Homeರಾಷ್ಟ್ರೀಯಯುಪಿ: ಅಂತರ್ಧರ್ಮೀಯ ವಿವಾಹ ತಡೆದ ಹಿಂದೂ ಯುವ ವಾಹಿನಿ; ಯುವಕನ ವಿರುದ್ಧವೆ ‘ಮತಾಂತರ ಕಾನೂನಿ’ನ ಅಡಿಯಲ್ಲಿ...

ಯುಪಿ: ಅಂತರ್ಧರ್ಮೀಯ ವಿವಾಹ ತಡೆದ ಹಿಂದೂ ಯುವ ವಾಹಿನಿ; ಯುವಕನ ವಿರುದ್ಧವೆ ‘ಮತಾಂತರ ಕಾನೂನಿ’ನ ಅಡಿಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬಲಪಂಥೀಯ ಹಿಂದೂ ಯುವ ವಾಹಿನಿಯ ಸದಸ್ಯರು ಮೊರಾದಾಬಾದ್‌ನಲ್ಲಿ ಅಂತರ್‌ಧರ್ಮೀಯ ಜೋಡಿಯ ವಿವಾಹವನ್ನು ಬಲವಂತವಾಗಿ ನಿಲ್ಲಿಸಿದ ಕೆಲವೇ ದಿನಗಳ ಅಂತರದಲ್ಲಿ, ಉತ್ತರ ಪ್ರದೇಶದ ವಿವಾದಾತ್ಮಕ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಲುಧಿಯಾನದಿಂದ ಯುವತಿಯನ್ನು ಅಪಹರಿಸಿದ ಆರೋಪದ ಮೇಲೆ ಯುವಕನ ಮೇಲೆ ಆರೋಪ ಹೊರಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ನಾವು ಯುವಕನ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣಕ್ಕೆ ಶಿಕ್ಷೆ), 366 (ಅಪಹರಣ ಅಥವಾ ಮದುವೆಗೆ ಒತ್ತಾಯಿಸಲು ಮಹಿಳೆಯನ್ನು ಪ್ರೇರೇಪಿಸುವುದು) ಮತ್ತು ಯುಪಿ ಕಾನೂನುಬಾಹಿರ ಧರ್ಮ ಪರಿವರ್ತನೆ ಕಾಯಿದೆ-2021 ರ ಸೆಕ್ಷನ್ 3-5 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ” ಎಂದು ಮೊರಾದಾಬಾದ್‌ನ ಸಿವಿಲ್ ಲೈನ್ಸ್ ಉಪ ಎಸ್ಪಿ ಸಾಗರ್ ಜೈನ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಾವು ಪ್ರಕರಣದ ತನಿಖೆ ನಡೆಸುತ್ತಿರುವ ಸಮಯದಲ್ಲಿ ಯುವಕನಿಗೆ ತನ್ನ ಕುಟುಂಬದೊಂದಿಗೆ ವಾಸಿಸಲು ಅವಕಾಶ ನೀಡಲಾಗಿದೆ. ಯುವತಿಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ನಮ್ಮ ವಿಚಾರಣೆ ಪೂರ್ಣಗೊಂಡ ನಂತರ ನಾವು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಸಾಗರ್‌‌ ಹೇಳಿದ್ದಾರೆ.

ಇದನ್ನೂ ಓದಿ: ‘ಮತಾಂತರ ನಿಷೇಧ’ ಮಸೂದೆ ವಾಪಸಾತಿಗೆ ಸಿಪಿಐ(ಎಂ) ರಾಜ್ಯ ಸಮ್ಮೇಳನ ಒತ್ತಾಯ

ದಂಪತಿಗಳು ತಮ್ಮ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಲು ಸೋಮವಾರ ಜಿಲ್ಲಾ ನ್ಯಾಯಾಲಯದ ಕಛೇರಿಗೆ ಹೋಗಿದ್ದರು. ಆದರೆ ಹಿಂದೂ ಯುವ ವಾಹಿನಿಯ ಸದಸ್ಯರು ‘ಲವ್‌ ಜಿಹಾದ್‌’ ಆರೋಪ ಮಾಡಿ ಅವರನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಹಿಂದೂ ಬಲಪಂಥೀಯರು ಅಂತರ್ಧರ್ಮೀಯ ದಂಪತಿಗಳಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಪುರುಷರಿಗೆ ಕಿರುಕುಳ ನೀಡಲು ಬಳಸುತ್ತಿರುವ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಾ ದಂಪತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

