯಾಯಗಳನ್ನು ಸೃಷ್ಟಿಸಿ ಸ್ವಾವಲಂಬನೆ ಸಾಧಿಸಬಹುದು ಎನ್ನುವುದರ ಕುರಿತು ಸುರೇಶ್ ಕೆ.ಪಿ ಅವರು ರೈತ ಸಂಘದ ಯುವ ಕೃಷಿಕರೊಂದಿಗೆ ಚರ್ಚೆ ನಡೆಸಿದರು.
ಇಂದಿನ ಕಾಲಘಟ್ಟಕ್ಕೆ ಹೊಸ ಆಶಯ ವಿಷಯಗಳೊಂದಿಗೆ ರಚನಾತ್ಮಕವಾಗಿ ಹೊಸ ತಲೆಮಾರಿನ ರೈತ ಚಳವಳಿಯನ್ನು ಹೇಗೆ ಕಟ್ಟಿಕೊಂಡು ಮುನ್ನಡೆಯಬೇಕು ಎನ್ನುವುದರ ಬಗ್ಗೆ ಕುರಿತು ಮಲ್ಲಿಗೆ ಸಿರಿಮನೆಯವರು ಯುವ ಕೃಷಿಕರೊಂದಿಗೆ ಸಂವಾದ ನಡೆಸಿದರು. ದೇಶದಲ್ಲಿ ಉಲ್ಬಣಿಸುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡುತ್ತಾಮುತ್ತುರಾಜ್ ಅವರು  ಗ್ರಾಮೀಣ ಪ್ರದೇಶದಲ್ಲೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಗಳ ಬಗ್ಗೆ ಇಂದಿನ ಯುವಜನಾಂಗ  ಚಿಂತಿಸಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು. ಜನಶಕ್ತಿಯ ಡಾ.ವಾಸು ಹೊಸ ತಲೆಮಾರಿನ ರೈತ ಚಳವಳಿ ಕಟ್ಟಲು ನಾವೇನು ಮಾಡಬೇಕು ಎನ್ನುವುದರ ಕುರಿತು ಸವಿವರವಾಗಿ ಮಾತನಾಡುತ್ತಾ ಮುಂದಿನ ರೋಪುರೇಷೆಗಳನ್ನು ತಯಾರಿಸುವ ಕುರಿತು ಚರ್ಚೆ ನಡೆಸಿದರು.
ರೈತ ಸಂಘ ಉದಯವಾದ ಸಮಯದಲ್ಲಿ ರೈತ ಸಂಘಟನೆಯೊಳಗೆ ಸಾಂಸ್ಕೃತಿಕ ವಿಭಾಗ ತುಂಬಾ ಸಕ್ರಿಯವಾಗಿತ್ತು. ಅಂದು ಯುವ ರೈತ ಹೋರಾಟಗಾರರು ರಚಿಸಿದ ಅನೇಕ ಹಾಡುಗಳು ರೈತಸಂಘದೊಳಗೆ ಕ್ರಾಂತಿಯ ಕಿಚ್ಚನ್ನು ಹೆಚ್ಚಿಸಿದ್ದವು. ಈ ಗೀತೆಗಳು ಅಂದಿನ ಸಮಯದಲ್ಲಿ ರೈತ ಸಂಘದ ಅವಿಭಾಜ್ಯ ಅಂಗವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಮರೆಯಾಗಿದ ಅವನ್ನು ಮತ್ತೆ ನಮಗೆ ತಲುಪಿಸಿಕೊಡುವ ಕೆಲಸವನ್ನು ಹಿರಿಯರಾದ ಹಿ.ಶಿ.ರಾಮಚಂದ್ರಗೌಡರು ಶಿಬಿರದಲ್ಲಿ ಹಾಡು ಹಾಡಿಸುವ ಮೂಲಕ ಮಾಡಿದರು. ಶಿಬಿರದಲ್ಲಿ ಕುವೆಂಪು ಅವರ ರೈತಗೀತೆ -ನೇಗಿಲಯೋಗಿ,  ಮೈಲಾರಪ್ಪ ಸಗರ ಅವರು ಬರೆದಿರುವ ‘ನಮ್ಮ ಹಸಿರು ಬಾವುಟ’ ಹಾಗೂ ‘ಹಾರಿಸೋಣ ಕರ್ನಾಟಕ ರಾಜ್ಯ ರೈತ ಬಾವುಟ’ ಮತ್ತು ಹಿ.