Homeಮುಖಪುಟಆಧಾರರಹಿತ ಕ್ಷುಲ್ಲಕ ದೇಶದ್ರೋಹ ಪ್ರಕರಣಗಳ ಇತ್ತೀಚಿನ 10 ಉದಾಹರಣೆಗಳು

ಆಧಾರರಹಿತ ಕ್ಷುಲ್ಲಕ ದೇಶದ್ರೋಹ ಪ್ರಕರಣಗಳ ಇತ್ತೀಚಿನ 10 ಉದಾಹರಣೆಗಳು

ಕಳೆದ ಆರು ವರ್ಷಗಳಲ್ಲಿ ದೇಶದ್ರೋಹಕ್ಕಾಗಿ ಬಂಧಿಸಲ್ಪಟ್ಟ 559 ಜನರಲ್ಲಿ, ಕೇವಲ 1% ಮಾತ್ರ ಶಿಕ್ಷೆಗೊಳಗಾಗಿದ್ದಾರೆ, ಮತ್ತು 73 ಜನರನ್ನು ಖುಲಾಸೆಗೊಳಿಸಲಾಗಿದೆ.

- Advertisement -
- Advertisement -

ಪಂಜಾಬಿನಲ್ಲಿ ವೆಂಟಿಲೇಟರ್‌ಗಳ ಕೊರತೆಯನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ದೇಶದ್ರೋಹದ ಕೇಸ್ ದಾಖಲಾಗಿತ್ತು! ಪ್ರಭುತ್ವ ವಿರೋಧಿ ಪೋಸ್ಟರ್‌ಗಳನ್ನು ಹೊಂದಿದ್ದಕ್ಕಾಗಿ ಇನ್ನೊಬ್ಬರ ವಿರುದ್ಧ ಪೊಲೀಸರು ದೇಶದ್ರೋಹದ ಆರೋಪಗಳನ್ನು ಸಲ್ಲಿಸಿದ್ದರು….! ಕರ್ನಾಟಕದಲ್ಲಿ, ಭಾರತೀಯ ಮತ್ತು ಪಾಕಿಸ್ತಾನದ ಧ್ವಜಗಳನ್ನು ವೀಡಿಯೊದಲ್ಲಿ ವಿಲೀನಗೊಳಿಸಿದ್ದಕ್ಕಾಗಿ; ಬಿಹಾರದಲ್ಲಿ ಕುಡಿದ ವಿದ್ಯಾರ್ಥಿಗಳ “ದೇಶದ್ರೋಹದ ಘೋಷಣೆಗಳಿಗಾಗಿ” ಈ ದೇಶದ್ರೋಹ-ಸೆಡಿಷನ್-ಕೇಸ್‌ಗಳನ್ನು ದಾಖಲಿಸಲಾಗಿತ್ತು!

ಭಾರತದ 151 ವರ್ಷದ ಹಳೆಯ 1860ರ ದೇಶದ್ರೋಹ ಕಾನೂನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅಡಿಯಲ್ಲಿ ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಲೇ ಹೊರಟಿದ್ದಾರೆ. ಈ ಕಾಯ್ದೆಯೇ ರದ್ದಾಗಬೇಕು ಎಂದು ಹಲವು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ಮತ್ತು ಸಂವಿಧಾನ ತಜ್ಞರು ಆಗ್ರಹಿಸುತ್ತಲೇ ಬಂದಿದ್ದಾರೆ.

2014 ಮತ್ತು 2020 ರ ನಡುವಿನ ದೇಶದ್ರೋಹದ ಕುರಿತ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಸಂಖ್ಯೆ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ದೇಶದ್ರೋಹಕ್ಕಾಗಿ ಬಂಧಿಸಲ್ಪಟ್ಟ 559 ಜನರಲ್ಲಿ, ಕೇವಲ 1% ಮಾತ್ರ ಶಿಕ್ಷೆಗೊಳಗಾಗಿದ್ದಾರೆ, ಮತ್ತು 73 ಜನರನ್ನು ಖುಲಾಸೆಗೊಳಿಸಲಾಗಿದೆ.

ಆಧಾರರಹಿತ ಇಂತಹ ಕ್ಷುಲ್ಲಕ ದೇಶದ್ರೋಹ ಪ್ರಕರಣಗಳ ಇತ್ತೀಚಿನ 10 ಉದಾಹರಣೆಗಳು ಇಲ್ಲಿವೆ.

ಪೊಲೀಸರು ದೇಶದ್ರೋಹ ಆರೋಪಗಳನ್ನು ಕಡಿಮೆ ಆಲೋಚನೆ, ಪುರಾವೆಗಳು ಅಥವಾ ಕಾನೂನು ಸಮರ್ಥನೆಯೊಂದಿಗೆ ಹೇಗೆ ಅನ್ವಯಿಸುತ್ತಾರೆ ಮತ್ತು ಹೈಕೋರ್ಟ್‌ಗಳು ಮತ್ತು ಸುಪ್ರೀಂ ನ್ಯಾಯಾಂಗದ ತೀರ್ಪುಗಳ ಸರಣಿಯನ್ನು ನಿರ್ಲಕ್ಷಿಸುತ್ತಾರೆ ಎಂಬುದನ್ನು ಈ 10 ಪ್ರಕರಣಗಳು ಸೂಚಿಸುತ್ತವೆ.

