Homeಕರ್ನಾಟಕಐದು ದಿನ ಬೆಂಗಳೂರಿನಲ್ಲಿ ವಿದ್ಯುತ್ ಕಟ್‌‌: ವ್ಯತ್ಯಯಗೊಳ್ಳುವ ಪ್ರದೇಶಗಳ ಸಂಪೂರ್ಣ ಪಟ್ಟಿ ಹೀಗಿದೆ

ಐದು ದಿನ ಬೆಂಗಳೂರಿನಲ್ಲಿ ವಿದ್ಯುತ್ ಕಟ್‌‌: ವ್ಯತ್ಯಯಗೊಳ್ಳುವ ಪ್ರದೇಶಗಳ ಸಂಪೂರ್ಣ ಪಟ್ಟಿ ಹೀಗಿದೆ

ಪ್ರತಿದಿನ ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

- Advertisement -
- Advertisement -

ಕೆಪಿಟಿಸಿಎಲ್ (ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್) ಕೈಗೊಂಡಿರುವ ಕಾಮಗಾರಿಗಳಿಂದ ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳಿಸುವುದಾಗಿ ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (ಬೆಸ್ಕಾಂ) ಘೋಷಿಸಿದೆ.

ಅಕ್ಟೋಬರ್ 18 ರಿಂದ 22 ರವರೆಗೆ ನಗರದ ಕೆಲವು ಭಾಗಗಳಲ್ಲಿ ಯೋಜಿತ ವಿದ್ಯುತ್ ಕಡಿತ ಮಾಡಲಾಗುತ್ತದೆ. ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಆರು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ನಿಗದಿಪಡಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಕ್ಟೋಬರ್ 18 ರಂದು ಕನಕಪುರ, ರಾಮನಗರ ಮತ್ತು ತಿಪಟೂರು ಬೆಸ್ಕಾಂ ವಿಭಾಗಗಳು, ಅಕ್ಟೋಬರ್ 19 ರಂದು ಕೆಂಗೇರಿ ವಿಭಾಗ ಮತ್ತು ಅಕ್ಟೋಬರ್ 20 ರಿಂದ 22 ರ ವರೆಗೆ ರಾಮನಗರ ವಿಭಾಗದಲ್ಲಿ ಈ ವಿದ್ಯುತ್‌‌ ವ್ಯತ್ಯಯ ಉಂಟಾಗಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರು: ಹೈಕೋರ್ಟ್‌‌ ಆದೇಶದ ನಂತರ ತನ್ನ ಕನಿಷ್ಠ ಆಟೋ ದರವನ್ನು ರೂ. 35 ಕ್ಕೆ ಇಳಿಸಿದ ಉಬರ್‌‌

ಮುಂದಿನ ಐದು ದಿನಗಳಲ್ಲಿ ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು ಹೀಗಿವೆ:

ಅಕ್ಟೋಬರ್ 18

ಕನಕಪುರ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಇಗ್ಗಲೂರು ಮತ್ತು ಸುತ್ತಮುತ್ತಲಿನ ಗ್ರಾಮಗಳು, ಬೆಂಕಿಕೆರೆ, ಮಾದಾಪುರ, ಹೊನ್ನೆಬಾಗಿ, ಬೆನಕನಹಳ್ಳಿ, ಹೆಬ್ಬಲಗೆರೆ, ಎನ್‌ಎಸ್‌ಟಿ ಕವಲು ಮುಂತಾದ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಮಲ್ಲಾಡಿಹಳ್ಳಿ ಮತ್ತು ಹೊಸದುರ್ಗ ಸುತ್ತಮುತ್ತಲಿನ ಪ್ರದೇಶ, ಬಿದರಗದ್ದೆ, ಹೊಳೆಮಾದಾಪುರ, ಕಮ್ಮರಗಟ್ಟೆ, ಗೋವಿನಕೋವಿ, ಆವರಗೆರೆ, ಮಲ್ಲೇಕಟ್ಟೆ, ಕಾಡಜ್ಜಿ, ಆನಗೋಡು, ಅತ್ತಿಗೆರೆ, ಮಾಯಕೊಂಡ, ಸರಸ್ವತಿ ಲೇಔಟ್, ಮಲೆಬೆನ್ನೂರು ಹೋಬಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಡಾ ಅಕ್ಟೋಬರ್‌ 18 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇಷ್ಟೆ ಅಲ್ಲದೆ, ಹಿರಿಯೂರು, ಆದಿವಾಳದ ನಗರ ಮತ್ತು ಗ್ರಾಮೀಣ ಪ್ರದೇಶಗಳು, ಲಕ್ಕವನಹಳ್ಳಿ, ತೋಟಗಾರಿಕಾ ಕಾಲೇಜು, ಹಬೀಬ್ ಮತ್ತು ನಂದಾ ಫೀಡ್ಸ್ ಕಾರ್ಖಾನೆ ಪ್ರದೇಶಗಳಲ್ಲಿ ಕೂಡಾ ಈ ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಬೆಂಗಳೂರು: ಓಲಾ-ಉಬರ್‌‌ ನಿಷೇಧಕ್ಕೆ ಮಧ್ಯಂತರ ತಡೆ; ಸರ್ಕಾರದ ಆದೇಶಕ್ಕೆ ಹಿನ್ನಡೆ

