Homeಅಂಕಣಗಳುಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

ಸಾರ್ವಜನಿಕ ನೀತಿಗಳು ಮತ್ತು ಕಪ್ಪುಹಣ

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

ಪ್ರಜಾಪ್ರಭುತ್ವದಲ್ಲಿ ಜನರ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಬೇಕು. ನಮ್ಮ ಸಂವಿಧಾನದಲ್ಲಿ ಪಕ್ಷಗಳ ಪ್ರಸ್ತಾಪವೇ ಇಲ್ಲದಿದ್ದರೂ ರಾಜಕೀಯ ಪಕ್ಷಗಳು ಎಲ್ಲೆಡೆ ವೃದ್ಧಿಯಾಗುತ್ತಲೇ ಇವೆ. ಜನರ ಪ್ರತಿನಿಧಿಯಾರೂ ಆಯ್ಕೆಯಾಗುತ್ತಿಲ್ಲ; ರಾಜಕೀಯ ಪಕ್ಷದ ಅಭ್ಯರ್ಥಿಗಳೆ ಸ್ಪರ್ಧಿಸಿ ಆಯ್ಕೆಯಾಗುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಹೀಗೆ ಇತರೆ ಪಕ್ಷಗಳ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಜನರ ಪ್ರತಿನಿಧಿಗಳು ಎಲ್ಲಿ? ಜನರ ಮತಗಳಿಂದಲೇ ಆಯ್ಕೆಯಾದರೂ ಪಕ್ಷಗಳ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಿದ್ದಾರೆ. ಹಾಗಾಗಿ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಪ್ರತಿನಿಧಿಗಳೇ ಇಲ್ಲ.
ಒಂದು, ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ರಾಜಕೀಯ ಪಕ್ಷಗಳನ್ನು ನಿರ್ಬಂಧಿಸಬೇಕು ಇಲ್ಲವೇ ಪರ್ಯಾಯವಾಗಿ ಅಥವಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ಮತದಾರರ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮತದಾರರ ಕೌನ್ಸಿಲ್‍ಗಳ ರಚನೆಯಾಗಬೇಕು.
ಪಂಚವಾರ್ಷಿಕ ಯೋಜನೆಗಳು
ದೇಶದ ಮೊದಲ ಪ್ರಧಾನಿ ನೆಹರು ಅವರು ಪರಿಚಯಿಸಿದ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗಲಿಲ್ಲ. ಈ ಯೋಜನೆಗಳು ಸಾರ್ವಜನಿಕ ನೀತಿಗಳ ಚೈತನ್ಯದ ವಿರುದ್ಧವಾಗಿದ್ದವು. 65 ವರ್ಷಗಳಲ್ಲಿ 13 ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಒಂದೊಂದು ಪಂಚವಾರ್ಷಿಕ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಲಾಯಿತು. ಆದರೆ ಅದರ ಫಲಿತಾಂಶ : ಶ್ರೀಮಂತರು ಇನ್ನಷ್ಟು ಶ್ರೀಮಂತರಾದರೆ ಬಡವರು ಹೆಚ್ಚಿನ ಬಡತನಕ್ಕೆ ದೂಡಲ್ಪಟ್ಟರು. ಈ ಪ್ರಯೋಗ ಬಡತನದ ರೇಖೆಯ ಕೆಳಗೆ 33% ಜನರನ್ನು ಸೃಷ್ಟಿಸಿತು. ದೇಶಕ್ಕೆ ಸ್ವಾತಂತ್ರ ಬಂದಕೂಡಲೇ ಬಡತನವನ್ನು ನಿರ್ಮೂಲನೆ ಮಾಡಬೇಕು ಎಂದು ಗಾಂಧೀಜಿಯವರು ಪಣತೊಟ್ಟಿದ್ದರು. ಆದರೆ ಸ್ವಾತಂತ್ರಾನಂತರ ಬಂದ ಸರಕಾರಗಳ ನೀತಿಗಳಿಂದಾಗಿ ಇದು ಆಗಲಿಲ್ಲ. ಸ್ವಾತಂತ್ರ ಸಿಕ್ಕ ಕೂಡಲೇ ಬಡತನ ನಿರ್ಮೂಲನೆಗಾಗಿ ಸಾರ್ವಜನಿಕ ನೀತಿಯೊಂದನ್ನು ರೂಪಿಸಿದ್ದರೆ, ಇಂದು ನಾವು ಒಂದು ಸಮಾನಾವಕಾಶವುಳ್ಳ (egಚಿಟiಣಚಿಡಿiಚಿಟಿ) ಸಮಾಜವನ್ನು ಸೃಷ್ಟಿಸಿರುತ್ತಿದ್ದೆವು.
