Homeಮುಖಪುಟದೊರೆಸ್ವಾಮಿಯವರನ್ನು ಅವಮಾನಿಸಿದ ಶಾಸಕ ಯತ್ನಾಳ್ ಮೇಲಿವೆ 23 ಗಂಭೀರ ಪ್ರಕರಣಗಳು..

ದೊರೆಸ್ವಾಮಿಯವರನ್ನು ಅವಮಾನಿಸಿದ ಶಾಸಕ ಯತ್ನಾಳ್ ಮೇಲಿವೆ 23 ಗಂಭೀರ ಪ್ರಕರಣಗಳು..

- Advertisement -
- Advertisement -

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ರಾಜ್ಯದ ಹೆಮ್ಮೆ ದೊರೆಸ್ವಾಮಿಯವರು ನಿತ್ಯ ನಿರಂತರ ಹೋರಾಟಗಾರರು. ಭ್ರಷ್ಟಾಚಾರದ ವಿರುದ್ಧ, ಬಡವರ ಪರವಾಗಿ ಕಳೆದ ಹಲವು ದಶಕಗಳಿಂದ ರಾಜ್ಯದ ಹತ್ತಾರು ಪ್ರಮುಖ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಯುವ ಸಮಾಜಕ್ಕೆ ದಾರಿದೀಪವಾದವರು ದೊರೆಸ್ವಾಮಿಯವರು.

ಆದರೆ, ಅವರು ಕೇಂದ್ರ ಸರ್ಕಾರದ ಸಿಎಎ ಕಾನೂನನ್ನು ವಿರೋಧಿಸಿದರು ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇಂದು ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್, ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೀಗೆಳೆಯುವ ಮೂಲಕ ಅವಮಾನಿಸಿದ್ದಾರೆ.

ಯತ್ನಾಳ್‌ನವರ ಕೀಳುಮಟ್ಟದ ಹೇಳಿಕೆಗೆ ರಾಜ್ಯದ್ಯಾಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಲವು ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿಗಳು ಪ್ರತಿಭಟನೆಗಳು ಆರಂಭವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಯತ್ನಾಳ್‌ರವರ ಬಗೆಗೆ ಆಕ್ರೋಶ ತೀವ್ರವಾಗಿದೆ. ಇಂತಹ ಸಂದರ್ಭದಲ್ಲಿ ದೊರೆಸ್ವಾಮಿಯವರನ್ನು ನಿಂದಿಸಿದ ಯತ್ನಾಳ್‌ ಮೇಲೆ ಎಂತೆಂಥ ಕ್ರಿಮಿನಲ್‌ ಪ್ರಕರಣಗಳಿವೆ ಎಂಬ ಸಂದೇಶವೊಂದು ವೈರಲ್‌ ಆಗಿದೆ. ಅದರ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಅದು ಸತ್ಯವೆಂದು ತಿಳಿದುಬಂದಿದ್ದು ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಯತ್ನಾಳ್‌ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಯೋಗ್ಯತಾ ಪಟ್ಟಿ (ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಪಟ್ಟಿ) ಲಭ್ಯವಾಗಿದೆ.

(1) ಮೋಸ ಮತ್ತು ಆಸ್ತಿಯ ಅಪ್ರಾಮಾಣಿಕ ವಿತರಣೆಗೆ ಸಂಬಂಧಿಸಿದಂತೆ IPC Section-420 ಅಂದರೆ ಚೀಟಿಂಗ್ ಅಡಿಯಲ್ಲಿ 2 ಪ್ರಕರಣ ದಾಖಲಾಗಿದೆ.

(2) ಭದ್ರತಾ ಠೇವಣಿ ಸೇರಿದಂತೆ ಇತರೆ ವಿಚಾರಗಳಲ್ಲಿ ಮೋಸ ಎಸಗಿದ್ದಕ್ಕಾಗಿ IPC Section -467ರ ಅಡಿಯಲ್ಲಿ 2 ಪ್ರಕರಣ ದಾಖಲಿಸಲಾಗಿದೆ.

(3) ನಕಲಿ ಕರೆನ್ಸಿ ನೋಟುಗಳ ಸ್ವಾಧೀನಕ್ಕೆ ಸಂಬಂಧಿಸಿದಂತೆ IPC Section -489 C ಅಡಿಯಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ

(4) ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಅಥವಾ ಸಾಧನಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದಂತೆ IPC Section -324ರ ಅಡಿಯಲ್ಲಿ 1 ಪ್ರಕರಣ ದಾಖಲಿಸಲಾಗಿದೆ.

(5) ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ IPC Section-506ರ ಅಡಿಯಲ್ಲಿ 1 ಪ್ರಕರಣವನ್ನು ದಾಖಲಿಸಲಾಗಿದೆ.

(6) ಪ್ರತಿಕ್ರಿಯಾತ್ಮಕವಾಗಿ ಪ್ರಚೋದನೆ ಮಾಡಿದ್ದರೆ ನೀಡಲಾಗುವ ಶಿಕ್ಷೆಗೆ ಸಂಬಂಧಿಸಿದ IPC Section-109ರ ಅಡಿಯಲ್ಲಿ 3 ಪ್ರಕರಣಗಳನ್ನು ದಾಖಲು

(7) ನಕಲಿ ದಾಖಲೆಯನ್ನು ಸೃಷ್ಟಿಸಿ ನೈಜವಾಗಿ ಬಳಸಿದ್ದಕ್ಕಾಗಿ IPC Section-471ರ ಅಡಿಯಲ್ಲಿ 2 ಪ್ರಕರಣ ದಾಖಲಾಗಿದೆ.

