Homeಚಳವಳಿಪತ್ರಕರ್ತರ ಬಂಧನ: ಯೋಗಿಯ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಪತ್ರಕರ್ತರ ಬಂಧನ: ಯೋಗಿಯ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಒಂದೇ ವಾರದಲ್ಲಿ ಉತ್ತರ ಪ್ರದೇಶದಲ್ಲಿ 5 ಜನ ಅಮಾಯಕರನ್ನು ನಿಯಮಬಾಹಿರಬಾಗಿ ಬಂಧಿಸಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ತಕ್ಷಣ ಬಿಡುಗಡೆಗೆ ಆದೇಶಿಸಿದೆ.

- Advertisement -
- Advertisement -

| ಡಾ. ಸ್ವಾತಿ ಶುಕ್ಲ |

ಒಬ್ಬ ಮಹಿಳೆಯು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮದುವೆಯ ಪ್ರಸ್ತಾಪದ ವಿಡಿಯೋ ಹೊರಬಿದ್ದ ನಂತರ ಯುಪಿಯ ಪೊಲೀಸ್ ಬಂಧನದ ಸರಣಿ ಪ್ರಾರಂಭಿಸಿದೆ. ಈ ವರದಿ ಬರೆಯುವ ಸಮಯಕ್ಕೆ 5 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಯುಪಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಆಕ್ಷೇಪಾರ್ಹ ವರದಿಗಳನ್ನು ಹಂಚಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಬಂಧಿತ ಐವರಲ್ಲಿ ಮೂವರು ಪತ್ರಕರ್ತರು, ಒಬ್ಬ ರೈತ ಮತ್ತು ಒಬ್ಬ ಗ್ರಾಮ ಮುಖ್ಯಸ್ಥ. ಈ ಕ್ರಮಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ತಕ್ಷಣ ಬಿಡುಗಡೆಗೆ ಆದೇಶಿಸಿದೆ.

ಘಟನಾಕ್ರಮ

ಮುಫ್ತಿಯಲ್ಲಿ ಬಂದು ಯುಪಿ ಪೊಲೀಸರು ಕಳೆದ ಶನಿವಾರದಂದು ಪ್ರಶಾಂತ್ ಕನೋಜಿಯಾ ಅವರನ್ನು ಅವರ ಮನೆಯಿಂದ ಬಂಧಿಸಿದರು. ಬಂಧನದ ನಂತರ ಪ್ರಶಾಂತ್ ಅವರ ಹೆಂಡತಿಗೆ ತನ್ನ ಗಂಡನನ್ನು ಉತ್ತರಪ್ರದೇಶಕ್ಕೆ ಕರೆದೊಯ್ಯಲಾಗಿದೆ ಹಾಗು ಅಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನುವ ಸುದ್ದಿ ಬಂತು. ಪ್ರಶಾಂತ್ ಅವರ ಅಪರಾಧ – ಒಬ್ಬ ಮಹಿಳೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮದುವೆಯ ಪ್ರಸ್ತಾಪವನ್ನಿಡುವ ವಿಡಿಯೋ ಅನ್ನು ತಮ್ಮ ಟ್ವಿಟರ್ ಖಾತೆಯಿಂದ ಹಂಚಿದ್ದು. ಲಖನೌನ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಅಲ್ಲಿಯ ಅಧಿಕಾರಿಯು ಎಫ್ ಐ ಆರ್ ದಾಖಲಿಸಿದ್ದಾರೆ.

ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಅದರಲ್ಲಿ ಒಬ್ಬ ಮಹಿಳೆ ಹಲವಾರು ಸುದ್ದಿ ವಾಹಿನಿಗಳ ವರದಿಗಾರರೊಂದಿಗೆ ಮಾತನಾಡುತ್ತ, ತಾನು ಮುಖ್ಯಮಂತ್ರಿಯೊಂದಿಗೆ ವಿಡಿಯೋ ಚಾಟ್ ಮೂಲಕ ಮಾತನಾಡುತ್ತಿದ್ದಳೆಂದು ಹೇಳಿಕೊಂಡಿದ್ದಾಳೆ ಹಾಗೂ ಈಗ ಮುಖ್ಯಮಂತ್ರಿ ತನ್ನೊಂದಿಗೆ ವಿವಾಹ ಮಾಡಿಕೊಳ್ಳುವರೇ ಎಂದು ಕೇಳಿದ್ದಾಳೆ.
ಇದಾದ ನಂತರ ನೇಷನ್ ಲೈವ್ ಸುದ್ದಿ ವಾಹಿನಿಯ ಮುಖ್ಯಸ್ಥ ಹಾಗೂ ಸಂಪಾದಕ ಇಶಿಕಾ ಸಿಂಗ್ ಮತ್ತು ಅನುಜ್ ಶುಕ್ಲಾ ಅವರನ್ನೂ ಬಂಧಿಸಲಾಗಿದೆ. ಆ ವಾಹಿನಿಯಲ್ಲಿ ಮೇಲೆ ಹೇಳಲಾದ ವಿಡಿಯೋ ಅನ್ನು ಬಿತ್ತರಿಸಿ ಅದರ ಬಗ್ಗೆ ಚರ್ಚೆ ಮಾಡಲಾಗಿತ್ತು.

ಈ ಬಂಧನಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ಮತ್ತು ಐಟಿ ಅ್ಯಕ್ಟ್‍ನ ಸೆಕ್ಷನ್ 66 ರ ಅಡಿಯಲ್ಲಿ ಮಾಡಲಾಗಿದೆ. ಸೆಕ್ಷನ್ 500 ಮಾನಹಾನಿಗೆ ಸಂಬಂಧಿಸಿದೆ. ಇವು, ನಾನ್ ಕಾಗ್ನಿಸೆಬಲ್ ಅಪರಾಧಗಳಿವೆಯಾದುದರಿಂದ ಖುದ್ದು ಫಿರ್ಯಾದಿಯೇ ಪ್ರಕರಣ ದಾಖಲಿಸಬೇಕು. ಪೊಲೀಸ್ ತಾನೇ ಖುದ್ದಾಗಿ ಎಫ್‍ಐರ್ ದಾಖಲಿಸಿ ಕ್ರಮ ಕೈಗೊಳ್ಳುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ವಾರಂಟ್ ಇಲ್ಲದೇ ಕನೋಜಿಯ ಅವರನ್ನು ಬಂಧಿಸುವಂತಿಲ್ಲ. 66ರ ಐಟ್ ಸೆಕ್ಷನ್ ಒಂದು ಕಂಪ್ಯೂಟರ್ ಸಿಸ್ಟಮ್ ಅನ್ನು ಅಪ್ರಾಮಾಣಿಕವಾಗಿ ಹಾನಿಗೊಳಿಸುವುದಕ್ಕೆ ಸಂಬಂಧಿಸಿದೆ. ಈ ಬಂಧನಗಳಲ್ಲಿ ಕಂಡುಬಂದಂತೆ, ದಂಡಸಂಹಿತೆಯ ಯಾವ ಸೆಕ್ಷನ್‍ಗಳೂ ಈ ಬಂಧನಗಳಿಗೆ ಅನ್ವಯವಾಗುವುದಿಲ್ಲ.

ಈ ಬಂಧನಗಳನ್ನು ಸಮರ್ಥಿಸಿಕೊಳ್ಳುತ್ತ ಯುಪಿ ಪೊಲೀಸರು ಭಾರತೀಯ ದಂಡ ಸಂಹಿತೆ 505 (ಸಾರ್ವಜನಿಕ ಸುವ್ಯವಸ್ಥೆಯನ್ನು ಕೆಡಿಸುವುದಕ್ಕೆ ಸಂಬಂಧಿಸಿದ್ದು) ಹಾಗೂ ಐಟಿ ಆ್ಯಕ್ಟ್‍ನ 67 ಸೆಕ್ಷನ್ (ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸುವುದು) ಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ. ಒಂದು ಸಲ ಆ ವಿಡಿಯೊ ಅನ್ನು ನೋಡಿದರೆ ಸಾರ್ವಜನಿಕ ಸುವ್ಯವಸ್ಥೆಯನ್ನು ಕೆಡಿಸುವುದಾಗಲಿ ಅಥವಾ ಅಶ್ಲೀಲತೆಯಾಗಲಿ ಕಂಡುಬರುವುದಿಲ್ಲ.