ಅಕ್ಟೋಬರ್ 19

ಬಸವಪಟ್ಟಣ, ಹರಳೀಪುರ, ಹೊಸಳ್ಳಿ, ಹೊಸನಗರ, ಸಾಗರಪೇಟೆ, ಚಿರಡೋಣಿ, ಯಲ್ಲೋದಹಳ್ಳಿ, ಮರಬನಹಳ್ಳಿ, ಸಂಗಳ್ಳಿ, ದಾಗಿನಕಟ್ಟೆ, ಸಿದ್ದೇಶ್ವರನಗರ, ಕಂಚುಗಾರನಹಳ್ಳಿ, ನಿಲೋಗಲ್, ಕಟ್ಟಿಗೆ, ಆರುಂಡಿ, ಜೀನಹಳ್ಳಿ, ತೀರ್ಥರಾಮೇಶ್ವರದಲ್ಲಿ ಅಕ್ಟೋಬರ್‌ 19ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಅಷ್ಟೆ ಅಲ್ಲದೆ, ಕೆಎಚ್‌ಬಿ ಕಾಲೋನಿ, ಹರಿಹರ ಟೌನ್, ಹರಪ್ಪನಹಳ್ಳಿ ಠಾಣೆ, ಜೆಎನ್ ಕೋಟೆ, ಗೊಲ್ಲನಕಟ್ಟೆ, ಪಲ್ಲವಗೆರೆ, ಜೆಸಿ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಚನ್ನಪಟ್ಟಣ, ಆದನೂರು, ಅರೇನಹಳ್ಳಿ, ಅಪರಸನಹಳ್ಳಿ, ಹೊಳಲ್ಕೆರೆ ಟೌನ್, ಮದೇರು, ಬೊಮ್ಮನಕಟ್ಟೆ, ಚಿತ್ರಹಳ್ಳಿ, ಮಲ್ಲಾಡಿಹಳ್ಳಿ, ಗುಂಡಿಮಾದು, ಮಲ್ಲೇನಹಳ್ಳಿ, ಪುನುಜೂರು ಪ್ರದೇಶಗಳಲ್ಲಿ ಕೂಡಾ ವಿದ್ಯುತ್‌ ವ್ಯತ್ಯಯ ಆಗಲಿದೆ.

ಲೋಕದಹಾಳು, ಚೀರನಹಳ್ಳಿ, ರಾಮಗಿರಿ ರಸ್ತೆ, ಎನ್ ಜಿ ಹಳ್ಳಿ, ಗುಂಡೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಶಿವಪುರ, ರಾಮಗಟ್ಟಾ, ಕೆಂಗುಂಟೆ, ಧೂಮಿ, ಕುಣಗಲಿ, ಹೊಳೆಮಳಲಿ, ಅಗ್ರಹಾರ, ಕುಂದಗೂರ, ಕೋಡಿಹಳ್ಳಿ, ಉಪ್ಪಳಗೆರೆ, ಶಿವಪುರ, ಪಿಟ್ಲಹಳ್ಳಿ, ಆಲೂರು, ಲಕ್ಷ್ಮೀಪುರ, ಅರಣಕಟ್ಟೆ, ಪೆರನಕಟ್ಟೆ, ರಾಮಪುರ, ಅರಣಕಟ್ಟೆ ಮತ್ತು ರಾಂಪುರ ನಿಲ್ದಾಣಕ್ಕೆ ಸಂಬಂಧಿಸಿದ ಎಲ್ಲಾ ಪ್ರದೇಶಗಳಲ್ಲಿ ಬುಧವಾರ ವಿದ್ಯುತ್‌ ವ್ಯತ್ಯಯ ಆಗಲಿದೆ.

ಇದನ್ನೂ ಓದಿ: ಬೆಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಮುಂದಾದ ದಂಪತಿ ರಕ್ಷಿಸಿದ ಅಗ್ನಿಶಾಮಕ ದಳ

ರಾಂಪುರ ನಿಲ್ದಾಣದ ಬಳಿ ಏಳು ಗಂಟೆಗಳ ಪರ್ಯಾಯ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಹೇಳಿದೆ.

ಅಕ್ಟೋಬರ್ 20

ಗೋಮತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಅಕ್ಟೋಬರ್ 21

ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) 1ನೇ ಹಂತದ ಕೈಗಾರಿಕಾ ಪ್ರದೇಶ, ಬಿಲ್ಲೆಕೆಂಪನಹಳ್ಳಿ, ಮಾರುತಿನಗರ, ಬೀಮೇನಹಳ್ಳಿ, ನಿಂಗಯ್ಯನದೊಡ್ಡಿ, ರಂಗೇಗೌಡನದೊಡ್ಡಿ, ಲಕ್ಷ್ಮೀಸಾಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಇದನ್ನೂ ಓದಿ: ಈದ್‌ ಮೀಲಾದ್‌ ರ್‍ಯಾಲಿಯಲ್ಲಿ ಕತ್ತಿ ಪ್ರದರ್ಶನ: ಅಪ್ರಾಪ್ತರು ಸೇರಿದಂತೆ 18 ಜನರ ವಿರುದ್ಧ ಪ್ರಕರಣ ದಾಖಲಿಸಿದ ಬೆಂಗಳೂರು ಪೊಲೀಸ್

ಅಕ್ಟೋಬರ್ 22

KIADB 1 ನೇ ಹಂತದ ಕೈಗಾರಿಕಾ ಪ್ರದೇಶಗಳಲ್ಲಿ ಅಕ್ಟೋಬರ್ 22ರಂದು ವಿದ್ಯುತ್‌ ವ್ಯತ್ಯಯ ಆಗಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...