  1. ದಿಶಾರವಿ

21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ತಪ್ಪಾಗಿ ಅನ್ವಯಿಸಿದ ದೇಶದ್ರೋಹ ಆರೋಪ ಮತ್ತು ವಿಚಾರಣೆಗೆ ಮುಂಚಿನ ಉಲ್ಲಂಘನೆಗಳ ಬಗ್ಗೆ ಅನುಮಾನಗಳಿಗೆ ಈಗಲೂ ಸ್ಪಷ್ಟ ಉತ್ತರ ಪ್ರಭುತ್ವದ ಕಡೆಯಿಂದ ಬಂದಿಲ್ಲ. ಆದರೆ, ದಿಶಾಗೆ ಜಾಮೀನು ನೀಡುವಾಗ ನ್ಯಾಯಾಧೀಶರು ದೇಶದ್ರೋಹ ಕಾಯ್ದೆ ದುರುಪಯೋಗದ ಬಗ್ಗೆ ಉಲ್ಲೇಖಿಸಿದ ಅಂಶಗಳು ಗಮನಾರ್ಹವಾಗಿವೆ.

“ಸಾರ್ವಜನಿಕ ಶಾಂತಿಯ ಅವ್ಯವಸ್ಥೆ ಅಥವಾ ಗೊಂದಲವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿರುವ ಅಥವಾ ಪ್ರವೃತ್ತಿಯನ್ನು ಹೊಂದಿರುವಂತಹ ಚಟುವಟಿಕೆಗಳನ್ನು ಮಾತ್ರ ಕಾನೂನು ನಿಷೇಧಿಸುತ್ತದೆ” ಎಂದು ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಫೆಬ್ರವರಿ 23 ರಂದು ಹೇಳಿದರು, “ಯಾವುದೇ ಕರೆ ಯಾವುದೇ ರೀತಿಯ ಹಿಂಸಾಚಾರವನ್ನು ಪ್ರಚೋದನೆ ಮಾಡದೇ ಇದ್ದರೆ ಅದು ದೇಶದ್ರೋಹ ಆಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

2. ಕನ್ಹಯ್ಯ ಕುಮಾರ್

2016 ರ ಫೆಬ್ರವರಿ 15 ರಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕರಾಗಿದ್ದ ಕನ್ಹಯ್ಯ ಕುಮಾರ್ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದರು.

3. ಪತ್ರಕರ್ತರ ವಿರುದ್ಧ

ಮಾಜಿ ಸಚಿವ ಶಶಿ ತರೂರ್ ಮತ್ತು ಟೆಲಿವಿಷನ್ ಆಂಕರ್ ರಾಜ್‌ದೀಪ್ ಸರ್ದೇಸಾಯಿ ಮತ್ತು ಕಾರವಾನ್ ನಿಯತಕಾಲಿಕೆಯ ಸಂಪಾದಕ ವಿನೋದ್ ಜೋಸ್ ಅವರಂತಹ ಆರು ಪತ್ರಕರ್ತರ ಪ್ರತಿಭಟನೆಗೆ ಸಂಬಂಧಿಸಿದಂತೆ 2021ರ ಜನವರಿಯಲ್ಲಿ ಕನಿಷ್ಠ ಐದು ವಿಭಿನ್ನ ರಾಜ್ಯಗಳಲ್ಲಿ ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ. 2021 ರ ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್ ಅವರ ಬಂಧನವನ್ನು ತಡೆಹಿಡಿದಿದೆ.

4. ಕಂಗನಾ ರಾಣಾವತ್

ನಟಿ ಕಂಗನಾ ರಾಣಾವತ್ ವಿರುದ್ಧದ ದೇಶದ್ರೋಹದ ಪ್ರಕರಣದಲ್ಲಿ 2020 ರ ನವೆಂಬರ್ 24 ರಂದು ಬಾಂಬೆ ಹೈಕೋರ್ಟ್ ಗಮನಿಸಿದಂತೆ: “ದೂರಿನಲ್ಲಿ 124 ಎ ಐಪಿಸಿ (ದೇಶದ್ರೋಹ) ಸೇರಿಸುವುದು ಒಂದು ಪ್ರವೃತ್ತಿಯಾಗಿದೆ. ಇದರ ಅವಶ್ಯಕತೆ ಏನು? ನಾವು ನಮ್ಮ ನಾಗರಿಕರಿಗೆ ಕಿರುಕುಳ ನೀಡುತ್ತಿದ್ದೇವೆಯೇ?; ಎಂದು ಪ್ರಶ್ನೆ ಮಾಡಿತ್ತು. ಸೆಕ್ಷನ್ 124 ಎ ಅನ್ನು ಅನಗತ್ಯವಾಗಿ ಹೇರದಂತೆ ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಕಾರ್ಯಾಗಾರಗಳನ್ನು ನಡೆಸುವ ಅಗತ್ಯತೆಯ ಬಗ್ಗೆ ಅದು ಮೌಖಿಕ ಹೇಳಿಕೆಗಳನ್ನು ನೀಡಿತ್ತು. ತನ್ನ ಟ್ವೀಟ್ ಹಿಂಸಾಚಾರಕ್ಕೆ ಯಾವುದೇ ಪ್ರಚೋದನೆಯನ್ನು ಉಂಟು ಮಾಡಲಿಲ್ಲ ಎಂದು ಕಂಗನಾ ನ್ಯಾಯಾಲಯದ ಮುಂದೆ ವಾದಿಸಿದ್ದರು.

ದೆಹಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳು ಕ್ರಮವಾಗಿ ಫೆಬ್ರವರಿ 2021 ಮತ್ತು ಅಕ್ಟೋಬರ್ 2020 ರಲ್ಲಿ ದೇಶದ್ರೋಹದ ಬಳಕೆಯನ್ನು ಪ್ರಶ್ನಿಸಿವೆ.

ದಿಶಾ, ಕನ್ನಯ್ಯ ಕುಮಾರ್, ಕಂಗನಾ ಮತ್ತು ಇತರರು ಸೇರಿದಂತೆ, ಕಳೆದ ಒಂದು ದಶಕದಲ್ಲಿ ಸುಮಾರು 11,000 ಭಾರತೀಯರು ಹೀಗೆ ತಳಬುಡವಿಲ್ಲದ ಕ್ಷುಲ್ಲಕ ಅಪಾದನೆಗಳ ದೇಶದ್ರೋಹ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹೊಸದಾಗಿ ಪ್ರಾರಂಭಿಸಲಾದ ಆರ್ಟಿಕಲ್ 14 ಡೇಟಾಬೇಸ್ ಪೋರ್ಟಲ್ ಪ್ರಕಾರ, ಇದರ ಪ್ರಾಥಮಿಕ ಸಂಶೋಧನೆಗಳನ್ನು ನೀವು ಇಲ್ಲಿ ಓದಬಹುದು.

ಪುರಾತನ ಕಾನೂನು ಮತ್ತು ದೇಶದ್ರೋಹ

ಯಾವುದೇ ಭಾಷಣ, ಕಾರ್ಯಕ್ಷಮತೆ ಅಥವಾ ಪ್ರಕಟಣೆಯು ಭಾರತ ಸರ್ಕಾರದ ವಿರುದ್ಧ ವಿಶ್ವಾಸದ್ರೋಹ ಅಥವಾ ದ್ವೇಷವನ್ನು ಉಂಟುಮಾಡುವ ಪರಿಣಾಮವನ್ನು ಹೊಂದಿದ್ದರೆ ಮಾತ್ರ ಅದು ದೇಶದ್ರೋಗ ಆಗಬಲ್ಲದು. ಹಾಗಂತ ಪ್ರಭುತ್ವವನ್ನು ಪ್ರಶ್ನಿಸಿದ ಮಾತ್ರಕ್ಕೆ ದೇಶದ್ರೋಹ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹಲವು ಕೊರ್ಟ್‌ಗಳು ಹಲವು ಬಾರಿ ಉಲ್ಲೇಖ ಮಾಡಿವೆ.

1962 ರಲ್ಲಿ ಕೇದಾರ್ ನಾಥ್ ಸಿಂಗ್ ಕೇಸಿನಲ್ಲಿ ಸುಪ್ರೀಂ ಕೋರ್ಟ್ ದೇಶದ್ರೋಹ ಕಾನೂನಿನ ದುರುಪಯೋಗ ಆಗುತ್ತಿದೆ ಎಂದು ಉಲ್ಲೇಖಿಸಿ, ಮಹತ್ವದ ತೀರ್ಪು ನೀಡಿತ್ತು. ದೇಶದ್ರೋಹದ ನಿಬಂಧನೆಯು ಸಾಂವಿಧಾನಿಕವಾಗಿದ್ದರೂ, ಹಿಂಸೆ ಅಥವಾ ಸಾರ್ವಜನಿಕ ಅಸ್ವಸ್ಥತೆಯನ್ನು ಪ್ರಚೋದಿಸುವ ಪ್ರವೃತ್ತಿಯನ್ನು ಹೊಂದಿರದಿದ್ದರೆ ಅದನ್ನು ದೇಶದ್ರೋಹ ಎನ್ನಲಾಗದು ಎಂದು ತೀರ್ಪು ಹೇಳಿತ್ತು.

