Homeಅಂಕಣಗಳು“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

- Advertisement -
- Advertisement -

ಬದನೆಕಾಯಿ ಇರೋದು ತಿನ್ನಕ್ಕೆ ಪುರಾಣ ಇರದು ಹೇಳಕ್ಕೆ. ಇದೊಂದು ಹಳ್ಳಿ ಕಡೆಯ ಗಾದೆ. ಇದನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಎಡೂರಪ್ಪನ ಸರಕಾರ ಕೊರೊನಾ ಕಾಯಿಲೆ ನಿಯಂತ್ರಿಸುವ ನಿಷೇಧಗಳನ್ನ ಜನಗಳ ಮೇಲೆ ಹೇರಿ ತಾವು ಮಾತ್ರ ಮದುವೆ ಮುಂಜಿ ಹಬ್ಬಹರಿದಿನಗಳಲ್ಲಿ ಆರಾಮವಾಗಿ ಅಡ್ಡಾಡುತ್ತಿವೆಯಂತಲ್ಲಾ. ಹಾಗೆ ನೋಡಿದರೆ ಈ ಬಿಜೆಪಿಗಳೇ ಹಾಗೆ. ಬಾಯಿಬಿಟ್ಟಕೂಡಲೇ ಪುರಾಣವನ್ನು ಹೇಳುವ ಪ್ರಧಾನಿಯನ್ನ ಪಡೆದಿರುವ ನಾವು, ಅವರ ಸರಕಾರಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ನಾಯಕರಿಂದ ಇನ್ನೇನು ಪಡೆಯಲು ಸಾಧ್ಯ. ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ನೂರು ಜನ ಸೇರಿ ಮಾಡುತ್ತಿದ್ದ ಅಮ್ಮನ ಹಬ್ಬ ತಡೆದ ಡಿ.ಸಿ, ಸಾಹಸವನ್ನೆ ಗೈದಂತೆ ಹೋಗುತ್ತಿದ್ದರೆ ಅತ್ತ ಎಡೂರಪ್ಪ `ಕೊರೊನ ಪರೋನ ನನಿಗೆ ಬರದಿಲ್ಲ’ ಅನ್ನಂಗೆ ತಪಾಸಣೆ ತಡಾಯ್ದು ಹೋಗುತ್ತಿದ್ದರೆ ಇತ್ತ ದೇವೇಗೌಡರು ನಾಲ್ಕೈದು ಸಾವಿರ ಜನ ಸೇರಿ ಮಾಡಿದ ಮದುವೆಯ ಮಧ್ಯದಲ್ಲಿದ್ದರು. ಇನ್ನ ಈಶ್ವರಪ್ಪನೂ ಕೂಡ ನಾನೇನು ಕಡಿಮೆ ಎನ್ನುವಂತೆ ಹಬ್ಬ ಸಡಗರದಲ್ಲಿದ್ದರಂತಲ್ಲಾ, ಥೂತ್ತೇರಿ.