(8) ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ IPC Section-323ರ ಅಡಿಯಲ್ಲಿ 2 ಪ್ರಕರಣ ದಾಖಲಾಗಿವೆ.

(9) ಅಪರಾಧ ಪ್ರಕರಣ ನಡೆದಾಗ ಅಬೆಟ್ಟರ್ಗೆ ಸಂಬಂಧಿಸಿದಂತೆ IPC Section -114ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(10) ಕ್ರಿಮಿನಲ್ ಪಿತೂರಿಯ ಶಿಕ್ಷೆಗೆ ಸಂಬಂಧಿಸಿದ IPC Section -120B ಅಡಿಯಲ್ಲಿ 2 ಪ್ರಕರಣ ದಾಖಲಾಗಿವೆ.

(11) ವಿಧಾನಸಭೆಯಲ್ಲಿ ಪ್ರತಿಯೊಬ್ಬ ಸದಸ್ಯರು ಎದುರಿಸಬೇಕಾದ ವಿಚಾರಣೆಯ ಸಂದರ್ಭದಲ್ಲಿ ಮಾಡಿರುವ ಅಪರಾಧಕ್ಕೆ IPC Section -149ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(12) ಕೃತ್ಯದ ಉದ್ದೇಶಕ್ಕಾಗಿ ಸುಳ್ಳು ವ್ಯಕ್ತಿತ್ವವನ್ನು ಸೃಷ್ಟಿಸಿದ್ದಕ್ಕಾಗಿ IPC Section-205ರ ಅಡಿಯಲ್ಲಿ 2 ಪ್ರರಕಣಗಳು ದಾಖಲಾಗಿವೆ.

(13) ಆಸ್ತಿಯನ್ನು ವಶಪಡಿಸಿಕೊಳ್ಳುವ ವಿಚಾರದಲ್ಲಿ ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ IPC Section -207ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(14) ವರ್ಗವಣೆ ಪತ್ರದಲ್ಲಿ ಮೋಸ ಅಥವಾ ಅಪ್ರಾಮಾಣಿಕತೆ ತೋರಿಸಿದ ಆರೋಪಕ್ಕೆ ಸಂಬಂಧಿಸಿದಂತೆ IPC Section -423ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(15) ಟ್ರೇಡ್ ಮಾರ್ಕ್ಗಳಿಗೆ ಸಂಬಂಧಿಸಿದಂತೆ IPC Section -478ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(16) ಮಾನಹಾನಿ ಶಿಕ್ಷೆಗೆ ಸಂಬಂಧಿಸಿದಂತೆ IPC Section – 500ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(17) ಪ್ರಚೋದನೆಯ ಮೇಲೆ ಸ್ವಯಂಪ್ರೇರಿತವಾಗಿ ತೀವ್ರವಾದ ನೋವನ್ನುಂಟುಮಾಡುವ IPC Section -335ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(18) ಶಾಂತಿಯನ್ನು ಉಲ್ಲಂಘಿಸಲು ಮತ್ತು ಉದ್ದೇಶಪೂರ್ವಕವಾಗಿ ಪ್ರಚೋಧಿಸುವಂತ ಭಾಷಣ ಮಾಡಿದ್ದಕ್ಕೆ ಸಂಬಂಧಿಸಿದಂತೆ IPC Section -504ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(19) ಕಾನೂನು ಬಾಹೀರವಾಗಿ ವಿಧಾನಸಭೆ ಸದಸ್ಯರಾಗಿರುವುದಕ್ಕೆ ಸಂಬಂಧಿಸಿದಂತೆ IPC Section -143ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(20) ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಗೆ ಸಂಬಂಧಿಸಿದಂತೆ IPC Section -147ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(21) ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಕ್ರಿಯೆಗೆ ಸಂಬಂಧಿಸಿದ IPC Section -336 ಅಡಿಯಲ್ಲಿ 1 ಪ್ರಕರಣ

(22) ಇತರರ ವೈಯಕ್ತಿಕ ಸುರಕ್ಷತೆಗೆ ಅಥವಾ ಜೀವಕ್ಕೆ ಅಪಾಯಕಾರಿಯಾದ ಕೃತ್ಯದಿಂದ ಅವರಿಗೆ ನೋವನ್ನುಂಟುಮಾಡುವುದಕ್ಕೆ ಸಂಬಂಧಿಸಿದಂತೆ IPC Section -337ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(23) ಮಾನಹಾನಿಗೆ ಸಂಬಂಧಿಸಿದಂತೆ IPC Section -499ರ ಅಡಿಯಲ್ಲಿ ಒಂದು ಪ್ರಕರಣ.

ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 489 C ಐಪಿಸಿ ಸೆಕ್ಷನ್ ಅಡಿ ಕೇಸು ದಾಖಲಾಗಿದೆ. 489 C ಸೆಕ್ಷನ್ ಅಸಲಿ ಎಂದು…

Posted by Dinesh Kumar Dinoo on Tuesday, February 25, 2020

ಇವಿಷ್ಟು ಯತ್ನಾಳ್‌ ಮೇಲಿರುವ ಪ್ರಕರಣಗಳು. ಇಷ್ಟು ಗಂಭೀರ ಪ್ರಕರಣಗಳನ್ನಿಟ್ಟುಕೊಂಡು ಇನ್ನೊಬ್ಬರ ಮೇಲೆ ಹೇಗೆ ಆರೋಪ ಮಾಡುತ್ತಾರೆ ಎಂದು ಜಾಲತಾಣಿಗರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ದೊರೆಸ್ವಾಮಿಯವರ ಮೇಲಿನ ಯತ್ನಾಳ್ ಹೇಳಿಕೆ ಖಂಡಿಸಿ ಇಂದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...