ಟ್ವಿಟರ್‍ನಲ್ಲಿ ನೆಟ್ಟಿಗರು ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಅಭಿಯಾನ ಪ್ರಾರಂಭಿಸಿದ್ದಾರೆ. ಭಾರತದ ಸಂಪಾದಕರ ಗಿಲ್ಡ್ ಈ ಬಂಧನಗಳನ್ನು ಖಂಡಿಸಿದೆ.

ಕನೋಜಿಯಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅವರ ಕುಟುಂದ ಸದಸ್ಯರು ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಮ್ ಕೋರ್ಟಿ ಮೊರೆ ಹೊಕ್ಕಿದ್ದಾರೆ. ಅದೇ ಸಮಯದಲ್ಲಿ ಹಲವಾರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಪತ್ರಕರ್ತರ ಮೇಲೆ ಕೈಗೊಳ್ಳುತ್ತಿರುವ ಈ ಹತೋಟಿ ಕ್ರಮಗಳನ್ನು ಖಂಡಿಸಿ ಭಾರತೀಯ ಪ್ರೆಸ್ ಕ್ಲಬ್ ಎದುರುಗಡೆ ಪ್ರತಿಭಟನೆ ಮಾಡಿದ್ದಾರೆ. ವಿಚಿತ್ರವೇನೆಂದರೆ ಮುಖ್ಯವಾಹಿನಿಯ ಯಾವ ಮೀಡಿಯಾ ಹೌಸ್ ಗಳು ಈ ಪ್ರತಿಭಟನೆಯನ್ನು ವರದಿ ಮಾಡಿಲ್ಲ. ಕೊನೆಗೆ India Resists ಫೇಸ್ ಬುಕ್ ಲೈವ್ ಮೂಲಕ ಮಾತ್ರ ದೇಶದ ಜನರನ್ನು ತಲುಪಿದೆ.

ಪ್ರತಿಭಟನೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಬಂಧನಗಳು ಪತ್ರಕರ್ತರಿಗೆ ಮಾತ್ರ ಸೀಮಿತವಾಗದೇ, ಗೋಲಾ ಗ್ರಾಮದ ನಿವಾಸಿ ಪೀರ್ ಮೊಹಮ್ಮದ್ ಹಾಗೂ ಆ ಗ್ರಾಮದ ಮುಖ್ಯಸ್ಥ ಅಖ್ಲಾಕ್ ಅಹ್ಮದ್ ಅವರನ್ನು ಯೋಗಿ ಆದಿತ್ಯನಾಥ್ ಅವರ ವಿವಾಹದ ಅಣಕು ಆಮಂತ್ರಣ ಪತ್ರಿಕೆಯನ್ನು ಫೇಸ್‍ಬುಕ್‍ನಲ್ಲಿ ಹಂಚಿದ್ದಕ್ಕೆ ಅವರನ್ನೂ ಬಂಧಿಸಲಾಗಿದೆ. ಈ ಇಬ್ಬರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಫೇಸ್‍ಬುಕ್ ಪೋಸ್ಟ್‍ನಲ್ಲಿ ಧರ್ಮೇಂದ್ರ ಭಾರತಿ ಅವರನ್ನು ಟ್ಯಾಗ್ ಮಾಡಲಾಗಿತ್ತು ಎನ್ನುವ ಕಾರಣಕ್ಕೇ ಅವರನ್ನೂ ಬಂಧಿಸಲಾಗಿದೆ.