ಜನ ಸೇರುವ ಹಬ್ಬ, ಹರಿದಿನ ಹುಡುಕುತ್ತ, ತಿರುಗುತ್ತಿರುವ ಈಶ್ವರಪ್ಪ ಬದುಕಿನಲ್ಲಿ ಬಹಳ ಪುರಾಣ ಹೇಳುವ ಮನುಷ್ಯನಂತಲ್ಲಾ. ಮಾಂಸ ನಿಷೇಧವಿದ್ದಾಗಲೇ ಭಕ್ಷಣೆ ಮಾಡಿ ತಾನು ಅಸುರ ಸಂತತಿ ಎಂದು ಹೇಳಿದವರು. ಚಡ್ಡಿಗಳಿಗೆ ಎಡೂರಪ್ಪನಿಗಿಂತಲೂ ಪ್ರಿಯರಾದವರು. ಅದಕ್ಕೇ ಏನೋ ಎಡೂರಪ್ಪನವರು ದಾವಣಗೆರೆ ಉಸ್ತುವಾರಿ ಸಚಿವರನ್ನಾಗಿ ಮಾಡಿಬಿಟ್ಟಿದ್ದಾರೆ. ಲಂಕೇಶ್ ಹೇಳುತ್ತಿದ್ದ ಪ್ರಕಾರ, ದಾವಣಗೆರೆಯಲ್ಲಿ ಒಂದು ಕಲ್ಲು ಬೀಸಿದರೆ ಅದು ಒಬ್ಬ ಲಿಂಗಾಯತನಿಗೇ ತಗಲುತ್ತದಂತೆ. ಮೊದಲು ಸೆಕ್ಯುಲರ್ ಎಂದೇಳುವ ಶ್ಯಾಮನೂರು ಜೊತೆಗಿದ್ದು, ಈಗ ಬಿಜೆಪಿ ಸಿದ್ದೇಶನ ಜೊತೆ ಸೇರಿಕೊಂಡು ಮೋದಿ ಭಜನೆ ಮಾಡುತ್ತಿರುವ ದಾವಣಗೆರೆಗೆ ಈಶ್ವರಪ್ಪನನ್ನು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿರುವುದು ಸೇಡುತೀರಿಸಿಕೊಳ್ಳುವ ಕ್ರಮವೆಂದು ಹೇಳುತ್ತಿದ್ದಾರಲ್ಲಾ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಲಿಂಗಾಯತರೆಲ್ಲಾ ಸೇರಿಕೊಂಡು ಈಶ್ವರಪ್ಪನನ್ನು ಹುಡುಕಿಕೊಡಿ ಎಂದು ಪ್ರತಿಭಟಿಸಿದಾಗ, ಈಶ್ವರಪ್ಪ ಹಬ್ಬದಲ್ಲಿ ಭಾಗವಹಿಸಿ ಕೊರೊನಾ ಗಿರೋನ ಯಲ್ಲ ದೇವೇಗೌಡನಂತ ಮುದುಕರಿಗೆ ಬತ್ತದೆ ಕಂಡ್ರಿ ನಮಗಲ್ಲ ಎಂದರಂತಲ್ಲಾ, ಥೂತ್ತೇರಿ.

ವಿಧಾನಸೌಧದ ಹೊರಗೆ ಈ ಕತೆಯಾದರೆ, ಇನ್ನ ವಿಧಾನಸೌಧದ ಒಳಗಿನ ಕತೆಗಳು ಮನಕರಗುವಂತಿವೆಯಲ್ಲ. ಪ್ರವಾಹ, ಜನರ ಗೋಳು, ದೊರೆಸ್ವಾಮಿ ನಿಂದನೆಯ ವಿಚಾರ ಚರ್ಚೆಯಾಗಲು ಅವಕಾಶ ಕೊಡದೆ ಕಾಗೇರಿ, ಸಂವಿಧಾನ ಚರ್ಚೆಯಾಗಲು ಧಾರಾಳ ಅವಕಾಶಕೊಟ್ಟು, ಅಳುತ್ತ ಹೋದರಂತಲ್ಲ. ಇವರ ಬುದ್ಧವಂತಿಕೆ ಗ್ರಹಿಸುವುದಾದರೆ, ಪ್ರವಾಹಸಂತ್ರಸ್ತರ ವಿಷಯಕ್ಕೆ ಸಮಯ ಕೊಟ್ಟರೆ ಸರಕಾರದ ಮರ್ಯಾದೆ ಹರಾಜಾಗುತ್ತದೆ. ಜನರ ಗೋಳಿನ ಚರ್ಚೆಯೂ ಅಂತಹ ಅನಾಹುತವನ್ನೆ ಮಾಡಬಹುದು. ಇನ್ನ ದೊರೆಸ್ವಾಮಿ ವಿಷಯ ಪಾರ್ಟಿಯಲ್ಲಿ ಅನಾಗರಿಕರ ಅಪೂರ್ವ ಗುಣಗಳನ್ನ ಅನಾವರಣಮಾಡಬಹುದು. ಸಂವಿಧಾನಕ್ಕೆ ಅವಕಾಶ ಕೊಟ್ಟರೆ ಹಾಗಾಗುವುದಿಲ್ಲ. ಚಡ್ಡಿಗಳಿಗೂ ಸಂವಿಧಾನದ ಬಗ್ಗೆ ಗೌರವವಿದೆ ಎಂಬುದು ಜಗಜ್ಜಾಹೀರಾಗುತ್ತದೆ. ಇಂತಹ ಯೋಚನೆಯ ಕಾಗೇರಿ ಹೊಗಳುಭಟ್ಟರ ಸಂತತಿಯವರಾದ ರಮೇಶಕುಮಾರರಿಂದ ಹಿಗಾಮುಗ್ಗ ಹೊಗಳಿಸಿಕೊಂಡು ನಿರ್ಗಮಿಸಿದರಂತಲ್ಲಾ, ಥೂತ್ತೇರಿ.

