Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಮರೆ ಮಾಚಿದ ಇತಿಹಾಸದ ಬಗ್ಗೆ......

ಮರೆ ಮಾಚಿದ ಇತಿಹಾಸದ ಬಗ್ಗೆ……

- Advertisement -
- Advertisement -

ಗೌರಿ ಲಂಕೇಶ್ |

ಮೊನ್ನೆ ಎಡ್ಮಂಡ್ ಹಿಲೇರಿ ತೀರಿಹೋಗಿದ್ದರ ಬಗ್ಗೆ ವರದಿ ಮಾಡಿದ ಎಲ್ಲಾ ಮಾಧ್ಯಮಗಳು ಮೌಂಟ್ ಎವರೆಸ್ಟ್ ಬಗ್ಗೆಯೂ ಬರೆದಿದ್ದೆವು. ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದಿರುವುದೇನೆಂದರೆ ಯಾವುದನ್ನು ನಾವೆಲ್ಲ ಇವತ್ತು ಮೌಂಟ್ ಎವರೆಸ್ಟ್ ಎಂದು ಕರೆಯುತ್ತೇವೋ ಆ ಶಿಖರವನ್ನು ನೇಪಾಳದ ಜನ ಸಾಗರಮಾತಾ ಎಂದೂ, ಟಿಬೆಟ್‌ನ ಜನ ಚಿಮೋಲುಂಗ್ಮಾ ಎಂದೂ, ಭಾರತದ ಜನ ಗೌರಿಶಂಕರ ಎಂದೂ ಕರೆಯುತ್ತಿದ್ದರು.

ಆದರೆ ಯಾವಾಗ 1865ರಲ್ಲಿ ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಸರ್ವೇಯರ್ ಜನರಲ್ ಆಫ್ ಇಂಡಿಯಾ ಸರ್ ಜಾರ್ಜ್ ಎವರೆಸ್ಟ್ ಎಂಬ ಅಧಿಕಾರಿ ಆ ಶಿಖರವನ್ನು ಅಳತೆ ಮಾಡಿದನೋ, ಆನಂತರ ಅದಕ್ಕೆ ಆತನ ಹೆಸರನ್ನೇ ಬ್ರಿಟಿಷರು ಇಟ್ಟರು. ಈಗ ಅದರ ಸುತ್ತಮುತ್ತಲಿನ ಜನ ಇಟ್ಟಿದ್ದ ಹೆಸರು ಮಾಯವಾಗಿ ಎಲ್ಲರಿಗೂ ಅದು ಮೌಂಟ್ ಎವರೆಸ್ಟ್ ಎಂದೇ ಪರಿಚಿತವಾಗಿದೆ.

ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಇತ್ತೀಚಿಗೆ ಎಡ್ವರ್ಡೋ ಗಲಿಯಾನೊ ಎಂಬ ಉರುಗ್ವೇ ದೇಶದ ಖ್ಯಾತ ಪತ್ರಕರ್ತ ಮತ್ತು ಬರಹಗರ ಜನರ ಇತಿಹಾಸವನ್ನು ಹೇಗೆ ಪಟ್ಟಭದ್ರ ಹಿತಾಸಕ್ತಿಗಳು ಮರೆಮಾಚುತ್ತವೆ ಎಂಬುದನ್ನು ಕುರಿತು ಒಂದು ಪುಸ್ತಕ ಬರೆದಿದ್ದಾರೆ.

ಗಲಿಯಾನೊ ಅಂತಹ ಹಲವು ಸತ್ಯಗಳನ್ನು ತಮ್ಮ ಪುಸ್ತಕದಲ್ಲಿ ಪಟ್ಟಿ ಮಾಡಿದ್ದಾರೆ. ವಿಶ್ವ ಇತಿಹಾಸವನ್ನರಿಯಲು ಅವು ನೆರವಾಗಬಹುದೆಂಬ ಕಾರಣಕ್ಕೆ ಇಲ್ಲಿ ಹಲವನ್ನು ನೀಡಿದ್ದೇನೆ.