13 ಪಂಚವಾರ್ಷಿಕ ಯೋಜನೆಗಳಲ್ಲಿ ಎರಡು ಅಥವಾ ಮೂರು ಯೋಜನೆಗಳನ್ನಷ್ಟೇ ಬಡತನ ನಿರ್ಮೂಲನೆಗಾಗಿ ಮೀಸಲಿಟ್ಟಿದ್ದರೂ, ಭಾರತದ ಪರಿಸ್ಥಿತಿ ಬೇರಯೇ ಆಗಿರುತ್ತಿತ್ತು.
ಸಾರ್ವಜನಿಕ ನೀತಿಗಳೆಂದರೆ, ಸಂವಿಧಾನದ ನಿಬಂಧನೆಗಳ ವಿರುದ್ಧವಿರದ, ಸಾರ್ವಜನಿಕರಿಗೆ ಒಪ್ಪಿಗೆಯಾಗುವ ಸರಕಾರದ ನೀತಿಗಳು ಎಂದು ವ್ಯಾಖ್ಯಾನಿಸಬಹುದು.
ಸಾರ್ವಜನಿಕ ನೀತಿ ಎಂದರೆ, ಕಾನೂನು ಮತ್ತು ಸಾಂಸ್ಥಿಕ ಪದ್ಧತಿಗಳೊಂದಿಗೆ ಅನುಗುಣವಾಗಿರುವಂತೆ, ಎದುರಿಗಿರುವ ಸಮಸ್ಯೆ/ವಿಷಯಗಳನ್ನು ನಿವಾರಿಸಲು ಸರಕಾರದ ಆಡಳಿತದ ಕಾರ್ಯಾಂಗಗಳು ತೆಗೆದುಕೊಳ್ಳುವ ಕ್ರಮಗಳಿಗೆ ಇರಬೇಕಾದ ತತ್ವಾಧಾರಿತ ಮಾರ್ಗದರ್ಶಿ ಎನ್ನಬಹುದು.
ಇನ್ನೂ ಕೆಲವು ವಿದ್ವಾಂಸರು ಸಾರ್ವಜನಿಕ ನೀತಿ ಎಂದರೆ,, a system of courses of actions, regulatory measures, laws and funding priorities, concerning a given topic promulgated by government entity or it’s representatives’ . ಸರಕಾರ ಅಥವಾ ಅದರ ಪ್ರತಿನಿಧಿಗಳಿಂದ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಅನುಸರಿಸುವ ಕ್ರಮಗಳು, ನಿಯಂತ್ರಕ ಕ್ರಮಗಳು ಹಾಗೂ ಬಂಡವಾಳ ಒದಗಿಸುವ ವ್ಯವಸ್ಥೆ. ಸಂವಿಧಾನದಲ್ಲಿ, ಶಾಸನಬದ್ಧ ಕ್ರಮಗಳಲ್ಲಿ ಹಾಗೂ ನ್ಯಾಯಾಂಗದಲ್ಲಿ ಸಾರ್ವಜನಿಕ ನೀತಿಗಳು ಸಾಮಾನ್ಯವಾಗಿ ಸಾಕಾರಗೊಳ್ಳುತ್ತವೆ.