ಇನ್ನ ವಿಧಾನಪರಿಷತ್‍ನಲ್ಲಿ ಯಾತಕ್ಕೂ ಲಾಯಕ್ ಅಲ್ಲದ ಕೋಟ ಶ್ರೀನಿವಾಸ ಪೂಜಾರಿ ಎಂಬ ಸಭಾನಾಯಕ ಕರ್ನಾಟಕದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಇಲ್ಲ ಎಂದು ಬಿಟ್ಟಿದ್ದಾನಲ್ಲ. ಈ ಅಜ್ಞಾನಿಗೆ ಬಹುಶ ದೃಷ್ಟಿದೋಷವಿರಬಹುದು ಇಲ್ಲವೇ ಕೂಪಮಂಡೂಕನಿರಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಬಿ.ಜೆ.ಪಿ.ಯ ಭಯಂಕರ ಸುಳ್ಳುಗಾರನಿರಬಹುದು. ಈತನನ್ನ ಹಿಡಿದುಕೊಂಡು ಹೋಗಿ ಅಸ್ಪøಶ್ಯತೆ ಭೀಕರವಾಗಿರುವ ನಮ್ಮ ಹಳ್ಳಿಗಳ ಆಚರಣೆ ತೋರಿಸಬೇಕು. ಅಲ್ಲಿ ಹೊಲೆಯರವನು ಇನ್ನೂ ಅಮ್ಮನಗುಡಿ ಮುಂದೆ ತಮಟೆ ಬಡಿಯುತ್ತಿದ್ದಾನೆ. ಮಾದಿಗರವನು ಕೊಂಡ ಹಾಕುತ್ತಿದ್ದಾನೆ. ಮಡಿವಾಳರವನ್ನು ನೆಡೆಮಡಿಹಾಸಿ ಪತ್ತು ಹಿಡಿಯುತ್ತಿದ್ದಾನೆ. ಕ್ಷೌರಿಕರವನು ವಾಲಗ ಊದುತ್ತಿದ್ದಾನೆ ಇವರೆಲ್ಲಾ ತಮ್ಮತಮ್ಮ ಸ್ಥಾನದಲ್ಲಿ ತಮ್ಮ ಕರ್ತವ್ಯ ಅಂದರೆ ಭಕ್ತಿ ಅರ್ಪಿಸುತ್ತಿದ್ದಾರೆ. ಇನ್ನ ಹೊಟೇಲುಗಳಿಗೆ ಪ್ಲಾಸ್ಟಿಕ್ ಲೋಟ ಬಂದಿರುವುದರಿಂದ ಅದರ ಸಮಸ್ಯೆ ಸಾಲ್ವು ಆಗಿದೆ. ಇಂತಹ ಕೇರಿಗಳಿಗೆ ಈ ಪೂಜಾರಿ ಹೋಗಿ ನೋಡಬೇಕು. ಅವನು ಅಲ್ಲಿಗೆಲ್ಲ ಹೋಗುವುದಿಲ್ಲ. ಸುಳ್ಳುಗಾರ ಜನಕ್ಕೆ ಪ್ರತ್ಯಕ್ಷದ ಅಗತ್ಯವಿಲ್ಲವಂತಲ್ಲಾ, ಥೂತ್ತೇರಿ.