“ದಂಪತಿಗಳು ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಲು ಪ್ರಯತ್ನಿಸುತ್ತಿದ್ದರು. ಅವರು ಬೇರೆ ಬೇರೆ ಧರ್ಮಗಳಿಗೆ ಸೇರಿದವರು ಎಂದು ನಾವು ತಿಳಿದುಕೊಂಡಿದ್ದೇವೆ. ಯುವತಿಯ ಪೋಷಕರಿಗೆ ಮತ್ತು ಲುಧಿಯಾನ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಯಾಕೆಂದರೆ ಅವರ ಕುಟುಂಬವು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರನ್ನು ದಾಖಲಿಸಿದೆ” ಎಂದು ಸಾಗರ್‌‌ ಜೈನ್ ಹೇಳಿದ್ದಾರೆ.

ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಮತಾಂತರ ನಿಷೇಧ ಕಾಯ್ದೆ ರದ್ದು: ಸಿದ್ದರಾಮಯ್ಯ

ಯುವತಿಯನ್ನು ಲೂಧಿಯಾನದಲ್ಲಿ ಆಕೆಯ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ಮೊರಾದಾಬಾದ್‌‌ ಮೂಲದ ಯುವಕ ಅದೇ ಊರಲ್ಲಿ ಕೆಲಸ ಮಾಡುತ್ತಿದ್ದಾಗ, ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಏಪ್ರಿಲ್ 14 ರಂದು ಇಬ್ಬರೂ ಕಾಣೆಯಾಗಿದ್ದರು ಎಂದು ವರದಿಯಾಗಿದೆ.

ವಿವಾದಾತ್ಮಕ ಮತಾಂತರ-ವಿರೋಧಿ ಕಾನೂನನ್ನು ಇತ್ತೀಚಿನ ದಿನಗಳಲ್ಲಿ ಅಂತರ್‌ಧರ್ಮೀಯ ಜೋಡಿಗಳು ಒಟ್ಟಿಗೆ ಇರುವುದನ್ನು ಮತ್ತು ಮದುವೆಯಾಗುವುದನ್ನು ತಡೆಯಲು ಹಲವು ಬಾರಿ ಬಳಸಲಾಗಿದೆ. ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಗಳು ಈ ವಿವಾಹಗಳನ್ನು ಅಡ್ಡಿಪಡಿಸುವಲ್ಲಿ ಮುಂಚೂಣಿಯಲ್ಲಿವೆ.

ಇದನ್ನೂ ಓದಿ: ‘ಮತಾಂತರದ ತಂತ್ರ’ ಎಂದು ಆರೋಪಿಸಿ ಸಾಂತಕ್ಲಾಸ್‌ ಪ್ರತಿಕೃತಿ ದಹಿಸಿದ ಬಲಪಂಥೀಯರು!

ಇಬ್ಬರೂ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ ಹಾಗೂ ಬಲವಂತವಾಗಿ ಮತಾಂತರಗೊಳ್ಳಲಿಲ್ಲ ಎಂದು ಯುವತಿಯರು ಹೇಳಿದ್ದರೂ ಹಲವಾರು ಮುಸ್ಲಿಂ ಯುವಕರು ಜೈಲು ಶಿಕ್ಷೆಯನ್ನು ಎದುರಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲೂ ಅಂತರ್ಧರ್ಮೀಯ ವಿವಾಹದ ಸಂದರ್ಭದಲ್ಲಿ ಮತಾಂತರ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...