Homeಕರ್ನಾಟಕಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು.....

ಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು…..

- Advertisement -
- Advertisement -

| ಗೌರಿ ಡೆಸ್ಕ್ |

ಉಳಿದಿದ್ದೆಲ್ಲಾ ನಿಜವಿರಬಹುದು ಸಾರ್. ಆದರೆ, ಗೌಡರ ಕುಟುಂಬವನ್ನು ಸಹಿಸಿಕೊಳ್ಳುವುದು ಸುಲಭವಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಒಬ್ಬ ಸಚಿವರ ಪ್ರಕಾರ ‘ಸಚಿವ ಸಂಪುಟದಲ್ಲಿ ರೇವಣ್ಣರ ಆರ್ಭಟ ಮತ್ತು ಎಲ್ಲದಕ್ಕೂ ಮೂಗು ತೂರಿಸುವುದು ನೋಡಿದರೆ ನಮಗೇ ಅಸಹ್ಯವಾಗುತ್ತದೆ. ಒಂಥರಾ ಮಾನ-ಮರ್ಯಾದೆ ಇಲ್ಲದಂತೆ ನಾವೆಲ್ಲರೂ ಅದರಲ್ಲಿದ್ದೇವೆ ಅಷ್ಟೇ. ಡಿಕೆಶಿ ಮತ್ತು ಪರಮೇಶ್ವರ ನಮ್ಮ ಪಕ್ಷದ ನಾಯಕರೋ ಅಥವಾ ಜೆಡಿಎಸ್ ಸೇರಿಬಿಟ್ಟಿದ್ದಾರೋ ಎಂದು ಸಂದೇಹವಾಗುತ್ತದೆ. ಹೀಗಾಗಿ ತೀರಾ ಕೆಲವರು ಬಿಟ್ಟರೆ ಮಿಕ್ಕೆಲ್ಲರಿಗೂ ಸಿದ್ದರಾಮಯ್ಯನವರ ಅಸಮಾಧಾನಿತ ಬಣವೇ ಅಪ್ಯಾಯಮಾನವಾಗಿತ್ತು’.

ಕಾಂಗ್ರೆಸ್ಸು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರಲ್ಲಿ ಕಾಂಗ್ರೆಸ್ಸಿನ ದೌರ್ಬಲ್ಯವೇ ಹೆಚ್ಚಿತ್ತು ಎಂಬುದೇನೋ ವಾಸ್ತವ. ಆದರೆ, ಜೆಡಿಎಸ್ ಅತ್ಯುತ್ತಮ ಪರಿಸ್ಥಿತಿಯಲ್ಲೇನೂ ಇರಲಿಲ್ಲ. ದಕ್ಷಿಣ ಕರ್ನಾಟಕದ 8 ಜಿಲ್ಲೆಗಳಲ್ಲೂ ಎರಡು ಜಿಲ್ಲೆಗಳಲ್ಲಿ ಪ್ರಭಾವ ತಗ್ಗುತ್ತಿತ್ತು. ಅಕಸ್ಮಾತ್ತಾಗಿ ಉತ್ತರದಲ್ಲಿ ಕೆಲವು ಸೀಟುಗಳನ್ನು ಗೆದ್ದಿತ್ತು. ಕುಟುಂಬದೊಳಗಿನ ಆಂತರಿಕ ಸಮಸ್ಯೆಗಳೂ ಹೆಚ್ಚಾಗುತ್ತಿದ್ದವು. ಕುಮಾರಸ್ವಾಮಿಯವರ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಿದ್ದಾಗ ತಮ್ಮ ಪಾಲಿಗೆ ಬಂದ ಅಧಿಕಾರವನ್ನು ಜನಪರವಾಗಿ ಬಳಸಿ, ಅದರ ಆಧಾರದ ಮೇಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಅವರದ್ದಾಗಿರಲಿಲ್ಲ.

