Homeಕರ್ನಾಟಕಮೋದಿ ಸರ್ಕಾರದಿಂದ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ: ಗಣರಾಜ್ಯೋತ್ಸವದಂದು ಕರಾವಳಿಯ ಪ್ರತಿ ತಾಲೂಕಿನಲ್ಲಿ ಟ್ಯಾಬ್ಲೊ ಮೆರವಣಿಗೆ!

ಮೋದಿ ಸರ್ಕಾರದಿಂದ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ: ಗಣರಾಜ್ಯೋತ್ಸವದಂದು ಕರಾವಳಿಯ ಪ್ರತಿ ತಾಲೂಕಿನಲ್ಲಿ ಟ್ಯಾಬ್ಲೊ ಮೆರವಣಿಗೆ!

- Advertisement -
- Advertisement -

ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೆಹಲಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ಮಾಡಿರುವುದರ ವಿರುದ್ಧ ಜನವರಿ 26 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿತಾಲೂಕಿನಲ್ಲಿ ಗುರುಗಳ ಟ್ಯಾಬ್ಲೊ ಮೆರವಣಿಗೆ ಮಾಡುವುದಾಗಿ ಒಕ್ಕೂಟ ಸರ್ಕಾರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.

ಅವಳಿ ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳ ಆಯೋಜನೆಯಿಂದ ಪ್ರತಿ ತಾಲೂಕುಗಳಲ್ಲಿ ಗುರುಗಳ ಟ್ಯಾಬ್ಲೊ ಆಯೋಜನೆ ಮಾಡಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ.

ಇದನ್ನೂ ಓದಿ:ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ವಿವಾದ: ಸುಳ್ಳು ಹೇಳಿದ ಸಚಿವ ಸುನಿಲ್ ಕುಮಾರ್‌?

“ಸರ್ಕಾರದ ಈ ದುಷ್ಕೃತ್ಯವನ್ನು ಖಂಡನೆ ಮಾಡಿ ಜನವರಿ 26ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಚಿತ್ರವನ್ನು ನಾನೇ ತಲೆಯಲ್ಲಿ ಹೊತ್ತುಕೊಂಡು ಮಂಗಳೂರಿನ ಕಂಕನಾಡಿ ಗರೋಡಿಯಿಂದ ಮೆರವಣಿಗೆ ಹೊರಟು, ಗುರುಗಳು ಕಟ್ಟಿಸಿದ ಕುದ್ರೋಳಿ ದೇವಸ್ಥಾನದಲ್ಲಿ ಸಮಾವೇವೇಶ ಸೇರುತ್ತೇವೆ” ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.

ವಿಡಿಯೊ ಸಂದೇಶದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, “ಜನವರಿ 26 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ನಿರಾಕರಣೆ ಮಾಡಿದ್ದು ನನಗೆ ತುಂಬಾ ನೋವುಂಟು ಮಾಡಿದೆ. ಆ ದಿನ ನಾನು ನಿದ್ದೆಯೆ ಮಾಡಿಲ್ಲ, ಇಡೀ ರಾತ್ರಿ ಕಣ್ಣೀರು ಸುರಿಸಿದ್ದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಒಕ್ಕೂಟ ಸರ್ಕಾರ ತಿರಸ್ಕರಿಸಿದ ಟ್ಯಾಬ್ಲೊ ತಮಿಳುನಾಡಿನಾದ್ಯಂತ ಪ್ರದರ್ಶನ: ಸಿಎಂ ಸ್ಟಾಲಿನ್‌

“ನಾರಾಯಣ ಗುರುಗಳು ಯಾವು ಜಾತಿಗೂ, ಯಾವ ಸಮಾಜಕ್ಕೂ, ಯಾವೊಂದು ಧರ್ಮಕ್ಕೂ ಸೇರಿದವರಲ್ಲ. ಅವರು ಎಲ್ಲಾ ಸಮಾಜಕ್ಕೆ, ಎಲ್ಲಾ ಧರ್ಮದವರಿಗೆ ಹಾಗೂ ಎಲ್ಲರಿಗೂ ಸೇರಿದ ಮಹಾನ್ ವ್ಯಕ್ತಿ. ಸರ್ಕಾರದ ಈ ದುಷ್ಕೃತ್ಯವನ್ನು ಖಂಡನೆ ಮಾಡಿ ಜನವರಿ 26ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಚಿತ್ರವನ್ನು ನಾನೇ ತಲೆಯಲ್ಲಿ ಹೊತ್ತುಕೊಂಡು ಮಂಗಳೂರಿನ ಕಂಕನಾಡಿ ಗರೋಡಿಯಿಂದ ಹೊರಟು ನಾರಾಯಣ ಗುರುಗಳು ಕಟ್ಟಿಸಿದ ಕುದ್ರೋಳಿ ದೇವಸ್ಥಾನದಲ್ಲಿ ಸೇರುತ್ತೇವೆ. ಈ ಮೆರವಣಿಗೆಯಲ್ಲಿ ಜಾತಿ, ಮತ,ಧರ್ಮ ಯಾವುದನ್ನೂ ಲೆಕ್ಕಿಸದೆ ಇದರಲ್ಲಿ ಭಾಗವಹಿಸಬೇಕು” ಎಂದು  ಅವರು ಹೇಳಿದ್ದಾರೆ.

 

ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿತ್ತು. ಈ ಮೂಲಕ ಸತತ ಮೂರನೇ ಬಾರಿಗೆ ಕೇರಳ ಗಣರಾಜ್ಯೋತ್ಸವ ಪರೇಡ್‌ನಿಂದ ಹೊರಗುಳಿಯಲಿದ್ದು, ದೇಶದಾದ್ಯಂತ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ದೇಶದಾದ್ಯಂತ ಈ ಬಗ್ಗೆ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಆದರೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್‌ ಕಾರ್ಕಾಳ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರು ಒಕ್ಕೂಟ ಸರ್ಕಾರದ ಕ್ರಮವನ್ನು ಸಮರ್ಥಿಸುತ್ತಿದ್ದಾರೆ.

ಇದನ್ನೂ ಓದಿ:ಗಣರಾಜ್ಯೋತ್ಸವ ಟ್ಯಾಬ್ಲೊ: ತಮಿಳುನಾಡಿಗೂ ನಿರಾಕರಣೆ; ಸ್ವಾತಂತ್ಯ್ರ ಹೋರಾಟಗಾರನನ್ನು ‘ವ್ಯಾಪಾರಿ’ ಎಂದು ಕರೆದ ಒಕ್ಕೂಟ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...