ಈ ಮಾನದಂಡವನ್ನು ಪರೀಕ್ಷಿಸಲು, 2020 ರಿಂದ ಮೂರು ವರ್ಷಗಳಲ್ಲಿ ದಾಖಲಾದ ದೇಶಾದ್ಯಂತ 10 ದೇಶದ್ರೋಹ ಪ್ರಕರಣಗಳಲ್ಲಿ ಮೊದಲ ಮಾಹಿತಿ ವರದಿಗಳನ್ನು (ಎಫ್‌ಐಆರ್) ಪರಿಶೀಲಿಸೋಣ.

ಈ ಮೇಲೆ ಉಲ್ಲೀಖಿಸಲಾದ ಈ ನಾಲ್ಕು ಪ್ರಕರಣಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿವೆ. ಎಫ್‌ಐಆರ್‌ಗಳನ್ನು ರಾಜ್ಯ ಪೊಲೀಸ್ ಇಲಾಖೆಯ ವೆಬ್‌ಸೈಟ್‌ಗಳಿಂದ ಪಡೆಯಲಾಗಿದೆ. ಎಫ್‌ಐಆರ್‌ಗಳು 2016 ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಂತೆ ಸಾರ್ವಜನಿಕ ದಾಖಲೆಗಳಾಗಿವೆ. ಎಲ್ಲಾ ವೈಯಕ್ತಿಕ ವಿವರಗಳನ್ನು ಮರುರೂಪಿಸಲಾಗಿದೆ.

5. ಪಂಜಾಬ್‌ ಪ್ರಕರಣ

2020 ರ ಆರಂಭದಲ್ಲಿ, ಕೊವಿಡ್-19 ರ ನಂತರ ಪಂಜಾಬ್‌ನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು ಮತ್ತು ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ವಿಷಯವೇ ದೇಶದ್ರೋಹಕ್ಕೆ ಕಾರಣವಾಗಿತ್ತು!

ಒಂದು ಪ್ರಕರಣದಲ್ಲಿ ಆರೋಪಿ ವೆಂಟಿಲೇಟರ್‌ಗಳ ಕೊರತೆಯ ಬಗ್ಗೆ ಪೋಸ್ಟ್ ಮಾಡಿದ್ದರು. ಆತನ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ, “ರಾಜ್ಯ ಸರ್ಕಾರದ ವಿರುದ್ಧ ದ್ವೇಷವನ್ನು ಪ್ರಚೋದಿಸಿದರು, ಸಾರ್ವಜನಿಕರನ್ನು ಮತ್ತು ಆಡಳಿತವನ್ನು ದಾರಿ ತಪ್ಪಿಸಿದರು ಮತ್ತು ಹಿರಿಯ ಅಧಿಕಾರಿಗಳ ಆದೇಶಗಳನ್ನು ಉಲ್ಲಂಘಿಸಿದ್ದಾರೆ” ಎಂದು ಆರೋಪ ಮಾಡಲಾಗಿತ್ತು.

ಎರಡನೆಯ ಪ್ರಕರಣದಲ್ಲಿ, ಎಫ್‌ಐಆರ್ ಆರೋಪಿಯು ತನ್ನ ಮೋಟಾರ್‌ಸೈಕಲ್ ಸವಾರಿ ಮಾಡುತ್ತ ಸಾಮಾಜಿಕ ಮಾಧ್ಯಮದಲ್ಲಿ, “ಭಾರತ ಸರ್ಕಾರ, ಪಂಜಾಬ್ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಜನರನ್ನು ಪ್ರಚೋದಿಸುವ ದೊಡ್ಡ ಧ್ವನಿಯಲ್ಲಿ…. ಕೆಟ್ಟ ಭಾಷೆಯನ್ನು ಬಳಸಿದ್ದಾರೆ.. ಅವರು ಹಿಂದೂ ದೇವತೆಗಳ ಬಗ್ಗೆ ಕೆಟ್ಟ ಮಾತುಗಳನ್ನು ಹೇಳುತ್ತಿದ್ದರು ಮತ್ತು ಹಿಂದೂ ಧರ್ಮಕ್ಕೆ ಸೇರಿದ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದ್ದರು” ಎಂದು ಆರೋಪಿಸಿ ದೇಶದ್ರೋಹ ಆರೋಪ ಹೊರಿಸಲಾಗುತ್ತು!

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, 2020 ರಲ್ಲಿ ಈ ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ, ಸೆಕ್ಷನ್ 124 ಎಯ ಬಳಕೆಯನ್ನು ಟೀಕಿಸಿತು. ಆಕ್ಷೇಪಾರ್ಹ ವೀಡಿಯೊದ ಪ್ರತಿಲೇಖನವನ್ನು ಅಧ್ಯಯನ ಮಾಡಿದ ನಂತರ, ಹೈಕೋರ್ಟ್, “ಸರ್ಕಾರದ ಕಾರ್ಯವೈಖರಿಯ ಕುರಿತು ಅಸಮಾಧಾನ ಮತ್ತು ಅದರ ನೀತಿಗಳ ಟೀಕೆ” ದೇಶದ್ರೋವಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಈ ಆದೇಶದ ಸಮಯದಲ್ಲಿ ಆರೋಪಿ ಆರು ತಿಂಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿ ಕಳೆಯಬೇಕಾಗಿತು.