ಈ ಸಾರಿಯೂ ತಮ್ಮ ತಮ್ಮ ಕ್ಷೇತ್ರಗಳಿಗೆ ಅಥವಾ ಹಾಸನ ಜಿಲ್ಲೆಗೆ ಅನುದಾನದ ಹೆಚ್ಚಿನ ಭಾಗವನ್ನು ಕೊಂಡೊಯ್ಯುವ ಕೆಲಸ ಬಿಡಲಿಲ್ಲ. ನಾಲ್ಕು ಫಲವತ್ತಾದ ಖಾತೆಗಳಲ್ಲಿ (ಬೆಂಗಳೂರು ಅಭಿವೃದ್ಧಿ, ಲೋಕೋಪಯೋಗಿ, ಇಂಧನ ಮತ್ತು ಬೃಹತ್ ನೀರಾವರಿ) ತಲಾ ಎರಡನ್ನು ಎರಡೂ ಪಕ್ಷಗಳು ಹಂಚಿಕೊಂಡಿದ್ದವು. ಇವುಗಳಲ್ಲಿ ಎರಡನ್ನು (ಮುಖ್ಯಮಂತ್ರಿ, ಹಣಕಾಸು, ಅಬಕಾರಿಯಲ್ಲದೇ) ತಮ್ಮ ಕುಟುಂಬಕ್ಕೇ ಇಟ್ಟುಕೊಂಡರು. ಮಂಡ್ಯದ ಇಬ್ಬರು ಸಚಿವರಲ್ಲಿ (ಕಾಂಗ್ರೆಸ್, ಬಿಜೆಪಿಗಳೆರಡರಲ್ಲೂ ಇದ್ದು ಜೆಡಿಎಸ್‍ಗೆ ಬಂದ) ಬೀಗರಾದ ತಮ್ಮಣ್ಣರಿಗೆ ಸಾರಿಗೆ ಕೊಟ್ಟರೆ, ಜಿಲ್ಲೆಯ ಪ್ರಭಾವಿ ಹಾಗೂ ನಿಷ್ಠಾವಂತರಾದ ಪುಟ್ಟರಾಜುರಿಗೆ ಸಣ್ಣ ನೀರಾವರಿ ಕೊಟ್ಟರು. ತನಗೆ ಇದು ಬೇಡ ಎಂದು ಕೇಳಿದರೂ ಬಿಡದೇ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಕೊಟ್ಟರು. ಅಲ್ಲಿಯೂ ಬೀಗ ಕೆ.ಎಸ್.ರಂಗಪ್ಪರನ್ನು ಜಿಟಿಡಿ ತಲೆ ಮೇಲೆ ಕೂಡಿಸುವ ಇರಾದೆ ಕುಟುಂಬಕ್ಕಿತ್ತು. ಇನ್ನಿತರ ಇಲಾಖೆಗಳಲ್ಲೂ ಗೌಡರ ಕುಟುಂಬ ತಲೆ ಹಾಕುತ್ತದೆ ಎಂಬ ಕಿರಿಕಿರಿ ಹಲವು ಸಚಿವರಿಗಿತ್ತು. ಕುಟುಂಬವೊಂದರ ಈ ಪ್ರಮಾಣದ ಮಧ್ಯಪ್ರವೇಶವನ್ನು ಜೆಡಿಎಸ್ ಮಾತ್ರವಲ್ಲದೇ, ಕಾಂಗ್ರೆಸ್ ಸಹಾ ಒಪ್ಪಿಕೊಳ್ಳಬೇಕು ಎಂದರೆ ಸರ್ಕಾರ ಹೇಗೆ ಉಳಿಯಬೇಕು?

ವೃತ್ತಿಪರ ಬಿಸಿನೆಸ್‍ಮೆನ್ ಆಗಿದ್ದ ಎಚ್‍ಡಿಕೆ ಡೀಲ್‍ಗಳನ್ನು ಕುದುರಿಸುವುದರಲ್ಲಿ ಎತ್ತಿದ ಕೈ. ಹಾಗಾಗಿಯೇ ಭಿನ್ನಮತೀಯ ಕಾಂಗ್ರೆಸ್ಸಿಗರನ್ನೂ ಭೇಟಿಯಾಗಿ ಸಂತೃಪ್ತಿ ಪಡಿಸುತ್ತೇನೆಂಬ ವಿಶ್ವಾಸವೂ ಅವರಿಗಿತ್ತು. ಆದರೆ, ತಮ್ಮ ಜೊತೆ ಚೆನ್ನಾಗಿಲ್ಲದ ಶಾಸಕರಿಗೆ ಅಂತಹುದೇನನ್ನೂ ಅವರು ಮಾಡಲಿಲ್ಲ. ಹಣ ಮಾಡಿಕೊಳ್ಳಲು ಅವಕಾಶ ಕೊಡದಿದ್ದರೆ ಹಿಡಿತದಲ್ಲಿರುತ್ತಾರೆ ಎಂಬ ಅವರ ಲೆಕ್ಕಾಚಾರ ತಿರುಗೇಟು ನೀಡಿತು.