  • ಅರ್ಜೆಂಟಿನಾದಲ್ಲಿರುವ ಅತಿ ಎತ್ತರದ ಸ್ಮಾರಕಕ್ಕೆ ಜನರಲ್ ರೋಕಾನ ಹೆಸರಿಡಲಾಗಿದೆ. ಈ ಪ್ರದೇಶಕ್ಕೆ ರೋಕಾನ ಕೊಡುಗೆ ಏನೆಂದರೆ ಪಟಗೊನಿಯಾದಲ್ಲಿದ್ದ ಬುಡಕಟ್ಟು ಜನರನ್ನು 19ನೇ ಶತಮಾನದಲ್ಲಿ ನಿರ್ನಾಮ ಮಾಡಿದ್ದು.
  • ಗುಲಾಮರನ್ನು ಸಾಗಿಸಲು ಬಳಸುತ್ತಿದ್ದ ಹಲವು ಹಡಗುಗಳ ಹೆಸರುಗಳು ಪೋಲ್ಫೇರ್, ಜೀಸಸ್, ವಿಶ್ವಾಸ, ಸಮಾನತೆ ಮತ್ತು ಸ್ನೇಹ ಎಂಬುದಾಗಿತ್ತು.
  • ಅಮೆರಿಕವನ್ನು ಸ್ಥಾಪಿಸಿದ ಇಬ್ಬರು ಹಿರಿಯರ ಹೆಸರುಗಳು ಅಧಿಕೃತ ಇತಿಹಾಸದಿಂದಲೇ ಮರೆಯಾಗಿವೆ. ಯಾಕೆಂದರೆ ಅವರಲ್ಲಿ ರಾಬರ್ಟ್ ಕಾರ್ಟರ್ ಎಂಬಾತ ತನಗಾಗಿ ದುಡಿಯುತ್ತಿದ್ದ ಕರಿಯರಿಗೂ ಸ್ವಾತಂತ್ರ್ಯ ನೀಡಿದ್ದ ಮತ್ತು ಗವರ್ನರ್ ಮೋರಿಸ್ ಎಂಬಾತ ಕರಿಯ ಗುಲಾಮರು ಇತರರಿಗಿಂತ ಕೀಳು ಎಂಬ ಅಂಶವನ್ನು ಸಂವಿಧಾನದಲ್ಲಿ ಸೇರಿಸುವುದನ್ನು ವಿರೋಧಿಸಿದ್ದ. ಅವರ ಈ ನಿಲುವಿನಿಂದಾಗಿಯೇ ಅವರಿಬ್ಬರನ್ನು ಈಗ ಸಾಮೂಹಿಕ ನೆನಪಿನಿಂದಲೇ ಗಡಿಪಾರು ಮಾಡಲಾಗಿದೆ.
  • 1234 ರಿಂದ ಏಳು ಶತಮಾನಗಳ ಕಾಲ ಚರ್ಚ್‌ಗಳಲ್ಲಿ ಮಹಿಳೆಯರು ಹಾಡುವುದನ್ನು ನಿಷೇಧಿಸಲಾಗಿತ್ತು. ಕಾರಣ ಅವರ ದನಿಗಳು ಅಪವಿತ್ರವೆಂದು ಭಾವಿಸಲಾಗಿತ್ತು.
  • 1793 ರ ಫ್ರೆಂಚ್ ಕ್ರಾಂತಿಯ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಸೂತ್ರಗಳನ್ನು ಘೋಷಿಸಿದಾಗ ’ಪುರುಷರ ಹಕ್ಕುಗಳು’ ಎಂಬ ಕಾನೂನನ್ನು ಪ್ರಕಟಿಸಲಾಗಿತ್ತು. ಆಗ ಕ್ರಾಂತಿಕಾರಿ ತೀವ್ರವಾದಿ ಓಲಿಂಪಿಯಾ ದೆ ಗೂಬ್ ಎಂಬಾಕೆ ’ಮಹಿಳೆಯರ ಹಕ್ಕುಗಳು’ ಎಂಬ ಕಾನೂನನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಳು. ಹಾಗೆ ಕೇಳಿದ್ದಕ್ಕೆ ಅವಳ ಶಿರಛ್ಛೇಧನೆ ಮಾಡಲಾಯಿತು.
  • ರಾಣಿ ಥಿಯೊಡೋರಾಳನ್ನು ಯಾರೂ ಕ್ರಾಂತಿಕಾರಿ, ಮಹಿಳಾವಾದಿ ಎಂದು ನೆನಪಿಸಿಕೊಳ್ಳುವುದಿಲ್ಲ. ಆದರೆ 1500 ವರ್ಷಗಳ ಹಿಂದೆ ಆಳಿದ್ದ ಈಕೆ ಮಹಿಳೆಯರಿಗೆ ಗರ್ಭಪಾತ ಮತ್ತು ವಿಚ್ಛೇದನಾ ಹಕ್ಕುಗಳನ್ನು ನೀಡಿದ್ದ ಪ್ರಥಮ ಮಹಿಳಾವಾದಿ.
  • ಚೀನಾದ ಪೀಕಿಂಗ್‌ನಿಂದ ಯುರೋಪಿಗೆ ತಂದ ಪ್ರಥಮ ಪೀಕಿನೀಸ್ ನಾಯಿಗೆ ಇಂಗ್ಲಿಷರು ’ಲೂಟಿ’ ಎಂದು ಹೆಸರಿಟ್ಟರು. ಬ್ರಿಟಿಷರು ಚೀನಾ ದೇಶವನ್ನು ಲೂಟಿ ಹೊಡೆದದ್ದರ ಸಂಕೇತವಾಗಿ ಆ ಹೆಸರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