ಪ್ರಭುತ್ವವು, “ದೇಶದ್ರೋಹ ಮತ್ತು ಧಾರ್ಮಿಕ ಅಸಮಾಧಾನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೆ ತರುವಾಗ” ಹೆಚ್ಚು ಸಹಿಷ್ಣುತೆ ಮತ್ತು ಸೂಕ್ಷ್ಮವಾಗಿ ಗಮನಹರಿಸಬೇಕು” ಎಂದು ಕೋರ್ಟ್ ಹೇಳಿತ್ತು.

6. ಕರ್ನಾಟಕದ ಯುವಕರು

ಸ್ವಾತಂತ್ರ‍್ಯ ದಿನಾಚರಣೆಯಂದು 2019 ರಲ್ಲಿ ಕರ್ನಾಟಕದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ, ಆರೋಪಿಯು ಪಾಕಿಸ್ತಾನದ ಧ್ವಜದಿಂದ ಅರ್ಧ ಚಂದ್ರ ಮತ್ತು ನಕ್ಷತ್ರವನ್ನು ಭಾರತದ ಕೇಸರಿ, ಬಿಳಿ ಮತ್ತು ಹಸಿರು ಧ್ವಜದೊಂದಿಗೆ ಎಡಿಟ್ ಮಾಡಿದ್ದ ಮತ್ತು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ “ಚಾಂದ್ ತಾರಾ (ಚಂದ್ರ ಮತ್ತು ನಕ್ಷತ್ರಗಳು) ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಹಾಗೆ ಮಾಡುವ ಮೂಲಕ, ಅವರು ಭಾರತೀಯ ಧ್ವಜವನ್ನು ಅವಮಾನಿಸಿದ್ದಾರೆ ಮತ್ತು “ರಾಷ್ಟ್ರೀಯ ಸಮಗ್ರತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಹಾನಿ ಉಂಟುಮಾಡಿದ್ದಾರೆ” ಎಂದು ವಿವರಿಸಿದ್ದ ಎಫ್‌ಐಆರ್ ಆರೋಪಿಯ ಮೇಲೆ ದೇಶದ್ರೋಹದ ಅಪಾದನೆ ಮಾಡಿತ್ತು!

7. ಕೇರಳ ಪ್ರಕರಣ

ಅದೇ ವರ್ಷ, ಕೇರಳದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ “ಆರೋಪಿ, ವಿದ್ಯಾರ್ಥಿ ಕಾಲೇಜಿನ ಪೋರ್ಟಿಕೊ ಗೋಡೆಗಳ ಮೇಲೆ ರಾಷ್ಟ್ರ ವಿರೋಧಿ ಘೋಷಣೆಗಳೊಂದಿಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಭಾರತದ ಒಗ್ಗಟ್ಟಿಗೆ ಹಾನಿ ಮಾಡಿದ್ದ” ಎಂದು ಹೇಳಲಾಗಿತ್ತು.

8. ಪಂಜಾಬ್‌ ಪೋಸ್ಟರ್ ಪ್ರಕರಣ

2019 ರಲ್ಲಿ, ಪಂಜಾಬ್‌ನಲ್ಲಿ ಪೊಲೀಸರು, “ಸರ್ಕಾರದ ವಿರುದ್ಧ”ದ ಪೋಸ್ಟರ್‌ಗಳನ್ನು ಹೊಂದಿದ್ದಕ್ಕಾಗಿ ಇಬ್ಬರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು ಮತ್ತು ಸರ್ಕಾರದ ವಿರುದ್ಧ ಜನರನ್ನು ಸಜ್ಜುಗೊಳಿಸಲು ಪೋಸ್ಟರ್‌ಗಳನ್ನು ವಿತರಿಸಲಾಗಿತ್ತು ಎಂದು ಆರೋಪಿಸಿದ್ದರು. ಪೋಸ್ಟರ್‌ಗಳ ವಿಷಯಗಳು ಯಾವುವು ಮತ್ತು ಅವು ಸರ್ಕಾರದ ವಿರುದ್ಧ ಹೇಗೆ ಸಮರ ಸಾರುತ್ತವೆ ಎಂದು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರತಲಿಲ್ಲ.