ನಮ್ಮೆದುರಿಗೆ ಈಗ ಇನ್ನೊಂದು ಸಮಸ್ಯೆಯಿದೆ, ಲೋಕಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿಯ ಕಾರ್ಯಕಲಾಪಗಳು ನಾಚಿಕೆ ಹುಟ್ಟಿಸುವಂತಿವೆ. ವಿರೋಧ ಪಕ್ಷಗಳು ನಡೆದುಕೊಳ್ಳುವ ರೀತಿ ಅಸಹ್ಯವಾಗಿದೆ. ತಮ್ಮನ್ನು ಜನರ ಸೇವೆಗಾಗಿ ಆಯ್ಕೆ ಮಾಡಲಾಗಿದೆ ಎನ್ನುವುದು ಅವರುಗಳು ಮರೆತಂತಿದೆ. ಸಭೆಯಲ್ಲಿ ಅವರು ಗೊಂದಲ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲು ಇವರುಗಳು ಅವಕಾಶವೇ ನೀಡುತ್ತಿಲ್ಲ. ಅವರೆದುರಿಗಿರಿಸಿದ ಬಿಲ್‍ಗಳನ್ನು ಯಾವುದೇ ಚರ್ಚೆಯಿಲ್ಲದೇ ಪಾಸ್ ಮಾಡುತ್ತಿದ್ದಾರೆ. ವಿಧೇಯಕವನ್ನು ಅಂಗೀಕರಿಸುವ ಸಮಯದಲ್ಲಿ, ಸದನದಿಂದ ಹೊರನಡೆಯುತ್ತಾರೆ ಹಾಗೂ ಆಗ ಆಡಳಿತ ಪಕ್ಷದ ಸದಸ್ಯರು ವಿಧೇಯಕದ ಪರವಾಗಿ ತಮ್ಮ ಧ್ವನಿಯೆತ್ತುತ್ತಾರೆ ಆಗ ಸದನದ ಸ್ಪೀಕರ್ ವಿಧಾಯಕ ಅಂಗೀಕರಿಸಲಾಗಿದೆ ಎಂದು ಘೋಷಿಸುತ್ತಾರೆ. ಕಳೆದ 10-15 ವರ್ಷದಿಂದ ಈ ಪ್ರಹಸನ ನಡೆಯುತ್ತಲೇ ಇದೆ. ಹಿರಿಯ ಸಭಾಪತಿಗಳಾದ ಸೋಮನಾಥ್ ಚಟರ್ಜಿಗೆ ಕೂಡ ಎಮ್‍ಪಿಗಳ ಮಾಬ್ ಮನಸ್ಥಿತಿಯನ್ನು ಹದ್ದುಬಸ್ತಿನಲ್ಲಿಡಲು ಆಗಲಿಲ್ಲ. ಇಂತಹ ಅವ್ಯವಸ್ಥೆಗಳಲ್ಲಿ ತೊಡಗಿದ್ದಾಗಲೇ, ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಏಳು ಸಲ ಏರಿಸಿಕೊಂಡರು. ಅದೂ ಯಾವುದೇ ಚರ್ಚೆ, ವಿರೋಧವಿಲ್ಲದೇ.