ಶಿ.ರಾಮಚಂದ್ರಗೌಡರ ‘ಬಾ ತಂಗಿ ಬಾರವ್ವ’, ‘ಕೂತಂಡವರ ಮಾತು ಕೇಳಿ’, ‘ಏನು ಮಾಡಿ ಏನು ಬಂತಣ್ಣ’ ಗೀತೆಗಳನ್ನು ಶಿಬಿರಾರ್ಥಿಗಳು  ಅಬ್ಯಾಸಿಸಿ ಹಾಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಕೈಗೊಂಡ ದೇಶ ನಿರ್ಮಾಣದ ನಿರ್ಣಯಗಳು:
– ರೈತ ಯುವ ವಿಭಾಗವನ್ನು ರಾಜ್ಯಾದ್ಯಂತ ಬಲವಾಗಿ ಮತ್ತು ಪರಿಣಾಮಕಾರಿಯಾಗಿ ಕಟ್ಟಲು ನಿರ್ಧರಿಸಲಾಗಿದೆ.
– ಆರು ತಿಂಗಳ ಕಾಲ ವ್ಯವಸ್ಥಿತ ತಯಾರಿ ನಡೆಸಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ತಂಡಗಳನ್ನು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಹಂಗಾಮಿ ಸಮಿತಿಗಳನ್ನು ರಚಿಸುವುದು.
– ಆ ತಯಾರಿಯ ನಂತರ 2019 ಫೆಬ್ರವರಿ 13ರ ಪ್ರೋ.ಎಂ.ಡಿ.ಎನ್ ಜನ್ಮದಿನದಂದೂ ರಾಜ್ಯ ರೈತ ಸಂಘದ ಅಡಿಯಲ್ಲಿ ಅದರ ಅಂಗ ಸಂಘಟನೆಯಾಗಿ ಉದ್ಘಾಟಿಸುವುದು.
– ಹಂಗಾಮಿ ರಾಜ್ಯಸಮಿತಿಯನ್ನು ಆಯ್ಕೆಮಾಡಲಾಯಿತು.
– ಮೊದಲ ಹಂತದಲ್ಲಿ ಎಲ್ಲಾ ವಿಭಾಗಮಟ್ಟದಲ್ಲಿ ರಾಜ್ಯ ಶಿಬಿರದ ಮಾದರಿಯಲ್ಲಿ ಶಿಬಿರಗಳನ್ನು ಆಯೋಜಿಸುವುದು.
– ರಾಜ್ಯದ ವಿವಿಧ ಗ್ರಾಮಗಳಲ್ಲಿ ಉದ್ಯೋಗ ಸೃಷ್ಠಿಯ ಸಾಧ್ಯತೆಗಳು ಮತ್ತು ರಚನಾತ್ಮಕ ಕಾರ್ಯಕ್ರಮಗಳ ಸಾಧ್ಯತೆಗಳನ್ನು ಗುರುತಿಸಿ ಅದನ್ನು ಜಾರಿಮಾಡಲು ಬೇಕಾದ ತಯಾರಿಯನ್ನು ನಡೆಸುವುದು.
– ಗ್ರಾಮೀಣ ಭಾಗದ ಯುವತಿಯರು ಹಾಗೂ ಯುವಕರನ್ನು ಸಂಘಟಿಸುವುದಲ್ಲದೆ ರಾಜ್ಯದ ನಗರಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಆಸಕ್ತರು ಪರಿಣಿತರು ಮತ್ತು ಸಂಘಟನೆಗಳನ್ನು ನಮ್ಮ ಬಳಗವಾಗಿ ಒಳಗೊಳ್ಳುವ ಪ್ರಯತ್ನ ಮಾಡಲಾಗುವುದು.
– ನವಾಜ್ ಮತ್ತು ಮಹೇಶ್ 
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....