9. ಬಿಹಾರ ಪತ್ರಗಳು

2019 ರ ಅಕ್ಟೋಬರ್‌ನಲ್ಲಿ ಬಿಹಾರದಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ, “ಪತ್ರಗಳನ್ನು ಬರೆದ ಆರೋಪಿತ ವ್ಯಕ್ತಿಗಳ ಉದ್ದೇಶವು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದೇಶದ ಚಿತ್ರಣವನ್ನು ಹದಗೆಡಿಸುವುದಾಗಿದೆ. ಅವರು ಪ್ರಧಾನಿಗೆ ಕೆಟ್ಟ ಹೆಸರು ತರಲು ಬಯಸಿದ್ದಾರೆ. ಇದು ರಾಷ್ಟ್ರೀಯತೆ ಮತ್ತು ಮಾನವೀಯತೆಗೆ ವಿರುದ್ಧವಾಗಿದೆ ಮತ್ತು ಪ್ರಧಾನ ಮಂತ್ರಿಯ ಚಿತ್ರಣವನ್ನು ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವರ ಕಾರ್ಯವನ್ನು ಕೆಣಕುವ ಉದ್ದೇಶ ಹೊಂದಿದೆ. ಆರೋಪಿತ ವ್ಯಕ್ತಿ ಉದ್ದೇಶಪೂರ್ವಕವಾಗಿ ಪತ್ರವನ್ನು ಬರೆದಿದ್ದು ದೇಶವನ್ನು ವಿಭಜಿಸುವ ಮತ್ತು ಕೆಡವುವ ಉದ್ದೇಶದಿಂದ ದ್ವೇಷವನ್ನು ಹರಡುವ ಮೂಲಕ ಮತ್ತು ಜನರನ್ನು ದಾರಿತಪ್ಪಿಸುವ ಮೂಲಕ ದೇಶದ್ರೋಹ ಮಾಡಲಾಗಿದೆ’ ಎಂದು ಹೇಳಲಾಗಿತ್ತು.

ಕುಡಿದು ತಮ್ಮ ಸಹಪಾಠಿಗಳ ಜೊತೆ ಬಡಿದಾಡಿಕೊಂಡ ವಿದ್ಯಾರ್ಥಿಗಳ ವಿರುದ್ಧ ಬಿಹಾರ ಪೊಲೀಸರು 2018 ರಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ “ಈ ವಿದ್ಯಾರ್ಥಿಗಳು ದೇಶದ್ರೋಹದ ಘೋಷಣೆಗಳನ್ನು ಕೂಗಿದರು” ಎಂದು ಆರೋಪಿಸಲಾಗಿತ್ತು.

ಅದೇ ರೀತಿ ಬಿಹಾರದಲ್ಲಿ, 2018 ರಲ್ಲಿ, ಸ್ವಾತಂತ್ರ‍್ಯ ದಿನದಂದು , “ರಾಷ್ಟ್ರಧ್ವಜವನ್ನು ಕಿತ್ತುಹಾಕಿದರು” ಮತ್ತು “ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು” ಎಂದು ಮೂವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಜಾರ್ಖಂಡ್‌ನಲ್ಲಿ 2017 ರಲ್ಲಿ ದೇಶ ವಿರೋಧಿ ಘೋಷಣೆ ಕೂಗಿದರೆಂದು ಎತ್ತುವ ಕಾರಣಕ್ಕಾಗಿ ಒಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

10. ಇತರ ಪ್ರಕರಣಗಳು

ಜೂನ್ 2017 ರಲ್ಲಿ ಭಾರತ ಕ್ರಿಕೆಟ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಕಳೆದುಕೊಂಡಿತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದು ಸೋತಿತ್ತು. ಪಾಕಿಸ್ತಾನದ ಗೆಲುವನ್ನು ಆಚರಿಸಿದ ಕೆಲವು ಆರೋಪಿಗಳು ಪಟಾಕಿ ಸಿಡಿಸಿ ಭಾರತದ ವಿರುದ್ಧ “ಪಾಕಿಸ್ತಾನ ಜಿಂದಾಬಾದ್” ಎಂದು ಸಾರ್ವಜನಿಕವಾಗಿ ಕೂಗಿದರು ಎಂದು ಕರ್ನಾಟಕದಲ್ಲಿ ದಾಖಲಾಗಿದ್ದ ಎಫ್‌ಐಆರ್ ದೇಶದ್ರೋಹದ ಆರೋಪ ಹೊರಿಸಿತ್ತು.