ರಾಜೀನಾಮೆ ಸಲ್ಲಿಸಿದ ಒಂದು ಡಜನ್‍ಗೂ ಹೆಚ್ಚು ಶಾಸಕರಲ್ಲಿ ಕೆಲವರು ಕೊಟ್ಟ ಕಾರಣಗಳು ಕುತೂಹಲಕರವಾಗಿವೆ. ಕಾಂಗ್ರೆಸ್ ಸದಸ್ಯ ಪಿ.ಮುನಿರತ್ನ ಮಾತನಾಡುತ್ತಾ ತಮ್ಮ ಅಸಮಾಧಾನಕ್ಕೆ ಎಚ್.ಡಿ.ರೇವಣ್ಣ ಕಾರಣ ಎಂದಿದ್ದಾರೆ. ಲೋಕೋಪಯೋಗಿ ಸಚಿವರಾದ ಅವರು ಬೆಂಗಳೂರು ಅಭಿವೃದ್ಧಿ ಬಗ್ಗೆ ಒಮ್ಮೆಯೂ ನಗರದ ಶಾಸಕರ ಸಭೆ ಕರೆಯಲಿಲ್ಲ. ಎಲ್ಲಾ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರ ದೂರು. ಹಾಗೆಯೇ ಭೀಮಾನಾಯ್ಕ ರಾಜೀನಾಮೆ ಕೊಟ್ಟಿಲ್ಲವಾದರು ಕೂಡಾ ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ. ಮೈತ್ರಿ ಒಪ್ಪಂದದಂತೆ ತನ್ನ ಪಾಲಿಗೆ ಬರಬೇಕಿದ್ದ ಕೆಎಂಎಫ್ ಅಧ್ಯಕ್ಷ ಗಾದಿಗೂ ರೇವಣ್ಣ ಕರ್ಚೀಫು ಹಾಕಿ ಕೂತಿರೋದು ಅವರ ಸಿಟ್ಟಿನ ಸಹಜ ಕಾರಣ. ಜೆಡಿಎಸ್‍ನ ಶಾಸಕ ಕೆ.ಸಿ.ನಾರಾಯಣ ಗೌಡರೂ ದೇವೇಗೌಡರ ಪುತ್ರಿಯ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಅತ್ತ ಬಿಜೆಪಿಯಿಂದ ಬರುತ್ತಿರುವ ಆಮಿಷಗಳ ಜೊತೆ ಕೆಲವು ರಾಜೀನಾಮೆಗಳ ಮೇಲೆ ಪ್ರಭಾವ ಬೀರುವಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಬೇಸರವೂ ಇದೆ ಎಂಬುದು ಸತ್ಯ. ಕೆಲವರು ಮಂತ್ರಿಪಟ್ಟ ಸಿಗಲಿಲ್ಲವೆಂದು ಸಿಟ್ಟಾಗಿದ್ದಾರೆ ನಿಜ. ಆದರೆ ಮಂತ್ರಿಸ್ಥಾನದ ನಿರೀಕ್ಷೆ ಇಲ್ಲದವರೂ ಹೊರಗೆ ಹೆಜ್ಜೆ ಇಡಲು ರೇವಣ್ಣ ಕಾರಣ. ಅವರು ತಮ್ಮ ಇಲಾಖೆಯಲ್ಲದೆ ಇತರರ ಖಾತೆಗೂ ಮೂಗು ತೂರಿಸುವುದಷ್ಟೇ ಅಲ್ಲ, ತಾವೇ ಹೋಗಿ ಕೂರುವ ಅಭ್ಯಾಸ. ಅದೇ ಕಾರಣಕ್ಕೆ ಹಾಸನದಲ್ಲಿ ತಮ್ಮ ಹೊರತಾಗಿ ಬೇರಾರಿಗೂ ಮಂತ್ರಿ ಸ್ಥಾನ ದೊರಕದಂತೆ ನೋಡಿಕೊಂಡರು. ಏಳರಲ್ಲಿ ಆರು ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದುಕೊಂಡರೂ ಮತ್ತಾರಿಗೂ ಮಂತ್ರಿಸ್ಥಾನದ ಅವಕಾಶ ಸಿಗಲಿಲ್ಲ. ಪಕ್ಷದ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಮೂರು ಜನ ಮಂತ್ರಿಗಳಿದ್ದಾರೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಕೆ.ಕುಮಾರಸ್ವಾಮಿ ಮಂತ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅವರೂ ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಆಗಲಿಲ್ಲ. ಕೊನೆಗೆ ಮೊನ್ನೆ ಮೊನ್ನೆಯಷ್ಟೇ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯ್ತು.