  • ಮುಕ್ತ ವ್ಯಾಪಾರ ಮತ್ತು ಸ್ವಾತಂತ್ರ್ಯದ ಹೆಸರಿಲ್ಲಿ ಪರಗ್ವೇ ದೇಶವನ್ನು 1870 ರಲ್ಲಿ ಸಂಪೂರ್ಣವಾಗಿ ನಾಶ ಮಾಡಲಾಯಿತು. ಅಲ್ಲಿಯವರೆಗೂ ಒಂದೇ ಒಂದು ನಯಾಪೈಸೆಯ ಸಾಲವನ್ನು ಮಾಡಿರದಿದ್ದ ಆ ದೇಶ ಐದು ವರ್ಷಗಳ ಯುದ್ಧದ ನಂತರ ಎಷ್ಟು ತತ್ತರಿಸಿತ್ತೆಂದರೆ ಪ್ರಥಮ ಬಾರಿಗೆ ಇಂಗ್ಲೆಂಡಿನಿಂದ ಸಾಲ ಪಡೆದು ಬ್ರೆಜಿಲ್, ಅರ್ಜೆಂಟಿನಾ ಮತ್ತು ಉರುಗ್ವೇ ದೇಶಕ್ಕೆ ನೀಡಿತು, ಕೊಲ್ಲಲ್ಟಟ್ಟ ದೇಶವೇ ತನ್ನ ಕೊಲೆಗಡುಕರಿಂದ ಹಣ ಸಾಲ ಪಡೆಯುವಂತ ಪರಿಸ್ಥಿತಿ ಆದಾಗಿತ್ತು.
  • ಕುಖ್ಯಾತ ಚಿತ್ರಹಿಂಸೆಯ ಯತನಾ ಶಿಬಿರಗಳನ್ನು ಮೊದಲ ಬಾರಿ ಆಫ್ರಿಕಾದಲ್ಲಿ ಪ್ರಾರಂಭಿಸಿದವರು ಬ್ರಿಟಿಷರು. ಆನಂತರ 2ನೇ ವಿಶ್ವ ಮಹಾಯುದ್ಧದಲ್ಲಿ ಯಹೂದಿಯರನ್ನು ಕೊಲ್ಲಲು ಅದನ್ನು ಉಪಯೋಗಿಸಿದವರು ಜರ್ಮನರು.
  • 1936ರ ಒಲಂಪಿಕ್ಸ್ ಅನ್ನು ಅಯೀಜಿಸಿದ್ದು ಹಿಟ್ಲರ್. ಅಂದು ಫುಟ್‌ಬಾಲ್‌ನಲ್ಲಿ ಆಸ್ಟ್ರಿಯಾ ದೇಶವನ್ನು ಪೆರು ದೇಶ ಸೋಲಿಸಿತ್ತು. ಹಿಟ್ಲರ್‌ನ ಜನ್ಮಭೂಮಿ ಅಸ್ಟ್ರಿಯಾ ಆಗಿದ್ದರಿಂದ ಆ ಮ್ಯಾಚನ್ನೇ ಒಲಂಪಿಕ್ಸ್ ಸಮಿತಿ ರದ್ದುಗೊಳಿಸಿತ್ತು.
  • 1964ರಲ್ಲಿ ಟಾನ್ಕಿನ್ ಬೇ ಎಂಬಲ್ಲಿ ವಿಯಟ್ನಾಮ್ ಜನರನ್ನು ಹತ್ಯೆ ಮಾಡಿದ ನಂತರ ಅಮೆರಿಕದ ಎರಡು ಹಡಗುಗಳ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿ ಅಮೆರಿಕ ವಿಯಟ್ನಾಮ್ ಮೇಲೆ ಯುದ್ಧ ಸಾರಿತು. ಸಾವಿರಾರು ವಿಯಟ್ನಾಮ್ ಜನರನ್ನು ಹತ್ಯೆ ಮಾಡಿದ ನಂತರ ಅಮೆರಿಕಾದ ರಕ್ಷಣಾ ಸಚಿವ ಟಾನ್ಕಿನ್ ಬೇನಲ್ಲಿ ಯಾವುದೇ ದಾಳಿ ನಡೆದಿರಲಿಲ್ಲ ಎಂದು ಒಪ್ಪಿಕೊಂಡ. ನಲವತ್ತು ವರ್ಷಗಳ ನಂತರ ಇರಾಕ್ ಮೇಲೂ ಇಂತಹದ್ದೇ ಕುತಂತ್ರವನ್ನು ಅಮೆರಿಕಾ ನಡೆಸಿತು.

ಇದು ನಿಜವಾದ ಇತಿಹಾಸ, ಜನರನ್ನು ಬಲಿ ತೆಗೆದುಕೊಂಡ ಇತಿಹಾಸ, ಸಂಸ್ಕೃತಿಗಳನ್ನು ನಾಶ ಮಾಡಿದ ಇತಿಹಾಸ. ಆದರೆ ಪಟ್ಟಭದ್ರದ ದೃಷ್ಠಿಕೋನದಿಂದ ಬರೆದ ಇತಿಹಾಸದಲ್ಲಿ ಈ ಯಾವುದಕ್ಕೂ ಪ್ರಾಮುಖ್ಯತೆ ಇರುವುದಿಲ್ಲ.

30 ಜನವರಿ, 2008 (‘ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...