Homeರಾಷ್ಟ್ರೀಯ₹202 ಕೋಟಿ ಖರ್ಚು ಮಾಡಿ, ₹14 ಲಕ್ಷ ಗಳಿಸಿದ ‘ರಾಷ್ಟ್ರವಾದಿ’ ಅಪ್ಲಿಕೇಷನ್ ಖ್ಯಾತಿಯ ‘ಕೂ’!

₹202 ಕೋಟಿ ಖರ್ಚು ಮಾಡಿ, ₹14 ಲಕ್ಷ ಗಳಿಸಿದ ‘ರಾಷ್ಟ್ರವಾದಿ’ ಅಪ್ಲಿಕೇಷನ್ ಖ್ಯಾತಿಯ ‘ಕೂ’!

- Advertisement -
- Advertisement -

ಟ್ವಿಟರ್‌‌ಗೆ ಪರ್ಯಾಯವಾಗಿ ರಚನೆಯಾಗಿದ್ದ ಭಾರತೀಯ ಮೂಲದ ‘ಕೂ’ ಅಪ್ಲಿಕೇಷನ್‌‌ ಆದಾಯ ಗಳಿಕೆಯ ವಿಚಾರದಲ್ಲಿ ಸುದ್ದಿಯಾಗಿದೆ. 2022ರ ಆರ್ಥಿಕ ವರ್ಷದಲ್ಲಿ 202 ಕೋಟಿ ರೂ.ಗಳನ್ನು ವೆಚ್ಚ ಮಾಡಿರುವ ‘ಕೂ’ ಅಪ್ಲಿಕೇಷನ್‌, ಕೇವಲ 14 ಲಕ್ಷ ರೂಗಳನ್ನು ಗಳಿಸಿದೆ ಎಂದು ವರದಿಯಾಗಿದೆ.

ಈ ಹಿಂದಿನ ಆರ್ಥಿಕ ವರ್ಷಗಳಿಗೆ ಹೋಲಿಸಿದರೆ 2022ರಲ್ಲಿ ‘ಕೂ’ ಅಪ್ಲಿಕೇಷನ್‌‌ನ ಒಟ್ಟಾರೆ ನಷ್ಟದಲ್ಲಿ ಸುಮಾರು 6 ಪಟ್ಟು ಏರಿಕೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಕಂಪನಿಯು 2021 ರಲ್ಲಿ 8 ಲಕ್ಷ ಆದಾಯ ಗಳಿಸಿತ್ತು. ಇದೀಗ 2022 ರಲ್ಲಿ 14 ಲಕ್ಷ ರೂ.ಗೆ ಏರಿಯೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಕೂ’ ಪ್ಲಾಟ್‌ಫಾರ್ಮ್ ಅನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. ಈ ಅಪ್ಲಿಕೇಷನ್‌ ಬಳಕೆದಾರರಿಗೆ ಪಠ್ಯ, ಆಡಿಯೋ ಮತ್ತು ವೀಡಿಯೊಗಳ ಮೂಲಕ ಸಂವಹನ ನಡೆಸಲು ಅನುಮತಿಸುತ್ತದೆ. ಅಪ್ಲಿಕೇಶನ್ ಪ್ರಸ್ತುತ ಕೆಲವು ವಿದೇಶಿ ಭಾಷೆಗಳನ್ನು ಒಳಗೊಂಡಂತೆ 11 ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದೆ.

ಕಳೆದ ವರ್ಷ ‘ಕೂ’ ಬ್ರೆಜಿಲ್‌ನಲ್ಲಿ ಪೋರ್ಚುಗೀಸ್ ಭಾಷೆಯಲ್ಲಿ ಕೂಡಾ ಪ್ರಾರಂಭವಾಗಿದೆ. ಅಂಡ್ರಾಯಿಡ್‌ ಮತ್ತು IOS ಆಪರೇಟಿಂಗ್ ಸಿಸ್ಟಂಗಳಲ್ಲಿ ಒಟ್ಟು ಸರಿಸುಮಾರು 6 ಕೋಟಿ ಜನರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಅಪ್ಲಿಕೇಷನ್‌ನ ನಿರ್ವಹಣಾ ಆದಾಯವು ಕೇವಲ 14 ಲಕ್ಷವಿದ್ದು, ಕಂಪನಿಯು ಬಡ್ಡಿ ಮತ್ತು ಹೂಡಿಕೆಗಳ ಮೇಲಿನ ಲಾಭ ಮತ್ತು ಇತರ ಕಾರ್ಯಾಚರಣೆಯೇತರ ಆದಾಯದಿಂದ 4.74 ಕೋಟಿ ರೂಪಾಯಿಗಳನ್ನು ಗಳಿಸಿದ್ದು, 2022 ರಲ್ಲಿ ಅದರ ಒಟ್ಟಾರೆ ಆದಾಯವನ್ನು 4.88 ಕೋಟಿಯಾಗಿದೆ.