ಇಡೀ ರಾಜಕೀಯ ಈ ಪ್ರಮಾಣಕ್ಕೆ ಹೊಲಸೆದ್ದಿದ್ದು, ಅಧಿಕಾರ ದಾಹ ಮತ್ತು ಹಣ ಬಾಚಿಕೊಳ್ಳುವುದೇ ದಂಧೆಯಾಗಿದೆ. ಹೀಗಿರುವಾಗ ಅದರ ಪ್ರಧಾನ ಪಾಲು ತಮ್ಮ ಕುಟುಂಬಕ್ಕೆ ಮಾತ್ರ ಎನ್ನುವ ಗೌಡರ ಕುಟುಂಬದ ಧೋರಣೆ ಬಿಕ್ಕಟ್ಟಿಗೆ ಕಾರಣವಾಗಿದೆ ಎಂಬುದು ಹಲವು ಜೆಡಿಎಸ್-ಕಾಂಗ್ರೆಸ್ ಸಚಿವರು ಮತ್ತು ಶಾಸಕರ ಅನಿಸಿಕೆಯಾಗಿದೆ.

ಇದನ್ನು ಓದಿರಿ: ಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!??

ಶುರುವಾಯ್ತಾ ನಿಖಿಲ್ ವರ್ಸಸ್ ಪ್ರಜ್ವಲ್ ಕೆಮಿಸ್ಟ್ರಿ

ಬಿಐಟಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗಿನಿಂದಲೇ ಹಾಸನ ಜಿಲ್ಲೆಯ ಕಡೆಗೆ ಕಣ್ಣಿಟ್ಟಿದ್ದ ಪ್ರಜ್ವಲ್, ಆ ನಂತರ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು. ನಿಖಿಲ್‍ಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಪ್ರಜ್ವಲ್ ಪ್ರಕಾರ ತಾನು ಹಾಸನಕ್ಕೆ ಸಹಜ ಆಯ್ಕೆ. ಆದರೆ, ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ತನ್ನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆಂಬ ಅಸಮಾಧಾನ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿಯವರಿಗೆ ಮೊದಲಿಂದ ಇತ್ತು. ಕೆ.ಆರ್.ನಗರ, ಹುಣಸೂರು ಅಥವಾ ರಾಜರಾಜೇಶ್ವರಿನಗರಕ್ಕೆ ಹೋದರೆ ಹಾಸನದಿಂದಲೂ ಹೊರಗೆ ಪ್ರಭಾವ ಬೆಳೆಸಿಕೊಳ್ಳಬಹುದು ಎಂಬ ಇರಾದೆ ಅವರದ್ದಾಗಿತ್ತು. ಆದರೆ, ಅದಕ್ಕೆ ಕುಮಾರಸ್ವಾಮಿ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ‘ನಮ್ಮ ಪಕ್ಷದಲ್ಲಿ ಸೂಟ್‍ಕೇಸ್ ಸಂಸ್ಕøತಿ ಇದೆ’ ಎಂದು ಪ್ರಜ್ವಲ್ ಬಹಿರಂಗ ಹೇಳಿಕೆ ನೀಡಿದ್ದರು.

ಮಂಡ್ಯದಲ್ಲಿ ಸೋತ ನಿಖಿಲ್‍ರನ್ನು ಇತ್ತೀಚೆಗೆ ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನೇಮಿಸಿದರು. ಅದೇ ದಿನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪರನ್ನೂ ನೇಮಿಸಲಾಗಿತ್ತು. ದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಉಳಿದವರಿಗೆ ಅಭಿನಂದಿಸಿದ್ದ ಪ್ರಜ್ವಲ್, ನಿಖಿಲ್‍ರನ್ನು ಮಾತ್ರ ಅಭಿನಂದಿಸಲಿಲ್ಲ. ಪ್ರಶ್ನೆ ಕೇಳಿದ ಪತ್ರಕರ್ತರಿಗೆ ‘ಹೌದಾ, ನಿಖಿಲ್ ಆಯ್ಕೆಯಾಗಿರುವುದು ತನಗೆ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದರು.
ಇಂತಹ ಕುಟುಂಬಕಾರಣವೂ ಇರುವ ಗೌಡರ ಕುಟುಂಬ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡಲಿ ಎಂಬ ನಿರೀಕ್ಷೆ ಬಹುಶಃ ಬಹಳ ದುಬಾರಿಯಾದುದೇನೋ?

ಇದನ್ನು ಓದಿರಿ: ಮಾನಗೇಡಿ ಶಾಸಕರೂ, ಹೊಣೆಗೇಡಿ ನಾಯಕರೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...