ಪ್ರಭಾಕರ ಕೋರೆಗೆ ಕೆಂಗಲ್ ಹನುಮಂತಯ್ಯ ಸಂಸ್ಕøತಿ ದತ್ತಿ ಪ್ರಶಸ್ತಿ ಪ್ರಾಪ್ತವಾಗಿದೆ. ಕೋರೆಗೆ ಅಭಿನಂದನೆ, ಆದರೆ ಅದನ್ನ ಕೊಡಮಾಡಿದ ಲೀಡರ್ ಬಗ್ಗೆ ಅನುಮಾನ ಎದ್ದಿವೆಯಲ್ಲಾ. ಏಕೆಂದರೆ, ಈ ಪ್ರಶಸ್ತಿಯನ್ನ ಕನ್ನಡ ಸಾಹಿತ್ಯ ಪರಿಷತ್ ಕೊಡುತ್ತದೆ. ಅದರ ಅಧ್ಯಕ್ಷ ಮನುಬಳಿಗಾರ. ಈತ ಪ್ರಶಸ್ತಿ ಕೊಡುವ ಮೊದಲೇ ಸದಸ್ಯರಿಗೆ ಸೂಚನೆ ಕೊಡುವ ಗಿರಾಕಿ. ಆದ್ದರಿಂದ ಕೆಂಗಲ್ ಮತ್ತು ಕೋರೆಗೆ ಜೊತೆಯಾಗಿಯೇ ಅವಮಾನವಾಗಿದೆ. ಕೆಂಗಲ್ ಕರ್ನಾಟಕ ಕಂಡ ಅಪ್ರತಿಮ ನಾಯಕ. ವಿಧಾನಸೌಧ ಕಟ್ಟಿದವರು. ನೆಹರೂಗೆ ಹೆದರದ ಧೀರ. ಇಂದಿರಾಗಾಂಧಿ ಎದುರು ಪಾರ್ಟಿ ಕಟ್ಟಿದವರು. ಭಗವಧ್ಗೀತೆ ಸಾಮಾನ್ಯನೂ ಓದಲೆಂದು ಮುದ್ರಿಸಿ ಹಂಚಿದವರು. ಕನ್ನಡದ ಸಂಸ್ಕøತಿ ಮತ್ತು ರಾಜಕಾರಣದ ಪ್ರತಿನಿಧಿ ಅನ್ನಬಹುದು. ಇಂತಹ ಮಹಾನಾಯಕನ ಹೆಸರಿನ ಪ್ರಶಸ್ತಿ ಕೋರೆಗೆ ಅನವುನ್ಸಾದಾಗ ಬಹುಶ: ಕೋರೆಗೆ ಅಚ್ಚರಿಯಾಗಿರಬಹುದು. ಕೊಟ್ಟವರಾರು ಎಂದು ಗೊತ್ತಾದಾಗ ಈಸಿಕೊಳ್ಳಲು ಸಂಕೋಚವೂ ಆಗಿರಬಹುದು. ಅದಕ್ಕಾಗಿ ಪ್ರಶಸ್ತಿ ಹಣವಾದ 25 ಸಾವಿರವನ್ನು ನೀನೇ ಇಟ್ಟಗಳೊ ಬಳಿಗಾರ ಅನ್ನುವ ಸಂಭವವಿದೆಯೆಂದು ಸಣ್ಣ ಸಂಸ್ಕøತಿ ಜನ ಆಡಿಕೊಳ್ಳುತ್ತಿದ್ದಾರಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...