ಅಸ್ಸಾಂನಲ್ಲಿ, ಏಪ್ರಿಲ್ 2019 ರಲ್ಲಿ, ಒಬ್ಬ ವ್ಯಕ್ತಿಯನ್ನು ದೇಶದ್ರೋಹಕ್ಕಾಗಿ ಬಂಧಿಸಲಾಯಿತು, “ತನ್ನ ಫೇಸ್ಬುಕ್ ಖಾತೆಯಲ್ಲಿ ರಾಷ್ಟ್ರ ವಿರೋಧಿ ಕಾಮೆಂಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ (ಪಾಕಿಸ್ತಾನ ಸೈನ್ಯವನ್ನು ಬೆಂಬಲಿಸಿದೆದನಂತೆ!) ದೇಶದ್ರೋಹ ಆರೋಪ ಹೊರಿಸಲಾಗಿತ್ತು.
ಪರಿಶೀಲಿಸಿದ ಈ ಎಫ್‌ಐಆರ್‌ಗಳಲ್ಲಿ ಯಾವುದೂ ಹಿಂಸಾಚಾರದ ಸಂಭವನೀಯತೆಯನ್ನು ಅಥವಾ ಘಟನೆಯ ನಂತರ ನಂತರ ನಿಜವಾದ ಹಿಂಸಾಚಾರ ಸಂಭವಿಸಿದ ಸಂಪರ್ಕವನ್ನು ವಿವರಿಸಿಲ್ಲ. ದ್ವೇಷ ಅಥವಾ ಕೋಮು ಅಸಮಾನತೆಯ ಭಾವನೆಗಳನ್ನು ಹರಡುವುದನ್ನು ಅವರು ವಿವರಿಸುವುದಿಲ್ಲ. ದಿಶಾ ರವಿ ಜಾಮೀನು ಆದೇಶದಲ್ಲಿ ವಿವರಿಸಿರುವ ಅದೇ ರೀತಿಯ ಉಪದ್ರವದಿಂದ ಪೊಲೀಸರು ಬಹುಶಃ ಬಳಲುತ್ತಿದ್ದಾರೆ, ಹಿಂಸಾಚಾರಕ್ಕೆ ಪ್ರಚೋದನೆಗೆ ನೇರ ಸಂಪರ್ಕವಿಲ್ಲದ “ಸಾಮಾನ್ಯ ಆರೋಪ” ಗಳ ಕುರಿತು ಪೊಲೀಸರು ವಿಪರೀತ ತಲೆ ಕೆಡಿಸಿಕೊಂಡಿದ್ದಾರೆ, ಅದಕ್ಕೆ ಪ್ರಭುತ್ವದ ಒತ್ತಡವೇ ಕಾರಣವಾಗಿದೆ.

ಆರ್ಟಿಕಲ್ 14 ಪೋರ್ಟಲ್ ದತ್ತಸಂಚಯವು ಪ್ರಸ್ತುತ ಬಿಜೆಪಿ ಸರ್ಕಾರದ ಅಡಿಯಲ್ಲಿ ಆರು ವರ್ಷಗಳಲ್ಲಿ ದಾಖಲಾದ 519 ದೇಶದ್ರೋಹ ಪ್ರಕರಣಗಳನ್ನು ಕಂಡುಹಿಡಿದಿದೆ. ಹಿಂದಿನ ಯುಪಿಎ -2 ಸರ್ಕಾರದ ಅವಧಿಯಲ್ಲಿ 2010 ಮತ್ತು ಮೇ 2014 ರ ನಡುವೆ ದಾಖಲಾದ 279 ಪ್ರಕರಣಗಳಿಗೆ ಹೋಲಿಸಿದರೆ, ಇದು ದುಪ್ಪಟ್ಟಾಗಿದೆ.

ಕಳೆದ ಒಂದು ದಶಕದಲ್ಲಿ ದೇಶದ್ರೋಹದ ಆರೋಪ ಹೊತ್ತಿರುವ 10,938 ಭಾರತೀಯರಲ್ಲಿ, 65% ಜನರು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇ 2014 ರ ನಂತರ ಈ ಆರೋಪಕ್ಕೆ ಗುರಿಯಾಗಿದ್ದಾರೆ, ಅವರ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯಗಳೇ ಇಲ್ಲ. 2014 ರಿಂದ ಪ್ರತಿವರ್ಷ ಪ್ರಕರಣಗಳ ಸಂಖ್ಯೆ 28% ಹೆಚ್ಚುತ್ತಿದೆ.

2019 ರ ಡಿಸೆಂಬರ್‌ನಲ್ಲಿ ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದ ನಂತರ ಇಂತಹ ಪ್ರವೃತ್ತಿ ಹೆಚ್ಚು ಗೋಚರಿಸುತ್ತಿದೆ. ದೇಶಾದ್ಯಂತ ಪೊಲೀಸ್ ಅಧಿಕಾರಿಗಳು 3,754 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ 25 ದೇಶದ್ರೋಹ ಪ್ರಕರಣಗಳನ್ನು ದಾಖಲಿಸಿದ್ದಾರೆ, ಅದರಲ್ಲಿ 96 ಜನರನ್ನು ಗುರುತಿಸಲಾಗಿದೆ ಮತ್ತು ಉಳಿದವುಗಳಲ್ಲಿ ಆರೋಪಿಗಳನ್ನೇ “ಗುರುತಿಸಲಾಗಿಲ್ಲ ”. 25 ಪ್ರಕರಣಗಳಲ್ಲಿ 22 ಪ್ರಕರಣಗಳು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿವೆ. ಸಾರ್ವಜನಿಕರ ಆಕ್ರೋಶದ ನಂತರ, ಜಾರ್ಖಂಡ್ ಸರ್ಕಾರವು ಧನ್ಬಾದ್ ಪೊಲೀಸರು ಸೆಕ್ಷನ್ 124 ಎ ಅಡಿಯಲ್ಲಿ ಪ್ರಕರಣ ದಾಖಲಾಗಿರುವ 3,000 ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಕೈಬಿಡಲು ಶಿಫಾರಸು ಮಾಡಿತ್ತು.