1935 ರಲ್ಲಿ ಗಾಂಧೀಜಿಯವರು ಸ್ವದೇಶಿ ಆಂದೋಲನ ಶುರುಮಾಡಿದಾಗ ಭಾರತದಲ್ಲಿ ಬರೀ ಒಂದು ವಿದೇಶಿ ಕಂಪನಿ ಇತ್ತು; ಈಸ್ಟ್ ಇಂಡಿಯಾ ಕಂಪನಿ. ಅವರು ಹಡಗುಗಳಲ್ಲಿ ತುಂಬಿಸಿ ಹತ್ತಿಯನ್ನು ಇಂಗ್ಲೆಂಡಿಗೆ ಒಯ್ದು, ಭಾರತೀಯರಿಗೆ ಮಾರಲು ಹತ್ತಿಯ ಬಟ್ಟೆಯನ್ನು ಮರಳಿ ತರುತ್ತಿದ್ದರು. ಒಂದು ವೇಳೆ ಬ್ರಿಟಿಷರಿಗೆ ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಮಾರಲು ಅವಕಾಶ ನೀಡಿದಲ್ಲಿ, ಅವರು ತಮ್ಮ ಯಂತ್ರಗಳೊಂದಿಗೆ ಇಲ್ಲಿಗೆ ಬಂದು ಕಾರ್ಖಾನೆಗಳನ್ನು ಪ್ರಾರಂಭಿಸುವ ದಿನಗಳು ದೂರವಿಲ್ಲ ಎಂದು ಗಾಂಧೀಜಿ ಭವಿಷ್ಯ ನುಡಿದಿದ್ದರು. ಹಾಗಾಗಿ ಅವರ ವಸ್ತುಗಳಿಗೆ ಇಂದೇ ಬಹಿಷ್ಕಾರ ಹಾಕಬೇಕು ಎಂದರು. ಹೊರದೇಶದಿಂದ ಭಾರತಕ್ಕೆ ಬರುವ ವಸ್ತುಗಳನ್ನು ಸುಟ್ಟುಹಾಕುವ ಅತ್ಯಂತ ಯಶಸ್ವೀ ಚಳವಳಿಯನ್ನು ಗಾಂಧೀಜಿ ಪ್ರಾರಂಭಿಸಿದರು. ಈ ಚಳವಳಿ ಕಾಳ್ಗಿಚ್ಚಿನಂತೆ ಭಾರತದೆಲ್ಲೆಡೆ ಹಬ್ಬಿತು. ಒಂದೇ ಒಂದು ವಿದೇಶಿ ಕಂಪನಿ ಕೂಡ ಭಾರತಕ್ಕೆ ಬಂದು, ಇಲ್ಲಿಯ ಜನರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಗಾಂಧೀಜಿ ಹೇಳಿದ್ದರು.
ಯಾವುದೇ ಅನುಮಾನವಿಲ್ಲದೆ ವೇಗವಾಗಿ ಆರ್ಥಿಕ ಬೆಳವಣಿಗೆ ಆಗುತ್ತಿದೆ ಆದರೆ ಅದರ ಜೊತೆಜೊತೆಗೆ ಬಡವರು ಮತ್ತು ಶ್ರೀಮಂತರ ಅಂತರವೂ ಸಹ ಬೆಳೆಯುತ್ತಲೇ ಇದೆ. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಇಂತಹ ಅನಾರೋಗ್ಯಕರ ಬೆಳವಣಿಗೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ವಿಶೇಷವಾಗಿ ಮೋದಿ ಸರ್ಕಾರವು ಕೋಟ್ಯಾಧಿಪತಿಗಳ ಪೋಷಣೆ ಮಾಡುತ್ತಿದ್ದಾರೆ ಇದು ಸಾಮಾನ್ಯ ಜನರ ಗಂಡಾಂತರಕ್ಕೆ ಕಾರಣವಾಗಬಹುದೇ?
ಹಣಬಲ: ನಿಯಂತ್ರಿಸುವುದು ಹೇಗೆ?
ಹಣಬಲ- ಒಂದು ಜಾಗತಿಕ ವಿದ್ಯಮಾನ. ಹಣವು ಒಂದು ನಿರ್ಜೀವ ವಸ್ತುವಾಗಿದೆ. ಅದಕ್ಕೆ ನಾವು ಜೀವ ಮತ್ತು ಚಲನೆಯನ್ನು ನೀಡುತ್ತೇವೆ. ಹಣವನ್ನು ಜನರು ಮತ್ತು ಸರ್ಕಾರಗಳೂ ನಿಯಂತ್ರಿಸುವಂತಿರಬೇಕಿತ್ತು. ಆದರೆ ಇಂದು ಹಣ ಮತ್ತು ಹಣವಂತರು ಜನರನ್ನು ಹಾಗೂ ಸಮುದಾಯಗಳನ್ನು ನಿಯಂತ್ರಿಸುತ್ತಿದೆ. ಅಷ್ಟೇ ಅಲ್ಲದೆ ಮಂತ್ರಿಗಳನ್ನು, ಸರ್ಕಾರದ ಬೇರೆ ಬೇರೆ ಪ್ರತಿನಿಧಿಗಳನ್ನು ನಿಭಾಯಿಸುತ್ತಿದೆ. ನಾಯಿ ಬಾಲವನ್ನು ಅಲುಗಾಡಿಸುವ ಬದಲಿಗೆ ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿರುವಂತಿದೆ.
ಹಣವು ವ್ಯಕ್ತಿಗಳನ್ನು ಮತ್ತು ಸರ್ಕಾರವನ್ನು ಕೊಂಡುಕೊಳ್ಳಬಹುದಾಗಿದೆ. ನಾವುಗಳು ಹಣ ಮತ್ತು ಹಣವಂತ ವರ್ಗಕ್ಕೆ ಗುಲಾಮರಾಗಿದ್ದೇವೆ. ಇದರಿಂದ ಹೇಗೆ ಹೊರಬರಬೇಕು ಅನ್ನುವುದೇ ಇಡೀ ಜಗತ್ತಿಗೆ ದೊಡ್ಡ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ನಾನು ಕಪ್ಪು ಹಣದ ಉತ್ಪತ್ತಿಯ ಬಗ್ಗೆ ಒಂದು ಉದಾಹರಣೆ ಕೊಡುತ್ತೇನೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ ಎಂಬುದು ನಿಮಗೆ ಗೊತ್ತಿದೆ; ಕೆಲವು ಗುಂಡಿಗಳು ಚಿಕ್ಕವು, ಕೆಲವು ಆಳವಾದವು, ಭಯಂಕರವಾದವು. ಮಳೆ ಬಂದಾಗ ಈ ಗುಂಡಿಗಳೆಲ್ಲ ನೀರಿನಿಂದ ತುಂಬಿಹೋಗುತ್ತವೆ. ಕೆಲವು ದಿನಗಳ ನಂತರ ಈ ನೀರು ಕಲುಷಿತಗೊಳ್ಳುತ್ತದೆ, ಅದರಲ್ಲಿ ರೋಗಾಣುಗಳು ಸೇರಿಕೊಳ್ಳುತ್ತವೆ ಮತ್ತು ಅದರಿಂದ ಇಡೀ ಬೆಂಗಳೂರಿಗೆ ಕಾಯಿಲೆ ಹರಡುತ್ತದೆ. ಕಪ್ಪು ಹಣದ ವಿಚಾರವೂ ಹೀಗೆಯೇ. ಯಾವಾಗ ಹಣವು ಹರಿವಿನಲ್ಲಿಲ್ಲದೆ ನಿಂತಲ್ಲೇ ನಿಲ್ಲುತ್ತದೋ ಆಗ ಅದು ಕಪ್ಪು ಹಣವಾಗುತ್ತದೆ. ಹಣ ಇರುವುದೇ ಹರಿಯುವುದಕ್ಕಾಗಿ. ಅದು ಕೈಯಿಂದ ಕೈಗೆ ನಿರಂತರವಾಗಿ ಹರಿದಾಡುತ್ತಲೇ ಇರಬೇಕು. ಅದಕ್ಕಾಗಿಯೇ ಹಣವನ್ನು ಕರೆನ್ಸಿ ಎಂದು ಕರೆದಿರುವುದು. ಹಣವನ್ನು ಈ ರೀತಿ ಕರೆಂಟಿನಂತೆ ಹರಿದಾಡುವ ಹಾಗೆ ಮಾಡುವುದು ಹೇಗೆ? ಸಾರ್ವಜನಿಕ ನೀತಿ ನಿರೂಪಣೆಯ ಕೇಂದ್ರಗಳು ಈ ಸಂಕೀರ್ಣ ವಿಚಾರದ ಬಗ್ಗೆ ಗಂಭೀರವಾದ ಚಿಂತನೆ ನಡೆಸಿ, ಸೂಕ್ತ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕು. ಇದು ಸಾಧ್ಯವಾದಾಗಲೇ ಹಣವನ್ನು ನಿಯಂತ್ರಣಕ್ಕೆ ತರಬಹುದು ಮತ್ತು ನಾವು ಅದನ್ನು ಬೇಕಾದಂತೆ ಆಡಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...