ಆದಾಗ್ಯೂ, ಜಾಹೀರಾತು ಮತ್ತು ಪ್ರಚಾರದ ಚಟುವಟಿಕೆಗಳು, ಉದ್ಯೋಗಿ ಪ್ರಯೋಜನಗಳು, ಕಾನೂನು ಮತ್ತು ವೃತ್ತಿಪರ ಶುಲ್ಕ, ಸಾಫ್ಟ್‌ವೇರ್, ಪರವಾನಗಿ, ಕ್ಲೌಡ್ ಸರ್ವರ್, ಅಪ್ಲಿಕೇಶನ್ ಎಂಬೆಡ್‌ಗಳು ಮತ್ತು ಇತರ ಸಂವಹನ-ಸಂಬಂಧಿತ ವೆಚ್ಚಗಳ ಮೊತ್ತ 202 ಕೋಟಿ ರೂ. ಆಗಿದೆ ಎಂದು ವರದಿ ಉಲ್ಲೇಖಿಸಿದೆ.

ಅಪ್ಲಿಕೇಷನ್ ಆರಂಭವಾದಾಗ ಇದನ್ನು ರಾಷ್ಟ್ರೀಯವಾದಿ ಟ್ವಿಟರ್‌ ಎಂದು ಕರೆಯಲಾಗಿತ್ತು. ಆದರೆ ಕಳದ ವರ್ಷದ ಅಕ್ಟೋಬರ್‌ನಲ್ಲಿ ‘ಕೂ’ ತನ್ನ ಬಲಪಂಥೀಯ ಮುಖವನ್ನು ಕಳಚಿಕೊಳ್ಳಲು ಯತ್ನಿಸುತ್ತಿದ್ದು, ತಾನು ಎಲ್ಲರ ವೇದಿಕೆ ಎಂದು ಅರ್ಥಮಾಡಿಸಲು ಸಂಸ್ಥೆಯು ಯತ್ನಿಸುತ್ತಿದೆ ಎಂದು ಅದರ ಸಂಸ್ಥಾಪಕ ಹೇಳಿಕೊಂಡಿದ್ದರು.

https://mobile.twitter.com/Ravisutanjani/status/1613544678640717824

ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ವಿಟರ್‌ ನಡುವಿನ ವಿವಾದ ಬಳಿಕ ದೇಸಿ ಟ್ವಿಟರ್‌ ಎಂಬ ಚರ್ಚೆ ಮುನ್ನೆಲೆಗೆ ಬಂದಿತು. ಫೆಬ್ರವರಿ 2021ರಲ್ಲಿ ಟ್ವಿಟರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಡುವೆ ವಿವಾದ ಉಂಟಾಯಿತು. ತಪ್ಪು ಮಾಹಿತಿಗಳಿಗೆ ಟ್ವಿಟ್ಟರ್ ಅನುಮತಿಸಿದೆ ಎಂದು ಆರೋಪಿಸಲಾಯಿತು. ನಂತರ ಕೂ ಬಲಪಂಥೀಯ ರಾಜಕಾರಣಿಗಳನ್ನು ದೊಡ್ಡಮಟ್ಟದಲ್ಲಿ ಆಕರ್ಷಿಸಿತು.  ಪ್ರತಿಭಟನಾ ನಿರತ ರೈತ ನಾಯಕರನ್ನು ನಿರ್ಬಂಧಿಸುವ ಬೇಡಿಕೆಯನ್ನು ಟ್ವಿಟರ್‌ ನಿರಾಕರಿಸಿತ್ತು.

ದ್ವೇಷ ಭಾಷಣ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಟಿ ಕಂಗನಾ ರನೌತ್ ಸೇರಿದಂತೆ ಹಲವಾರು ಪ್ರಮುಖ ಬಿಜೆಪಿ ಪರ ಖಾತೆಗಳನ್ನು ಟ್ವಿಟರ್ ನಿಷೇಧಿಸಿತು. ಟ್ವಿಟ್ಟರ್ ಬಲಪಂಥೀಯ ರಾಷ್ಟ್ರೀಯವಾದಿ ಧ್ವನಿಗಳನ್ನು ನಿಗ್ರಹಿಸುತ್ತಿದೆ ಎಂದು ಆರೋಪಿಸಿ, ಕೋಪಗೊಂಡ ಬಿಜೆಪಿ ಕಾರ್ಯಕರ್ತರು ಕೂ ವೇದಿಕೆಗೆ ವಲಸೆ ಹೋಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...