ಪೊಲೀಸ್ ಸರಕಾರದ ಪ್ರತಿಷ್ಠಾಪನೆ
ಯೋಗಿ ಆದಿತ್ಯನಾಥ ಅವರು ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸರಿಗೆ ಅಭಯ ಹಸ್ತ ನೀಡಿ ಒಂದು ಪೊಲೀಸ್ ಸರಕಾರವನ್ನು ರಚಿಸುವಲ್ಲಿ ಯುಪಿಯ ಆಡಳಿತ ಸಕ್ರಿಯವಾಗಿದೆ. ಯೋಗಿ ಸರಕಾರದ ಮೊದಲ ಹತ್ತು ತಿಂಗಳುಗಳು ಅ್ಯಂಟಿ ರೋಮಿಯೋ ಸ್ಕ್ವಾಡ್(ಪಡೆಗಳು), ಎನ್‍ಕೌಂಟರ್‍ಗಳು ಮತ್ತು ಗೋರಖಪುರದ ಹಸುಳೆಗಳ ಸಾವಿಗೆ ಕುಖ್ಯಾತಿ ಗಳಿಸಿತ್ತು. ಮಹಿಳೆಯರನ್ನು ಚುಡಾಯಿಸುವುರಿಂದ ಸುರಕ್ಷತೆ ನೀಡುವ ಹೆಸರಿನಲ್ಲಿ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತ್ತ ನೈತಿಕ ಪೊಲೀಸ್‍ಗಿರಿಯನ್ನು ಈ ಪಡೆಗಳು ಮಾಡಿದವು. ಹೆಚ್ಚುತ್ತಿರುವ ಅಪರಾಧಕ್ಕೆ ಕಡಿವಾಣ ಹಾಕಲು ಪೊಲೀಸರಿಗೆ ಎನ್‍ಕೌಂಟರ್ ಮಾಡಲು ಅಭಯ ಹಸ್ತವನ್ನು ನೀಡಿ ಎನ್‍ಕೌಂಟರ್ ಸರಕಾರ ಎನ್ನುವ ಹೆಸರನ್ನು ಗಳಿಸಿತು.

2019ರ ವರೆಗೆ 3000 ಎನ್‍ಕೌಂಟರ್‍ಗಳನ್ನು ಮಾಡಿದ್ದನ್ನು ಸಾಧನೆಯೆಂಬಂತೆ ಬಿಂಬಿಸಲಾಗುತ್ತಿದೆ. ಮಾನವ ಹಕ್ಕು ಸಂಘಟನೆಗಳು ಈ ನಕಲಿ ಎನ್‍ಕೌಂಟರ್‍ಗಳ ಬಗ್ಗೆ ಆತಂಕ ವ್ಯಕ್ತಪಡಿಸಿವೆ.

ನಕಲಿ ಎನ್ ಕೌಂಟರ್ ಗಳ ಹೆಚ್ಚಿ ಮಾಹಿತಿಗೆ ವೈರ್ ಲೇಖನ ಇಲ್ಲಿ ಓದಿ

ನ್ಯೂಸ್ ಕ್ಲಿಕ್ ಲೇಖನ ಓದಿ

ಈ ಬಂಧನಗಳು, ಡಾ. ಕಫೀಲ್ ಖಾನ್ ಅವರನ್ನು ಅಮಾನತ್ತು ಗೊಳಿಸಿ ಅವರಿಗೆ ಕಿರುಕುಳ ಕೊಟ್ಟಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಆದ ಸಾವುಗಳಿಗೆ ಅವರ ಮೇಲೇ ಆಪಾದನೆ ಮಾಡಿದ್ದು, ಇವೆಲ್ಲವುಗಳು ಸಮಾಜಕ್ಕೆ ಇರುವ ತನ್ನ ಜವಾಬ್ದಾರಿಗಳಿಂದ ಯುಪಿಯ ಸರಕಾರ ಹೇಗೆ ಜಾರಿಕೊಂಡಿದೆ ಎನ್ನುವುದನ್ನು ತೋರಿಸುತ್ತವೆ.

2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನಿಂದ ಯೋಗಿ ಆಡಳಿತಕ್ಕೆ ಇನ್ನಷ್ಟು ಕಸುವು ಬಂದಂತಾಗಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರದ ಸಂಪೂರ್ಣ ಅಧಿಕಾರ ಬರಿ ಒಬ್ಬ ವ್ಯಕ್ತಿ ಯೋಗಿ ಆದಿತ್ಯನಾಥ ಅವರ ಕೈಯಲ್ಲಿದೆ. ಇಷ್ಟು ವರ್ಷ ಕಾಳಜಿಯಿಂದ ಸೃಷ್ಟಿಸಿದ ತನ್ನ ಇಮೇಜನ್ನು ಮುರಿಯವ ಬೆದರಿಕೆ ಒಡ್ಡುವ ವ್ಯಕ್ತಿಗಳನ್ನು ಶಿಕ್ಷಿಸಲು ಯಾವ ಮಟ್ಟಿಗೆ ಹೋಗಬಹುದು ಎನ್ನುವುದನ್ನು ಈ ನಕಲಿ ಆರೋಪಗಳ ಆಧಾರದ ಮೇಲೆ ಮಾಡಿದ ಬಂಧನಗಳು ತೋರಿಸುತ್ತವೆ.