ಘೋಷಣೆಗಳು ಸರ್ಕಾರಕ್ಕೆ ಯಾವುದೇ ಬೆದರಿಕೆಯಲ್ಲ

1962ರ ಕೇದಾರ್ ನಾಥ್ ಸಿಂಗ್ ಮತ್ತು 1995 ರ ಬಲ್ವಂತ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಘೋಷಣೆ ಕೂಗುವುದು ಭಾರತ ಸರ್ಕಾರಕ್ಕೆ ಯಾವುದೇ ಅಪಾಯ ಉಂಟು ಮಾಡದು’ ಎಂದು ಪ್ರತಿಪಾದಿಸಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಘೋಷಣೆಗಳನ್ನು ಕೂಗಿದ್ದಕ್ಕಾಗಿ 1984 ರಲ್ಲಿ ಪೊಲೀಸರು ದೇಶದ್ರೋಹ ಮತ್ತು ಐಪಿಸಿಯ ಸೆಕ್ಷನ್ 153 ಎ ಆರೋಪದ ಮೇಲೆ ಬಲ್ವಂತ್ ಸಿಂಗ್ ಮತ್ತು ಭೂಪಿಂದರ್ ಸಿಂಗ್ ಅವರನ್ನು ಬಂಧಿಸಿದ್ದರು. “ಅಂತಹ ಪ್ರಾಸಂಗಿಕ ಘೋಷಣೆಗಳನ್ನು ಕೂಗುವುದು ಅಪರಾಧವಲ್ಲ. ಬೇರೆ ಯಾವುದೇ ಅಪರಾಧ ಕೃತ್ಯವಿಲ್ಲದೆ ಘೋಷಣೆ ಕೂಗಿದ ಮಾತ್ರಕ್ಕೆ ದೇಶದ್ರೋಹ ಅಥವಾ 153 ಎ ಅನ್ನು ಸಮರ್ಥಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಇಬ್ಬರೂ ಖುಲಾಸೆಗೊಂಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ದೇಶದ್ರೋಹ: ನ್ಯಾಯಾಂಗ ಮಾರ್ಗಸೂಚಿಗಳು

ದೇಶದ್ರೋಹ ಪ್ರಕರಣಗಳಲ್ಲಿ ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್ ಸೂಚಿಸಿದೆ. ಅಸೀಮ್ ತ್ರಿವೇದಿ ಪ್ರಕರಣದ ನಂತರ ಇಂತಹ ಮಾರ್ಗಸೂಚಿಗಳನ್ನು ಕೋರ್ಟ್ ಪುನರುಚ್ಛರಿಸುತ್ತಲೇ ಇದೆ. ಕಾರ್ಟೂನಿಸ್ಟ್ ಆಗಿದ್ದ ಅಸೀಮ್ ತ್ರಿವೇದಿಯವರ ಮೇಲೆ, ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು 2012 ರಲ್ಲಿ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ್ರೋಹದ ಆರೋಪ ಹೊರಿಸಿತ್ತು.. ತ್ರಿವೇದಿ ಅವರ ಬಂಧನದ ವಿರುದ್ಧ ವ್ಯಾಪಕ ಸಾರ್ವಜನಿಕ ಪ್ರತಿರೋಧ ವ್ಯಕ್ತವಾಗಿತ್ತು. ಅದೇ ವರ್ಷ ಅವರ ವಿರುದ್ಧ ದೇಶದ್ರೋಹದ ಆರೋಪಗಳನ್ನು ಕೈಬಿಡಲಾಯಿತು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದ್ರೋಹದ ಪ್ರಕರಣಗಳು ಹೆಚ್ಚಿವೆ ಮತ್ತು ಮೋದಿ, ಯೋಗಿ ಅಥವಾ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಧೀಶ ದೀಪಕ್ ಗುಪ್ತಾ ದೇಶದ್ರೋಹ ಕಾನೂನನ್ನು ರದ್ದು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ಆಧಾರ: ದಿ ಕ್ವಿಂಟ್, ಸ್ಕ್ರೋಲ್, ಆರ್ಟಿಕಲ್ 14 ಮತ್ತು ಇತರ ಮೂಲಗಳು)


ಇದನ್ನೂ ಓದಿ: ಸರ್ಕಾರದಿಂದ ದೇಶದ್ರೋಹ ಕಾನೂನು ದುರುಪಯೋಗ, ಅದನ್ನು ರದ್ದುಗೊಳಿಸಬೇಕು : ನಿವೃತ್ತ ಸುಪ್ರೀಂ ನ್ಯಾಯಾಧೀಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...