ಅಧಿಕಾರದ ದುರುಪಯೋಗ ಮಾಡುವುದು ನಮ್ಮ ದೇಶಕ್ಕೆ ಹೊಸದಲ್ಲ. 2019ರ ಲೋಕಸಭೆ ಚುನಾವಣಗೆ ಮುಂಚೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ವಿರೂಪಗೊಳಿಸಿದ್ದಕ್ಕಾಗಿ ಒಬ್ಬ ಬಿಜೆಪಿಯ ಕಾರ್ಯಕರ್ತನನ್ನು ಬಂಧಿಸಲಾಗಿತ್ತು. ಆದರೆ ಸುಪ್ರೀಮ್ ಕೋರ್ಟ್ ಈ ಪ್ರಕರಣವನ್ನು ತುರ್ತಾಗಿ ಗಮನಿಸಿದ್ದರಿಂದ ಆ ಕಾರ್ಯಕರ್ತನನ್ನು ಬಿಡುಗಡೆ ಮಾಡಬೇಕಾಯಿತು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕರ್ನಾಟಕದ ಮಾಧ್ಯಮಗಳು ಇವುಗಳನ್ನು ಖಂಡಿಸುವುದ ಇರಲಿ ಈ ಕುರಿತು ಸಣ್ಣ ಸುದ್ದಿ ಸಹ ಮಾಡುವುದಿಲ್ಲ. ಇಲ್ಲಿ ಕರ್ನಾಟಕದಲ್ಲಿ ಸನ್ನಿವೇಶ ಸಂಪೂರ್ಣ ವಿರುದ್ಧವಾಗಿದೆ. ಇಲ್ಲಿ ಟಿವಿ ಮಾಧ್ಯಮಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿದ್ದು ಒಂದು ಪಕ್ಷದ ಪರವಾಗಿ ನೇರವಾಗಿ ಕೆಲಸ ಮಾಡುತ್ತಿವೆ. ವಯಕ್ತಿಕ ನಿಂದನೆ, ತೇಜೋವಧೆ ಮಾಡುವುದರಲ್ಲಿಯೇ ನಿರತವಾಗಿದ್ದು ಇವುಗಳ ವಿರುದ್ಧ ಯಾರಾದರೂ ಕೇಸು ದಾಖಲಿಸಿದರೂ ಸಹ ಎಮರ್ಜೆನ್ಸಿ ಘೋಷಣೆ ಆಗಿದೆ ಅನ್ನೋ ರೀತಿಯಲ್ಲಿ ವರ್ತಿಸುತ್ತಿವೆ. ಪತ್ರಿಕೋಧ್ಯಮದ ಲವಲೇಶವೂ ಇಲ್ಲಿನ ಟಿವಿ ಚಾನೆಲ್ ಗಳಿಗೆ ಗೊತ್ತಿಲ್ಲದಿರುವುದು ದುರಂತ.

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಸಮಸ್ಯೆ ಮುಂಚೆಯಿಂದಲೂ ಇದೆ. ಪುಸ್ತಕಗಳನ್ನು, ಸಿನೆಮಾಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳ ವಿಷಯಗಳನ್ನು ಕಟ್ಟುನಿಟ್ಟಾದ ನೀತಿಗಳ ಅಡಿ ಪರಿಶೀಲಸಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರದ ಸೂಚ್ಯಾಂಕದಲ್ಲಿ ಭಾರತ ಪಾಕಿಸ್ತಾನಕ್ಕಿಂತ ಒಂದು ಸ್ಥಾನ ಮುಂದಿದೆ. ಹಾಗಾದರೆ ನಾವು ಪಾಕಿಸ್ತಾನಕ್ಕಿಂತಲೂ ಉತ್ತಮ ಎಂದು ಹೇಳಿಕೊಳ್ಳುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ: ಮಾಜಿ ಸಚಿವ ಬಿ.ಬಿ.ಲಿಂಗಯ್ಯ ಆಕ್ರೋಶ

ಕೇಂದ್ರದ ಬಿಜೆಪಿ ಸರ್ಕಾರವು ‘SIR’ ಜಾರಿಯ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಬಿ.ಬಿ. ಲಿಂಗಯ್ಯ ತೀವ್ರ ಆಕ್ರೋಶ...

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...